ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೆಣ್ಣಿನ ಜಯ

ಹುಣ್ಣಿಮೆಯ ಚಂದಿರನ ಅಂದ
ಕ್ಕಿಂತ, ತಿಳಿದುಕೋ ಅಣ್ಣಾ
ಅದರ ಕಲೆಗಳೇ ಚಂದ!

ಸೂರ್ಯನ ಸೌಮ್ಯತೆ
ಗಿಂತ, ತಿಳಿದುಕೋ ಅಣ್ಣಾ
ಅದರ ಶಕ್ತಿಯ ಸೌಂದರ್ಯತೆ!

ಕಡಲ ಪ್ರಶಾಂತತೆ ರೀತಿ
ಗಿಂತ, ತಿಳಿದುಕೋ ಅಣ್ಣಾ
ರೌದ್ರತೆಯಲ್ಲೇ ಅದರ ಪ್ರೀತಿ

ಬರೇ ಒಳ್ಳೆಯ ಗುಣ ಇದ್ದರೆ
ಆಗುವುದು ಜೀವನ ಬೇಸರ
ಷಡ್ವೈರಿಗಳನ್ನು ಸೋಲಿಸಿದರೆ
ಆಗುವುದು ಜೀವನ ಸಾರ್ಥಕ ಹೆಣ್ಣಿನ

ಹೇಳುವರು ಆಗ ಎಲ್ಲರೂ ಪ್ರತಿ
ಗಂಡಿನ ಜಯದ ಹಿಂದೆ
ಇದ್ದೇ ಇರುತ್ತದೆ
ಒಂದು ಹೆಣ್ಣಿನ ಪ್ರೀತಿ

ಅದರಲ್ಲೇ ಅಡಗಿರುವುದು ಹೆಣ್ಣಿನ ಜಯ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹೆಣ್ಣಿನ ಜಯ

Nagaraj.G's picture

ರೀ ಇಂಚರಾರವರೇ

ಗಂಡಿನ ಜಯದ ಹಿಂದೆ
ಇದ್ದೇ ಇರುತ್ತದೆ
ಒಂದು ಹೆಣ್ಣಿನ ಪ್ರೀತಿ ಇದು ಶುದ್ದ ಸುಳ್ಳು ಕಣ್ರೀ :)

ನಾಗರಾಜ್

ಉ: ಹೆಣ್ಣಿನ ಜಯ

inchara123's picture

ನೀವು ಹೆಣ್ಣಿನ ಹಿಂದೆ ಇದ್ದೀರಾ ಅದಕ್ಕೆ ನೀವು ಹಾಗೇಳ್ತೀರಾ ನಾಗರಾಜ್. ನಿಮ್ಮ ಹಿಂದೆ ಹೆಣ್ಣು ಬಂದಾಗ ಎಲ್ಲಾ ಸರಿಹೋಗುತ್ತೆ ಬಿಡಿ :-)

ಉ: ಹೆಣ್ಣಿನ ಜಯ

Nagaraj.G's picture

ಅಷ್ಟೆ ಅಲ್ಲೋಲ ಕಲ್ಲೋಲ :)

ನಾಗರಾಜ್

ಉ: ಹೆಣ್ಣಿನ ಜಯ

msudan86's picture

ಇಂಚರರವರೆ,

:) :) :)

--ಗೌಡ್ರು

ಉ: ಹೆಣ್ಣಿನ ಜಯ

inchara123's picture

ಯಾಕ್ರೀ ಗೌಡ್ರೆ, ಇಷ್ಟೊಂದು ನಗ್ತಿದ್ದೀರೀ. ತಪ್ಪಿದೆಯೇ?

ಉ: ಹೆಣ್ಣಿನ ಜಯ

Harish Athreya's picture

ಆತ್ಮೀಯ
ಹೆಣ್ಣೆಂದರೆ
ಇಚ್ಚಾಶಕ್ತಿ ಕ್ರಿಯಾಶಕ್ತಿಯ ಮೂರ್ತ ರೂಪ
ಮನಸ್ವೀ ಮಾನಸ ಚಿದ್ರೂಪ
ಗೀತದೊಳಗಿನ ಆಲಾಪ
ಒಳ್ಳೆಯದು ಮೇಡಂ ಚೆನ್ನಾಗಿದೆ
ಹರೀಶ್ ಆತ್ರೇಯ

ಉ: ಹೆಣ್ಣಿನ ಜಯ

inchara123's picture

ಧನ್ಯವಾದಗಳು ಹರೀಶ್

ಉ: ಹೆಣ್ಣಿನ ಜಯ

asuhegde's picture

:-)
ಚೆನ್ನಾಗಿದೆರೀ ಇಂಚರ.
ಮತ್ತೊಮ್ಮೆ ಮೆಚ್ಚುಗೆ.

ಉ: ಹೆಣ್ಣಿನ ಜಯ

inchara123's picture

ಕೆಲವರು ಪ್ರತಿಕ್ರಿಯೆಗಳನ್ನು ಓದೋದಿಲ್ಲ ಸಾರ್, ಇದು ನನ್ನನುಭವಕ್ಕೆ ಬಹಳ ಸಾರಿ ಬಂದಿದೆ. ಹಾಗಾಗಿ ಹೊಸ ಬ್ಲಾಗ್ ಬರೆದೆ. ಧನ್ಯವಾದಗಳು ಮತ್ತೊಮ್ಮೆ