ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಬಾಂಡ್... ಶೇನ್ ಬಾಂಡ್

August 26, 2005 - 8:38pm — hpn

ಚಿತ್ರ ಕೃಪೆ: ಕ್ರಿಕ್ ಇನ್ಫೊ

ಶ್ರೀಲಂಕಾದಲ್ಲಿ ಹೀನಾಯವಾಗಿ ಸೋತು ಬಂದು ಇನ್ನೂ ವಾರಗಳೇ ಕಳೆದಿಲ್ಲ, ಭಾರತ ತಂಡಕ್ಕೆ... ಆಗಲೇ ಅಷ್ಟು ನಮ್ಮ ಯೋಗ್ಯತೆಗೆ ಸಾಲದು ಎಂಬಂತೆ ಮತ್ತೊಂದು ಬಾರಿ ಇನ್ನಷ್ಟು ಹೀನಾಯವಾಗಿ ಸೋತಿದ್ದಾರೆ.

ಇಂದು ಅವರನ್ನು ಮನೆಗೋಡಿಸಿ ಮೊದಲೇ ಕೆಟ್ಟದಾಗಿ ಆಡುತ್ತಿರುವ ಭಾರತ ತಂಡವನ್ನು ಇನ್ನೂ ಕೆಟ್ಟದಾಗಿ ಕಾಣುವಂತೆ ಮಾಡಿದವರು ಬ್ರಿಟಿಷ್ ಧೂತ ವಿಭಾಗದ ಬಾಂಡ್ ಅಲ್ಲ... ನ್ಯೂಜಿಲೆಂಡಿನ ಬಾಂಡ್. 'ಪಾಪ ಈಗ ತಾನೆ ಇಂಜುರಿಯಿಂದ ವಾಪಸ್ ಬಂದಿದ್ದಾನೆ, ಅವನಿಗೆ ಮೊದಲ ತರಹ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಕಾಮೆಂಟ್ರಿ ತಂಡ ಮಾತನಾಡಿಕೊಂಡ ಕೆಲವೇ ನಿಮಿಷಗಳಲ್ಲಿ ಭಾರತ ತಂಡದ ಮೂರು ವಿಕಟ್ ಉರುಳಿಸಿಯೇ ಬಿಟ್ಟಿದ್ದ. ನಮ್ಮವರು ಹೀಗೆ ಆಡುವರೆ? ಇಂಜುರಿಯಿಂದ ವಾಪಸ್ ಬಂದ ಬೌಲರ್ ಒಬ್ಬ ನಮ್ಮ ಭಾರತ ತಂಡದವನಾದರೆ ಅರ್ಧಕ್ಕರ್ಧ ಸ್ಪೀಡ್ ಕಮ್ಮಿಯಾಗಿ ಹೋಗಿರುತ್ತೆ! (ನಮ್ಮ ತಂಡದ ಝಹೀರ್ ಖಾನ್ ಗೊತ್ತಲ್ಲ!)

ಇನ್ನು ಭಾರತದ ತಂಡದ ವರ್ಚಸ್ಸು ಕಡಿಮೆಯಾಗಿರುವ ಬಗ್ಗೆ ಕ್ರಿಕ್ ಇನ್ಫೊದಲ್ಲೊಂದು ಬಹಳ ಚೆನ್ನಾಗಿರುವ ಲೇಖನ ಇದೆ. ಓದಿ.
(ವರ್ಚಸ್ಸು ಕಡಿಮೆಯಾದರೂ ತಂಡದಲ್ಲಿ ಭಾಗವಹಿಸುವ ಆಟಗಾರರಿಗೆ ಹರಿದು ಬರುವ ಹಣವೇನೂ ಕಡಿಮೆಯಾಗಿಲ್ಲ. ಸಾಲದೆಂಬಂತೆ ಎಲ್ಲಿ ನೋಡಿದರೂ ಇವರುಗಳ ಜಾಹಿರಾತುಗಳು ಬೇರೆ!)

ಕೊನೆಗೊಮ್ಮೆ ಭಾರತ ತಂಡದವರು ಆಟಕ್ಕಿಳಿದಾಗ ಇದ್ದಕ್ಕಿದ್ದಂತೆ ಅವರ ಆಟವನ್ನು ನೋಡಿ ಅವರ ಬಟ್ಟೆಯ ಬಣ್ಣವನ್ನು ಗಮನಿಸದೇ ಹೋದಿರೋ, 'ಇದ್ಯಾವುದೋ ಲೋಕಲ್ ಮ್ಯಾಚು' ಎಂದು ಚಾನಲ್ ಬದಲಾಯಿಸುವ ಸಾಧ್ಯತೆ ಹೆಚ್ಚು! ಭಾರತ ತಂಡದವರು ಹಣ ಪಡೆದುಕೊಳ್ಳುವುದರಲ್ಲಿ ತೋರಿಸುವ ಪ್ರೊಫೆಶನ್ನಲಿಸ್ಮ್ ಆಟದಲ್ಲಿ ತೋರದೆ ಹೋಗುತ್ತಾರಲ್ಲ ಎಂಬ ವ್ಯಥೆ ಯಾವಾಗಲೂ ಇದ್ದದ್ದೇ ಅಲ್ಲವೆ?
ಹೀಗೆಲ್ಲಾ ಕಳಪೆ ಆಟವನ್ನು ಭಾರತ ತಂಡ ಕರುಣಿಸಿದಾಗ ತಂಡದಲ್ಲಿರದ ಲಿಟ್ಟಲ್ ಮಾಸ್ಟರ್ ನೆನಪು ಎಲ್ಲರಿಗಾಗುತ್ತದೆ! ಪಾಪ, ಸಚಿನ್ನಾದ್ರೂ ಎಷ್ಟು ದಿನ ಭಾರತ ತಂಡದ ಬ್ಯಾಟಿಂಗ್ ಭಾರ ವಹಿಸಿಕೊಳ್ಳಬೇಕು?

