Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕೆಲವು ಅಮೂಲ್ಯ ಪುಸ್ತಕಗಳು

February 21, 2006 - 11:29pm — hpn

ಹಲವಾರು ಬಾರಿ ನಮ್ಮ ಬಳಿ ಇರುವ ಎಷ್ಟೋ ಪುಸ್ತಕಗಳ ಮೌಲ್ಯ ನಮಗೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮ ಬಳಿ ಇಲ್ಲದಿದ್ದಾಗ ಅವುಗಳ ಮೌಲ್ಯ ಗೊತ್ತಾದರೆ ಕೆಲವೊಮ್ಮೆ ವರ್ಷಾನುಗಟ್ಟಲೆ ನಮ್ಮ ಬಳಿ ಬಿದ್ದಿದ್ದವುಗಳನ್ನ ಒಮ್ಮೆ ತಿರುಗಿಸಿ ನೋಡಿದಾಗ "ಓ! ಎಷ್ಟೊಂದು helpful, ಈ ಪುಸ್ತಕ... " ಅಂತ ಅನ್ನಿಸುತ್ತದೆ. ಅಂಥವೇ ಅಮೂಲ್ಯ ಪುಸ್ತಕಗಳು ಕೆಲವನ್ನು ನಿಮಗೆ ಪರಿಚಯ ಮಾಡಿಕೊಡೋಣವೆಂದು ಈ ಪುಟ್ಟ scribble:

೧) ಕನ್ನಡ ಸಾಹಿತ್ಯ ಪರಿಷತ್ತಿನ - ಕನ್ನಡ ರತ್ನಕೋಶ

ಕನ್ನಡ ರತ್ನಕೋಶ     ಇಡೀ ವಿಶ್ವದಲ್ಲಿ ಬರಿಯ ೧೫ರೂಪಾಯಿಗಳಿಗೆ ಸಿಗಬಲ್ಲ ಬಹುಶಃ ಬೇರೊಂದು ಇಷ್ಟೊಂದು ಅಮೂಲ್ಯವಾದ ಪುಸ್ತಕವಿಲ್ಲ. ನಾವು ಬಳಸುವ ಕನ್ನಡದ ಪ್ರತಿಯೊಂದು ಪದವೂ ಇದರಲ್ಲಿದೆ. ನಮ್ಮ ಮನೆಯಲ್ಲಿ ಈ ಪುಟ್ಟ ನಿಘಂಟು ಬಹಳ ವರ್ಷಗಳಿಂದಲೇ ಇತ್ತು. ಅಮ್ಮ ಟೈಪ್ ರೈಟಿಂಗ್ ಕಲಿಯುವಾಗ ಕಿಟ್ಟೆಲ್ ನಿಘಂಟಿನೊಂದಿಗೆ ತಂದಿಟ್ಟುಕೊಂಡಿದ್ದರಂತೆ. ಮನೆಯಲ್ಲದು ಇದ್ದಾಗ ಒಂದು ಬಾರಿಯೂ ಉಪಯೋಗಿಸಿದ್ದು ನೆನಪಿಲ್ಲ. ಶಿವಮೊಗ್ಗೆಯಿಂದ ಸಾಮಾನು ಬೆಂಗಳೂರಿಗೆ ಸಾಗಿಸುವ ಭರದಲ್ಲಿ ಕಳೆದುಹೋದದ್ದವುಗಳಲ್ಲಿ ಈ ಪುಸ್ತಕವೂ ಒಂದು... ಮೊನ್ನೆ ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೊಂಡುಕೊಂಡೆ. ಈಗದರ ಮೌಲ್ಯ ತಿಳಿಯುತ್ತಿದೆ Smiling

 

೨) ಕುವೆಂಪುರವರು ಬರೆದಿರುವ 'ಸ್ವಾಮಿ ವಿವೇಕಾನಂದ'

