ಈಗಿನಂತೆ 5 ಸದಸ್ಯರು ಮತ್ತು 81 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಪರೋಪಕಾರಿ ವೃಕ್ಷ
abdul's picture
ಅಬ್ದುಲ್ ಲತೀಫ್ ಸಯ್ಯದ್
21
May
2010
ಬ್ಲಾಗ್ ಬರಹ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 1,034
ಕರ್ನಾಟಕದ ಭಗೀರಥ ಎಚ್ ಎನ್ ನಂಜೇಗೌಡರನ್ನು ಮರೆಯುವುದುಂಟೇ?
arkalgudjayakumar's picture
Arkalgud Jayakumar
18
Dec
2010
ಲೇಖನ

ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ...
ಪ್ರತಿಕ್ರಿಯೆಗಳು: 2
ಹಿಟ್ಸ್ : 376
" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ
sada samartha's picture
ಸದಾನಂದ
24
Jan
2011
ಲೇಖನ

ಸಾವಿರಾರು ಸನ್ಮಾನಗಳ ಸರದಾರ

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ "...

ಪ್ರತಿಕ್ರಿಯೆಗಳು: 14
ಹಿಟ್ಸ್ : 675
ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಬಿಡುಗಡೆ
gopinatha's picture
ಬೆಳ್ಳಾಲ ಗೋಪೀನಾಥ ರಾವ್
16
Jul
2011
ಲೇಖನ

 

ಸಂಪದ ಪ್ರಾರಂಭಿಸಿದ ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಆಕೃತಿ ಬುಕ್ಸ್ ಪ್ರೈವೇಟ್ ಲಿಮಿಟೆಡ್...

ಪ್ರತಿಕ್ರಿಯೆಗಳು: 5
ಹಿಟ್ಸ್ : 605
ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫
anilkumar's picture
ಎಚ್.ಎ. ಅನಿಲ್ ಕುಮಾರ್
18
Nov
2010
ಲೇಖನ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

(೧೦೬)...

ಪ್ರತಿಕ್ರಿಯೆಗಳು: 0
ಹಿಟ್ಸ್ : 389
ಧರ್ಮ ಮತ್ತು ಸಮರ - ಒಂದು ಅಲೋಚನೆ.
supreethjburji's picture
23
Jun
2006
ಬ್ಲಾಗ್ ಬರಹ


ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,238
ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ
abdul's picture
ಅಬ್ದುಲ್ ಲತೀಫ್ ಸಯ್ಯದ್
27
May
2011
ಬ್ಲಾಗ್ ಬರಹ
ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ...
ಪ್ರತಿಕ್ರಿಯೆಗಳು: 2
ಹಿಟ್ಸ್ : 677
ಬೆಂಗಳೂರು ಮಳೆ : ತಲೆಬರಹಗಳ ಸೊಗಸು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
25
Sep
2010
ಪುಟ

 
  ಇಲಿಗೆ ಪ್ರಾಣಸಂಕಟವಾಗಿರುವಾಗ ಬೆಕ್ಕಿಗೆ ಚೆಲ್ಲಾಟವಂತೆ. ಕರ್ನಾಟಕದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ಬಕ್ಕಬೋರಲಾಗಿ ಬಿದ್ದಿರುವಾಗ ನಾನಿಲ್ಲಿ ತಲೆಬರಹ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,340
ಕಥೆ: ಲೌಕಿಕ ಅಲೌಕಿಕ
partha1059's picture
ಪಾರ್ಥಸಾರಥಿ
05
Jan
2011
ಬ್ಲಾಗ್ ಬರಹ

ಲೌಕಿಕ

ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ|

ಸಮಯ ನಡುರಾತ್ರಿಯನ್ನು ಮೀರಿ ಸ್ವಲ್ಪ ಕಾಲ ಕಳೆದಿತ್ತು...

ಪ್ರತಿಕ್ರಿಯೆಗಳು: 34
ಹಿಟ್ಸ್ : 1,043
ಅಮ್ಮ ಬ೦ದಿದ್ದಾಳೆ (ಇ೦ದಿನ ವಿ ಕ ದಲ್ಲಿ ಪ್ರಕಟಿತ)
Harish Athreya's picture
ಹರೀಶ್ ಆತ್ರೇಯ
09
May
2010
ಬ್ಲಾಗ್ ಬರಹ

(ಸ್ಥಳಾವಕಾಶದ ಕಾರಣ ಪೂರ್ಣ ಲೇಖನವನ್ನು ವಿ ಕ ಪ್ರಕಟಿಸಿಲ್ಲ  ಪೂರ್ಣ  ಲೇಖನ ಇಲ್ಲಿದೆ)
"ಕತ್ತೆ ಭಡವ ನಾಲ್ಕ್ ಕತ್ತೆ ವಯಸ್ಸಾಗಿದೆ ಇನ್ನೂ ಅಮ್ಮನ...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,096

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಭಾನುವಾರದ ಹಬ್ಬ

ಭಾನುವಾರದ ಹಬ್ಬ

ಸರಿಯಾಗಿ ನಿದ್ರೆಯಿಲ್ಲದೆ, ಕಣ್ಣು ಸ್ಟ್ರೇಯ್ನ್ ಮಾಡಿಕೊಂಡು - ಇನ್ನು ಗ್ನು/ಲಿನಕ್ಸ್ ಹಬ್ಬ ಮಾಡೋದೇನೆ ಎಂದುಕೊಂಡು ಕುಳಿತಿದ್ದೆ. ಮುಂಜಾನೆ ನಾಲಕ್ಕಾಗಿತ್ತು. ಇನ್ನು ನಿದ್ರೆ ಮಾಡಲಾಗದೆಂದು LHC shutdown ಆದದ್ದರ ಬಗ್ಗೆ ಓದುತ್ತ ಕುಳಿತಿದ್ದೆ. ಒರಿಸ್ಸಾ ಪ್ರವಾಹದ ಬಗ್ಗೆ ಓದುತ್ತ ಕುಳಿತಿದ್ದೆ. ಸರಿಯಾಗಿ ಐದಕ್ಕೆ ಫೋನು ಬಂತು: "ಎದ್ದಿದೀಯಾ ಹರಿ?" "ಹೂಂ ಕಣೋ" "ಸರಿ, ಈಗ ಹೊರಟೆ. ಕಾರು ತಗೊಂಡು ಇನರ್ಧ ಗಂಟೆಯಲ್ಲಿ ಅಲ್ಲಿರ್ತೀನಿ" ಸರಿ, ರೆಡಿಯಾಗಿ ಬ್ಯಾನರ್ ಕೆಳಗಿಳಿಸಿ ಲ್ಯಾಪ್ಟಾಪ್ ಪ್ಯಾಕ್ ಮಾಡಿ ಹೊರಟೆ. ಕಾರಿನ ಸ್ಪೀಡು, ಡೆಕ್ ನ ವೂಫರ್ ಸದ್ದು ನಿದ್ರೆಯಿಲ್ಲದ ಮನಸ್ಸಿಗೆ ಸವಾಲೆಸೆದಿತ್ತು. ಈ ನಡುವೆ ಮುಂಜಾನೆಯ ಮಂಜಿನಲ್ಲಿ ರೋಡು ಮಿಸ್ ಆಗಿ ಕಳಕೊಂಡ ಕೆಲವು ಘಳಿಗೆಗಳು. ಅಂಕುಡೊಂಕಿನ ಮೈಸೂರು ರಸ್ತೆಯಲ್ಲಿ ರಾಮನಗರದ ಲೋಕರುಚಿ ತಲುಪುವಷ್ಟರಲ್ಲಿ ಎಂಟಾಗಿತ್ತು. ಸುತ್ತ ಹುಸಿ ಜನಪದ ಓಡಾಡಿಕೊಂಡಿದ್ದ ಹೋಟೆಲಿನಲ್ಲಿ ಕಡುಬು, ರಾಗಿ ರೊಟ್ಟಿ (ಅಷ್ಟೊತ್ತಿಗೇ) ನಮ್ಮ ತಿಂಡಿ. ಅತ್ತಿತ್ತ ಕಂಡ ಮೈಸೂರು-ಬೆಂಗಳೂರು ಹುಡುಗಿಯರ ಮುಖಗಳು ನಮ್ಮ ದಂಡಯಾತ್ರೆಯ ಸಿಪಾಯಿಗಳ ಕಣ್ಣುಗಳನ್ನು busy ಇಟ್ಟಿತ್ತು. ಫ್ಯೂಶನ್, ಭಾವಗೀತೆ, ಹಿಂದಿ ಸಿನೆಮಾ ಹಾಡು, ಮೆಟಲ್, ರಾಕ್ - ಹೀಗೆ ಎಲ್ಲ ಹಾಡುಗಳ ಕಲಸುಮೇಲೋಗರದೊಡನೆ ಮೈಸೂರು ವಿ.