ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಅಭ್ಯಾಸಬಲ

January 21, 2007 - 11:35pm — hpn

ಇವತ್ತು ಗೋಡೆಗೆ ತಗಲುಹಾಕಿದ್ದ ಗಡಿಯಾರ ಒಡೆದು ಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದ ಬುಟ್ಟಿಗೆ ಹಾಕಿದ್ದೆನಷ್ಟೆ.
ಆದರೂ ಘಂಟೆಗಳ ನಂತರವೂ ಸಮಯ ಎಷ್ಟಾಯ್ತು ಅನ್ಕೊಳ್ಳೋ ಅಷ್ಟೊತ್ತಿಗೆ ಕಣ್ಣು ಗಡಿಯಾರ ತಗಲುಹಾಕಿದ್ದ ಜಾಗದೆಡೆ ಹೋಗತ್ತೆ.

ನಿಮಗೂ ಹೀಗಾಗಿದ್ದಿದೆಯೆ?

~.~
  • hpn ರವರ ಬ್ಲಾಗ್
  • Login or register to post comments
  • 618 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 22, 2007 - 5:07am — bhatpp

ಅಭ್ಯಾಸಬಲಕ್ಕಿನ್ನೊಂದು ಉದಾಹರಣೆ

bhatpp's picture

ಅಮೇರಿಕೆಗೆ ಬಂದ ಹೊಸತರಲ್ಲಿ ರಸ್ತೆ ದಾಟುವ ಅನುಭವವನ್ನು ಈ ಪಟ್ಟಿಗೆ ಸೇರಿಸಬಹುದು, ಏಕೆಂದರೆ ಅಮೇರಿಕೆಯಲ್ಲಿರುವುದು ರಸ್ತೆಯ ಬಲ ಬದಿಯಲ್ಲಿ ವಾಹನ ಸಂಚಾರ; ಆದರೆ ನಾವು, ಅಭ್ಯಾಸ ಬಲದಿಂದ, ರಸ್ತೆ ದಾಟುವಾಗ ನಮ್ಮ ಬಲ ಬದಿಯನ್ನು ನೋಡುತ್ತೇವೆ!

ಅಂತೆಯೇ, ಅಮೇರಿಕೆಯಲ್ಲಿ ಕೆಲ ಕಾಲವಿದ್ದು ಭಾರತಕ್ಕೆ ತಿರುಗಿ ಹೋದಾಗ ಆಗುವುದು ಇದೇ ಅನುಭವ; ಈ ಬಾರಿ ನಾವು ನೋಡುವುದು ನಮ್ಮ ಎಡ ಬದಿಯನ್ನು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2007 - 8:44am — srivathsajoshi

Re: ಅಭ್ಯಾಸಬಲ

srivathsajoshi's picture

ಹೌದು, ಇದನ್ನು ಪಾವ್ಲೊವಿಯನ್ ಪ್ರಿನ್ಸಿಪಲ್ ಎನ್ನುವುದು. ಅದರ ಪ್ರಕಾರ ನಮ್ಮ ಚಟುವಟಿಕೆಗಳು ಬಹುತೇಕವಾಗಿ 'ಅಸೊಸಿಯೆಟಿವ್ ಲರ್ನಿಂಗ್'ನಿಂದ ಪ್ರೇರಿತವಾಗಿರುತ್ತವೆ. ಟೈಮ್ ಎಷ್ಟಾಯ್ತು ಎಂಬ ಆಜ್ಞೆಗೆ ಮೆದುಳು ಗಡಿಯಾರದತ್ತ ನೋಡು ಎಂಬ ಅಸೊಸಿಯೇಶನ್ ಮಾಡಿಟ್ಟಿರುತ್ತದೆ, ಅದೇ ಪ್ರಕಾರ ವರ್ತಿಸುತ್ತದೆ. ಪಾವ್ಲೊ ಎಂಬ ವಿಜ್ಞಾನಿ ತನ್ನ ನಾಯಿಯ ಮೇಲೆ ಪ್ರಯೋಗ ನಡೆಸಿದ್ದ. ನಾಯಿಗೆ ಆಹಾರ ಹಾಕುವ ಮೊದಲು ಗಂಟೆ ಬಡಿಯುತ್ತಿದ್ದ. ಕೆಲಕಾಲದ ನಂತರ ನಾಯಿಯು ಗಂಟೆ ಮೊಳಗಿದ್ದೆಂದರೆ ಆಹಾರ ಸಿಗುವುದು ಎಂಬ ಅಸೋಸಿಯೇಶನ್ ಲರ್ನಿಂಗ್ ಮಾಡಿಕೊಂಡಿತ್ತು.

ಒಂದು ಪರಿಮಳ ಅಥವಾ ದುರ್ನಾತ ಹೇಗೆ ಈ ಹಿಂದಿನ ಘಟನಾವಳಿಯ ನೆನಪನ್ನು ಮರುಕಳಿಸುತ್ತದೆ ಎಂಬ ವಿಷಯವನ್ನು ನಾನು 'Nose ಮತ್ತು ನೊಸ್ಟಾಲ್ಜಿಯಾ' ಎಂಬ ಶೀರ್ಷಿಕೆಯ ಲೇಖನದಲ್ಲಿ ಬರೆದಿದ್ದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2007 - 10:01am — honnung

Re: ಅಭ್ಯಾಸಬಲ

honnung's picture

srivathsajoshi wrote:
ಒಂದು ಪರಿಮಳ ಅಥವಾ ದುರ್ನಾತ ಹೇಗೆ ಈ ಹಿಂದಿನ ಘಟನಾವಳಿಯ ನೆನಪನ್ನು ಮರುಕಳಿಸುತ್ತದೆ ಎಂಬ ವಿಷಯವನ್ನು ನಾನು 'Nose ಮತ್ತು ನೊಸ್ಟಾಲ್ಜಿಯಾ' ಎಂಬ ಶೀರ್ಷಿಕೆಯ ಲೇಖನದಲ್ಲಿ ಬರೆದಿದ್ದೆ.

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಸರಳವಾಗಿ ಚೊಕ್ಕವಾಗಿ ತಿಳಿಸಿದ್ದೀರಿ. ಯುನಿಕೋಡ್ ಬಳಕೆದಾರರಿಗಾಗಿ ನಿಮ್ಮ ಲೇಖನದ ಕೊಂಡಿ ಯುನಿಕೋಡ್ ಹೆಬ್ಬಾಗಿಲ ಮೂಲಕ ಕೊಡುತ್ತಿದ್ದೇನೆ.
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2007 - 12:49pm — Shyam Kishore

ಇನ್ನೊಂದು ಉದಾ: ಅಭ್ಯಾಸಬಲ - ಮೀನುಗಳ ವರ್ತನೆ

Shyam Kishore's picture

ಶ್ರೀವತ್ಸ ಜೋಶಿಯವರು ಬರೆದಿರುವ "ಪಾವ್ಲೊವಿಯನ್ ಪ್ರಿನ್ಸಿಪಲ್" ಓದಿದಾಗ ಇನ್ನೊಂದು ಉದಾಹರಣೆ ನೆನಪಾಯಿತು:

ಇದನ್ನು ಸಾಮಾನ್ಯ ಎಲ್ಲ "ವ್ಯಕ್ತಿತ್ವ ವಿಕಸನ" ತರಗತಿಗಳಲ್ಲೂ ಹೇಳುತ್ತಾರೆ. ಇದೂ ಕೂಡ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಪ್ರಯೋಗ. ಇದರಲ್ಲಿ ಒಂದು ಬಹಳ ದೊಡ್ಡ ಗಾಜಿನ ತೊಟ್ಟಿಯಲ್ಲಿ ನೀರು ತುಂಬಿ, ಅದರಲ್ಲಿ ಹಲವಾರು ಮೀನುಗಳನ್ನು ಹಾಕಿದರು. ಆ ತೊಟ್ಟಿಯಲ್ಲಿ ಸುಮಾರು ಮಧ್ಯಭಾಗದಲ್ಲಿ ಒಂದು ಗಾಜಿನ ಹಲಗೆಯನ್ನು ಇಟ್ಟಿದ್ದರು; ಗಾಜಿನ ತೊಟ್ಟಿಯನ್ನು ಎರಡು ಭಾಗ ಮಾಡುವ ಹಾಗೆ. ಮೀನುಗಳು ಮೊದಲು ಇನ್ನೊಂದು ಭಾಗಕ್ಕೆ ಹೋಗಲೆಂದು ಬಂದಾಗ ಈ ಗಾಜಿನ ಹಲಗೆಗೆ ಡಿಕ್ಕಿ ಹೊಡೆದು ನಿಲ್ಲುತ್ತಿದ್ದವು. ಆದರೂ ಬಿಡದೇ ಪ್ರಯತ್ನ ಮಾಡುತ್ತಿದ್ದವು. ಪ್ರತಿ ಬಾರಿ ಪ್ರಯತ್ನ ಪಟ್ಟರೂ ಅವುಗಳ ಮೂತಿಗೆ ಪೆಟ್ಟಾಗುತ್ತಿತ್ತೇ ಹೊರತು, ಇನ್ನೊಂದು ಭಾಗಕ್ಕೆ ಹೋಗಲು ಮಾತ್ರ ಮೀನುಗಳಿಗೆ ಆಗಲಿಲ್ಲ. ಮೊದಮೊದಲು ತೀವ್ರವಾಗಿ ಪ್ರಯತ್ನ ನಡೆಸಿದ ಮೀನುಗಳು, ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಕೊನೆಗೆ ಪ್ರಯತ್ನಿಸುವುದನ್ನೇ ನಿಲ್ಲಿಸಿದವಂತೆ! ಅದಾದ ನಂತರ, ಆ ಗಾಜಿನ ಹಲಗೆಯನ್ನು ತೆಗೆಯಲಾಯಿತು. ಆದರೂ "ಕಂಡೀಶನ್ಡ್" ಆದ ಮೀನುಗಳು, ತೊಟ್ಟಿಯ ಇನ್ನೊಂದು ಭಾಗಕ್ಕೆ ಹೋಗಲು ಈ ಬಾರಿ ಪ್ರಯತ್ನ ಕೂಡ ಮಾಡಲಿಲ್ಲ.

ಹೇಗೆ ಒಮ್ಮೆ ಮನಸ್ಸಿನ ಮೇಲೆ ಒಂದು ಆಲೋಚನೆ "ಅಚ್ಚೊತ್ತಿ" ಕುಳಿತಲ್ಲಿ, ಅದು ಇನ್ನೊಮ್ಮೆ ಪ್ರಾಣಿಗಳ ವರ್ತನೆಯನ್ನು ಸಂಪೂರ್ಣ ನಿಯಂತ್ರಿಸುತ್ತದೆ ಅನ್ನುವುದಕ್ಕೆ ಇದೂ ಒಂದು ಉದಾಹರಣೆ.

ಜೋಶಿಯವರೇ, ನಿಮ್ಮ "ನೋಸ್ ಮತ್ತು ನೊಸ್ಟಾಲ್ಜಿಯಾ" ಬರಹ ಚೆನ್ನಾಗಿದೆ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 23, 2007 - 1:53pm — hpn

ಉ: ಇನ್ನೊಂದು ಉದಾ: ಅಭ್ಯಾಸಬಲ - ಮೀನುಗಳ ವರ್ತನೆ

hpn's picture

ಅಭಿಪ್ರಾಯಗಳನ್ನು, ಮಾಹಿತಿಯನ್ನು ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು.

ಇದೇ ಜಾಡಿನಲ್ಲಿ, ವಿಂಡೋಸ್ XPಗೆ ಹೊಂದುಕೊಂಡ ಬಳಕೆದಾರರು ವಿಂಡೋಸ್ ವಿಸ್ಟ ಬಳಸಲು ಎಷ್ಟು ಪರದಾಡಬೇಕೆಂಬುದನ್ನು ಕುರಿತು ವಿಂಡೋಸ್ ಆರಾಧಕ(fan)ರೊಬ್ಬರ rantಉ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2007 - 10:07am — H.S.R.Raghavend...

Re: ಅಭ್ಯಾಸಬಲ ಮತ್ತು ಸಮುದಾಯಗಳ ನಡವಳಿಕೆ HSR

H.S.R.Raghavendra Rao's picture

ಶ್ರೀವತ್ಸ ಜೋಷಿಯವರ ಪತಿಕ್ರಿಯೆ ಸರಿ. ಅದನ್ನು Conditioned Reflex ಎಂದೂ ಕರೆಯುತ್ತಾರೆ. ಪಾವ್ಲೊವ್, ನಾಯಿಗಳ ಸಂಗಡ ನಡೆಸಿದ ಪ್ರಯೋಗಗಳು ಪ್ರಸಿದ್ಧವಾಗಿವೆ. ಆದರೆ, ವ್ಯಕ್ತಿಗಳ ಬಗ್ಗೆ ನಡೆಸಿದ ಈ ಪ್ರಯೋಗಗಳು ಗುಂಪುಗಳ ನಡವಳಿಕೆಗೂ ಅನ್ವಯವಾಗುತ್ತದೆಯೇ ಎನ್ನುವುದು ಕುತೂಹಲಕಾರಿಯಾದ ಪ್ರಶ್ನೆ. ವ್ಯಕ್ತಿಗಳು ಮತ್ತು ಗುಂಪುಗಳು ಒಂದು ಘಟನೆಗೆ ಪ್ರತಿಕ್ರಿಯೆ ನೀಡುವ ಬಗೆಯು ಪೂರ್ವನಿಶ್ಚಿತವೇ?? ನಾವು ಆಲೋಚನೆ ಮಾಡಿ, ನಂತರ ಕೊಡುತ್ತೇವೆ ಎಂದುಕೊಂಡಿರುವ ಪ್ರತಿಕ್ರಿಯೆಗಳೂ ಹೀಗೆ ಮೊದಲೇ ತೀರ್ಮಾನವಾಗಿರುತ್ತವೆಯೇ? ರಾಜಕಾರಣಿಗಳು, ,ಗುಂಪುಗಳನ್ನು ನಿರ್ವಹಿಸುವ ಬಗೆಯೂ ಈ ಅಂಶವನ್ನು ಗಮನಕ್ಕೆ ತಂದುಕೊಳ್ಳುತ್ತದೆಯೇ?

ಇಂಥ ಪ್ರತಿಕ್ರಿಯಾವಿಧಾನವು ಹೊಸ ಕಲಿಯುವಿಕೆಗೆ ಆಡ್ಡಿಯಾಗುತ್ತದೆಯೇ?? ಈ ಸಂಗತಿಗಳ ಬಗ್ಗೆ ಕೊಂಚ ಯೋಚಿಸೋಣವೇ???

H.S.Raghavendra Rao

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2007 - 2:03pm — ಸಂಗನಗೌಡ

ಇನ್ನೊಂದು: ಅಭ್ಯಾಸಬಲ

ಸಂಗನಗೌಡ's picture

ಇದಕ್ಕೆ ಹಾಡುಗಳು ತುಂಬಾ ಒಳ್ಳೇ ಉದಾಹರಣೆ. ನಾವು ತುಂಬಾ ಧುಖದಲ್ಲಿದ್ದಾಗ ಕೇಳಿದ ಹಾಡು, ಮತ್ತೆ ಯಾವಾಗ ಕೇಳಿದರೂ ಆ ಧುಖದ ನೆನಪನ್ನೇ ತರುತ್ತದೆ. ನಾನು ತುಂತುರು ಹಾಡನ್ನು ಯಾವಾಗ ಕೇಳಿದರೂ FM Rainbow ದ 'ಪ್ರಿಯ ಕೇಳುಗರೇ ಪ್ರತಿ ಶುಕ್ರುವಾರ ..... " ಎಂಬ ಸಾಲುಗಳು ನೆನಪಿಗೆ ಬರುತ್ತವೆ. ಏಕೆಂದರೆ ಅವರು ಆ ಕಾರ್ಯಕ್ರಮದ ಬಗ್ಗೆ ಹೇಳುವ ಪ್ರತಿ ಸಲಾನೂ ಈ ಹಾಡಿನಿಂದ ಮೊದಲು ಮಾಡುತ್ತಾರೆ. ಹಾಗೇ, ಕೆಲವೊಂದು ಹಾಡುಗಳು ಮುಗಿದ ಮೇಲೆ, ತಕ್ಷಣ ನಮಗೇ ಗೊತ್ತಿಲ್ಲದೇ ಇನ್ನೊಂದು ಹಾಡು ನೆನಪಾಗುತ್ತದೆ. ಏಕೆಂದರೆ ಯಾವಾಗಲೋ ಅದೇ sequence ನಲ್ಲಿ ಹಾಡುಗಳನ್ನು ಕೇಳಿರುತ್ತೇವೆ. ಆ sequence ಹಾಗೇ ಮೆದುಳಿನಲ್ಲಿ ಅಚ್ಚೊತ್ತಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 22, 2007 - 3:20pm — Sunil Jayaprakash

ಅಭ್ಯಾಸಗಳು ಹೀಗೂ ಇರುತ್ತವೆ

Sunil Jayaprakash's picture

ಈ ಅನುಭವ ನನಗೆ ವೈಯಕ್ತಿಕವಾಗಿ ಆದದ್ದಲ್ಲ. ಆದರೆ ನಮ್ಮ ಕಸಿನ್ ಒಬ್ಬನಿಗೆ ಆದದ್ದು. ಇದನ್ನು ಹೇಳುವಾಗ ಈಗಲೂ ಆತ ಗದ್ಗದಿತನಾಗುತ್ತಾನೆ.

ನನ್ನ ಒಬ್ಬ ಕಸಿನ್, ಕರ್ನಾಟಕದ ಒಬ್ಬರು ಶ್ರೇಷ್ಠ ಹಿಂದೂಸ್ತಾನೀ ಗಾಯಕರ ಹತ್ತಿರ ಸಂಗೀತ ಪಾಠಕ್ಕೆ ಹೋಗುತ್ತಿದ್ದ. ಅವರು ಅಷ್ಟು ಪ್ರೀತಿ ಅಕ್ಕರೆಯಿಂದ ಪಾಠ ಹೇಳಿಕೊಟ್ಟಿದ್ದರಿಂದ ಮತ್ತು ಇವನೂ ಅಷ್ಟೇ ಶ್ರದ್ಧೆಯಿಂದ ಕಲಿಯುತ್ತಿದ್ದನಾದ್ದರಿಂದ ಅವರಿಗೆ ತೀರ ಹತ್ತಿರದವನಾಗಿದ್ದ. ಆ ಮಹನೀಯ ಗುರುಗಳು ತೀರಿಕೊಂಡ ದಿನ, ಇವನು ಶವಸಂಸ್ಕಾರದ ವಿಧಿ ವಿಧಾನಗಳಲ್ಲೆಲ್ಲಾ ಭಾಗವಹಿಸಿ ಸಂಜೆಯ ಹೊತ್ತಿಗೆ ಮನೆಗೆ ಬಂದನಂತೆ. ಅದು ಯಾವ ದಿನವೋ ತಿಳಿಯದು. ಇದಾದ ಮಾರನೆಯ ದಿನ, ಪ್ರತಿವಾರ ಸಂಗೀತ ಪಾಠವಿರುತ್ತಿತ್ತಂತೆ. ಹಿಂದಿನ ದಿನವಷ್ಟೇ ಶವಸಂಸ್ಕಾರ ಆಗಿದೆ, ನಾನೂ ಭಾಗವಹಿಸಿದ್ದೆ ಎಂಬ ಅಂಶವು ಪೂರ್ತಿ ಮರೆತುಹೋಗಿ, ಮಾರನೆಯ ದಿನ ಬೆಳ್ಳಂಬೆಳಗ್ಗೆ ಅವರ ಮನೆಗೆ ಹೋಗಿದ್ದನಂತೆ. ಬಾಗಿಲು ಬಡಿದಮೇಲೆ ನಿಜಸಂಗತಿ ಅರಿತು, ಸುಮ್ಮನೆ ಬಂದಿದ್ದೆ ಎಂದು ಹೇಳಿ ವಾಪಸ್ ಬಂದು ತುಂಬಾ ಅತ್ತುಬಿಟ್ಟನಂತೆ. ಇದನ್ನು ಹೇಳುವಾಗ ಈಗಲೂ ನನ್ನ ಕಸಿನ್ನಿನ ದನಿ ತಗ್ಗುತ್ತದೆ.

ಇದು ಅಭ್ಯಾಸವೇ, ಅಥವಾ ಮಮತೆ ವಾತ್ಸಲ್ಯದ ಕುರುಹೇ, ಅಥವಾ ಅಕ್ಕರೆಯ ಸೆಳೆತವೇ ತಿಳಿಯದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಬ್ಡಿದೇವಿಗೆ ತಾನು ಸತ್ತಂತೆ ಕನಸು ಬಿದ್ದಾಗ...
  • ಮಧ್ಯರಾತ್ರಿಯ ಹರಟೆಗಳು
  • ಐ ಟಿ ನೌಕ್ರಿ
  • ಆಬ್ರಹಂ ಲಿಂಕನ್ - ೪
  • ಮುಂಬೈನ, ನನ್ನ ಅತ್ಯಂತಪ್ರೀತಿಯ, " ಏಶ್ಯಾಟಿಕ್ ಪುಸ್ತಕಭಂಡಾರ," ನಿಮಗೂ ಇಷ್ಟವೇ ?
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 110 ಅತಿಥಿಗಳು ಆನ್ಲೈನ್ ಇರುವರು.


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator