ಹೂ ಗಿಡಗಳೊಂದಿಗೆ
ಪಾಲಚಂದ್ರರ ಪುಸ್ತಕದ ಹಾಳೆಯೊಂದನ್ನು ಹಾರಿಸುತ್ತ, ಇದೋ ಕೆಲವು ಫೋಟೋಗಳು. ಕಳೆದ ತಿಂಗಳ ಕೊನೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ತೆಗೆದದ್ದು:
ಕೆಂಪು ಬಣ್ಣದ ಹೂಗಳು
ಶಾವಂತಿಗೆ/ಸೇವಂತಿಗೆ
ಆರ್ಕಿಡ್ ಮೊಗ್ಗು
ಆರ್ಕಿಡ್ಸ್
ನಿತ್ಯ ಪುಷ್ಪ
ಕಾಕಡ
ಕಡಿದ ಬಾಳೆಯ ಗಿಡದಲ್ಲಿ ಒಡೆದ ಚಿಗುರು
ಇದೊಂದು ಆರ್ನಮೆಂಟಲ್ ಗಿಡ. ಹೆಸರು ಗೊತ್ತಿದ್ದವರು ತಿಳಿಸಿ!
ಈ ಚಿತ್ರಗಳ ಪೂರ್ಣ ಆವೃತ್ತಿ - ಅಂದರೆ larger resolution ಚಿತ್ರಗಳು ಬೇಕಿದ್ದರೆ ನನಗೊಂದು ಮೇಯ್ಲ್ ಹಾಕಿ. ಮೇಲಿರುವ ಆರ್ಕಿಡ್ ಸದ್ಯಕ್ಕೆ ನನ್ನ ಡೆಸ್ಕ್ಟಾಪಿನ ವಾಲ್ಪೇಪರ್ :-)
- hpn's blog
- Login or register to post comments
- 1119 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹೂ ಗಿಡಗಳೊಂದಿಗೆ
ಮೊದಲ ಚಿತ್ರಕ್ಕೆ ಕೇಪಳವೆಂದು ಕರೆಯುತ್ತಾರೆ. ಅದನ್ನು ದುರ್ಗೆಯ ಪೂಜೆಗೆ ಬಹಳ ಶ್ರೇಷ್ಟವೆಂದು ಹೇಳುವರು.
ಉ: ಹೂ ಗಿಡಗಳೊಂದಿಗೆ
ಹೌದ? ಅದೊಂದು ಆರ್ನಮೆಂಟಲ್ ಗಿಡ ಅಂದುಕೊಂಡಿದ್ದೆ.
ಪಾಲ, ಎಲ್ಲಿದೀಯ? ರಿಸರ್ಚ್ ಶುರು ಮಾಡೋಣ್ವ? :-)
ಉ: ಹೂ ಗಿಡಗಳೊಂದಿಗೆ
ಹರಿ,
ಡಿಬಗ್ ಮಾಡ್ತಾ ಇದ್ದೆ, ಸೊಲ್ಯುಶನ್ ಸಿಕ್ತಾ ಇಲ್ಲ, ಹೂಗಳನ್ನ ನೋಡಿ ತಲೆ ಸ್ವಚ್ಛ ಆಯ್ತು (mind fresh :)) ನೋಡೊಣ ಇನ್ನು ೪ ಗಂಟೇಲಿ ಸಿಗತ್ತಾ ಅಂತ :)
ಚಿತ್ರಗಳು ಚೆನ್ನಾಗಿದೆ, ಕಂಪು ಬರ್ತಾ ಇದೆ :) ಆರ್ಕಿಡ್ ಮತ್ತೆ ಕಡಿದ ಬಾಳೆಯೊಳೊಡೆದ ಚಿಗುರು ಸಕ್ಕತ್ತಾಗಿದೆ.
ಮೊದಲ್ನೇದು ಕಿಸ್ಕಾರ (ಕೇಪಳ), ಕೊನೇದು anthorium, ಕಮರ್ಶಿಯಲ್ ಹೂವದು.
--
ಪಾಲ
ಉ: ಹೂ ಗಿಡಗಳೊಂದಿಗೆ
೪ ಗಂಟೆ ಅಲ್ಲ ೪ ನಿಂಷದಲ್ಲಿ ಸಿಕ್ತು! ಛೇ ನಿನ್ನೆನೇ ಅಪ್ಲೋಡ್ ಮಾಡಿದ್ರೆ..
ಉ: ಹೂ ಗಿಡಗಳೊಂದಿಗೆ
ಪಾಲ,
ಮಾಹಿತಿಗೆ ನನ್ನಿ :)
-ಅನಿಲ್.
ಉ: ಹೂ ಗಿಡಗಳೊಂದಿಗೆ
ಕೇಪುಳದ ಹಣ್ಣು ಕೂಡ ಬಲು ರುಚಿ. ಸಣ್ಣ ಕೆಂಪು ಮಣಿಗಳಂತೆ ಕಾಣುವ ಇವು ಮಕ್ಕಳಿಗೆ ಅಚ್ಚುಮೆಚ್ಚು.
ಉ: ಹೂ ಗಿಡಗಳೊಂದಿಗೆ
ಅಹಾ!!! ತುಂಬಾ ಚೆನ್ನಾಗಿವೆ ಹರಿ.
-ಅನಿಲ್.
ಉ: ಹೂ ಗಿಡಗಳೊಂದಿಗೆ
ಹೂ ಕನಸ ಜೋಕಾಲಿ ಎಂದು ಹಾಡುವ ಮನಸಾಗಿದೆ ಹರಿ.
