Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಸಫಾರಿಯಲ್ಲಿ ಕನ್ನಡ

November 29, 2007 - 4:35pm — hpn

ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್ರೊಸಾಫ್ಟಿನ ವಿಂಡೋಸ್ ಬಳಸುವವರಲ್ಲೂ ಹಲವರು ಐ-ಪಾಡ್ ಮತ್ತು ಐ-ಟ್ಯೂನ್ಸ್ ಇಷ್ಟಪಡುವವರು ಇರುವುದರಿಂದ 'ಸಫಾರಿ'ಯೂ ವಿಂಡೋಸ್ ಬಳಸುವವರಲ್ಲಿ ತನ್ನ ನೆಲೆ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ಅದನ್ನು ಹೊರತಂದದ್ದಂತೆ. ಮ್ಯಾಕ್ ಬಳಸುವವರೂ ಹೆಚ್ಚಾಗಿ ಬಳಸದ ಬ್ರೌಸರ್ರು ಇದು ಎಂದು ಕೇಳಿಬರುತ್ತದಾದರೂ "ಸಫಾರಿ" ಬಹಳ ಚೆಂದವಾದ, ಹೆಚ್ಚು ತಲೆನೋವಿಲ್ಲದ ಬ್ರೌಸರ್ರು.

ಕೆಲ ತಿಂಗಳ ಹಿಂದೆ ಇದರ ಮೊದಲ ಬೀಟ ಆವೃತ್ತಿ ಹೊರಬಂದಾಗ ನನ್ನ ಲ್ಯಾಪ್ಟಾಪಿನಲ್ಲಿ ಪ್ರಯೋಗಾರ್ಥ ಹಾಕಿಕೊಂಡು ನೋಡಿದ್ದೆ. ಆಗ ಕನ್ನಡ ರೆಂಡರಿಂಗ್ ಮುರಿದು ಹೋಗಿತ್ತು. ಹೀಗಾಗಿದೆ ಎಂದು ಒಂದು 'ಬಗ್' ಫೈಲ್ ಮಾಡಿದ್ದೆ. ಈಗ ಸಫಾರಿಯ ಮೂರನೇ ಬೀಟ ಆವೃತ್ತಿ ಹೊರಬಂದಿದ್ದು ಅದರಲ್ಲಿ ಕನ್ನಡ (ಇಂಡಿಕ್) ರೆಂಡರಿಂಗ್ ಸರಿಪಡಿಸಿದ್ದಾರೆ! ಸ್ಕ್ರೀನ್ ಶಾಟ್ ಕೆಳಗಿದೆ ನೋಡಿ:

ಸಫಾರಿ ಬ್ರೌಸರಿನಲ್ಲಿ ಕನ್ನಡ

ಸಫಾರಿಯಲ್ಲಿ ಕನ್ನಡ

(ಪೂರ್ಣ ಗಾತ್ರದ ಚಿತ್ರ ವೀಕ್ಷಿಸಲು ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ)


ಈಗಂತೂ ಅಪರೂಪಕ್ಕೆ ವಿಂಡೋಸ್ ನಲ್ಲಿ ಬೂಟ್ ಮಾಡಿದರೆ ಅದರಲ್ಲಿ ಸಫಾರಿ ಬ್ರೌಸರನ್ನೇ ಬಳಸೋದು. ಲಿನಕ್ಸಿನ ಬ್ರೌಸರುಗಳಂತೆ ಈ ಬ್ರೌಸರಿನಲ್ಲಿ ಅಕ್ಷರಗಳು ದುಂಡಗೆ ಕಾಣುತ್ತದಲ್ಲದೆ ಪುಟಗಳೂ ಬೇಗ ಲೋಡ್ ಆಗುತ್ತವೆ.

ಸಫಾರಿ ಬ್ರೌಸರನ್ನು ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

  • ಆಪಲ್
  • ಕನ್ನಡ
  • ತಂತ್ರಾಂಶ
  • ವಿಂಡೋಸ್
  • ಸಫಾರಿ
Ornamental seperator
  • hpn ರವರ ಬ್ಲಾಗ್
  • Login or register to post comments
  • 445 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 29, 2007 - 5:27pm — Sunil Jayaprakash

ಉ: ಸಫಾರಿಯಲ್ಲಿ ಕನ್ನಡ

Sunil Jayaprakash's picture

ಒಳ್ಳೆಯ ಸುದ್ಧಿ. ಇದಕ್ಕಾಗಿ ತುಂಬಾ ಕಾಯ್ತಾ ಇದ್ದೆ. ಈ ವಿಂಡೋಸ್ ಸಫಾರಿಯಲ್ಲಿ ಜಾವಾ ಆಪ್ಲೆಟ್-ಗಳನ್ನ ಓಡ್ಸಕ್ಕೆ ಆಗ್ತಾ ಇರ್ಲಿಲ್ಲ. ಅದೂ ಸರಿಹೋಗಿದೆಯೇ ಟೆಸ್ಟ್ ಮಾಡಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ
November 29, 2007 - 6:42pm — hpn

ಉ: ಸಫಾರಿಯಲ್ಲಿ ಕನ್ನಡ

hpn's picture

ಒಪ್ರಾ ಮತ್ತು ಸಫಾರಿ ಎರಡರದ್ದೂ ರೆಂಡರಿಂಗ್ ಇಂಜಿನ್ ಒಂದೇ ರೀತಿ ಇದ್ದ ಹಾಗಿದೆ. ಆದರೂ ಸಫಾರಿಯಲ್ಲಿ ಪೇಜುಗಳು ಕೂಡಲೇ ಲೋಡ್ ಆಗುವುದು ನೋಡಿ ಸೋಜಿಗವಾಗೋದುಂಟು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
November 29, 2007 - 11:34pm — hamsanandi

ಉ: ಸಫಾರಿಯಲ್ಲಿ ಕನ್ನಡ

hamsanandi's picture

ನಾಡಿಗರೆ,

ನಿಮ್ಮ ಟಿಪ್ಪಣಿ ನೋಡೀ, ಮತ್ತೆ ಸಫಾರಿಯನ್ನು ಹಾಕಿಕೊಂಡೆ. ನೀವು ಹೇಳಿದಂತೆ, ಅಕ್ಷರಗಳು ಬಹಳ ಮುದ್ದಾಗಿ ಕಾಣುತ್ತವೆ. ಆದ್ರೆ, ಏಕೋ ಬರಹ-ಡೈರೆಕ್ಟ್ ಉಪಯೋಗಿಸಿ ಮರುಟಿಪ್ಪಣಿ ಹಾಕಕ್ಕಾಗಲಿಲ್ಲ. ಅದಕ್ಕೆ, ಮತ್ತೆ ಈ ಟಿಪ್ಪಣಿ ಬರೆಯಲು ಐಇ ಯ ಮೊರೆಹೋಗಿದ್ದೇನೆ Sad

ಅದೇನು ತೊಂದರೆಯೋ ಸ್ವಲ್ಪ ನೋಡಬೇಕಿದೆ ಇನ್ನೂ..

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 11:22pm — hpn

ಉ: ಸಫಾರಿಯಲ್ಲಿ ಕನ್ನಡ

hpn's picture

ಕೆಳಗೆ ಇದರ ಬಗ್ಗೆಯೇ ಕಾಮೆಂಟು ಬರೆದಿರುವೆ. ಇದಿನ್ನೂ ಬೀಟ ಆವೃತ್ತಿ - ಸಫಾರಿ ಇನ್ನೂ ಉತ್ತಮಗೊಳ್ಳಲಿದೆ ಅನ್ಸತ್ತೆ.
ಆದರೆ ಅದಿರಲಿ, ಫೈರ್ ಫಾಕ್ಸ್ ಬಳಸಿಲ್ಲವಾ ನೀವು? ಅದ್ಯಾಕೆ ಐ ಇ ಉಪಯೋಗಿಸುತ್ತೀರಿ? ಅದು ಹೇಗೆ ಉಪಯೋಗಿಸುತ್ತೀರಿ ಮಾರಾಯ್ರೆ ಸಹಿಸಿಕೊಂಡು! Sticking out tongue

