ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ:

ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ” ಎಂದು ಶಪಿಸಿ, ತಾಯಿ ಕಾವೇರಿ ಮಡಿಲಿಗೆ ಧುಮುಕಿದಳಂತೆ. ಇಂದಿಗೂ ಆಕೆಯ ಶಾಪ ಬಾಧಿಸುತ್ತದೆ ಎಂದು ಪ್ರತೀತಿ. ಮೈಸೂರು ಅರಸರಿಗೆ ಇಂದಿಗೂ ನೇರ ಸಂತಾನವಿಲ್ಲ. ಪ್ರತಿ ಬಾರಿ ಉತ್ಖನನ ಮಾಡಿ ಹೊರತೆಗೆದ ಸ್ವಲ್ಪ ದಿನಗಳಿಗೆ ಎಲ್ಲ ದೇವಾಲಯಗಳನ್ನೂ ಮತ್ತೆ ಮರಳು ಆವರಿಸಿಬಿಡುತ್ತದೆ.

ಪುರಾಣ ಕಥೆಗಳಲ್ಲಿ ಇಂತಹ ಹಲವು ಶಾಪ ಕೊಟ್ಟಿರುವ ವ್ಯಾಖ್ಯಾನಗಳನ್ನು ಕೇಳಿರುತ್ತೇವೆ. ಆದರೆ ಸಬೂತಿನ ಸಮೇತ ಇದ್ದಂತಿರುವ ಈ ಶಾಪ ನಿಜವಾಗಲೂ ನಮ್ಮ ನಂಬಿಕೆಗಳನ್ನು ಆಲೋಚನೆಗೆ ಹಚ್ಚಿಸುವಂಥದ್ದು. ಈಗ ತಲಕಾಡು ಮರಳಾಗಿರುವುದು, ಮೈಸೂರು ಅರಸರಿಗೆ ಮಕ್ಕಳಿಲ್ಲದಿರುವುದು ಎಲ್ಲ ಹೊಂದುತ್ತದೆ!

ನಿಮಗೇನನ್ನಿಸುತ್ತದೆ?

(ಇಲ್ಲಿ ರೆಡಿ ಮಾಡುತ್ತಿದ್ದೇನೆ ಎಂದು ತಿಳಿಸಿರುವ ಫೀಚರ್ ನಾಳೆ ನಾಳಿದ್ದರ ಹಾಗೆ ವಾಟರ್ ಪೋರ್ಟಲ್ಲಿನಲ್ಲಿ ಲಭ್ಯವಾಗುವುದು. ಬಹಳ ಒಳ್ಳೆಯ ಫೋಟೋಗಳಿವೆ, ಪೂರಕ ಬರಹವಿದೆ. ನಿರೀಕ್ಷಿಸಿ!)

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hamsanandi's picture

ಹರಿ,

ನೀವು ಹೀಗಂದಿರಿ:

Quote:
"ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ” ಎಂದು ಶಪಿಸಿ, ತಾಯಿ ಕಾವೇರಿ ಮಡಿಲಿಗೆ ಧುಮುಕಿದಳಂತೆ. ಇಂದಿಗೂ ಆಕೆಯ ಶಾಪ ಬಾಧಿಸುತ್ತದೆ ಎಂದು ಪ್ರತೀತಿ. ಮೈಸೂರು ಅರಸರಿಗೆ ಇಂದಿಗೂ ನೇರ ಸಂತಾನವಿಲ್ಲ. ಪ್ರತಿ ಬಾರಿ ಉತ್ಖನನ ಮಾಡಿ ಹೊರತೆಗೆದ ಸ್ವಲ್ಪ ದಿನಗಳಿಗೆ ಎಲ್ಲ ದೇವಾಲಯಗಳನ್ನೂ ಮತ್ತೆ ಮರಳು ಆವರಿಸಿಬಿಡುತ್ತದೆ."

ಇದರಲ್ಲೊಂದೆರಡು ತಪ್ಪುಗಳಿವೆ.

ಅರಸರಿಗೆ (ಅದರಲ್ಲೂ, ರಾಜ ಒಡೆಯರಿಗೆ) ಹೀಗೆ ಶಾಪ ಕೊಟ್ಟವಳು ಶ್ರೀರಂಗಪಟ್ಟಣದ ಶ್ರೀರಂಗರಾಯನ ಹೆಂಡತಿ ಅಲಮೇಲಮ್ಮ. ಇದು (ನಡೆದಿದ್ದರೆ) ೧೬ ನೇ ಶತಮಾನದಲ್ಲಾದ ಘಟನೆ. ಏಳನೇ ಶತಮಾನವಲ್ಲ.

ಇದರ ಬಗ್ಗೆ ಒಂದು ಒಳ್ಳೇ ಸಾಕ್ಷ್ಯ ಚಿತ್ರ ಒಂದನ್ನು ನೋಡಿದ್ದೇನೆ. ಅದರಲ್ಲಿ ಈ ಕಥೆ ಹೇಗೆ ಸುಮಾರು ೧೭-೧೮ ನೇ ಶತಮಾನದಲ್ಲಿ ಬಂದು ಸೇರಿಕೊಂಡಿದೆ ಎಂದು ವಿವರವಾಗಿ ತೋರಿಸಿದ್ದರು. ಮತ್ತೆ ಅಲ್ಲಿ ಹೇಗೆ ಮತ್ತೆ ಏಕೆ ತಲಕಾಡು ಮರಳಾಗಿದೆ ಎಂದೂ ವಿವರಿಸಿದ್ದರು.

ಕೊಂಡಿ ಸಿಕ್ಕರೆ ಹಾಕುವೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

Sunil Jayaprakash's picture

ನನಗೆ ಈ ರೀತಿಯ ಕತೆಗಳು, ರಾಜಕೀಯ ಅಸ್ಥಿರತೆ ಸೃಷ್ಟಿಸಲು ಹುಟ್ಟಿಕೊಂಡವು ಅಂತ ಬಲವಾಗಿ ಅನ್ನಿಸುತ್ತದೆ. ೧೬-೧೭ನೇ ಶತಮಾನದ ಕರ್ನಾಟಕ/ಮೈಸೂರನ್ನು ನೆನಪಿಗೆ ತಂದುಕೊಳ್ಳಿ.

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hpn's picture

ಅದು ನಾನಂದದ್ದಲ್ಲ, ನಾನು ಬರೆದದ್ದಲ್ಲ. ಯಾರೋ ಬರೆದಿದ್ದುದನ್ನು ಅನುವಾದ ಮಾಡಿದ ಸಾಲುಗಳಲ್ಲಿ ಹೀಗಿತ್ತು (ಹಾಗೆಂದು ಬರೆದಿದ್ದೇನೆ ಕೂಡ). ಹೀಗಾಗಿಯೇ quote ಮಾಡಿದ್ದು. Smiling

ಅದರಲ್ಲಿರುವ ತಪ್ಪುಗಳನ್ನ ಗಮನಕ್ಕೆ ತಂದದ್ದು ಒಳ್ಳೆಯದಾಯ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

Chamaraj's picture

ನೀರು ಸಂಬಂಧಿ ವಿಷಯಗಳಲ್ಲಿ ಇಂತಹ ಜಾನಪದ ಕತೆಗಳು ಹೇರಳವಾಗಿವೆ. ’ಕೆರೆಗೆ ಹಾರ’ ಕತೆಯನ್ನೇ ನೆನಪಿಸಿಕೊಳ್ಳಿ. ಲಾವಣಿಗಳು, ಜಾನಪದ ಹಾಡುಗಳು ಇಂಥ ವಿಷಯಗಳನ್ನು ತುಂಬ ಚೆನ್ನಾಗಿ ಬಿಂಬಿಸಿವೆ. ಅವು ಸತ್ಯವನ್ನು ನೇರವಾಗಿ ಹೇಳದಿದ್ದರೂ, ಜನರ ಮನಸ್ಸಿನಲ್ಲಿದ್ದ ಭಾವನೆಗಳನ್ನು ಸೊಗಸಾಗಿ ಹೇಳುತ್ತ ಹೋಗುತ್ತವೆ. ಸಾಧ್ಯವಾದರೆ, ಲಭ್ಯವಿರುವ ಅಂತಹ ಮಾಹಿತಿಯನ್ನೂ ಪೂರಕವಾಗಿ ಸೇರಿಸಬಹುದು.

