ಸುಧಾ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೊನೆಯ ಪುಟದ ಕಾಲಂ ಹೆಸರು ಇದು. ಕೊಂಚ ತರಲೆ, ಕೊಂಚ ಹಾಸ್ಯ, ಮತ್ತಷ್ಟು ಗೋಡೆಯಿಂದಾಚೆಗಿನ ಸುದ್ದಿ, ಸರಕು. ಆದರೆ ಈ combination ಎಷ್ಟು ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆಂದರೆ ಈ ವಿಭಾಗ ನನಗೆ ತಿಳಿದಂತೆ ತುಂಬಾ ಜನಪ್ರಿಯ!
ಇಂಟರ್ನೆಟ್ ಬಂದ ಮೇಲೆ ವಿದೇಶದ weird ಸುದ್ದಿಗಳಿಗೇನೂ ಬರವಿಲ್ಲದಿರುವಾಗಲೂ ಕನ್ನಡದಲ್ಲಿರುವುದರ advantage ಇದಕ್ಕಿದ್ದದ್ದೇ. Lycos ತನ್ನ ಅಂತರ್ಜಾಲ ತಾಣವನ್ನು ಬ್ರಿಟಿಷರಿಗಾಗಿ ತೆರೆದಾಗ ಸುತ್ತಲಿಂದ ಇಂತದ್ದೇ ಹಲವು ಸುದ್ದಿ ಚೂರುಗಳನ್ನು ಓದುಗರಿಗೆ ಪ್ರತ್ಯೇಕ ವಿಭಾಗವಾಗಿಯೇ ಒದಗಿಸಿತ್ತು. ಅದು ನಂತರ ಬಹಳ ಜನಪ್ರಿಯವಾದದ್ದರಲ್ಲಿ ಆಶ್ಚರ್ಯವೇನಿಲ್ಲ.
ಆದರೆ ಇತ್ತೀಚೆಗೆ 'ತರಂಗ' ಕೂಡ ಸುದ್ದಿ-ಸ್ವಾರಸ್ಯವನ್ನು ನಕಲು ಮಾಡ ಹೊರಟು ತನ್ನ ಕೊನೆಯ ಪುಟವನ್ನು 'ಶ್!ಗಪ್ ಚುಪ್!!' ಮಾಡಿದೆ. ಅದರಲ್ಲಿ ಗಪ್ ಚುಪ್ ಆಗಿ ಓದುವಂತ ಯಾವುದೇ ಸುದ್ದಿಯಿಲ್ಲದಿರುವುದಷ್ಟೇ ಅಲ್ಲ, ಬರವಣಿಗೆ ಕೂಡ ಮಿ.ಬೀನ್ ಶೈಲಿಯ ಹಾಸ್ಯ. ಪ್ರಯಾಸ ಪಟ್ಟು ನಗಿಸಲು ಪ್ರಯತ್ನಿಸುತ್ತಿರುವಂತೆ.
'ತರಂಗ'ಮಾತ್ರ ಅಲ್ಲ, ಇನ್ನೂ ಹಲವು ಹೊಸ/ಹಳೆ ವಾರಪತ್ರಿಕೆಗಳಲ್ಲೂ ಹೀಗೊಂದು ಕೊನೆಯ ಪುಟದ ಇರುವಿಕೆ ಮಾಮೂಲಾಗಿಬಿಟ್ಟಿದೆ. ಸುಧಾ, ತರಂಗ ಮತ್ತು ಅದರಂತಿರುವ ಉಳಿದ ವಾರಪತ್ರಿಕೆಗಳನ್ನು ಗಮನಿಸಿದರೆ ಅದೇ ಮತ್ತೊಂದು ಫಾರ್ಮ್ಯಾಟ್ saturate ಆಗಿ ಕುಳಿತಂತೆ ಕಾಣುತ್ತದೆ.
ಎಲ್ಲದಕ್ಕಿಂತ ತಮಾಷೆಯ ವಿಷಯ ಎಂದರೆ ಇಂತಹ ಕಾಲಂಗಳಲ್ಲಿ ಬಳಸುವ ಚಿತ್ರಗಳದ್ದು - ಅದು ಯಾರು ತೆಗೆದದ್ದೋ, ಯಾರ ಸ್ವತ್ತೋ, ಏನೂ ಕ್ರೆಡಿಟ್ಸ್ ಕಾಣದೆ ಪ್ರತಿ ಸ್ವಾರಸ್ಯಕ್ಕೊಂದು ಚಿತ್ರವಾಗಿ ಮರೆಯಾಗುತ್ತವೆ, ಸಾಮಾನ್ಯವಾಗಿ ಇಂಟರ್ನೆಟ್ ಇಲ್ಲದವರಿಗೆ ಕಣ್ಣಿಗೆ ಬೀಳದ್ದು ರದ್ದಿ ಅಂಗಡಿಯ ಕುತೂಹಲದ ಕಣ್ಣುಗಳಿಗೂ ತಲುಪುತ್ತದೆ.

- hpn ರವರ ಬ್ಲಾಗ್
- Login or register to post comments
- 906 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.



RSS:
ಉ: ಸುದ್ದಿ-ಸ್ವಾರಸ್ಯ?
ನಾನಂತೂ ಸುಧಾ ಓದೋದಿಕ್ಕೆ ಶುರು ಮಾಡ್ತಾ ಇದ್ದಿದ್ದು ಕೊನೆಯ ಪುಟದಿಂದಲೇ
ನಿಮ್ಮವನೇ,
ಅರವಿಂದ
ಉ: ಸುದ್ದಿ-ಸ್ವಾರಸ್ಯ?
ಈಗ ಯಾವ ಕಡೆಯಿಂದ ಓದಲು ಶುರು ಮಾಡ್ತಿದ್ದೀರಿ? ಅಥವ ಓದೋದು ಬಿಟ್ಟಿದ್ದೀರಾ?
*ಅಶೋಕ್
ಉ: ಸುದ್ದಿ-ಸ್ವಾರಸ್ಯ?
ಆಗ ಇಂತ ’ಪತ್ರಿಕೆ’ಗಳೇ ಸಂಗತಿ ತಿಳಿಸುವಂತವಾಗಿದ್ದವು, ಅವುಗಳ ಒಳ್ಳೆ ಸಂಗತಿಗಳೊಂದಿಗೆ, ಜೊಳ್ಳು, ಪೊಳ್ಳುಗಳೂ ಮೆದುಳು ಸೇರುತ್ತಿದ್ದವು, ಈಗ ಇಂತ ಓಲೆಗಳೇನಿದ್ದರೂ, ಹಿಂದೊಮ್ಮೆ ನನ್ನ ನೆಚ್ಚಿನ ಪತ್ರಿಕೆ ಆಗಿತ್ತಲ್ಲ, ಅನ್ನುವ ಕರುಣೆಯಿಂದ ಕೊಳ್ಳುವದಕ್ಕಸ್ಟೇ.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಸುದ್ದಿ-ಸ್ವಾರಸ್ಯ?
ಇಲ್ಲ, ಈಗಲೂ ಒಳ್ಳೆಯ ಲೇಖನಗಳು ಸುಮಾರು ಇರುತ್ವೆ. ಮಯೂರದಲ್ಲಿ ಕೂಡ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸುದ್ದಿ-ಸ್ವಾರಸ್ಯ?
ಹೌದು,ಸುಧಾ ಈಗಲೂ ಚೆನ್ನಾಗಿಯೇ ಬರುತ್ತಿದೆ ಎಂದು ನನ್ನನಿಸಿಕೆ.
*ಅಶೋಕ್
ಉ: ಸುದ್ದಿ-ಸ್ವಾರಸ್ಯ?
ಮಯೂರಕ್ಕಿಂತ ಕಸ್ತೂರಿ ಚೆನ್ನಾಗಿದೆ,. ಸಂಗತಿಗಳು ಚೆನ್ನಾಗಿರುತ್ತವೆ, ನಾನು ಈಗಲೂ ಕಸ್ತೂರಿ,ಮಯೂರಗಳನ್ನು ಕೊಳ್ಳುತ್ತಿರುತ್ತೇನೆ, ಸುಧಾ, ತರಂಗಗಳನ್ನು ಈಗಿಗ ಅಸ್ಟಾಗಿ ಕೊಳ್ಳುತ್ತಿಲ್ಲ.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಸುದ್ದಿ-ಸ್ವಾರಸ್ಯ?
ಕಸ್ತೂರಿ ಡೈಜೆಸ್ಟ್-ರೀಡರ್ಸ್ ಡೈಜೆಸ್ಟ್ ಮಾದರಿಯದು. ಮಯೂರ ಕತೆ-ಕವನ- ಸಾಹಿತ್ಯದ ಕಡೆ ಒತ್ತು ನೀಡುವ ಪತ್ರಿಕೆ. ಅವನ್ನು ಹೋಲಿಸಲಾಗದೇನೋ!
*ಅಶೋಕ್
ಉ: ಸುದ್ದಿ-ಸ್ವಾರಸ್ಯ?
ಸುಧಾ ನಡುವೆ ಅಶ್ಟು ಚೆನ್ನಾಗಿ ಬರುತ್ತಿರಲಿಲ್ಲ, ಅದ್ರೆ ಮೂರ್ನಾಕು ವರ್ಶಗಳಿಂದೀಚೆ ಚೆನ್ನಾಗಿ ಬರುತ್ತಿದೆ. ಹೋದ ವಾರ ಗಣೇಶಯ್ಯ ನವರ "ಕಪಿಲಿಪಿಸಾರ" ಧಾರವಾಹಿ ಮುಗಿಯಿತು. ಚೆನ್ನಾಗಿತ್ತು...
ಉ: ಸುದ್ದಿ-ಸ್ವಾರಸ್ಯ?
ನಾಗೇಶ ಹೆಗಡೆಯವರು ಸುಧಾ ವಾರಪತ್ರಿಕೆ ರೂಪಿಸುತ್ತಿದ್ದಾಗಿನ ಸ್ವಾರಸ್ಯ ಈಗ ಹತ್ತು ವರ್ಷಗಳಿಂದ ಉಳಿದಿಲ್ಲ ಬಿಡಿ. ಸುಧಾ ಪತ್ರಿಕೆಗೆ ಮೌಲ್ಯ ಹಾಗೂ ಜನಪ್ರಿಯತೆ ತಂದುಕೊಟ್ಟವರು ಅವರು. ನಂತರ ಅದು ಮಹಿಳಾವಾದಿಗಳ ಕೈಗೆ ಸಿಲುಕಿ ಪಡಬಾರದ ಫಜೀತಿ ಪಟ್ಟಿತು. ಪ್ರಜಾವಾಣಿಯಲ್ಲಿ ನಾನು ಕೆಲಸ ಮಾಡುತ್ತಿದ್ದಾಗ, ಬಹುತೇಕ ಜನರು ಸುಧಾ ವಿಭಾಗವನ್ನು ’ಲೇಬರ್ ವಾರ್ಡ್’ ಎಂದೇ ಕರೆಯುತ್ತಿದ್ದರು. ಅಂದರೆ, ಪ್ರಜಾವಾಣಿಯ ಮಹಿಳಾ ಸಹೋದ್ಯೋಗಿಗಳು ಗರ್ಭಿಣಿಯಾದರೆ, ’ಸುಧಾಕ್ಕೆ ಹಾಕಿ’ ಎಂದೇ ವಿನಂತಿಸಿಕೊಳ್ಳುತ್ತಿದ್ದರಿಂದ ಆ ಹೆಸರು ವ್ಯಂಗ್ಯವಾಗಿ ಬಳಕೆಯಾಗುತ್ತಿತ್ತು.
ಸರಿ, ಅಲ್ಲಿ ಯಾರೇ ಹೋಗಿ ಕೆಲಸ ಮಾಡಲಿ, ಅದರ ಮೌಲ್ಯ ಕಾಪಾಡಬೇಕಲ್ಲವೆ? ಅಂಥದ್ದೇನೂ ಆಗಲಿಲ್ಲ. ಆಯ್ದ ಕೆಲವರಿಂದ ಬರೆಸುವುದು, ಆಯ್ದ ವಿಷಯಗಳ ಬಗ್ಗೆ ಬರೆಯುವುದು- ಇಂಥ ಕ್ರಮಗಳಿಂದಾಗಿ ಸುಧಾ ಪತ್ರಿಕೆ ಕೇವಲ ಆಯ್ದ ಕೆಲವರು ಮಾತ್ರ ಓದುವ ಪತ್ರಿಕೆಯಾಗಿ ಮಾರ್ಪಟ್ಟಿತು. ಕ್ರಮೇಣ ಅದು ಎಂಥ ದುಃಸ್ಥಿತಿಗೆ ಬಂತೆಂದರೆ, ಕೊನೆಯ ಪುಟಕ್ಕೆ ಕೂಡ ಜಾಹೀರಾತು ದೊರೆಯದೇ ಯಾವುದಾದರೂ ಹಕ್ಕಿ ಅಥವಾ ಪ್ರಕೃತಿಯ ಫೋಟೊ ಹಾಕುವ ಅನಿವಾರ್ಯತೆಗೆ ಬಂದಿತು.
ಒಂದು ಅತ್ಯುತ್ತಮ ಪತ್ರಿಕೆ ಸಂಕುಚಿತ ದೃಷ್ಟಿಕೋನದ ಜನರ ಕೈಗೆ ಸಿಕ್ಕು ಹಾಳಾಗಿದ್ದು ಹೀಗೆ. ನಿಮ್ಮ ಬರವಣಿಗೆ ಅದನ್ನು ಮತ್ತೆ ನೆನಪಿಸಿತು.
- ಚಾಮರಾಜ ಸವಡಿ
ಉ: ಸುದ್ದಿ-ಸ್ವಾರಸ್ಯ?
ಸುಧಾದಲ್ಲಿ ಈ ವಾರದ ಫೀಚರ್ - ಚಿತ್ರ ಕಲಾ ಪರಿಷತ್, ಕೆನ್ ಆರ್ಟ್ ಸ್ಕೂಲ್ ಹಾಗು ಕಾವಾ (CAVA) ಕುರಿತು, ಬಹಳ ಚೆನ್ನಾಗಿ ಬಂದಿದೆ. ಜೊತೆಗೆ ಇಡಿ ವಾರಪತ್ರಿಕೆಯ ವಿನ್ಯಾಸ ಕೂಡ ಬದಲಾಗುತ್ತಿರುವ ಕಾಲಕ್ಕೆ ಸ್ವಲ್ಪವಾದರೂ ಬದಲಾಗುತ್ತಲೇ ಬರುತ್ತಿದೆ.
ಈಗಲೂ ಸುಧಾ ಇದ್ದಿದ್ದರಲ್ಲಿ ಉತ್ತಮವಾದದ್ದು ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸುದ್ದಿ-ಸ್ವಾರಸ್ಯ?
ನಿಜ, ಅಳಿದ ಊರಿಗೆ ಉಳಿದವನೇ ಗೌಡ.
- ಚಾಮರಾಜ ಸವಡಿ
ಉ: ಸುದ್ದಿ-ಸ್ವಾರಸ್ಯ?
ಚಾಮರಾಜರೇ ನಿಮ್ಮ ವಾದವನ್ನು ಒಪ್ಪುತ್ತೇನೆ. ಸುಧಾ ಸುದ್ಧಿಗಳಲ್ಲಿ ಸ್ವಲ್ಪ ಏಕತಾನತೆ ಇದೆ ಅನ್ನಿಸುತ್ತದೆ. ಆದರೆ ತರಂಗ ಹಾಗಲ್ಲ. ಆಸಕ್ತಿಕೆರಳಿಸುವ ವಿಷಯಗಳು ಬಹಳಷ್ಟಿದ್ದವು. ಟಿ.ಆರ್.ಅನಂತರಾಮ್ ರಂತಹವರ ವೈಜ್ಞಾನಿಕ ದೃಷ್ಟಿಕೋನಗಳಿರುವ ಲೇಖ್ಹನಗಳು, ಪುರಾಣ, ಐತಿಹಾಸಿಕ, ರಾಜಕೀಯ ಹೀಗೆ ಎಲ್ಲ ವಿಭಾಗದ ಸುದ್ಧಿಗಳನ್ನು ಪ್ರಕಟಿಸುತ್ತಿದ್ದರು.
ಬಹಳಷ್ಟು ವರ್ಶಗಳಿಂದ ತರಂಗ ಅಥವಾ ಸುಧಾ ವನ್ನು ವಾರವಾರ ಓದುತ್ತಿದ್ದೆ. ೮೦ರ ದಶಕದಲ್ಲಿ ನಮ್ಮ ಮನೆಯಲ್ಲಿ ತರಂಗ ಮತ್ತು ಪ್ರಜಾಮತ ತರಿಸುತ್ತಿದ್ದರು. ಎರಡೂ ಚೆನ್ನಾಗಿ ಮೂಡಿಬರುತ್ತಿತ್ತು. ಪ್ರಜಾಮತ ಕೆಲಕಾಲ ನಿಂತು ಹೋಗಿತ್ತು. ಮತ್ತೆ ಯಾರೋ ಶುರುಮಾಡಿದ್ದಾರೆ ಎಂದು ಕೇಳಿದೆ. ಅದು ಮಯೂರ/ತುಷಾರ ದಂತೆ ಚಿಕ್ಕ ಸೈಜಿನಲ್ಲಿ ಬರುತ್ತಿದೆ ಎಂದು ಹೇಳುತ್ತಿದ್ದರು.
ಅದೇ ಪ್ರವಾಸ ಕಥನಗಳು, ಅದೇ ರಾಜಕೀಯ ಉಪನ್ಯಾಸಗಳು ಬೇಜಾರಾಗಿ ಇತ್ತೀಚೆಗೆ ವಾರಪತ್ರಿಕೆಗಳನ್ನೋದುವುದನ್ನೇ ನಿಲ್ಲಿಸಿದ್ದೇನೆ. ಇನ್ನು ಧಾರಾವಾಹಿಗಳೆಂದರೆ ನನಗೆ ಅಲರ್ಜಿ. ಸುದ್ಧಿಗಾಗಿ ಯಾವುದೋ ಒಂದು ದಿನಪತ್ರಿಕೆ, ದಿನಕ್ಕೊಂದು ನ್ಯೂಸ್ ನೋಡುವುದು ಮಾಡಿ ನಮಗೆ ತಿಳಿದಂತೆ ವಿಶ್ಲೇಶಿಸಿಕೊಳ್ಳುತ್ತೇವೆ. ವಾರಪತ್ರಿಕೆಗಳಿಂದ ದೊರಕುತ್ತಿದ್ದ ಮನರಂಜನೆ ಕೆಲ ಮಟ್ಟಿಗೆ ಟಿ.ವಿ.ಚಾನೆಲ್ ಗಳಿಂದ ಲಭಿಸುತ್ತಿದೆ.
ಉ: ಸುದ್ದಿ-ಸ್ವಾರಸ್ಯ?
ಸಮಸ್ಯೆ ಏನಾಗಿದೆ ಎಂದರೆ, ಮ್ಯಾಗಝೀನ್ ವಿಭಾಗಕ್ಕೆ ದಡ್ಡರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು. ಇದರಲ್ಲಿ ಸಂಪಾದಕೀಯ ವಿಭಾಗದ ಹಿರಿಯರ ಕೈಚಳಕವೂ ಸೇರಿದೆ. ಚೆನ್ನಾಗಿ ಕೆಲಸ ಮಾಡಬಲ್ಲವರನ್ನು ಸುದ್ದಿ ವಿಭಾಗದಲ್ಲಿ ಉಳಿಸಿಕೊಳ್ಳುತ್ತಾರೆ. ಹುಳುಕುಗಳನ್ನು ಹುಡುಕಿ ಮ್ಯಾಗಝೀನ್ ವಿಭಾಗಕ್ಕೆ ಹಾಕುತ್ತಾರೆ. ಮೊದಲೇ ಕೆಲಸ ಗೊತ್ತಿಲ್ಲದವರು ಅವರು. ಇನ್ನು ಸುಧಾದಂತಹ ಪತ್ರಿಕೆಗೆ ಹೋಗಿ ಕೂತರೆ ಬರೆಯುವುದೇನು ಬಂತು? ಮುದ್ರಣದ ಗುಣಮಟ್ಟ ಇರುವುದರಿಂದ, ಕಲಾವಿದರ ಕೈಚಳಕ ಸೇರುವುದರಿಂದ ತಕ್ಕಮಟ್ಟಿಗೆ ಪತ್ರಿಕೆ ನೋಡಲು ಚೆನ್ನಾಗಿಯೇ ಕಾಣುತ್ತದೆ. ಆದರೆ, ಓದಲು ಕೂತರೆ ತಲೆನೋವು ಖಚಿತ.
ಹೀಗಾಗಿ ಸುಧಾ ಒಂದೇ ಅಲ್ಲ, ಕನ್ನಡದ ಬಹುತೇಕ ಪತ್ರಿಕೆಗಳು, ಮುಖ್ಯವಾಗಿ ಸಾಹಿತ್ಯಿಕ ಹಾಗೂ ವಾರಪತ್ರಿಕೆಗಳು ಗಬ್ಬೆದ್ದು ಹೋಗಿವೆ. ಲಂಕೇಶ್ ಬದುಕಿದ್ದಾಗ (ಕೊನೆಯ ವರ್ಷಗಳನ್ನು ಹೊರತುಪಡಿಸಿ) ಲಂಕೇಶ್ ಪತ್ರಿಕೆ ಹೇಗೆ ಬರುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಇವತ್ತಿನ ಅವಳಿ ಲಂಕೇಶ್‌ಗಳನ್ನು ಓದಲಾದರೂ ಆದೀತೆ? ಅವರ ಪೂರ್ವಾಗ್ರಹಗಳು, ಆಷಾಡಭೂತಿತನ, ಟೊಳ್ಳು ಸಿದ್ಧಾಂತಗಳನ್ನು ಕೇಳುವುದೇ ಕಡುಕಷ್ಟ, ಇನ್ನು ಓದಲಂತೂ ಖಂಡಿತ ಸಾಧ್ಯವಿಲ್ಲ. ಇಂಥ ವಾತಾವರಣದ ನಡುವೆ ನೆಮ್ಮದಿ ಹುಟ್ಟಿಸಬೇಕಿದ್ದ ಸುಧಾ/ತರಂಗದಂತಹ ಪತ್ರಿಕೆಗಳು ದುರ್ಬಲ ಸರಕನ್ನು ತುಂಬುವ ಗೋದಾಮುಗಳಾಗಿಬಿಟ್ಟಿವೆ.
- ಚಾಮರಾಜ ಸವಡಿ
ಉ: ಸುದ್ದಿ-ಸ್ವಾರಸ್ಯ?
ನನಗೆ ಹಾಗನ್ನಿಸುವುದಿಲ್ಲ..ಸುಧಾದಂತಹ ಪತ್ರಿಕೆಯಲ್ಲಿ ಸಂಪಾದಕ ವರ್ಗ ಸ್ವತ: ಬರೆದು ಪ್ರಕಟಿಸುವುದು ಕಡಿಮೆ..ಹೊರಗಿನವರ ಲೇಖನಗಳೇ ಹೆಚ್ಚು.
*ಅಶೋಕ್
ಉ: ಸುದ್ದಿ-ಸ್ವಾರಸ್ಯ?
ನನ್ನ ಪ್ರಕಾರ ತರಂಗಕ್ಕಿಂತ ಸುಧಾ ಎಸ್ಟೊ ವಾಸಿ. ತರಂಗದಲ್ಲಿ ಸುಮಾರು ಸಂಚಿಕೆಗಳು - ೫೦ ಬಗೆಯ-ಇಡ್ಲಿ, ದೋಸೆ.. ಇತ್ಯಾದಿಯಿಂದ ತುಂಬಿ ಹೋಗಿರುತ್ತೆ.