ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಲ್ಲೊಳಡಗಿದ ಜೀವ

ನಾನು ಆರ್ಕುಟ್ಟಿನಲ್ಲಿ ಈ ಫೋಟೋ ಹಾಕಿದ್ದೆ. ಸಾವನದುರ್ಗಕ್ಕೆ ಹೋದಾಗ ತೆಗೆದದ್ದು. ಇದಕ್ಕೆ ಸವಿತಾರವರು ನಿನ್ನೆ ಬರೆದ ಪ್ರತಿಕ್ರಿಯೆ ಈ ಚಿತ್ರಕ್ಕೆ ಒಂದು ಚೆಂದದ ಶೀರ್ಷಿಕೆ ಕೊಟ್ಟಿತು!
ಆ ಶೀರ್ಷಿಕೆಯೊಂದಿಗೆ ಚಿತ್ರ ಮತ್ತೆ ಹಾಕುತ್ತಿದ್ದೇನೆ ಇಲ್ಲಿ:

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಲ್ಲೊಳಡಗಿದ ಜೀವ

savithasr's picture

ಚೆಂದದ ಚಿತ್ರ ಹರಿ..:)

ಬೀಜ ಮೊಳೆಯಲು ಬಿಟ್ಟ ಬಂಡೆ.....ಬೆಳೆಯಲು ಆಸರೆ ಕೊಟ್ಟೀತೆ...?!
ಜೀವ ನಿರ್ಜೀವದ ನಡುವಿನ ಅನ್ಯೋನ್ಯತೆಯೋ...ಹೋರಾಟವೋ....ತಿಳಿಯದು?!
-ಸವಿತ

ಉ: ಕಲ್ಲೊಳಡಗಿದ ಜೀವ

Shivakumar.Revadi's picture

ಸವಿತಾ ಅವರೆ ನಮಸ್ಕಾರ,
ನಿಮ್ಮ ಬೇರೆ ಬೇರೆ ತರಯದ ಹೂಗಳ ಚಿತ್ರ ಮುದನೀಡುತ್ತವೆ, ಹಾಗೇ ನನ್ನದೊಂದು ಪುಕ್ಕಟೆ ಸಲಹೆ, ನಿಮ್ಮ ಹೂವಿನ ಚಿತ್ರ ಬದಲಾದಂತೆಲ್ಲಾ ಆ ಹೂವಿಗೆ ಸಂಬಂದ ಪಟ್ಟ ವಿವರಗಳನ್ನೂ ತಿಳಿಸಿ ಅದೊಂದು ಹೊಸವಿಚಾರಕ್ಕೆ/ಚರ್ಚೆಗೆ ಮತ್ತೂ ಸಂಗ್ರಹಕ್ಕೆ ದಾರಿಯಾದೀತು.
ನನ್ನಿ.

ಉ: ಕಲ್ಲೊಳಡಗಿದ ಜೀವ

savithasr's picture

ಶಿವಕುಮಾರರೆ,
ಸಲಹೆ ಚೆನ್ನಾಗಿದೆ.ಖಂಡಿತ ಪ್ರಯತ್ನಿಸುತ್ತೇನೆ :)
ಹೂವಿನ ಚಿತ್ರದ ಜೊತೆ ಏನು ವಿಚಾರ ಬರೆಯಬಹುದು? ಅಂತ ಹೇಳ್ತೀರಾ.
-ಸವಿತ

ಉ: ಕಲ್ಲೊಳಡಗಿದ ಜೀವ

gurubaliga's picture

ವ್ಹಾ ಸವಿತಾ ! ಅರೆ ವ್ಹಾ ನಾಡಿಗರೆ!

ಉ: ಕಲ್ಲೊಳಡಗಿದ ಜೀವ

muralihr's picture

ಕಲ್ಲರಳಿ ಅನ್ನೋ ಸಸ್ಯ ಅನ್ಸುತ್ತೆ . ಇದು ಕಲ್ಲಿದ್ದರೆ ಮಾತ್ರ ಬೆಳೆಯೋದು.

ಉ: ಕಲ್ಲೊಳಡಗಿದ ಜೀವ

hamsanandi's picture

ಹೌದಾ?? ಒಳ್ಳೇ ಅರಳೀ ಎಲೆ ಇದ್ದಹಾಗೇ ಇದೆ - ದೊಡ್ಡದಾಗಿ ಮರವಾಗೋದಿಲ್ವಾ ಇದು?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಕಲ್ಲೊಳಡಗಿದ ಜೀವ

muralihr's picture

ಇದರ ವೈಜ್ಞಾನಿಕ ಹೆಸರು -- ficus arnottiana ;;;
ದೊಡ್ಡ ಮರವಾಗುತ್ತೆ - ಹರಿ ಹೇಳಿದ ಹಾಗೆ ಇವು ಸಾವನದುರ್ಗ - ಹಳೇ ಕೋಟೆಗಳಲ್ಲಿ
ಕಾಣುತ್ತವೆ.

  • http://highrangephot...
  • ಉ: ಕಲ್ಲೊಳಡಗಿದ ಜೀವ

    hpn's picture

    ಒಳ್ಳೆಯ ಮಾಹಿತಿ, ಮುರಳಿ.
    - HPN
    ನನ್ನ ಬ್ಲಾಗುಗಳು: ಪರಿವೇಶಣ | PariveshaNa

    ಉ: ಕಲ್ಲೊಳಡಗಿದ ಜೀವ

    mowna's picture

    ಅದ್ಭುತ ಚಿತ್ರ. ಪ್ರಕೃತಿ ತನ್ನ ಒಡಲಾಳದಲ್ಲಿ ಎಂತಹ ವಿಸ್ಮಯಗಳನ್ನು ಅಡಗಿಸಿಕೊಂಡಿರುತ್ತೆ ಅಲ್ಲವೆ. ಕಲ್ಲು ಹೃದಯಗಳಲ್ಲೂ ಸ್ನೇಹ, ಪ್ರೀತಿ ಈ ರೀತಿ ಕೊನರಿದರೆ ಎಷ್ಟು ಚೆನ್ನ.