ಪ್ರೀತಿಯ ಕನಸಿನಲ್ಲಿ
ನೋಡಲಿಲ್ಲನೆಂದೆನ್ನಬೇಡ ಗೆಳೆಯ
ನನ್ನ ನೀ ನೋಡಿರುವೆ
ನಿನ್ನ ಮನದ ಕನ್ನಡಿಯಲ್ಲಿ
ಕೇಳಲಿಲ್ಲನೆಂದೆನ್ನಬೇಡ ಗೆಳೆಯ
ನನ್ನ ನೀ ಕೇಳಿರುವೆ
ನಿನ್ನ ಮನದ ಇನಿದನಿಯಲ್ಲಿ
ಪ್ರೀತಿಗೆ ಎಲ್ಲೆ ಬೇಡ
ನಾ ಮೊದಲು ನೀ ಮೊದಲೆಂಬ
ಗೋಜಲು ಬೇಡ
ಕನಸು ಕದ್ದಿರಲು ನಾನು
ಇತ್ತಿರುವೆ ಮನಸ ನಾನು
ನಿನಗೆ ನಾನು ನನಗೆ ನೀನು
- inchara123's blog
- Login or register to post comments
- 361 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಪ್ರೀತಿಯ ಕನಸಿನಲ್ಲಿ
ಇಂಚರ
ನಿಮ್ಮ ಕವನಕ್ಕೆ ಪ್ರತಿ ಕವನವನ್ನು ಹಾಕಲು ಪ್ರಯತ್ನಿಸುತ್ತಿದ್ದೇನೆ, ನೋಡೋಣ ಹೇಗೆ ಮೂಡುತ್ತದೆ ಎಂದು ಈ ಕೀಲಿಮಣೆಯ ಮೂಸೆಯಲ್ಲಿ
ಜೇನಾಗಿ ಹೋದೆಯಾ.....
ನನ್ನವಳೆ ಜೇನಾಗಿ ಹೋದೆಯಾ....
ಜಾನು ಎಂದು ಕರೆದಾಗ ನಾ
ನೀ ಜೇನಾಗಿ ಹೋದೆಯಾ...
ಹೋಗುವ ಮುಂಚೆ ಮರೆತೆ ನನ್ನನೇ
ನೂಕಿ ಹೋಗಿರುವೆ ಜೇಡರ ಬಲೆಯೊಳಗೆ
ಸೆಣಸಾಡುತಿರುವೆ ಇನ್ನೂ ಬರಲಾರದೆ ಹೊರಗೆ,
ಇರಲಾರದೆ ಒಳಗೆ,
ಜೇನಾಗಿ ಹೋದೆಯಾ.......
ಮನದಿನಿಯೆ ಜೇನಾಗಿ ಹೋದೆಯಾ.....
ಕಾದಿರುವುದು ಸಾಕಿನ್ನು ಒಳಗೆ,
ಇರಲಾರೆ ಇನ್ನೊಂದು ಗಳಿಗೆ,
ಹೋದೆ ನೀ ಮರೆತು ನನ್ನಯ ಬೇಗೆ,
ಹೇಳಲಿ ಹೇಳು ಈ ಸಂಕಟ ಯಾರು ಯಾರಿಗೆ ?
ಇರಲಾರದೆ ಒಂದಿಷ್ಟು ನಗೆ ನನ್ನವಳೆ
ಬಿಡಿಸು ಬಾ, ನಾನಿರುವೇ ಈಗಲೂ ನೀ ಹೆಣೆದ ಜೇಡರಬಲೆಯೊಳಗೆ
:)
ಅರವಿಂದ್