ಉ: ಹೂ ಗಿಡಗಳೊಂದಿಗೆ
ಒಹೋ! ಹರಿಯವರೆ ನಿಮ್ಮ ಹತ್ತಿರ ಚಂದದ ಹೂ ಗಳೂ ಭಾರಿ ಇರುವ ಹಾಗಿದೆ :)
ನಿಮ್ಮವ
ಗೌಡ್ರು
ಉ: ಹೂ ಗಿಡಗಳೊಂದಿಗೆ
ಸರಿ ಹೋಯ್ತು. ಪಾಲಚಂದ್ರ ಒಬ್ರೇ ಇದ್ರು ಅನ್ಕೊಂಡ್ರೆ ನೀವೂ ಅವರ ಜೊತೆ ಸೇರ್‍ಕೊಂಡ್ರಾ?
ಹೂ ಮುಡಿಸೋ ವಯಸ್ಸಲ್ಲಿ ಹೂಗಳ ಫೊಟೊ ತೆಕ್ಕೊಂಡು ಓಡಾಡ್ತಿದ್ದೀರಲ್ರೀ. ಛೀ, ಅವಮಾನ. :(
ಉ: ಹೂ ಗಿಡಗಳೊಂದಿಗೆ
??
ತಮಾಷೆಗೆ ಬರೆದದ್ದೋ ಹ್ಯಾಗೆ? :)
ಉ: ಹೂ ಗಿಡಗಳೊಂದಿಗೆ
ಸೀರಿಯೆಸ್ಸಾಗಿಯೇ ಬರೆದಿದ್ದು. ವಸಂತ ಮಾಸ ಬರುತ್ತಿದ್ದರೂ ಇನ್ನೂ ಕಂಪ್ಯೂಟರಿಗೇ ಅಂಟಿಕೊಂಡಿದ್ದೀರಲ್ಲ ಎಂದು ಬೇಸರವಾಗಿ ಹಾಗೆ ಬರೆದೆ. ಇನ್ನಾದರೂ ಮನದ ಮಾಮರದಲ್ಲಿ ಕೋಗಿಲೆ ಉಲಿಯಲಿ. :)
ಉ: ಹೂ ಗಿಡಗಳೊಂದಿಗೆ
ಸೇವಂತಿಗೆ ,ನಿತ್ಯಪುಷ್ಪ ನಮ್ಮಲ್ಲಿ ತೆಗೆದದ್ದು ಅಂತ ಅಮ್ಮನ ಅಂಬೋಣ!
ಉ: ಹೂ ಗಿಡಗಳೊಂದಿಗೆ
>>ಸೇವಂತಿಗೆ ,ನಿತ್ಯಪುಷ್ಪ ನಮ್ಮಲ್ಲಿ ತೆಗೆದದ್ದು ಅಂತ ಅಮ್ಮನ ಅಂಬೋಣ!
ಅರ್ಥ ಆಗ್ಲಿಲ್ಲ. :(
-ಅನಿಲ್.
ಉ: ಹೂ ಗಿಡಗಳೊಂದಿಗೆ
ಅನಿಲ್, ಅಶೋಕ್ ಮನೇಲಿ ಕೆಲವೊಂದು ಹೂಗಳ ಫೋಟೋ ತೆಗೆದುಕೊಂಡಿದ್ದೆ. :-)
ಅಶೋಕ್, ನಿಮ್ಮ ಮನೇಲಿ ತೆಗೆದದ್ದು ಮತ್ತೊಮ್ಮೆ ಅಪ್ಲೋಡ್ ಮಾಡುವೆ. ಅವು ಇದಕ್ಕಿಂತ ಚೆನ್ನಾಗಿ ಬಂದಿದೆ. ಅಲ್ಲಿ ಹಳದಿ ಬಣ್ಣದ ಹೂಗಳಿದ್ದವು.
ಉ: ಹೂ ಗಿಡಗಳೊಂದಿಗೆ
ಆರ್ಕಿಡ್ಸ್,ನಿತ್ಯ ಪುಷ್ಪ, ಕಡಿದ ಬಾಳೆಯ ಗಿಡದಲ್ಲಿ ಒಡೆದ ಚಿಗುರು ಮತ್ತು ಆಂಥೋರಿಯಮ್ ಚಿತ್ರಗಳು ಚೆನ್ನಾಗಿವೆ ಹರಿ :)
ಬಿಳಿ ಮತ್ತು ಕೆಂಪು ಬಣ್ದದ ಆಂಥೋರಿಯಮ್ ಹೂವಿನ ಗಿಡ ನಮ್ಮನೇಲೂ ಇವೆ.
-ಸವಿತ
ಉ: ಹೂ ಗಿಡಗಳೊಂದಿಗೆ
ನಿತ್ಯ ಪುಷ್ಪದ ಎಲೆ, ಹೂ ನೋಡಿದರೆ ಕಾಶಿ ಕಣಗಿಲೆ ಇದ್ದ ಹಾಗೆ ಇದೆ; ಬಣ್ಣ ಮಾತ್ರ ಬೇರೆ!
ಉ: ಹೂ ಗಿಡಗಳೊಂದಿಗೆ
ಫೋಟೋಲಿ ದೊಡ್ಡದಾಗಿ ಕಾಣುತ್ತಿದೆಯಲ್ಲ, ಅದಕ್ಕೆ ಹಾಗನಿಸಬಹುದು ಬಹುಶಃ.