ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಒಂದಷ್ಟು ಚಿತ್ರಗಳು
ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾಕುತ್ತಿರೋಣ ಎಂದುಕೊಂಡಿದ್ದೆ. ಅದಕ್ಕೆ ಪೂರಕವಾಗಿ ನೆನಪಿನಲ್ಲಿ ಮಾಸಿಹೋಗಿದ್ದ ಹವ್ಯಾಸವನ್ನು ಇತ್ತೀಚೆಗೆ ಮತ್ತೆ ಪ್ರಾರಂಭಿಸಲು ಸಾಧ್ಯವಾಯಿತು. ಕೈಯಲ್ಲಿ ಲೆನ್ಸ್ ಹಿಡಿದಾಗ ಕೆಲವೊಮ್ಮೆ ಅಲ್ಲಿಲ್ಲಿ ಕೇಳಿಬಂದ ಪ್ರತಿಕ್ರಿಯೆಗಳು ಹೊಸ ಐಡಿಯಗಳಿಗೆ ಬಾಗಿಲು ತೆರೆಯವುದುಂಟು. ಹೀಗಾಗಿ ಇಲ್ಲಿವೆ ಚಿತ್ರಗಳು - ಹೇಗಿವೆ? ಇಷ್ಟ ಆಯ್ತ? ಇಷ್ಟ ಆಗಲಿಲ್ಲವ? ಇದೇ ಚಿತ್ರಗಳನ್ನು ತೆಗೆಯುವುದಿದ್ದರೆ ನಿಮ್ಮ ಐಡಿಯಗಳೇನು? ಬರೆದು ತಿಳಿಸುತ್ತೀರಲ್ವ?
ನನ್ನದೊಂದು ಕನ್ನಡಿ
ದುಂಬಿಯರಸಿದ ಹೂವು
ಕಲ್ಲಿನರಮನೆ
ಅಕ್ಷರಾಭ್ಯಾಸ
ಚಿತ್ರಗಳೆಲ್ಲವೂ ನನ್ನವು. ಮೇಲಿನ ಚಿತ್ರಗಳಲ್ಲಿ ಯಾವುದನ್ನಾದರೂ ನಿಮ್ಮ ಲೇಖನ/ಪುಟಗಳಲ್ಲಿ ಬಳಸಿಕೊಂಡಲ್ಲಿ ಕ್ರೆಡಿಟ್ಸ್ ಕೊಡುವುದು ಮರೆಯಬೇಡಿ. ಉಳಿದಂತೆ, ಮೇಲಿನ ಚಿತ್ರಗಳು ಈ ಲೈಸೆನ್ಸಿನಡಿ ಬಳಸಬಹುದು.
- hpn's blog
- Login or register to post comments
- 886 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಒಂದಷ್ಟು ಚಿತ್ರಗಳು
ಪ್ರಿಯ ಹರಿ ಅವರೇ,
ಕೊನೆಯ (ಅಕ್ಷರಾಭ್ಯಾಸ) ಚಿತ್ರದಲ್ಲಿ ಹುಡುಗನ ತನ್ಮಯತೆ ತುಂಬಾ ಇಷ್ಟವಾಯ್ತು. ಮೊದಲನೇ (ನನ್ನದೊಂದು ಕನ್ನಡಿ) ಚಿತ್ರದಲ್ಲಿ ಹಕ್ಕಿಯ ಕೊಕ್ಕು ಪ್ರತಿಬಿಂಬದಲ್ಲಿ ಮಾತ್ರ ಕಾಣಿಸ್ತಿದೆ. ಅದು ಹೇಗೆ?
ಉ: ಒಂದಷ್ಟು ಚಿತ್ರಗಳು
ಕೊಕ್ಕಿಗೆ ಅಡ್ಡವಾಗಿ ಹಕ್ಕಿಯ ರೆಕ್ಕೆಗಳಿವೆಯಲ್ಲ.
ಉ: ಒಂದಷ್ಟು ಚಿತ್ರಗಳು
"ದುಂಬಿಯರಸಿದ ಹೂವು"
"ಹೂ"ವು ಅಂದ ಕೂಡಲೇ "ದುಂಬಿ" ಅನ್ನುವ ಕಾವ್ಯಮನೋಧರ್ಮ ಇಲ್ಲಿ ಕೆಲಸ ಮಾಡಿರಬೇಕು. ಜೇನನ್ನು ದುಂಬಿ ಅಂತ ಕರೆದಿದ್ದೀರಲ್ಲ!! ಚಿತ್ರಗಳೆಲ್ಲ ಚೆನ್ನಾಗಿವೆ. ಕೆಲವು ತುಂಬಾ ಚೆನ್ನಾಗಿವೆ.
ಉ: ಒಂದಷ್ಟು ಚಿತ್ರಗಳು
ಕಾವ್ಯಮನೋಧರ್ಮ, ನಿಜ. :)
ಥ್ಯಾಂಕ್ಸ್.