ವಿ. ತಲುಪಿದ್ದು ಸರಿಯಾಗಿ ೧೦ಕ್ಕೆ. ಆಡಿಟೋರಿಯಮ್ ಆಗಲೇ ಭರ್ತಿಯಾಗಿತ್ತು! ಹಲವರು ನಿಂತುಕೊಂಡು ಕೇಳುತ್ತಿದ್ದದ್ದು ಕಾಣಿಸಿತು. ಗ್ನು/ಲಿನಕ್ಸ್ ಟಿ-ಶರ್ಟ್ ಹಾಕಿಕೊಂಡು ಒಂದೆರಡು ಕೆಲಸಗಳನ್ನು ಕೈಗೆತ್ತಿಕೊಂಡು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ (Physics) ಡಿಪಾರ್ಟ್ಮೆಂಟ್ ಲ್ಯಾಬಿಗೆ ಹೋದಾಗ ಅಲ್ಲಿರುವ ಹಲವು ಸಿಸ್ಟಮುಗಳಲ್ಲಿ ಗ್ನು/ಲಿನಕ್ಸ್ ಇದ್ದದ್ದು, ಜೊತೆಗೆ ಕನ್ನಡಕ್ಕೆ ಬೇಕಾದ ಸಕಲ ತಂತ್ರಾಂಶಗಳೂ ಅದರಲ್ಲಿದ್ದದ್ದು ನೋಡಿ ಖುಷಿಯಾಯ್ತು. ಅತ್ತ ಗ್ನು/ಲಿನಕ್ಸ್ ಪರಿಚಯ ಜೋರಾಗಿ ನಡೆದಿತ್ತು. ದಣಿವಾಗಿದ್ದ ಕಾರಣ ಸ್ಟೇಜು ಬಿಟ್ಟು ಸ್ವಲ್ಪ ದೂರ ಉಳಿದೆ. ಒಂದೆರಡು ಬಾರಿ ಮಾತ್ರ ಇಂಗ್ಲಿಷ್ ಬಳಕೆ ಜೋರಾದಾಗ "ಸಂಪೂರ್ಣ ಇಂಗ್ಲೀಷ್ ಬೇಡ, ಕನ್ನಡ ಹೆಚ್ಚಾಗಿ ಇರಲಿ" ಎಂದು ಹೇಳಿ ಬಂದೆ. ಮೈಸೂರಿಗರಲ್ಲಿ ಸ್ವಚ್ಛ ಭಾರತೀಯ ಇಂಗ್ಲೀಷಿಗಿರುವ ಒಲವು ಅಚ್ಚರಿ ಮೂಡಿಸಿತು. ಈ ಬಾರಿ ಮೈಸೂರಿನ ತಂಡದವರ ಬಯಕೆಯಂತೆ ಗ್ನು/ಲಿನಕ್ಸ್ ಹಬ್ಬದ ನಕ್ಷೆ ಸ್ವಲ್ಪ ಬದಲಾಗಿತ್ತು. ಮೊದಲರ್ಧ ದಿನ ಗ್ನು/ಲಿನಕ್ಸಿನಲ್ಲಿರುವ ದಿನನಿತ್ಯದ ಬಳಕೆಯ ತಂತ್ರಾಂಶಗಳನ್ನು ಬಳಸುವುದು ಹೇಗೆ ಎಂಬುದರ ದೃಶ್ಯಾವಳಿ, ಮಾತುಕತೆ. ಉಳಿದರ್ಧ ದಿನ ಗ್ನು/ಲಿನಕ್ಸ್ installationಉ - ಗ್ನು/ಲಿನಕ್ಸ್ ಹಾಕಿಕೊಂಡು ಪ್ರಯತ್ನಿಸುವಲ್ಲಿ ಸಹಾಯ ಮಾಡುವ ಸಮಯ. ನೂರಾರು ಜನ ಭಾಗವಹಿಸಿ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿದ್ದು ಖುಷಿ ತಂದಿತು. ಕನ್ನಡದ ಸುತ್ತ ಕೆಲಸ ಮಾಡುತ್ತಿರುವ ಕೆಲವು ಹಿರಿಯರ ಪರಿಚಯ ಮುಖತಃ ಆದದ್ದು ಮತ್ತಷ್ಟು ಖುಷಿ ಕೊಟ್ಟಿತು. ಪರಿಸರದ ಸುತ್ತ ಕಾಳಜಿವಹಿಸಿ ಕೆಲವು ಚಿಕ್ಕಪುಟ್ಟ ಸಂಶೋಧನೆಗಳನ್ನು ಮಾಡುತ್ತಿರುವ ಹಿರಿಯರೊಬ್ಬರು ಸ್ವತಃ ಮಾತನಾಡಿಸಲೆಂದು ಬಂದು ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು. ಆಸಕ್ತಿ ಹುಟ್ಟಿಸಿತು. ಬಂದವರಲ್ಲೊಬ್ಬರು ನನ್ನ ಮುಖ ಗುರುತಿಸಿ ನೀನು ಮೈಸೂರಿನಲ್ಲಿ ನಮ್ಮ ಸ್ಕೂಲಿನಲ್ಲೇ ಓದ್ತಾ ಇದ್ದಿ, ನಮ್ಮ ಜೂನಿಯರ್. ನಾವೆಲ್ಲ ಒಟ್ಟಿಗೇ ಕ್ರಿಕೆಟ್ ಆಡ್ತಾ ಇದ್ವಿ, ನೆನಪಿದೆಯಾ ಎಂದು ಕೇಳಿದ್ದು ನೆನಪಿನ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕುವಂತೆ ಮಾಡಿತು. ನೆನಪು ಮಾತ್ರ ಆಗಲಿಲ್ಲ! ಹೋದ ಸಾರಿ ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಪತ್ರಿಕೆಯಲ್ಲಿ ಓದಿ ಗ್ನು/ಲಿನಕ್ಸ್ ಬಗ್ಗೆ ಸಾಕಷ್ಟು ಆಗಲೇ ತಿಳಿದುಕೊಂಡಿದ್ದ ಬ್ರಿಟನ್ ಒಬ್ಬರು ಆ ಸಮಯ ಭಾರತದಲ್ಲಿದ್ದದ್ದರಿಂದ "ನಾನೂ ಭಾಗವಹಿಸಲೆಂದು ಬಂದೆ. ನಿಮಗೆ ಸಹಾಯ ಮಾಡುವೆ. ಲೋಕಲ್ ಭಾಷೆಗೆ ಇಂತಹ ಕಾರ್ಯಕ್ರಮ ಇಟ್ಟುಕೊಂಡಿರುವುದು ರಿಯಲಿ ಗ್ರೇಟ್" ಎನ್ನುತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅವರ ಆಸಕ್ತಿಯ ಬಗ್ಗೆ ಅಚ್ಚರಿ ಹುಟ್ಟಿಸಿತ್ತು. ಈ‌ ಬಾರಿ ಮಡಿಕೇರಿಯಿಂದ ಬಂದ ಫಿನ್ನಿಶ್ ಬ್ರಿಟನ್ ಒಬ್ಬರು ಗ್ನು/ಲಿನಕ್ಸ್ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರೂ ಭಾಗವಹಿಸಿದ್ದರು. "ಇದರ ಬಗ್ಗೆ ಈಗಾಗಲೇ ಇಷ್ಟೊಂದು ತಿಳಿದುಕೊಂಡಿದ್ದೀರಿ, ಎಷ್ಟೊಂದು ಕೆಲಸ ಮಾಡಿದ್ದೀರಿ. ಈ ಕಾರ್ಯಕ್ರಮದಲ್ಲಿ ನಿಮಗಿದ್ದ ಆಸಕ್ತಿ ಏನು" ಎಂದು ಕೇಳಿದೆ. "ಇತ್ತೀಚೆಗೆ ತಾನೆ ಫಿನ್ಲೆಂಡಿನಿಂದ ಬಂದೆ, ಅಪ್ಪ ಅಮ್ಮ ಭಾರತದಲ್ಲೇ ಇದ್ದವರು. ನಾನೂ ಬಂದು ಈ ಕಾರ್ಯಕ್ರಮಕ್ಕೆ ಸಹಾಯ ಮಾಡೋಣಬೇಕೆಂದಿದ್ದೆ, ಆದರೆ ನಿಮ್ಮೆಲ್ಲರ ಪರಿಚಯವಾಗಿರಲಿಲ್ಲ. ಕಾರ್ಯಕ್ರಮ ತುಂಬಾ ಚೆನ್ನಾಗಿ ಮಾಡಿದಿರಿ. ಬಹಳ ಖುಷಿಯಾಯ್ತು. ಮುಂದಿನ ಸಾರಿ ನಾನೂ ನಿಮ್ಮೊಂದಿಗೆ ಕೈ ಸೇರಿಸುವೆ" ಎಂದು ಹೇಳಿ ಇ-ಮೇಯ್ಲ್ ಐಡಿ ಕೊಟ್ಟು ಹೊರಟರು. ಸಾಯಂಕಾಲ ನಳಪಾಕದ ತಿಂಡಿ ತಿಂದು ಶಿವಮೊಗ್ಗವನ್ನು (ಹಾಗು ಬಸವನಗುಡಿಯನ್ನು) ನೆನಪಿಸುವ ಸ್ಟ್ರಾಂಗ್ ಕಾಫಿ ಕುಡಿದು ಹೊರಟು ಕಾರು ಓಡಿಸುವುದರ ಬಗ್ಗೆ ಹತ್ತಲವು ವಿಷಯಗಳನ್ನು ತಿಳಿದುಕೊಳ್ಳುತ್ತ ಬೆಂಗಳೂರು ಸೇರಿದಾಗ ಸುಮಾರು ಬೀದಿಗಳು ಕಾರುಗಳಿರಲಿ, ನರಪಿಳ್ಳೆಯೂ ನುಸುಳದಂತೆ ಮುಳುಗಲಿರುವ "ಗಣೇಶ ಮಹೋತ್ಸವ"ದ ಗಣೇಶನನ್ನು ಟ್ರಾಕ್ಟರುಗಳ ಮೇಲೆ ಕುಳ್ಳಿರಿಸಿ ಪಟಾಕಿ ಸಿಡಿಸುತ್ತ ಮನಬಂದಂತೆ ಕುಣಿಯುತ್ತಿದ್ದವರಿಂದ ತುಂಬಿಹೋಗಿತ್ತು. ಹಬ್ಬ ಮುಗಿದಿತ್ತು.
No votes yet
1362 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Chamaraj's picture
22
Sep
2008
5:29

ಉ: ಭಾನುವಾರದ ಹಬ್ಬಹಬ್ಬದ ವಿವರಗಳನ್ನು ಕೇಳುತ್ತಲೇ ಇದ್ದುದರಿಂದ, ಅದರ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದೆ. ಇಡೀ ಪ್ರಕ್ರಿಯೆ ತಂತ್ರಾಂಶ ಪರಿಣಿತರಲ್ಲೇ ಉಳಿಯುವುದು ಬೇಡ. ಅದರಿಂದ ಕನ್ನಡಕ್ಕೆ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ಬಿಂಬಿಸುವ ಅವಶ್ಯಕತೆ ಇದೆ. ಅಕ್ಕದಂತಹ ಕನ್ನಡದ ಹೆಸರಿನ ದೊಡ್ಡ ಪಿಕ್ನಿಕ್‌ ಸಮಾರಂಭಗಳಿಗಿಂತ ಇಂಥ ಹಬ್ಬಗಳ ಮಹತ್ವ ಮನದಟ್ಟಾಗಬೇಕಿದೆ. ಗ್ನು/ಲಿನಕ್ಸ್‌ ಬಗ್ಗೆ ಪಾಮರರಿಗೂ ಅರ್ಥವಾಗುವಂತೆ, ಅದರ ಬಳಕೆಯ ಮಹತ್ವ ವಿವರಿಸುವ ಒಂದಿಷ್ಟು ಲೇಖನಗಳು ಬಂದರೆ ಉತ್ತಮ ಅನಿಸುತ್ತದೆ. ತುಂಬ ಶ್ರಮಪಟ್ಟಿದ್ದೀರಿ. ವಿಶ್ರಾಂತಿ ತೆಗೆದುಕೊಂಡ ನಂತರ, ಮತ್ತೆ ಕೆಲಸ ಶುರು ಮಾಡಿ. ನಿಮ್ಮ ಜನ್ಮದಿನದ ಬಗ್ಗೆ ಕನ್ನಡ ಆಡಿಯೋ.ಕಾಮ್‌ನಲ್ಲಿ ಸೊಗಸಾದ ಪದ್ಯವೇ ಬಂದಿದೆಯಲ್ರೀ. ನಿಮ್ಮ ಮದುವೆಗಾಗಿ ಮನೆಯವರು ನಡೆಸುತ್ತಿರುವ ಪ್ರಯತ್ನಗಳ ಉಲ್ಲೇಖವೂ ಅದರಲ್ಲಿದೆ. ಮನೆಯವರ ಪಾಲಿಗೆ ಅದೇ ದೊಡ್ಡ ಹಬ್ಬ ಬಿಡಿ. - ಚಾಮರಾಜ ಸವಡಿ http://chamarajsavad...
hpn's picture
22
Sep
2008
1:38

ಉ: ಭಾನುವಾರದ ಹಬ್ಬ?? ಅದ್ಯಾವುದು ಪದ್ಯ?! ನನಗಿದು ಹೊಸ ಸುದ್ದಿ!
Quote:
ನಿಮ್ಮ ಮದುವೆಗಾಗಿ ಮನೆಯವರು ನಡೆಸುತ್ತಿರುವ ಪ್ರಯತ್ನಗಳ ಉಲ್ಲೇಖವೂ ಅದರಲ್ಲಿದೆ.
!! "ಪ್ರಯತ್ನ"!?!? ಎಲ್ರ ಮನೇಲೂ ಇರೋ ಹಾಗೆ ನಮ್ಮ ಮನೇಲೂ ಅಷ್ಟೆ!‌ ಮತ್ತೇನೂ ವಿಶೇಷವಿಲ್ಲ. :P ಮಕ್ಕಳು ಓದುವಾಗ rank ಬರಲಿ ಅಂತ, ಓದಿದ ಮೇಲೆ graduation ಮಾಡಲಿ ಅಂತ, graduation ಆದ ಮೇಲೆ ಕೆಲಸ ಸಿಗಲಿ ಅಂತ, ಕೆಲಸ ಸಿಕ್ಕ ಮೇಲೆ ಮದುವೆಯಾಗಲಿ ಅಂತ ಅಪ್ಪ ಅಮ್ಮಂದಿರು ಯತ್ನಿಸುವುದು (ಪ್ರಯತ್ನ ಅಲ್ಲ) ಒಂಥರಾ universal ಅಲ್ವ? -- ನನ್ನ ಬ್ಲಾಗ್: ಪರಿವೇಶಣ | PariveshaNa
Chamaraj's picture
22
Sep
2008
2:33

ಉ: ಭಾನುವಾರದ ಹಬ್ಬಇಲ್ಲಿದೆ ನೋಡಿ ಕೊಂಡಿ: http://www.kannadaau... ತಂತ್ರಾಂಶ ಪರಿಣಿತನಿಗೆ ಬರೆದ ಮೊದಲ ಕನ್ನಡ ಪದ್ಯ ಇದಾಗಿರಬಹುದು ಅಂತ ಅನಿಸುತ್ತದೆ. ಇನ್ನು ’ಪ್ರಯತ್ನ’ ಶಬ್ದ ಬಳಕೆ ಏಕೆಂದರೆ, ಕಂಪ್ಯೂಟರ್‌ ಮುಂದೆ ಕೂಡುವ ಹುಚ್ಚಿರುವವರನ್ನು ಹಸೆಮಣೆಗೆ ಕರೆದುಕೊಂಡು ಬರುವುದು ಅಷ್ಟು ಸುಲಭವಲ್ಲ ಬಿಡಿ !! - ಚಾಮರಾಜ ಸವಡಿ http://chamarajsavad...
hpn's picture
22
Sep
2008
2:49

ಉ: ಭಾನುವಾರದ ಹಬ್ಬhonestly, ಇದು ನನಗೆ ಸಿಕ್ಕಾಪಟ್ಟೆ embarrassing ವಿಷಯ, ಹುಟ್ಟುಹಬ್ಬದ ಉಡುಗೊರೆಯಲ್ಲ. ತಪ್ಪು ತಪ್ಪಾಗಿ ಕೂಡ ಇದೆ. ಅದನ್ನು ಬರೆದವರು ತಮಗೆ ಪರಿಚಯವಿದ್ದ ಎಲ್ಲರಿಗೂ ಹುಟ್ಟುಹಬ್ಬಕ್ಕೊಂದೊಂದು ಕವಿತೆ ಬರೆದಿದ್ದಾರೆ. ಹೀಗಾಗಿ ಅದು ವಿಪರೀತ ಅರ್ಥ ತರದಿರಲಿ ಎಂದು ಮಾತ್ರ ಎಣಿಸಬಲ್ಲೆ. :-) -- ನನ್ನ ಬ್ಲಾಗ್: ಪರಿವೇಶಣ | PariveshaNa
ASHOKKUMAR's picture
22
Sep
2008
2:50

ಉ: ಭಾನುವಾರದ ಹಬ್ಬಅಂದ ಹಾಗೆ ನೀವು <28? *ಅಶೋಕ್
mahesha's picture
22
Sep
2008
3:27

ಉ: ಭಾನುವಾರದ ಹಬ್ಬ:) < 27 ಕೂಡ ಅಲ್ವ
hpn's picture
22
Sep
2008
8:49

ಉ: ಭಾನುವಾರದ ಹಬ್ಬಹು :-) ನವೆಂಬರ್ ವರೆಗೂ <26 ಕೂಡ. -- ನನ್ನ ಬ್ಲಾಗ್: ಪರಿವೇಶಣ | PariveshaNa
shaamala's picture
28
Sep
2008
11:18

ಉ: ಭಾನುವಾರದ ಹಬ್ಬನಕ್ಷತ್ರ, ಗೋತ್ರ ಹೇಳಿದ್ರೆ ನಾವೂ ಹುಡುಗಿ ನೋಡ್ತಿವಿ :) ಶಾಮಲ
Sunil Jayaprakash's picture
23
Sep
2008
7:51

ಉ: ಭಾನುವಾರದ ಹಬ್ಬಅಶೋಕ್, ಜಾತಕಾನೂ ನೋಡ್ತೀರಾ ನೀವು ?
ASHOKKUMAR's picture
28
Sep
2008
11:28

ಉ: ಭಾನುವಾರದ ಹಬ್ಬಜಾತಕ? ಅದಕ್ಕು ನನಗೂ ಎಣ್ಣೆ ಸೀಗೆ ಕಾಯಿ ಸಂಬಂಧ! (ಈ ಪ್ರಶ್ನೆಯನ್ನೀಗ ತಾನೇ ಗಮನಿಸಿದೆ-ಶ್ಯಾಮಲಾ ಅವರ ಪ್ರತಿಕ್ರಿಯೆ ನೋಡಿದಾಗ) *ಅಶೋಕ್
hamsanandi's picture
23
Sep
2008
12:23

ಉ: ಭಾನುವಾರದ ಹಬ್ಬ ಅಯ್ಯಯ್ಯೋ ಹಾಡು ಕೇಳೋಣ ಅಂತ ಹೋದ್ರೆ, ಇನ್ವಾಲಿಡ್ ಥ್ರೆಡ್ ಅನ್ನತ್ತಲ್ರೀ ;೦) -ಹಂಸಾನಂದಿ ಹರಿದಾಸ ಸಂಪದ:- http://haridasa.in/
vasant.shetty's picture
22
Sep
2008
11:23

ಉ: ಭಾನುವಾರದ ಹಬ್ಬಹರಿ, ಹಬ್ಬ ಚೆನ್ನಾಗಿ ಆಯ್ತು ಅಂತ ಕೇಳಿ ಖುಷಿ ಆಯ್ತು. IISc ಲಿ ನಡೆದ ಹಬ್ಬಕ್ಕೆ ಬಂದಿದ್ದೆ. ನಿಮ್ಮ ತಂಡದ ಉತ್ಸಾಹ ನೋಡಿ ಸಕತ್ ಖುಷಿ ಆಗಿತ್ತು. ಒಂದು ಚಿಕ್ಕ ಸಲಹೆ, ಮುಂದಿನ ಹಂತದಲ್ಲಿ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲೂ ನಿಮ್ಮ ತಂಡ ಇಂತ ಕಾರ್ಯಕ್ರಮ ಮಾಡಲಿ, ಆ ಮೂಲಕ, ಆ ಭಾಗದ ಇಂಜಿನಿಯರಿಂಗ್ ಹುಡುಗರಲ್ಲಿ ಲಿನಕ್ಸ್ ಬಗ್ಗೆ, ಅದರಲ್ಲಿ ಕನ್ನಡದ ಬಳಕೆ ಬಗ್ಗೆ ಜಾಗ್ರುತಿ ಆಗಲಿ, ಆ ಹುಡುಗರು ತಮ್ಮ ಅಕಾಡೆಮಿಕ್ ಪ್ರಾಜೆಕ್ಟಗಳಲ್ಲಿ ಕನ್ನಡದಲ್ಲಿ ಟೆಕ್ನಾಲಜಿ ತರೋ ಪ್ರಯತ್ನಕ್ಕೆ ಇದು ಸ್ಪೂರ್ತಿ ಆಗಲಿ ಎಂದು ಹಾರೈಸುವೆ. ನಿಮಗೂ, ನಿಮ್ಮ ತಂಡಕ್ಕೂ ನನ್ನ ಅಭಿನಂದನೆಗಳು. - ವಸಂತ
hpn's picture
22
Sep
2008
1:40

ಉ: ಭಾನುವಾರದ ಹಬ್ಬವಸಂತ್, ಮುಂದಿನ ಸಂಚಿಕೆ ಹುಬ್ಬಳ್ಳಿ/ಧಾರವಾಡ ಅಥವ ಮಂಗಳೂರಲ್ಲಿ ನಡೆಯುವ ಸಾಧ್ಯತೆ ಇದೆ. ಇವೆರಡರಲ್ಲಿ ಯಾವ ಊರಿನ ಸ್ಥಳೀಯರು ಹೆಚ್ಚು ಆಸಕ್ತಿ ತೋರಿಸುತ್ತಾರೋ ಆ ಊರಿನಲ್ಲಿ ಮೊದಲು :-) -- ನನ್ನ ಬ್ಲಾಗ್: ಪರಿವೇಶಣ | PariveshaNa
palachandra's picture
22
Sep
2008
4:54

ಉ: ಭಾನುವಾರದ ಹಬ್ಬಮುಂದಿನ ಹಬ್ಬ ಮಂಗಳೂರಿನಲ್ಲಾದರೆ, ಬರುವ ಪ್ರಯತ್ನ ಮಾಡುತ್ತೇನೆ.. ಚೆನ್ನಾಗಿತ್ತು ಮೈಸೂರಿನಲ್ಲಿ ನಡೆದ ಹಬ್ಬದ ಪರಿಚಯ..