ಕುವೆಂಪು - ಸ್ವಾಮಿ ವಿವೇಕಾನಂದ     ಈ ಪುಸ್ತಕದಷ್ಟು inspiration ನೀಡುವ ಪುಸ್ತಕ ವಿವೇಕಾನಂದರ ಬಗ್ಗೆ ಬೇರೊಂದು ಓದಿದ ನೆನಪಿಲ್ಲ. ರಾಮಕೃಷ್ಣ ಮಿಶನ್ನಿನ ಹತ್ತಾರು ಪುಸ್ತಕಗಳು ಮನೆಯಲ್ಲಿ ಈಗಲೂ ಇವೆ... ಆದರೆ ಅವ್ಯಾವುದರಲ್ಲೂ ವಿವೇಕಾನಂದರ ಇಷ್ಟೊಂದು ಸುಂದರವಾದ ಪರಿಚಯ ಇಲ್ಲವೆಂದೇ ಹೇಳಬಹುದು. ಈ ಕೃತಿಯ ಮೊದಲ ಚ್ಯಾಪ್ಟರ್‌ - "ಯಾರಿವನು?" ನಾನು ಕನ್ನಡದಲ್ಲಿ ಎಲ್ಲೂ ಓದದೇ ಇರುವಂತಹ ವಸ್ತು... ಸಿಂಪಲ್ ಆಗಿ ಹೇಳಬೇಕೆಂದರೆ - "ಅತ್ಯಧ್ಭುತವಾಗಿದೆ!". Smiling
      ನನಗೆ ಈ ಪುಸ್ತಕ ೮ನೇ ಕ್ಲಾಸಿನಲ್ಲಿ ಶಾಲೆಗೆ ೫ನೇ rank ಪಡೆದದ್ದಕ್ಕೆ ಕೊಟ್ಟಿದ್ದರು. ಎಷ್ಟೋ ದಿನಗಳ ಮಟ್ಟಿಗೆ ಈ ಪುಸ್ತಕ ನನ್ನ ಕಲೆಕ್ಷನ್ನಿನಲ್ಲಿ ಸುಮ್ಮನೆ ದೂಳು ತಿನ್ನುತ್ತ ಕುಳಿತಿತ್ತು. ಇದನ್ನೋದಿದ ಮೇಲೆಯೇ ತಿಳಿದದ್ದು, ಈ ಪುಸ್ತಕದ ಮೌಲ್ಯ!

 

೩) 'ಕನ್ನಡ ಬರಹವನ್ನು ಸರಿಪಡಿಸೋಣ'

ಕನ್ನಡ ಬರಹ ಸರಿಪಡಿಸೋಣ - ಶಂಕರ್ ಭಟ್    ಈ ಪುಸ್ತಕ ಅಮೂಲ್ಯವೆಂದು ಹೇಳುವಷ್ಟು ಆಳವಾಗಿ ನಾನೋದಿಲ್ಲವಾದರೂ, ಓದಿರುವಷ್ಟು ಭಾಗ ನನಗೆ ಬಹಳವಾಗಿ ಹಿಡಿಸಿತು. ಕನ್ನಡದಲ್ಲಿ ಒಳ್ಳೆಯ ಪ್ರಯತ್ನಕ್ಕೆ ನಾಂದಿ ಎಂದು ಹೇಳಬಹುದು.
    ಈ ಪುಸ್ತಕ ಕೊಂಡದ್ದು ಡಿ ವಿ ಕೆ ಮೂರ್ತಿಯವರ ಪುಸ್ತಕ ಮಳಿಗೆಯಲ್ಲಿ. ಓ ಎಲ್ ಎನ್ ಸ್ವಾಮಿಯವರು ಶಂಕರ ಭಟ್ಟರ ಬಗ್ಗೆ ಕೆಲವು ಬಾರಿ ತಿಳಿಸಿದ್ದರು, ಕುತೂಹಲದಿಂದ ಈ ಪುಸ್ತಕ ಕೊಂಡಿದ್ದೆ.

೪) 'ಏಕಾಂತ - ಲೋಕಾಂತ'

