life ಇಷ್ಟೆ
ಏನು ಓದ್ತಾ ಇರೋದು?...
ಎಲ್ಲಿ ಕೆಲಸ ಮಾಡ್ತ ಇರೋದು?...
ಎಷ್ಟು ಸಂಬಳ ಬರತ್ತೆ?
ಎಷ್ಟು ವಯಸ್ಸು?...
ಕಾರ್ ತಗೊಂಡಾಯ್ತಾ?...
ಯಾವಾಗ ಮದುವೆ?...
ಸ್ವಂತ ಮನೆ ಮಾಡಿದಿರಾ?...
ಎಷ್ಟು ಮಕ್ಕಳು?...
ಮಗು ಯಾವ ಸ್ಕೂಲಿಗೆ ಹೋಗೋದು?...
ಪ್ರಮೋಷನ್ ಸಿಕ್ತಾ?...
ಮಕ್ಕಳೆಲ್ಲ ದೊಡ್ಡೊರಾದ್ರ?...
ಏನು ಓದ್ತಾ ಇರೋದು?...
ಎಲ್ಲಿ ಕೆಲಸ ಮಾಡ್ತ ಇರೋದು?...
ಎಷ್ಟು ಸಂಬಳ ಬರತ್ತೆ?
ಎಷ್ಟು ವಯಸ್ಸು?...
ಕಾರ್ ತಗೊಂಡಾಯ್ತಾ?...
ಯಾವಾಗ ಮದುವೆ?...
ಕಾಲದ ಚಕ್ರ ತಿರುಗ್ತಾನೆ ಇರತ್ತೆ...
ಅಕ್ಕ ಪಕ್ಕದವರು ಕೇಳೋ ಪ್ರಶ್ನೆ repeat ಆಗ್ತಾನೆ ಇರತ್ತೆ...
ನೀವ್ ಮಾತ್ರ replace ಆಗಿರ್ತೀರಿ... ಜೋಕೆ!
ಪಕ್ಕದ ಮನೆಯವ,
Idea Naren!

- ideanaren ರವರ ಬ್ಲಾಗ್
- Login or register to post comments
- 394 hits
- Email this blog





RSS:
ಪ್ರತಿಕ್ರಿಯೆಗಳು
ಉ: life ಇಷ್ಟೆ
ಹಲೋ, ಹೊಸದಾಗಿ ಬಂದಿದ್ದೀರಾ?
ಪರಿಚಯವಾದುದು ಸಂತೋಷ,ಹ್ಹ..ಹ್ಹ..
ಅಂದ ಹಾಗೆ ಏನು ಓದಿದ್ದೀರಾ?
ಎಲ್ಲಿ ಕೆಲಸ?...
ಉ: life ಇಷ್ಟೆ
ಬಾಯ್ತುಂಬಾ ಮುಗುಳ್ನಗೆ, ಹೃದಯದ ತುಂಬಾ ಧನ್ಯತೆಯಿಂದ...
ಹೊಸಬರೇನಲ್ಲ... ಹಾಗೆ ಆಗಾಗ್ಗೆ ಬಂದು ಹೋಗೋದು...
ಇತ್ತೀಚೆಗೆ... ಓದಿದ್ದು ಏನೇನೂ ಅಲ್ಲ ಅನ್ನಿಸುತ್ತಿದೆ!
ಸದ್ಯದ ಕೆಲಸ...
http://www.kuyyokuotes.com ನಲ್ಲಿ ಕುಯ್ಯುವುದು
http://blog.ideanaren.com ನಲ್ಲಿ ಗೀಚುವುದು
ಉ: life ಇಷ್ಟೆ
ಇಷ್ಟಕ್ಕೆ ಮುಗಿಲಿಲ್ಲ ಸ್ವಾಮಿ. ಮಕ್ಳೆಸ್ಟು ? ಹಿರಿ ಹುಡ್ಗ ಏನ್ಮಾಡ್ಕಂಡಿದಾನೆ, ಎರ್ಡನೆ ಹುಡ್ಗಿಗೆ ಎಲ್ಲಿ ನೂಡಿದಿರ ವರನ ? ಮೊಮ್ಮಕ್ಳ್ ನ ಕರ್ಕಂಡ್ ಬರ್ಲಿಲ್ವಾ ಇತ್ಯಾದಿ. ವೃತ್ತದ ಪರಿಧಿ ಹೆಚ್ತಾ ಹೊಗುತ್ತೆ. ನೊಡ್ತಿರಿ !!!!
ಉ: life ಇಷ್ಟೆ
ನಿಮ್ಮ ಮದುವೆ ಆಗಿದೆಯಾ...?
...ಅನುಭವ...ತುಂಬಾ ಇದೆ ಅನಿಸುತ್ತಿದೆ....
ಉ: life ಇಷ್ಟೆ
ಆಗಿದೆ. ಅದ್ಕೆ ಹೇಳ್ತಿರೊದು. ಲೈಫ್ ಅಂದ್ರೆ, ಅದು, ಇದು, ಎದು, ಇನ್ನೂ ಏನೇನೋ ಎಲ್ಲೆಲ್ಲೋ..... ಅಷ್ಟೇ ಅಲ್ಲ ಸ್ವಾಮಿ.