- ಚಾಮರಾಜ ಸವಡಿ
chamarajsavadi [at] blogspot [dot] com" title="http://chamarajsavadi [at] blogspot [dot] com">http://chamarajsavadi [at] blogspot [dot] com

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

ASHOKKUMAR's picture

ಯಾವುದೋ ತರಗತಿಯ ಪಠ್ಯಪುಸ್ತಕದಲ್ಲಿತ್ತು.
ಕೆರೆಯಲ್ಲಿ ನೀರು ಬರದಿದ್ದಾಗ, ಒಬ್ಬಾಕೆ ತನ್ನ ಜೀವವನ್ನೇ ಅರ್ಪಿಸಿ(ಕೆರೆಗೆ ಹಾರ) ನೀರು ಬರಿಸಿ, ಜನರಿಗೆ ಉಪಕರಿಸಿದ ಕತೆ.
(ಹಾಗೆಂದು ನೆನಪು).
*ಅಶೋಕ್

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

hamsanandi's picture

ಭಾಗೀರಥಿ ಎನ್ನುವವಳು ಕೆರೆಗೆ ಹಾರವಾದ ಕಥೆ ಇದು. ಮನೆಯವರೆಲ್ಲ ತನ್ನನ್ನು ಕೆರಗೆ ಹಾರವಾಗಿ ಕೊಡುತ್ತಾರೆಂದು ತಿಳಿದಿದ್ದರೂ, ಊರಿನ ಹಿತಕ್ಕೆ ಪ್ರಾಣ ಕೊಟ್ಟಳು ಎಂದು ಈ ಕಥೆ ಹೇಳುತ್ತೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

shreekant.mishrikoti's picture

೧) ಮೊನ್ನೆ ಮೊನ್ನೆ ತಾನೇ ಪ್ರಜಾವಾಣಿ ಯ ಸಾಪ್ತಾಹಿಕ ಪುರವಣಿಗಳಲ್ಲಿ ಎಷ್ಟೋ ವಾರ ಕೊರೆದ್ರಲ್ರೀ ಈ ಬಗ್ಗೆ , ನೋಡಲಿಲ್ವೇ?
೨) ಈ ’ಕೆರೆಗೆ ಹಾರ’ ಪದ್ಯ ’ಗೋವಿನ ಕತೆ’ ಜತೆಗೆ ಕನ್ನಡ ಜಾನಪದ ಕಾವ್ಯದ ಮುಖ್ಯ ಭಾಗ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

shreekant.mishrikoti's picture

Quote:

ಪುರಾಣ ಕಥೆಗಳಲ್ಲಿ ಇಂತಹ ಹಲವು ಶಾಪ ಕೊಟ್ಟಿರುವ ವ್ಯಾಖ್ಯಾನಗಳನ್ನು ಕೇಳಿರುತ್ತೇವೆ. ಆದರೆ ಸಬೂತಿನ ಸಮೇತ ಇದ್ದಂತಿರುವ ಈ ಶಾಪ ನಿಜವಾಗಲೂ ನಮ್ಮ ನಂಬಿಕೆಗಳನ್ನು ಆಲೋಚನೆಗೆ ಹಚ್ಚಿಸುವಂಥದ್ದು. ಈಗ ತಲಕಾಡು ಮರಳಾಗಿರುವುದು, ಮೈಸೂರು ಅರಸರಿಗೆ ಮಕ್ಕಳಿಲ್ಲದಿರುವುದು ಎಲ್ಲ ಹೊಂದುತ್ತದೆ!

ಕೆ. ಎನ್. ಗಣೇಶಯ್ಯ ಅವರು ಈ ಕತೆಗೆ ವಿವರಣೆ ಕೊಡುವ ಕತೆಯನ್ನ ಬರೆದಿದ್ರು ಇತ್ತೀಚಿನ ಒಂದೆರಡು ವರ್ಷದ ಸುಧಾ ವಾರಪತ್ರಿಕೆ , ಸುಧಾ-ಯುಗಾದಿ , ಪ್ರಜಾವಾಣಿ-ದೀಪಾವಳಿ ವಿಶೇಷಾಂಕದಲ್ಲೆಲ್ಲೋ ಬಂದಿತ್ತು. ಈ ಗಣೇಶಯ್ಯ ಯಾರು ಅಂತ ನೆನಪಿಸಲೇ , ಅದೇ ವಿಜಯನಗರ ಹಿನ್ನೆಲೆಯ ಕರಿಸಿರಿಯಾನ ಮತ್ತು ಶ್ರವಣ ಬೆಳಗೊಳ ಹಿನ್ನೆಲೆಯ ಕನಕ ಮುಸುಕು ಕಾದಂಬರಿಗಳನ್ನ ಬರೆದಿದ್ರಲ್ರೀ ಅವರು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

Syndicate content