ಏಕಾಂತ-ಲೋಕಾಂತ    ಸಂಪದದ ಗೆಳೆಯರಿಗೆ ಚಿರಪರಿಚಿತರಾದವರು ಬರೆದ ಪುಸ್ತಕವಿದು. ಯಾರು ಹೇಳಿ ನೋಡೋಣ?  "ಘಟಾನುಘಟಿ" ಎಂದು ತಮ್ಮ ಬ್ಲಾಗಿನಲ್ಲಿ ಶ್ರೀರಾಮ್ ಹೊಗಳಿರುವ ಓ ಎಲ್ ಎನ್ ಸ್ವಾಮಿಯವರು ನಮ್ಮೊಂದಿಗಿರುವ ಸರಳ ವ್ಯಕ್ತಿತ್ವದ (ಡೌನ್ ಟು ಅರ್ಥ್ ಪರ್ಸನಾಲಿಟಿ) ಓ ಎಲ್ ಎನ್ ಸ್ವಾಮಿಯವರೇ ಹೌದೋ ಅಲ್ವೋ ಅನ್ನೋ ಡೌಟು ಬರುತ್ತೆ! ನಾವು ಕೇಳುವ ಎಲ್ಲ ಪ್ರಶ್ನೆಗಳಿಗೂ ಸರಳ ಉತ್ತರಗಳನ್ನು ನೀಡಿ ನಮ್ಮ ಗೌರವ ಪಡೆದಿರುವ ಇವರ ಜೊತೆ ಮಾತನಾಡುವಾಗ ಕಾಲೇಜಿನ ದಿನಗಳ ನಮ್ಮ ನೆಚ್ಚಿನ ಮೇಷ್ಟರುಗಳ ನೆನಪಾಗುತ್ತದೆ. ಸರಳ ಲೇಖನಗಳಲ್ಲಿ ಅನುಭವಗಳನ್ನು ಹೆಣೆದಿರುವ ಈ ಅಮೂಲ್ಯ ಪುಸ್ತಕದ ಬಗ್ಗೆ ಒಮ್ಮೆ ಸುದೀರ್ಘವಾಗಿ, ಸಾಧ್ಯವಾದಲ್ಲಿ ವಿಮರ್ಶೆಯಂತೆ ಬರೆಯುವ ಪ್ರಯತ್ನ ಮಾಡುವೆ.

Ornamental seperator
  • hpn ರವರ ಬ್ಲಾಗ್
  • Login or register to post comments
  • 1072 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 22, 2006 - 11:50am — shreekant.mishrikoti

ಬಹಳ ಒಳ್ಳೆಯ ಕೆಲಸ.

shreekant.mishrikoti's picture

ಬಹಳ ಒಳ್ಳೆಯ ಕೆಲಸ. ಕುವೆಂಪುರವರ ವಿವೇಕಾನಂದ ನಮ್ಮ ಮನೆಯಲ್ಲೂ ಧೂಳು ತಿನ್ನುತ್ತಿದೆ. ನೆನೆಪಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ತೆಗೆದು ಓದುತ್ತೇನೆ. ಧನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ
February 23, 2006 - 4:04pm — karthik

ಕನ್ನಡ ರತ್ನಕೋಶ..

karthik's picture

ಸ್ಕೂಲ್ ನಲ್ಲಿರುವಾಗ ಒಂದು ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ಬಹುಮಾನವಾಗಿ ಈ ಪುಸ್ತಕ ಕೊಟ್ಟಿದ್ದರು..
ಅದು ಕಳೆದು ಹೋಗಿತ್ತು. ಕೆಲವು ತಿಂಗಳುಗಳ ಹಿಂದೆ ನಾನೂ ಇದನ್ನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಗೊಂಡೆ.

  • Login or register to post comments
  • link
  • Email this ಪ್ರತಿಕ್ರಿಯೆ
September 28, 2007 - 1:41pm — sankul

ಉ: ಕೆಲವು ಅಮೂಲ್ಯ ಪುಸ್ತಕಗಳು

sankul's picture

Subhashita Manjari a book which was published by kannaDa sahitya parishattu i guess in 1977, is that book available anywhere?

  • Login or register to post comments
  • link
  • Email this ಪ್ರತಿಕ್ರಿಯೆ
September 28, 2007 - 2:01pm — hpn

ಉ: ಕೆಲವು ಅಮೂಲ್ಯ ಪುಸ್ತಕಗಳು

hpn's picture

ಕನ್ನಡದಲ್ಲಿ ಬರೆಯಿರಿ. ಇಂಗ್ಲೀಷಿನಲ್ಲಿರುವ ಕಾಮೆಂಟುಗಳನ್ನ ಅಳಿಸಿಹಾಕಲಾಗುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಝೆನ್ ಕಥೆ ೩೫: ನಾನು ಯಾರೋ!
  • ಪುಸ್ತಕಗಳು
  • ಕೈ ಕೊಟ್ಟ ಸಖಿ
  • ಝೆನ ಕಥೆ ೩೬: ಛತ್ರ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 8 ಅತಿಥಿಗಳು ಆನ್ಲೈನ್ ಇರುವರು.

ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator