ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್

ಫೆಡೋರಾ ೬ ನೇ ಅವೃತ್ತಿಯಲ್ಲಿ ಹೊಸತೊಂದು ಕನ್ನಡ ಯೂನಿಕೋಡ್ ಫಾಂಟ್ ಬಿಡುಗಡೆ ಮಾಡಿದ್ದಾರೆ. ಫಾಂಟ್ ಹೆಸರು ಲೋಹಿತ್ ಕನ್ನಡ. ಇತ್ತೀಚೆಗೆ ನನ್ನ ಸ್ನೇಹಿತನಿಂದ ಈ ವಿಷಯ ತಿಳಿಯಿತು. ಆದರೆ ಉಳಿದೆಲ್ಲ ಫಾಂಟುಗಳಂತೆ ಈ ಫಾಂಟ್ ಕೂಡ ಸಂಪೂರ್ಣಗೊಂಡಿಲ್ಲ. ಸುಮಾರು ತಪ್ಪುಗಳಿವೆ.

ಆಸಕ್ತರು ಈ ಫಾಂಟನ್ನು ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಒಳ್ಳೆಯ ಸುದ್ದಿ ಏನೆಂದರೆ ಈ ಫಾಂಟು GPL ಅಡಿ ಲಭ್ಯ. ಯಾರು ಬೇಕಾದರೂ ಇದನ್ನು ಡೌನ್ಲೋಡ್ ಮಾಡಿಕೊಂಡು ಸರಿಪಡಿಸಿ ಮತ್ತೆ ಬಿಡುಗಡೆ ಮಾಡಬಹುದು.

ಈ ಫಾಂಟು ಬಳಸಿ ಮೂಡಿಸಿದ ಅಕ್ಷರಗಳ ಸ್ಕ್ರೀನ್ ಶಾಟ್ ಕೆಳಗಿವೆ:
lohit font

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಲಿಂಕ್ ಮುರಿದಿದೆ

ಶಶಾಂಕ's picture

HPN, ಪಾಂಟ್ ಡೌನ್ಲೋಡ್ ಪೇಜಿನ ಲಿಂಕ್ ಮುರಿದಿದೆ. ಬೇರೇ ಲಿಂಕ್ ಇದ್ದರೆ ದಯವಿಟ್ಟು ತಿಳಿಸಿ.

Re: ಲಿಂಕ್ ಮುರಿದಿದೆ

hpn's picture

ಇಲ್ವಲ್ಲಾ! ಇಲ್ಲಿ ಸರಿಯಾಗಿಯೇ ಓಪನ್ ಆಗ್ತಾ ಇದೆ.

|ಇಗೋ ಲಿಂಕ್ ಮತ್ತೊಮ್ಮೆ ಸೇರಿಸುತ್ತಿದ್ದೇನೆ

cheers,

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

Re: ಲಿಂಕ್ ಮುರಿದಿದೆ

ಶಶಾಂಕ's picture

ಏನೋಪ್ಪಾ, ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಮತ್ತು ನೆಟ್‌ಸ್ಕೇಪ್‌ ಎರಡರಲ್ಲೂ ಓಪನ್‌ ಆಗ್ತಾ ಇಲ್ಲ. ಪೈರ್‌ಪಾಕ್ಸ್‌ನಲ್ಲಿ ಟ್ರೈ ಮಾಡಿ ಅಂತ ಹೇಳಬೇಡಿ!

ಉ: ಲಿಂಕ್ ಮುರಿದಿದೆ

Sunil Jayaprakash's picture

ಆ ಸೈಟಿನಲ್ಲಿ fonts-indic-2.0.6-1.src.rpm ಎನ್ನುವ ಸೋರ್ಸ್ rpm ಹಾಕಿದ್ದಾರೆ. ಅದನ್ನು ಇನ್ಸ್ಟಾಲ್ ಮಾಡಿದಾಗ ಲೋಹಿತ್ ಕನ್ನಡ ಫಾಂಟು ಸಿಗುತ್ತದೆ. /usr/share/fonts/kannada/lohit_kn.ttf