ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ‌, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಾಡಿದ ಪದ

ಸುಮ್ಮನೆ ವೈಷ್ಣವನೆಂದಿರಿ - ಪರ -
ಬ್ರಹ್ಮ ಸುಜ್ಞಾನವನರಿಯದ ಮನುಜನ

ಮುಖವ ತೊಳೆದು ನಾಮವಿಟ್ಟವನಲ್ಲದೆ
ಮಿಕ್ಕ ಶಾಸ್ತ್ರಂಗಳ ನೋಡಿದನೆ?
ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ
ಭಕುತಿಯ ರಸದೊಳು ಮುಳುಗಿದನೇನಯ್ಯ

ಊರ ಮಾತುಗಳೆಲ್ಲನಾಡಿದನಲ್ಲದೆ
ನಾರಾಯಣ ಕೃಷ್ಣ ಶರಣೆಂದನೆ?
ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ
ಗುರುಹಿರಿಯರಿಗೆಲ್ಲ ಎರಗಿದನೇನಯ್ಯ

ಗಂಗೆಯಲಿ ಮಣ್ಣು ತೊಳವವನಲ್ಲದೆ
ಹಿಂಗದೆ ಸ್ನಾನವ ಮಾಡಿದನೆ?
ರಂಗ ಶ್ರೀ ಪುರಂದರವಿಠಲನ ದಾಸರ
ಸಂಗಡ ಕೂಡಾಡಿ ತಿರುಗಿದನೇನಯ್ಯ

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಾಡಿದ ಪದ

devdasudupi's picture

ಹರಿ ಪ್ರಸಾದ್ ರವರೇ,
ತುಂಬಾ ಸೊಗಸಾಗಿದೆ.

ಉ: ಕಾಡಿದ ಪದ

savithru's picture

ನಿಮಗೆ ಕಾಡಿದ ಪದದೊಳಗೆ ನನಗೆ ಕಾಡಿದ ಪದ "ಮಿಕ್ಕ ಶಾಸ್ತ್ರಂಗಳ ನೋಡಿದನೆ?"

ಉ: ಕಾಡಿದ ಪದ

ravikh's picture

ಸುಂದರವಾಗಿಯೂ, ಅರ್ಥಗರ್ಭಿತವಾಗಿಯೂ ಇದೆ.