ಕೊನೆಗೊಂದಷ್ಟು ನಿಮಿಷಗಳು ಕೊನೆಯಲ್ಲುಳಿದ ಇಬ್ಬರು ಯೋಧರಂತೆ ಪಠಾಣ್ ಹಾಗೂ ಯಾದವ್ ಸೋಲೊಪ್ಪಿಕೊಳ್ಳದೆ ಯುದ್ಧಮಾಡಿದರಾದರೂ ಬಾಂಡಿನ ಸ್ವಿಂಗಿಗೆ ಅವರು ಯಾವ ಮೂಲೆ? (ಇಲ್ಲಿ ಮಾಲೆ ಎಂದು ಓದಿಕೊಳ್ಳುತ್ತಿರುವವರು ಸರಿಪಡಿಸಿರುವ ತುಂಗ ಫಾಂಟನ್ನೋ ಅಥವಾ ಇನ್ನಿತರ ಯಾವುದೇ ಕನ್ನಡ ಯುನಿಕೋಡ್ ಫಾಂಟನ್ನೋ ನಿಮ್ಮ ಸಿಸ್ಟಮ್ಮಿಗೆ ಹಾಕಿಕೊಳ್ಳಿ) Smiling

ಟಾಡಾಟ್ಟಡಾ.... 'ಬಾಂಡ್'... 'ಶೇನ್ ಬಾಂಡ್'... ಎಂದು ಭಾರತ ತಂಡದವರಿಗೆ 'ನಿಮಗೆ ನಾಚಿಕೆಗೇಡು... ಕ್ರಿಕೆಟ್ ಆಡೋಕ್ಕೆ ಬರೋದಿಲ್ಲ' ಎಂದು ಹೀಯಾಳಿಸಿ, ಅಟ್ಟಹಾಸದಿಂದ ಮುಕ್ತಾಯವಾಗಿ ಭಾರತೀಯರಿಗೆ 'ಅದೇ ಹಳೆಯ ಕಥೆ' ಬಿತ್ತರಿಸಿತು, ಇವತ್ತಿನ ಮ್ಯಾಚ್!

~.~
  • hpn ರವರ ಬ್ಲಾಗ್
  • Login or register to post comments
  • 934 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2005 - 9:06pm — tvsrinivas41

ನಾಚಿಕೆಗೇಡಿನ ಪರಮಾವಧಿ

tvsrinivas41's picture

ನಮ್ಮ ಆಟಗಾರರಿಗೆ ಒಂದರ ಹಿಂದೆ ಒಂದರಂತೆ ಸೊಲೋದೇನೂ, ಹೊಸತಲ್ಲ, ಹೆಚ್ಚಲ್ಲ. ೧೦ ಮಾಜಿ ಕ್ಯಾಪ್ಟನ್ ಗಳು ಮತ್ತು ಇನ್ನೊಬ್ಬ ಹೊಸ ಕ್ಯಾಪ್ಟನ್ ಆಡುವ ದಿನಗಳು ದೂರವಿಲ್ಲ. ಈ ಆಟಗಾರರಿಗೆ ಹೊಟ್ಟೆ ತುಂಬುರುವುದೇ ಇದಕ್ಕೆ ಕಾರಣ. ಆಟ ಆಡಲಿ, ಆಡದೇ ಇರಲಿ ಇವರುಗಳ ಜೇಬು ಎಂದೂ ತುಂಬುವುದು. ಅದೇ ದೊಡ್ಡ ತಪ್ಪು. ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾಗಳಲ್ಲಿಯಂತೆ ಆಟ ಆಡಿ ದುಡಿದರೆ ಮಾತ್ರ ಜೀವಿಸಬಹುದು ಎನ್ನುವ ಪರಿಸ್ಥಿತಿ ಬರಬೇಕಾಗಿದೆ. ಅಡ್ವರ್ಟೈಸ್ ಮೆಂಟ್ ಗಳಿಂದ ಇವರುಗಳಿಗೆ ಬರುವ ದುಡ್ಡೇನು ಕಡಿಮೆಯೇ?

ಇದು ದೇಶಕ್ಕೇ ನಾಚಿಕೆಗೇಡಿನ ಪರಮಾವಧಿ ಅಲ್ಲದೇ ಮತ್ತಿನ್ನೇನು?

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏಕ್ ಕೋಚ್ ಕಿ ಮೌತ್
  • ಈ ದಿನದ ಕ್ರಿಕೆಟ್ ಸುದ್ಧಿ - ಹಾ! ಎಚ್ಚರ ಇವು ಒಳ್ಳೆಯ ಸುದ್ಧಿಗಳು
  • ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹೊಗೆ
  • ದೊಡ್ಡ ಗಣೇಶನ ದೊಡ್ಡ ಯೋಜನೆಗಳು
  • ಕ್ರಿಕೆಟ್... ಕ್ರಿಕೆಟ್ಟು... ಕ್ರಿ......ಕೆಟ್ಟು!!!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator