ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಂಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚೆಂದದ ಹೂ...

ಆರ್ಕಿಡ್

ಓಕೆ, ಓದುವವರಿಗೆ ಮುನ್ನೆಚ್ಚರಿಕೆ: ನನಗೆ ಕವನ ಬರೆಯೋಕೆ ಬರದು. ಸುಮ್ಮನೆ ಹಾಗೇ ಏನೋ ಬರೆದದ್ದು. ನಿಮ್ಮೆಲ್ಲರ ಪ್ರಾಮಾಣಿಕ ಅನಿಸಿಕೆ ಖಂಡಿತ ಬರೆದು ತಿಳಿಸಬಹುದು!

ಚೆಂದದ ಹೂ
ಬಾಡದಿರು ನೀ
ಸೊರಗದಿರು
ಮುಳುಗದಿರು
ಭಾವನೆಯಲಿ. ಆ ಮುದ್ದಿನ
ಮಾಸಿದ ನಗು
ಕಳೆದು ಹೋದಂತೆ
ಕಳೆಯದಿರದು ಚೆಲುವು;
ಕಳೆದು ಹೋಗುವೆ ನೀನೆ
ಮನ ತೊಯ್ದು
ಬಣ್ಣದಾಟದಿ.

ಚಿತ್ರ: ಮಂಗಳೂರಲ್ಲಿ ಕಣ್ಣಿಗೆ ಬಿದ್ದ ಆರ್ಕಿಡ್. ವಸಂತನ ಕ್ಯಾಮೆರಾದಲ್ಲಿ ತೆಗೆದದ್ದು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಚೆಂದದ ಹೂ...

srinivasps's picture

ಹರಿ,

ನಿಮ್ ಕವನದ ಪ್ರಯತ್ನ ನೋಡಿ ಬರೆದದ್ದು...

ಚೆಂದದ ಹೂ,
ಬಾಡದಿರು
ಬಾಗದಿರು
ಸೊರಗದಿರು
ಕೊರಗದಿರು
ಚಿಂತೆಯಲಿ.
ನಿನ್ನೀ ಮುದ್ದಿನ ನಗು,
ಮಾಟದ ಸೊಬಗು,
ಮಾಸಿ ಮಾಯವಾಗುವುದು,
ಮನದ ಹೊಯ್ದಾಟದಲಿ ತೋಯ್ದು...

ಏನನಿಸತ್ತೆ ಹೇಳಿ...

--ಶ್ರೀ

ಉ: ಚೆಂದದ ಹೂ...

hpn's picture

ಏನೋ ಬರೆಯಬೇಕು ಅನಿಸಿದ್ದು ಬರೆದೆ. :)

ನೀವು ಬರೆದಿರುವುದು ಅದಕ್ಕಿಂತ ಚೆನ್ನಾಗಿದೆ ಅನ್ನಿಸಿತು.

ಉ: ಚೆಂದದ ಹೂ...

malathi shimoga's picture

ಹೂವು ಚೆಲುವೆಲ್ಲ ತಾನೆಂದಿತು...ನಿಜ
ಸುಂದರವಾಗಿದೆ....ಹೂವು ನಿಮ್ಮ ಕವನ ಕೂಡ.......ಒಳ್ಳೆ ಪ್ರಯತ್ನ.

ಉ: ಚೆಂದದ ಹೂ...

asuhegde's picture

ಹೂಗಳ ಕಂಡು ನಾ ಬರೆದಿದ್ದ ಕವನ.

http://sampada.net/b...

ಉ: ಚೆಂದದ ಹೂ...

n.nagaraja shetty sablady's picture

ನಿಮ್ಮ ಪ್ರಯತ್ನ ನೋಡಿ ಖುಶಿಯಾಯಿತು. ಹೀಗೆ ಬರೆಯುತ್ತಾ ಇರಿ.

ಉ: ಚೆಂದದ ಹೂ...

vinideso's picture

ಚೆನ್ನಾಗಿದೆ ಸರ್ ,ನಿಮ್ಮ ಕವನ .
ನೀವು ಹಾಕಿರುವ ಹೂವಿನ ಚಿತ್ರಕ್ಕೆ ನಾ ಬರೆದ ಒಂದು ಚಿಕ್ಕ ಕವನ ಹೀಗಿದೆ :

http://sampada.net/b...

ಉ: ಚೆಂದದ ಹೂ...

umeshkumar's picture

ಹಾಯ್ ಹರಿ ! :) :) ;)

ಹೂವಿನ ಚೆಲುವ ಕಂಡು
ಕವಿಯಾದೆಯಾ ಗೆಳೆಯಾ
ಇನ್ನೇನು ಒಂಟಿ ಜೀವ
ಜಂಟಿಯಾಗೋದು ಬೇಡವೇ ಗೆಳೆಯಾ !
ವಸಂತ ಕಾಲವೇ ಹಾಗೆ
ಎಂಥವರನ್ನೂ ಮಂತ್ರಮುಗ್ದಗೊಳಿಸುತದೆ
ಹೀಗೆ ಸುಮ್ಮನೇ ಜಾಗೃತಗೊಳಿಸುತಿದೆ
ನಮ್ಮ ನಿಮ್ಮಂಥವರ ಕವಿ ಹೃದಯ !

ಉ: ಚೆಂದದ ಹೂ...

palachandra's picture

ಓಪನ್ ಸೋರ್ಸ್ ಅಂತಿದ್ದೋರೆಲ್ಲಾ ಕವಿ ಆಗ್ತಿದಾರಪ್ಪ!

ಉ: ಚೆಂದದ ಹೂ...

drushya pradeep's picture

ಹರಿ
ಕವನ ತುಂಬಾ ಚೆನ್ನಾಗಿದೆ
ಬಣ್ಣ ಬಣ್ಣದ ಹೂವು ಹಕ್ಕಿಗಳಿಗೆ ಮರುಳಾಗದವರು ಯಾರು ಇಲ್ಲ..
ಎಲ್ಲಾ ಬಂಧಗಳಿಂದ ಮುಕ್ತವಾಗಿರುವ ಸಂನ್ಯಾಸಿಗಳು ಕೂಡ ನಿಸರ್ಗದ ಚೆಲುವಿನ ಮಾಯೆಯೊಳಗೆ ಬಂಧಿತರಾಗ್ತಾರಲ್ವ??

ಉ: ಚೆಂದದ ಹೂ...

omshivaprakash's picture

ಪಾಲ... ಸ್ವತಂತ್ರ ತಂತ್ರಾಂಶಕ್ಕೆ ಕೂಡ ಆಗಾಗ "ಸ್ಪೂರ್ತಿ" ಸಿಕ್ಕಿದರೆ ತಾನೆ ಹೊಸ ಆವಿಷ್ಕಾರಗಳಾಗ್ಲಿಕ್ಕೆ ಸಾಧ್ಯ... ಕವಿತೆಯ ಮಧ್ಯೆಯೇ ಅದೂ ಸಿಕ್ಕರೆ ಸಕತ್ ಅಲ್ವಾ???

ಉ: ಚೆಂದದ ಹೂ...

drushya pradeep's picture

ಶಿವು ಸ್ವಂತ ಅನುಭವದಿಂದ ಹೇಳಿರೋ ಹಾಗಿದೆ ;)

ಉ: ಚೆಂದದ ಹೂ...

Divya Bhat Balekana's picture

ಹರಿ ಸಾರ್..
ಹೂವು ಸೂಪರ್ ನಮ್ಮ ಊರಿದಲ್ವಾ :)
ಕವನ ಎನೋ ನೀವು ಕವನ ಅಂತ ಹೇಳಿದ್ರಲ್ಲ.. ಅದಕ್ಕೆ ಕವನ ಅಂತ ಅನ್ಕೊಂಡಿದೀನಿ.. :)
ಇದರ ಬಗ್ಗೆ ಕ್ಲಾಸ್ ಬೇಕಾದ್ರೆ.. ಬರೆಯಲು ಸ್ಪೂರ್ತಿ ಬರೊ ಹಾಗೆ ಶಿವು ಸಾರ್ ಹೇಳಿ ಕೊಡ್ತಾರೆ.. ಇತ್ತೀಚೆಗೆ ಸ್ಪೂರ್ತಿ ಇಂದ ಎಕ್ಸ್ಪರ್ಟ್ ಆಗಿದಾರೆ.. :)
ಸ್ಪೂರ್ತಿ ಎಲ್ಲ ಬೇಡ ಹಾಗೇ ಬರಿಯೋದು ಅಂತ ಆದ್ರೆ ನಾನೆ ಹೇಳ್ಕೊಡ್ತೆ ಬಿಡಿ..
ಯವ್ದು ಆಗ್ಬಹುದು ನೀವೆ ಹೇಳಿ..

ಉ: ಚೆಂದದ ಹೂ...

Divya Bhat Balekana's picture

:)

ಉ: ಚೆಂದದ ಹೂ...

Minni's picture

ಚೆನ್ನಾಗಿದೆ. ಫೋಟೋ ಕೂಡ ಚೆನ್ನಾಗಿದೆ. ಈ ಆರ್ಕಿಡ್ ಹೂಗಳನ್ನ ತಿಂದರೆ (ನನಗೂ ಗೊತ್ತಿರಲಿಲ್ಲ, ಆದರೆ, ಥೈ ಫುಡ್ ಲ್ಲಿ ಇಡ್ತಾರೆ, ನಾವು ಕೊತ್ತುಂಬರಿ ಸೊಪ್ಪು, ಡ್ರೈ ಫ್ರೂಟ್ ಅಲಂಕಾರಕ್ಕೆ ಇಟ್ಟ ಹಾಗೆ) ಕೊಬ್ಬರಿ ತಿಂದ ಹಾಗೆ ಇರುತ್ತೆ!

P.S: ಶ್ರೀ ಕವನಕ್ಕಿಂತ ಹರಿ ಕವನವೇ ಜಾಸ್ತಿ ಚೆನ್ನಾಗಿದೆ. ಪುಡಿಯಾಗಿರೋ ಉಪ್ಪಿಗಿಂತ ಕ್ರಿಸ್ಟಲ್ ಉಪ್ಪು ಚೆನ್ನಾಗಿರೋ ಹಾಗೆ!