ಎಂದೂ ಬೇಗ ಏಳದವ ಇವತ್ತು ಮುಂಜಾನೆ ಎದ್ದು ಅತ್ತ ದೆಹಲಿಯಲ್ಲಾದ ಬಾಂಬ್ ಸ್ಪೋಟದ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳ ವರದಿ ಓದುತ್ತಿದ್ದೆ. ನಡುನಡುವೆ ಉಪ್ಪುನೀರು gargle ಮಾಡೋದು, pillsಉ ಟಾನಿಕ್ಕು ಪಕ್ಕದಲ್ಲಿಟ್ಟುಕೊಂಡ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳಲು ಬೇಸರವಾದಾಗ ಸ್ವತಃ ಧೂಳು ಹಿಡಿದುಕೊಂಡಿದ್ದ ವ್ಯಾಕ್ಯೂಮ್ ಹಿಡಿದು ಕಸ ಹೊಡೆದದ್ದು. ಹೊರಗೆ ಹೋಟೆಲಿನಲ್ಲಿ ತಿಂದದ್ದಕ್ಕೆ ಇವೆಲ್ಲದರ ನಡುವೆ ನನಗೇ ನಾನೇ ಬೈದುಕೊಂಡದ್ದು.
ಕಳೆದ ವಾರ ಯವುದೋ ಮೀಟಿಂಗ್ ಅಟೆಂಡ್ ಮಾಡೋದಕ್ಕೆಂದು ಹೋಗುವಾಗ ದಾರೀಲಿ ಸೂಪರ್ ಮಾರ್ಕೆಟ್ಟೊಂದರ ಬಳಿ ಗಾಡಿ ನಿಲ್ಲಿಸಿ ಪೆನ್ನು ತಗೊಂಡು ಹೊರಬರುತ್ತಿರುವ ನನಗೆ ಪಕ್ಕದ ಹೋಟೆಲಿನ ಚ್ಯಾಟ್ ಅಂಗಡಿಯ ಗುರುತು ಹಿಡಿದು ಮಾತನಾಡಿಸಿದ. ಸುಮಾರು ದಿನಗಳಿಂದ ಅತ್ತ ಕಡೆ ಹೋಗಿರಲಿಲ್ಲ. ಅವನ ಜೊತೆ ಮಾತುಕತೆ ಹೀಗಿತ್ತು:
"ಸಾಬ್ಜೀ, ಚ್ಯಾಟ್ಸ್ ಖಾನಾ ಚೋಡ್ ದಿಯಾ?"
"ನಹೀ ಗುರೂ, ಚೋಡ್ನೇ ಕೆ ಲಿಯೆ ಏಕ್ ಬಾರ್ ಶಾಯದ್ ಬನಾರಸ್ ಜಾನ ಪಡೇಗಾ"
ಈಗ ಇದೊಂದು ಭಾನುವಾರವೆ ಸಾಕು ಅನ್ನಿಸುತ್ತಿದೆ

- hpn ರವರ ಬ್ಲಾಗ್
- Login or register to post comments
- 741 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.



RSS:
ಉ: ಮತ್ತೊಂದು ಭಾನುವಾರ
ಬರಹ ಚೆನ್ನಾಗಿದೆ ಹರಿ, ಇದು ನಿಜ ಕೂಡ. ಆದ್ರೆ ಸಿಟಿಯ ಜನ ಈ ’ಚಾಟ್ ಸೆಂಟರ್’ಗಳಿಗೆ ಹೇಗೆ ಮುಕುರುತ್ತಾರೆ ಅಂದ್ರೆ ಹೇಳೋ ಹಾಗಿಲ್ಲ. ಹೆಚ್ಚಿನ ಗಾಡಿಗಳು ಅದೇಕೋ
) ದೊಡ್ಡ ಮೋರಿಯ ಪಕ್ಕಾನೇ ಇರತ್ವೆ. ಅವರು ಪ್ಲೇಟ್‌ಗಳನ್ನ ತೊಳೆಯೋ ಚಂದ ನೋಡಿದ್ರೆ, ಅಬ್ಬಾ,.... ಬೇಡ ಬಿಡಿ, ನನ್ನ ವರ್ಣನಾ ವೈಖರಿ ಮುಂದುವರೆದರೆ ಪಾಪದ ಗಾಡಿ ಅಂಗಡಿಯವರು ಬಾಗಿಲು ಮುಚ್ಕೊಂಡು ಮನೆಗೆ ಹೋಗ್ಬೇಕಷ್ಟೆ!! ನಾನು ಮಸಾಲಾ ಪೂರಿ ಅಂತ ಕರೆಯೋದಿಲ್ಲ. "ಮೋರಿ ಪೂರಿ" ಅಂತಾನೇ ಕರೆಯೋದು.
). ಇದ್ದಿದ್ದರಲ್ಲಿ ಸಣ್ಣ ಸಣ್ಣ ಹೋಟೆಲ್‌ಗಳಲ್ಲಿ ಸ್ವಲ್ಪ ವಾಸಿ. ಆದ್ರೆ ಬೀದಿ ಗಾಡಿಯ ತಿಂಡೀನೇ ಭಾಳ ರುಚಿ ಅಂತ ಯುವಕರ ಅಂಬೋಣ. ತಿಂಡಿತಿಂದ್ರೆ ಮಾತ್ರ ಅಲ್ಲ. ಅವರು ಕೊಡೋ ಹಳೆಯ ನೋಟುಗಳನ್ನು ಕೈಲಿ ಮುಟ್ಟಿದ್ರೆ ಸಾಕು ಯಾವ ಯಾವ ಕಾಯಿಲೆ ಬರತ್ತೋ ಅಂತ ಹೆದ್ರಿಕೆ ಆಗತ್ತೆ.
"ಏರಿದವನು ಚಿಕ್ಕವನಿರಬೇಕು"
ಉ: ಮತ್ತೊಂದು ಭಾನುವಾರ
ಹೌದು, ಗಾಡಿಗಳಿಗೇ ಜನ ಮುತ್ತೋದು ಹೆಚ್ಚು. ಆದರೆ ಬೆಂಗಳೂರಲ್ಲಿ ಅದು ultimate riskಉ. ಸ್ವಲ್ಪ ರೋಗಾಣುಗಳು ಹೋದ್ರೆ ದೇಹ ತಡ್ಕೊಳ್ಳತ್ತೆ, ಆದರೆ ಗಾಳೀಲಿರೋ ಆ ಪಾಟಿ ಕಾರ್ಬನ್ (ಮತ್ತಿನ್ನೇನೇನೋ) ಹೊಟೋದ್ರೆ ಏನ್ ಗತಿ, ಒಂದು ರೌಂಡು ಹೋಗಿಬಂದು ಮುಖ ಒರೆಸಿಕೊಂಡ್ರೆ ಕಪ್ಪಗೆ ಸೂಟ್ ಬಂದ ಹಾಗೆ ಬರತ್ತೆ!
ಶಿವಮೊಗ್ಗದಲ್ಲಿ ಹಂದಿಗಳ ಕಾಟ ಇರುತ್ತಿತ್ತು. ಹಂದಿಗಳು ಬಂದು ಪ್ಲೇಟುಗಳ ಸ್ವಲ್ಪ ದೂರದಲ್ಲೆ ಗಲಾಟೆ ಮಾಡುತ್ತ ಬಿದ್ದಿದ್ದರೂ ಲೆಕ್ಕಿಸದೆ ಅಲ್ಲಿ ಜನ ಪಾನಿಪುರಿ ತಿನ್ನುತ್ತಿದ್ದದ್ದು ನೆನಪಿದೆ. ಕೆಲವೊಮ್ಮೆ ಪ್ಲೇಟುಗಳನ್ನು ನಾಯಿಗಳು ಟೇಸ್ಟ್ ಮಾಡಿರಲಿಕ್ಕೂ ಸಾಕು
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಮತ್ತೊಂದು ಭಾನುವಾರ
saadhyavaadre corporationnige buddibandre ee chat goodangaligalanna mucchisi, sarakara kaisaala needi arogyakaravada sannagdigalannu shurumaadabahudalla, sarakaaradde franchise maadikollabahudalla?
ಉ: ಮತ್ತೊಂದು ಭಾನುವಾರ
ಗುರ್ವಿಂದರ್ ಮಂಗಳೂರಿನವನ ಹಾಗೆ ಬಿಡಿಸಿದ್ದೀರಿ...ಮುಂಡು ಸುತ್ತಿಕೊಂಡು
ಕಾರ್ಟೂನ್ ಚೆನ್ನಾಗಿ ಬಂದಿದೆ.
*ಅಶೋಕ್
ಉ: ಮತ್ತೊಂದು ಭಾನುವಾರ
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಮತ್ತೊಂದು ಭಾನುವಾರ
beega hushaaragappa tamma...
noorentu salahe kelodide ..;p