ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ‌, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಗುಬ್ಬಚ್ಚಿ

ಗುಬ್ಬಚ್ಚಿ, sparrow

ಮೊನ್ನೆ ಚಿತ್ರದುರ್ಗಕ್ಕೆ ಹೋಗುವಾಗ ದಾರಿಯಲ್ಲಿ ಕ್ಯಾಮೆರಕ್ಕೆ ಗುಬ್ಬಚ್ಚಿಗಳು ಸಿಕ್ಕಿಬಿದ್ದವು. ಬೆಂಗಳೂರಿಗರಿಗೆ ಅಷ್ಟು ನೋಡಲು ಸಿಗದು ಇದು. ಫೋಟೋ ಕೆಳಗಿವೆ. 

ಗುಬ್ಬಚ್ಚಿ, sparrow

ಗುಬ್ಬಚ್ಚಿಗಳು, sparrows

ಗುಬ್ಬಚ್ಚಿ, sparrow

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗುಬ್ಬಚ್ಚಿ

rameshbalaganchi's picture

ಅಯ್ಯೋ, ನಾಲ್ಕು ಗುಬ್ಬಿಗೆ ಇಷ್ಟು ಸಂಭ್ರಮ ಪಡ್ತಿದೀರಲ್ಲ! ಶಿವಮೊಗ್ಗಾದ ಗೋಪಾಳ ಬಡಾವಣೆಯಲ್ಲಿರುವ ನನ್ನ ಅಣ್ಣನ ಮನೆಯ ಪಕ್ಕದಲ್ಲಿರುವ ಲಾಂಟಾನಾ ಪೊದೆಯಲ್ಲಿ ಸುಮಾರು ೩೦೦ ಗುಬ್ಬಿಗಳಿವೆ. ದಿನಾ ನಮ್ಮಣ್ಣನ ಮನೆಯ ಕಿಟಕಿ , ಗೇಟು ಮತ್ತು ಅಡಿಗೆಯ ಮನೆಯ ಗವಾಕ್ಷಿಗೆ ದಾಳಿ ಇಟ್ಟು ಅವತ್ತಿನ ರೇಷನ್ (ಬೊಗಸೆಗಟ್ಟಲೆ ಅಕ್ಕಿ) ಕೊಟ್ಟ ಹೊರತು ಹೋಗದೆ ಕಿಚಿಕಿಚಿ ಅನ್ನುವ ದೃಶ್ಯ ನೋಡಿದರೆ ಇನ್ನೆಷ್ಟು ಖುಷಿ ಪಡುತ್ತೀರೋ!!!

ಉ: ಗುಬ್ಬಚ್ಚಿ

hpn's picture

ಸಂಭ್ರಮ ಫೋಟೋ ತೆಗೆದದ್ದರ ಬಗ್ಗೆ. ನಿಮ್ಮ ಅಣ್ಣ ಇರುವ ಅದೇ ಬಡಾವಣೆಯಲ್ಲೇ ನಾನೂ ಇದ್ದೆ.

ಉ: ಗುಬ್ಬಚ್ಚಿ

rameshbalaganchi's picture

"ಅದೇ ಬಡಾವಣೆಯಲ್ಲೇ ನಾನೂ ಇದ್ದೆ"

:).

ಗುಬ್ಬಿಗಳ mood ಚೆನ್ನಾಗಿ capture ಮಾಡಿದೀರ. ಸಖತ್ತಾಗಿವೆ. ಗ್ರೀಟಿಂಗ್ ಕಾರ್ಡ್ ಇತ್ಯಾದಿಗಳಿಗೆ ಈ ಚಿತ್ರಗಳನ್ನು ಬಳಸಿಕೊಳ್ಳಬಹುದೆ? Of course- credit ಕೊಟ್ಟು,

ಉ: ಗುಬ್ಬಚ್ಚಿ

hpn's picture

ಖಂಡಿತ ಉಪಯೋಗಿಸಿಕೊಳ್ಳಬಹುದು, ಕ್ರೆಡಿಟ್ ಕೊಟ್ಟು. :)

ಉ: ಗುಬ್ಬಚ್ಚಿ

gururaj.bv's picture

ಪಕ್ಷಿ ಛಾಯಾಚಿತ್ರಗಳಲ್ಲಿ ಅವುಗಳ ಕಣ್ಣುಗಳಲ್ಲಿ catch light ಇರುವುದು ಬಹಳ ಮುಖ್ಯವಾದುದು.

ಉ: ಗುಬ್ಬಚ್ಚಿ

hpn's picture

ಮೂರನೆಯ ಚಿತ್ರದಲ್ಲಿ ಇದೆ ಅನ್ಸತ್ತೆ ಅಲ್ವ? ಯಾವಾಗಲೂ catch light ಸಿಗಲಿಕ್ಕಿಲ್ಲ. ಲೈಟ್ ಇದ್ದರೆ ಸರಿ. :)

ಉ: ಗುಬ್ಬಚ್ಚಿ

sudhimail's picture

ಫೋಟೋ ಚೆನಾಗಿದೆ...
ನಾ ಚಿಕ್ಕವನಿದ್ದಾಗ ನಮ್ಮನೆಯ ಜಗುಲಿಯಲ್ಲಿ, ಒಂದು ದೊಡ್ಡ ಫೋಟೋ ಹಿಂದೆ ನಾಲ್ಕಾರು ಗುಬ್ಬಿಗಳು ಗೂಡು ಕಟ್ಟಿದ್ದವು. ಆಮೇಲೆ ಫೋಟೋ ಶಿಥಿಲವಾಗಿ ಮುರಿದು ಬಿತ್ತು... ಬೇರೆ ಒಂದು ಫೋಟೋ ಅಲ್ಲಿಟ್ಟರೂ ಮತ್ತೆ ಅವು ಗೂಡು ಕಟ್ಟಲಿಲ್ಲ.

ಉ: ಗುಬ್ಬಚ್ಚಿ

hpn's picture

ಹೇಗೆ ಹುಡುಕಿಕೊಳ್ತಾವೆ ಅಲ್ವ? :)

ಶಿವಮೊಗ್ಗದಲ್ಲಿದ್ದಾಗ ಒಮ್ಮೆ ಮಹಡಿ ಮೇಲೆ ಒಂದು ತುಳಸೀಕಟ್ಟೆ (ಬೃಂದಾವನ) ಮಲಗಿಸಿ ಇಟ್ಟಿದ್ವು, ಒಂದು ಕಡೆ ಅದು ಮುಚ್ಚಿಹೋಗಿದ್ದು ಪತ್ತೆ ಹಚ್ಚಿ ಇನ್ನೊಂದು ಕಡೆಯನ್ನೂ ಹುಲ್ಲಿನಿಂದ ಮುಚ್ಚಿ ಅಲ್ಲೇ ಗೂಡು ಕಟ್ಟಿಕೊಂಡುಬಿಟ್ಟಿದ್ವು!

ಉ: ಗುಬ್ಬಚ್ಚಿ

manjunath s reddy's picture

ಮೇಲಿಂದ ಮೂರನೇದು ಸಕ್ಕತ್ತಾಗಿದೆ.. :)

ಉ: ಗುಬ್ಬಚ್ಚಿ

hpn's picture

ಕಣ್ಣ ಮೇಲೆ, ರೆಕ್ಕೆಯ ಮೇಲೆ ಬಿದ್ದ ಬೆಳಕು ಕೂಡ ಕ್ಯಾಪ್ಚರ್ ಆಗಿದೆ. ಅದಕ್ಕೇ ಚೆಂದ ಕಾಣುತ್ತಿದೆ. ಇದೇ ವಿಷಯದ ಬಗ್ಗೆ ಗುರುರಾಜ್ ಕ್ಯಾಚ್ ಲೈಟ್ ಎಂದು ಪ್ರತಿಕ್ರಿಯೆ ಬರೆದಿರುವುದು. ಉಳಿದವೆಲ್ಲ ಒಂಥರಾ silhouette.

ಉ: ಗುಬ್ಬಚ್ಚಿ

drnayanram's picture

ಗುಬ್ಬಚ್ಚಿಯ ಫೋಟೋಗಳೇ ಇಲ್ವಲ್ಲ ಸಾರ್, ಏನಾಯ್ತು?