ಉ: ಒಂದಷ್ಟು ಚಿತ್ರಗಳು
ಹರಿ ಪ್ರಸಾದ್,
ನಿಮ್ಮ "ನನ್ನದೊ೦ದು ಕನ್ನಡಿ" ಚಿತ್ರವನ್ನು ಚೆನ್ನಾಗಿ ಸೆರೆಹಿಡಿದಿದ್ದೀರ, ಚಿತ್ರದಲ್ಲಿ ಮೂರು ಬಿ೦ಬಗಳಿವೆ. ಹೇಗೆ೦ದರೆ, ಮೊದಲನೆಯದಾಗಿ ಹದ್ದಿನ ಚಿತ್ರ, ಎರಡನೆಯದಾಗಿ ಅದರ ಪ್ರತಿಬಿ೦ಬ ಮತ್ತು ಕೊನೆಯದಾಗಿ ಅದರ ನೆರಳು. ನಿಜಕ್ಕೂ ಚೆ೦ದಿದೆ.
:)
ಉ: ಒಂದಷ್ಟು ಚಿತ್ರಗಳು
ಥ್ಯಾಂಕ್ಸ್ ಮಲ್ಲೇಶ್.
ಉ: ಒಂದಷ್ಟು ಚಿತ್ರಗಳು
ನಿಮ್ಮದು ಯಾವ ಕ್ಯಾಮರ? ಯಾವೆಲ್ಲ ಲೆನ್ಸ್ಗಳನ್ನು ಉಪಯೋಗಿಸುತ್ತೀರಿ?
ಹಕ್ಕಿಯ ಕನ್ನಡಿಯ ಚಿತ್ರದ ಪ್ರತಿಬಿಂಬ ಇಷ್ಟವಾಯ್ತು. ಹುಡುಗನ ಕಲಿಕೆಯೂ ಚೆನ್ನಾಗಿದೆ.
ಉ: ಒಂದಷ್ಟು ಚಿತ್ರಗಳು
ಸದ್ಯಕ್ಕೆ 18-105mm ಲೆನ್ಸ್. ಕ್ಯಾಮೆರ ನಿಕಾನ್ ಡಿ೫೦೦೦.
ಉ: ಒಂದಷ್ಟು ಚಿತ್ರಗಳು
ನಾಡಿಗರೇ,
'ನನ್ನದೊಂದು ಕನ್ನಡಿ' ಚಿತ್ರ ನೋಡಿದಾಗ ಏನಿರಬಹುದು ಅನಿಸಿ ಪ್ರತಿ ಬಿಂಬ ನೋಡಿದ ಮೇಲೆ ಪಕ್ಷಿ ಅಂತ ತಿಳಿಯಿತು.ಅಕ್ಷರಾಭ್ಯಾಸ ದ ಫೋಟೋದ ಹುಡುಗನ ತಲ್ಲೀನತೆ ಹೆಚ್ಚು ಮನ ಸೆಳೆಯಿತು.good.
ಉ: ಒಂದಷ್ಟು ಚಿತ್ರಗಳು
ಪ್ರತಿಬಿ೦ಬದಲ್ಲಿ ಸ್ಪಷ್ಟವಾಗಿ ಕಾಣುವ ಹಕ್ಕಿ ಮೇಲ್ನೋಟಕ್ಕೆ ಹಾಗೆ ಯಾಕೆ ಕಾಣುತ್ತಿದೆ? ಈ ಚಿತ್ರ ಹೇಗೆ ತೆಗೆದದ್ದು?ಪ್ರತಿಬಿ೦ಬದ೦ತೆ ಹಕ್ಕಿಯ ನೆರಳೂ ಚೆನ್ನಾಗಿ ಮೂಡಿಬ೦ದಿದೆ.
ಉ: ಒಂದಷ್ಟು ಚಿತ್ರಗಳು
ಉತ್ತಮ ಚಿತ್ರಗಳು
ಉ: ಒಂದಷ್ಟು ಚಿತ್ರಗಳು
ಥ್ಯಾಂಕ್ಸ್, ಪ್ರದೀಪ್.
ಉ: ಒಂದಷ್ಟು ಚಿತ್ರಗಳು
ಆತ್ಮೀಯ
ಒ೦ದಿಡೀ ಚಿತ್ರ ಸಾವಿರ ಮಾತುಗಳಿಗೆ ಕನ್ನಡಿಯಾಗಿಬಿಡುತ್ತೆ ಅನ್ನೋದಕ್ಕೆ ನಿಮ್ಮ ಚಿತ್ರಗಳೇ ಸಾಕ್ಷಿ. over ಅನ್ನಿಸ್ದಿದ್ರೆ ಕೆಲವು ಪ್ರಶ್ನೆಗಳು
ಕ್ಲಿಕ್ಕಿಸುವ ಮೊದಲು ನಿಮ್ಮ ಮನಸ್ಸು ಹೇಗಿರುತ್ತೆ.ಮೂಡಿಗೆ ತಕ್ಕ೦ತೆ ಚಿತ್ರ ತೆಗೀತೀರ ಅಥವಾ. ಚಿತ್ರಕ್ಕೋಸ್ಕರ ಮೂಡ್ ನ ತ೦ದುಕೋತೀರೋ?
ನಿಮ್ಮೊಳಗೆ ಯಾವುದೋ ಒ೦ದು ಭಾವ ಹೊರಬರಲಾರದೆ ಒದ್ದಾಡ್ತಾ ಇರೋವಾಗ ಅದೇ ಭಾವ ಇನ್ಯಾವುದೋ ವಸ್ತುವಿನಲ್ಲಿ ಅಥವಾ ಪ್ರಕ್ರುತಿಯಲ್ಲಿ ಕ೦ಡರೆ ಅದನ್ನ ಸೆರೆಹಿಡಿದುಬಿಡ್ತೀರಾ?
ಚಿತ್ರ ಸೆರೆ ಹಿಡೀಬೇಕಾದ್ರೆ ಮನಸ್ಸು ಯಾವ ಥರ ಯೋಚಿಸುತ್ತೆ? "ನಾನು ಅ೦ದುಕೊ೦ಡ೦ತೆ ಚಿತ್ರ ಬರುತ್ತಿದೆ","ಇನ್ನೂ ಸ್ವಲ್ಪ ಹೊತ್ತು ಕಾದರೆ ಹಕ್ಕಿಯ ಚಿತ್ರಾನ ಇನ್ನೂ ಚ೦ದಾಗೆ ಸೆರೆಹಿಡೀಬಹುದು"
ಹೀಗೆಲ್ಲಾ ಯೋಚಿಸುತ್ತಾ? ಕಾನ್ಸನ್ಟ್ರೇಷನ್ ತಗೋಳ್ಳೋದು ಕಷ್ಟ ಅಲ್ವಾ?
ನಿಮ್ಮ ಚಿತ್ರಗಳು ಕಥೆ ಹೇಳ್ತಾ ಇವೆ. ಅದ್ಭುತ ನಿಮ್ಮ ಚಿತ್ರಗಳು
ನಿಮ್ಮವ
ಹರಿ
ಉ: ಒಂದಷ್ಟು ಚಿತ್ರಗಳು
ಮರದ ಬೆಂಚಿನ ಮೇಲೆ ಕುಳಿತು ೪-ಲೈನ್ ಪುಸ್ತಕದಲ್ಲಿ ಬರೆಯುತ್ತಿರುವ ಹುಡುಗನ ಚಿತ್ರ ಚೆನ್ನಾಗಿದೆ ... ಬಹುಶ: ಮರದ ಬೆಂಚು ಹೊರಾಂಗಣದಲ್ಲಿ ಇರುವಂತಿದೆ ... ಪಾರ್ಕ್? ಹಿಂದೆ ಇರುವ ಬಿಳಿಯ ಪಿಲ್ಲರ್ಸ್ ನೋಡಿದರೆ ಯಾವುದೋ ಬ್ರಿಡ್ಜ್ ಇರುವಂತಿದೆ ...
ಇಷ್ಟೆಲ್ಲ ಯಾಕೆ ಕೇಳಿದೆ ಎಂದರೆ ... ಶಾಲೆಯ ದಿನಗಳಲ್ಲಿ ಪರೀಕ್ಷೆಯ ವೇಳೆಯಲ್ಲಿ ತರಗತಿಯಲ್ಲಿ ಜಾಗ ಸಾಲದು ಎಂದು ನನ್ನಂತಹ ಹಲವಾರು ಮಕ್ಕಳು ಹೊರಗೆ ಕೂತು ಪರೀಕ್ಷೆ ಬರೆಯುತ್ತಿದ್ದೆವು .. ಅದು ನೆನಪಾಯ್ತು !
ಉ: ಒಂದಷ್ಟು ಚಿತ್ರಗಳು
ಹೌದು, ಪಾರ್ಕಿನ ಬೆಂಚು. :)
ಉ: ಒಂದಷ್ಟು ಚಿತ್ರಗಳು
ಮೊದಲ್ನೇ ಚಿತ್ರ ಒಂಥರಾ ಚೆನ್ನಾಗಿದೆ ಕಣ್ರೀ :)
ಉ: ಒಂದಷ್ಟು ಚಿತ್ರಗಳು
ಥ್ಯಾಂಕ್ಸ್ ಪಾಲ! :)
ಉ: ಒಂದಷ್ಟು ಚಿತ್ರಗಳು
ಹರಿಯವರೇ ನಿಮ್ಮ ಕೈಯಲ್ಲಿ ಕ್ಯಾಮೆರಾ ಕುಂಚವಾಗುತ್ತಿದೆ. ಚೆಂದದ ಚಿತ್ರಗಳು..