ನಾವುಗಳು ಲಿನಕ್ಸಿನಲ್ಲಿ ಫೈರ್ ಫಾಕ್ಸ್ ಬ್ರೌಸರನ್ನೇ ಬಳಸೋದು. ಸ್ವಲ್ಪ ಹೆಚ್ಚು ಮೆಮೋರಿ ತಿನ್ನುತ್ತೆ ಅನ್ನೋದು ಬಿಟ್ಟರೆ ಬಹಳ ಒಳ್ಳೆಯ ಬ್ರೌಸರ್ ಇದು. ವಿಂಡೋಸ್ ಆವೃತ್ತಿ ಕೂಡ ಇದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 10:32am — Sunil Jayaprakash

ಉ: ಸಫಾರಿಯಲ್ಲಿ ಕನ್ನಡ

Sunil Jayaprakash's picture

ಅಯ್ಯಪ್ಪಾ ಈ ದಿನ ಏನಾಯ್ತು, ಗೊತ್ತಾ. ಸಫಾರಿ ಇನ್ಸ್ಟಾಲ್ ಮಾಡಿ ಗೂಗಲ್ ರೀಡರಿನಲ್ಲಿ ಸಂಪದ ಕಾಮೆಂಟ್ಸ್ ಓದ್ತಾ ಇದ್ದೆ. ಅಪ್ ಆರೋ ಕೀಯನ್ನು ಹತ್ತು ಸಲ ಒತ್ತಿದಾಗ, ಸಫಾರಿ ಕ್ರಾಶ್ ಆಗಿ ಹೋಯ್ತು Sad

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 11:29am — ಶ್ರೀನಿವಾಸ ವೀ. ಬ೦ಗೋಡಿ

ಉ: ಸಫಾರಿಯಲ್ಲಿ ಕನ್ನಡ

ಶ್ರೀನಿವಾಸ ವೀ. ಬ೦ಗೋಡಿ's picture

ನಾನೂ ಸಫಾರಿ ಹಾಕಿಕೊಂಡು ನೋಡಿದೆ. ಅಕ್ಷರಗಳೇನೋ ಮುದ್ದಾಗಿ ದುಂಡಾಗಿವೆ. ಆದರೆ ದಪ್ಪ (bold) ಕಾಣುತ್ತವೆ. IEಯಲ್ಲೂ ಲೋಹಿತ್ font ಹಾಕಿಕೊಂಡಗ ಹೀಗೆ ಆಗಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 8:03pm — smurthygr

ಉ: ಸಫಾರಿಯಲ್ಲಿ ಕನ್ನಡ

smurthygr's picture

ನಾನೂ ಸಫಾರಿ ಹಾಕಿಕೊಂಡೆ. ಚೆನ್ನಾಗಿದೆ... ಆದರೆ, ಬರಹ IME ಯನ್ನು ಸಫಾರಿಯಲ್ಲಿ ಬಳಸಲು ಆಗ್ತಾ ಇಲ್ಲ. Notepadನಲ್ಲಿ ಟೈಪಿಸಿ ಅಂಟಿಸ್ತಾ ಇದ್ದೇನೆ. ಆದರೆ ಮತ್ತೆ IEಗೆ ಯಾಕೆ ಹೋಗಬೇಕು? firefox ಅಷ್ಟು ಚೆನ್ನಾಗಿ ಇರುವಾಗ?

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 11:14pm — hpn

ಉ: ಸಫಾರಿಯಲ್ಲಿ ಕನ್ನಡ

hpn's picture

ನಿಜ. IE ಬಳಸುತ್ತಿರುವವರನ್ನು ನೋಡಿದರೆ "ಪಾಪ" ಅನ್ಸತ್ತೆ Sticking out tongue
ಇನ್ನೂ ಇವರು ಬ್ರೌಸರುಗಳ ಬಳಕೆಯ ಮಟ್ಟಿಗೆ ಹಿಂದೆ ಬಿದ್ದಿದ್ದಾರಲ್ಲ ಅಂತ. Internet Explorer ಹಲವು ವಿಧಗಳಿಂದ risky ಆಯ್ಕೆ.

ಸಫಾರಿಯಲ್ಲಿ ಬರಹ ಐ ಎಮ್ ಇ ಕೆಲಸ ಮಾಡದೇ ಇರುವುದು ಗಮನಿಸಿದೆ. ಈ ಬಗ್ಗೆ ಬರಹ ಲಿಸ್ಟಿನಲ್ಲಿ ಒಂದು ಬಗ್ ಫೈಲ್ ಮಾಡಿ. ಅಥವ ಸಫಾರಿಯಲ್ಲೇ ಮೇಲೊಂದು Toolbarನಲ್ಲಿ ಕೀಟದ ಐಕಾನ್ ಇರೋದುಂಟು - ಅದನ್ನು ಕ್ಲಿಕ್ ಮಾಡಿ ಆಪಲ್ ನವರಿಗೇ ಒಂದು ಬಗ್ ಫೈಲ್ ಮಾಡಿ ಹಾಕಿ Eye-wink

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 11:17pm — hpn

ಉ: ಸಫಾರಿಯಲ್ಲಿ ಕನ್ನಡ

hpn's picture

ಲೋಹಿತ್ ಫಾಂಟಿನಲ್ಲಿ ಅದು ಹೇಗೆ ಓದಿಕೊಳ್ತೀರ್ರಿ ಮಾರಾಯ್ರೆ! ಅದರಲ್ಲಿ ಅಕ್ಷರಗಳು (glyphs) ಗಲೀಜಾಗಿವೆ. Sticking out tongue
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 11:09pm — hpn

ಉ: ಸಫಾರಿಯಲ್ಲಿ ಕನ್ನಡ

hpn's picture

ಅದಕ್ಕೇ "beta" ಅನ್ನೋದು, ಸಾರ್. ಬಗ್ ಫೈಲ್ ಮಾಡಿ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
November 30, 2007 - 11:57pm — hpn

ಉ: ಸಫಾರಿಯಲ್ಲಿ ಕನ್ನಡ

hpn's picture

ಸುನೀಲ, ಸಂಪದದ ಕಾಮೆಂಟ್ RSS ಫೀಡ್ ನಲ್ಲಿಯೇ ಏನೋ ಪ್ರಾಬ್ಲಮ್ ಇದೆ. XML malformed ಆಗಿ ಬರುತ್ತಿದೆ. ಈ ವೀಕೆಂಡ್ ಕುಳಿತು ಸರಿಪಡಿಸಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
December 1, 2007 - 12:35am — kpbolumbu

ಉ: ಸಫಾರಿಯಲ್ಲಿ ಕನ್ನಡ

kpbolumbu's picture

ನಾನೇನೋ ಫೈರ್‍ಫಾಕ್ಸ್ ಬಳಸುವೆ, ಆದರೆ ಕೆಲವು ತಾಣಗಳು IEಯೇ ಆಗಬೇಕು ಎ೦ದು ರಚ್ಚೆ ಹಿಡಿಯುತ್ತವೆ. ಉದಾ: ೧.ಡಾಯಿಚ್ ಬ್ಯಾ೦ಕಿನ ತಾಣ. ೨.ಪ್ರಜಾವಾಣಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಫಾರಿಯಲ್ಲಿ ಕನ್ನಡ
  • ಫಾದರ್ ಸೆರ್ಗಿಯಸ್ (ಟಾಲ್ಸ್‌ಟಾಯ್ ಕಥೆ) - ಓ ಎಲ್ ಎನ್ ಸ್ವಾಮಿ
  • ಝೆನ ಕಥೆ ೩೬: ಛತ್ರ
  • ರಶೀಧರ 'ಬ್ಲಾಗಂಬರಿ'
  • ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator