Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ismail ರವರ ಬ್ಲಾಗ್

ಹರಟೆ ಕೊಚ್ಚುವುದು ತಪ್ಪೇ?

December 31, 2005 - 3:39pm — ismail

ಸಂಪದದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಇವುಗಳು ಕೆಲವರಿಗೆ ಆಸಕ್ತಿದಾಯಕ ಎನಿಸಿದರೆ ಇನ್ನು ಕೆಲವರಿಗೆ ಅರ್ಥಹೀನ ಹರಟೆ ಎನಿಸುತ್ತದೆ. ಎಲ್ಲವೂ ಅವರವರ ಭಾವಕ್ಕೆ.

ಆದರೆ ಇಲ್ಲಿನ ಚರ್ಚೆಗಳನ್ನು ಹರಟೆ ಎಂದು ಗುರುತಿಸುವುದಕ್ಕೆ ನನ್ನ ಆಕ್ಷೇಪವನ್ನು ದಾಖಲಿಸಸಲು ಇಚ್ಛಿಸುತ್ತೇನೆ.

'ಲೋಕೋತ್ತರ'ವಾದುದನ್ನು ಬರೆದರೆ ಮಾತ್ರ ಭಾಷೆ ಶ್ರೀಮಂತವಾಗುತ್ತದೆ. ಚರ್ಚೆಗಳೆಲ್ಲವೂ ಕಾಡು ಹರಟೆ. 'ಗಂಭೀರ'ವಾದ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂಬುದು ಪಕ್ಕಾ ಮಧ್ಯಮ ವರ್ಗೀಯ ಚಿಂತನೆ. ಈ ಚಿಂತನೆ ಏನು ಮಾಡಿದೆ ಎಂಬುದಕ್ಕೆ ಕನ್ನಡದ ಈಗಿನ ಸ್ಥಿತಿಯೇ ಸಾಕ್ಷಿ.

ಕನ್ನಡವನ್ನು ಪ್ರಾಚೀನ ಮಹಾಕಾವ್ಯಗಳಲ್ಲಿಯೂ, ಪುಸ್ತಕಗಳಲ್ಲಿಯೂ ಮಾತ್ರ ಉಳಿಸಿಟ್ಟು ಅದನ್ನು ಅಪ್ರಸ್ತುತವಾಗಿಸುವ ಬದಲಿಗೆ ಅವರವರಿಗೆ ತೋಚಿದ ವಿಷಯದಲ್ಲಿ ಹರಟೆ ಕೊಚ್ಚಿ ಜೀವಂತವಾಗಿ ಇಡುವುದು ಹೆಚ್ಚು ಅರ್ಥಪೂರ್ಣ ಎಂಬುದು ನನ್ನ ಭಾವನೆ.

Ornamental seperator
  • ismail ರವರ ಬ್ಲಾಗ್
  • Login or register to post comments
  • 953 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 31, 2005 - 8:33pm — Sunil Jayaprakash

ಹರಟೆ ಕೊಚ್ಚಿ (ಚರ್ಚಿಸಿ) ತಪ್ಪೇನಿಲ್ಲ.

Sunil Jayaprakash's picture

ಲೇಖನಗಳ ಬರಹ ಬಹಳ ದೊಡ್ಡ ಕೆಲಸ. ಆದರೆ ಬರೆದರೆ ಮಾತ್ರ ಭಾಷೆ ಶ್ರೀಮಂತವಾಗುವುದಿಲ್ಲ. ಕೃತಿಯ ಕುರಿತು ಚರ್ಚಿಸಬೇಕು. ಭಾಷೆಯ ಶ್ರೀಮಂತಿಕೆಗೆ ಚರ್ಚೆಗಳು ಸಂವಾಹಕಗಳಾಗಿ ಕೆಲಸ ಮಾಡುತ್ತದೆ. ಹೇಗೆ ವಿದ್ಯುಚ್ಛಕ್ತಿಯು ವಾಹಕಗಳಿಲ್ಲಿಲ್ಲದ್ದಿದ್ದರೆ ಅನುಪಯುಕ್ತವೊ ಹಾಗೆಯೇ ಚರ್ಚೆಗಳಿಲ್ಲದೆ ಬರೆದ ಕೃತಿಯೂ ಅನುಪಯುಕ್ತ.
ಇನ್ನೊಂದು ಉದಾಹರಣೆ ಕೊಡಬಹುದು. ನಾಟಕದ ಕಾಲೇಜಾದ ನ್ಯಾಷನಲ್ ಕಾಲೇಜಲ್ಲಿ, ಪ್ರತಿ ವರ್ಷವೂ , ಪ್ರತಿ ತರಗತಿಯವರು ನಾಟಕ ಮಾಡಲೇಬೇಕು. ಅತ್ಯುತ್ತಮ ನಾಟಕ, ನಿರ್ದೇಶನ, ವೇಷ ಹೀಗೆ ಪ್ರತಿಯೊಂದಕ್ಕೂ ಪ್ರಶಸ್ತಿ ಕೊಡುತ್ತಾರೆ.

ಈಗ್ಗೆ ಕೆಲವೇ ವರ್ಷಗಳ ಹಿಂದಿನ ತನಕ ನಾಟಕದ ವಿಮರ್ಶೆಯನ್ನು ನೋಡಿದ ವಿದ್ಯಾರ್ಥಿಗಳು ಬರೆಯಬೇಕಿತ್ತು. ಅತ್ಯುತ್ತಮ ವಿಮರ್ಶೆಗೂ ಬಹುಮಾನವಿರುತ್ತಿತ್ತು.
ಇದರ ಪರಿಣಾಮಗಳು ನೋಡಿ.
ನಾಟಕ ಮಾಡಿದ ಕಲಾವಿದರ ಶ್ರಮ ಅಂದಿನ ಪ್ರದರ್ಶನಕ್ಕೆ ಸೀಮಿತವಾಗುವುದಿಲ್ಲ. ಅದೊಂದು ನಿರಂತರ ಕ್ರಿಯೆಯಾಗುತ್ತದೆ.
ಎಲ್ಲಿಯ ತನಕ ಪ್ರತಿಕ್ರಿಯಿಸುವವರು ಇರುತ್ತಾರೊ, ಅಲ್ಲಿಯವರೆಗೆ ಭಾಷೆ ಜೀವಂತವಾಗಿರುತ್ತದೆ. ಇಸ್ಮಾಯಿಲ್ ಹೇಳಿದ ಹಾಗೆ, ಮಧ್ಯಮ ವರ್ಗೀಯ ಚಿಂತನೆಯ ಪ್ರಭಾವವೋ ಏನೋ ಈಗ, ನಾಟಕದ ವಿಮರ್ಶೆ ನಡೆಯುತ್ತಿಲ್ಲ.

ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತೇನೆ.
ಕಲಿಯಿರಿ, ಕಲಿಸಿರಿ, ಬೆಳೆಸಿರಿ ಎಂಬ ಹಾಡಿನಂತೆ ಬರೆಯಿರಿ, ಓದಿರಿ, ಪ್ರತಿಕ್ರಿಯಿಸಿರಿ.
ಈ ಕನ್ನಡ ಮಣ್ಣನು ಮರಿಬೇಡಾ ಓ ಅಭಿಮಾನಿ.

ಚರ್ಚೆಗಳನ್ನು ಹರಟೆಯೆನ್ನುವವರನ್ನು ಚರ್ಚೆಗೆ ಎಳೆಯೋಣ.
ಚರ್ಚಿಸಿ ಅಥವಾ ಹರಟಿಸಿ ತಪ್ಪೇನಿಲ್ಲ. ನಮಗೆ ಬೇಕಿರುವುದು ಹರಟೆಗಾಗಿ ಚರ್ಚೆ ಚರ್ಚೆಗಾಗಿ ಹರಟೆ.

ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ  ಜೀವನ.

  • Login or register to post comments
  • link
  • Email this ಪ್ರತಿಕ್ರಿಯೆ
January 1, 2006 - 12:15pm — pradeepkishore

ನ್ಯಾಷನಲ್ ಕಾಲೇಜು

pradeepkishore's picture

ನೀವೂ ನ್ಯಾಷನಲ್ ಕಾಲೇಜಿನವರೋ?
ನಾನು ಓದಿದ್ದು ನ್ಯಾಷನಲ್ ಕಾಲೇಜ್, ಜಯನಗರದಲ್ಲಿ. ಪ್ರತಿ ವರ್ಷ ನಾಟಕಗಳ ಸೀಸನ್ ಶುರು ಆಯ್ತು ಅಂದ್ರೆ, ಮಜನೋ ಮಜ. ರಿಹರ್ಸಲ್ಗೆ ಜಾಗ ಹುಡುಕೋದು, ಪೋಸ್ಟರ್ಸ್ ಬರೆಯೋದು...

Quote:

ನಾಟಕ ಮಾಡಿದ ಕಲಾವಿದರ ಶ್ರಮ ಅಂದಿನ ಪ್ರದರ್ಶನಕ್ಕೆ ಸೀಮಿತವಾಗುವುದಿಲ್ಲ. ಅದೊಂದು ನಿರಂತರ ಕ್ರಿಯೆಯಾಗುತ್ತದೆ.
ಎಲ್ಲಿಯ ತನಕ ಪ್ರತಿಕ್ರಿಯಿಸುವವರು ಇರುತ್ತಾರೊ, ಅಲ್ಲಿಯವರೆಗೆ ಭಾಷೆ ಜೀವಂತವಾಗಿರುತ್ತದೆ.

ಈ ಮಾತು ಸರಿ. ಕನ್ನಡಕ್ಕೆ ಇಂದು ಬೆಕಾಗಿರುವುದು - participation.

  • Login or register to post comments
  • link
  • Email this ಪ್ರತಿಕ್ರಿಯೆ
January 1, 2006 - 11:03pm — gvmt

ನಾನು

gvmt's picture

ನಾನು ಓದಿದ್ದು ನ್ಯಾಷನಲ್ ಕಾಲೇಜ್, ಜಯನಗರದಲ್ಲಿ. ಪ್ರತಿ ವರ್ಷ ನಾಟಕಗಳ ಸೀಸನ್ ಶುರು ಆಯ್ತು ಅಂದ್ರೆ, ಮಜನೋ ಮಜ. ರಿಹರ್ಸಲ್ಗೆ ಜಾಗ ಹುಡುಕೋದು, ಪೋಸ್ಟರ್ಸ್ ಬರೆಯೋದು...

ನಾನೂ ಜಯನಗರ ನ್ಯಾಷನಲ್ ಕಾಲೇಜಿನವನು. '೯೨ರಲ್ಲಿ ಕಾಲೇಜು ಬಿಟ್ಟೆ. ನಾಟಕದ ಸೀಸನ್ನು ಮರೆಯುವ ಹಾಗಿಲ್ಲ. ಮೂರನೆಯ ಬಿ.ಎಸ್ಸಿ, ಮೂರನೆಯ ಬಿ.ಎ ಗಳಿಗೆ ಪ್ರಶಸ್ತಿ ತಪ್ಪಿದ್ದನ್ನು ನಾನು ನೋಡಿಯೆ ಇಲ್ಲ!

ನಮ್ಮ ನಾಟಕಗಳೆಲ್ಲ ಮುಗಿದ ಮೇಲೆ "ಅಂತರ ಕಾಲೇಜು ಕೈಲಾಸಂ ನಾಟಕ ಸ್ಪರ್ಧೆ" ಬೇರೆ. ಜೊತೆಗೆ ಆಗಾಗ ಬೆಂಗಳೂರು ಲಲಿತ ಕಲಾ ಪರಿಷತ್ತಿನಲ್ಲಿ ನಾಟಕಗಳು. ನಾಟಕದ ಹುಚ್ಚಿರುವವರಿಗೆ ರಸಕವಳ Smiling

  • Login or register to post comments
  • link
  • Email this ಪ್ರತಿಕ್ರಿಯೆ
January 1, 2006 - 5:43am — ಶ್ಯಾಮ ಕಶ್ಯಪ

ಹರಟೆಯನ್ನು ಮುಂದುವರೆಸಲು..

ಶ್ಯಾಮ ಕಶ್ಯಪ's picture

ismail wrote:
'ಗಂಭೀರ'ವಾದ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂಬುದು ಪಕ್ಕಾ ಮಧ್ಯಮ ವರ್ಗೀಯ ಚಿಂತನೆ. ಈ ಚಿಂತನೆ ಏನು ಮಾಡಿದೆ ಎಂಬುದಕ್ಕೆ ಕನ್ನಡದ ಈಗಿನ ಸ್ಥಿತಿಯೇ ಸಾಕ್ಷಿ.

ಹಾಗಾದರೆ ನೀವು ಹೇಳುತ್ತಿರುವುದು ನಾವು (ಮಧ್ಯಮ ವರ್ಗೀಯರು) the elusive elitism ಹಿಂದೆ ಬಿದ್ದಿದ್ದೀವಿ,ಅಂತಲೊ?

ಕಾಡುಹರಟೆಯನ್ನು ಬಿಟ್ಟು ಸ್ವಲ್ಪ ಗಂಭೀರವಾದ ವಿಷಯಗಳ ಬಗ್ಗೆಯೂ ಯೋಚಿಸೋಣ ಎಂಬ ಹಂಬಲವೇ ತಪ್ಪೆ?

ismail wrote:
ಕನ್ನಡವನ್ನು ಪ್ರಾಚೀನ ಮಹಾಕಾವ್ಯಗಳಲ್ಲಿಯೂ, ಪುಸ್ತಕಗಳಲ್ಲಿಯೂ ಮಾತ್ರ ಉಳಿಸಿಟ್ಟು ಅದನ್ನು ಅಪ್ರಸ್ತುತವಾಗಿಸುವ ಬದಲಿಗೆ ಅವರವರಿಗೆ ತೋಚಿದ ವಿಷಯದಲ್ಲಿ ಹರಟೆ ಕೊಚ್ಚಿ ಜೀವಂತವಾಗಿ ಇಡುವುದು ಹೆಚ್ಚು ಅರ್ಥಪೂರ್ಣ

ಮಾಹಾಕಾವ್ಯಗಳ ಸತ್ವವನ್ನು ಅರಿತು, ಅದು ನಮ್ಮ ನಡುವಳಿಕೆಯಲ್ಲಿ ವ್ಯಕ್ತವಾದರೆ ಕನ್ನಡ ಅಪ್ರಸ್ತುತವಾಗುವುದಾದರೂ ಹೇಗೆ? ಅದರ ವಿರುದ್ಧವಾಗಿ ಭಾಷೆ ಮತ್ತು ಭಾಷೆಯ ಬಳಕೆ ಬೆಳೆಯುತ್ತದೆ ತಾನೆ. ತೋಚಿದ ವಿಷಯಗಳನ್ನು ಕನ್ನಡದಲ್ಲಿ ಚರ್ಚಿಸಿದರೂ ನಮ್ಮ ಭಾಷಾಜ್ಞಾನ ವಿಸ್ತರಿಸುತ್ತದೆ ವಿನಃ ಕಡಿಮೆಯೇನಾಗುವುದಿಲ್ಲ; ಖರೇ, ಆದರೆ ನಮ್ಮ ಭಾಷಾಚರಿತ್ರೆಯಲ್ಲಿ ಹುದುಗಿರುವ ಜ್ಞಾನವನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಗಾಂಭೀರ್ಯದ ಆಶಯ ಅವಶ್ಯಕ ಅಂತ ನನ್ನ ಅನಿಸಿಕೆ.

  • Login or register to post comments
  • link
  • Email this ಪ್ರತಿಕ್ರಿಯೆ
January 1, 2006 - 12:00pm — pradeepkishore

ಹರಟೆ ಹೆಚ್ಚಲಿ - worse is better ಫಿಲಾಸಫಿ.

pradeepkishore's picture

ಇಸ್ಮಾಯಿಲ್ ಅವರು ಹೇಳಿರುವುದು ನೂರಕ್ಕೆ ನೂರು ಸಮಂಜಸ. ಕನ್ನಡಿಗರದ್ದು ಒಂಥರಾ pseudo elitism.
ಇದಕ್ಕೆ ನಿದರ್ಶನ ಕನ್ನಡಿಗರು ಕನ್ನಡ ಸಿನೆಮಾಗಳ ಬಗ್ಗೆ ಇರುವ ಮಲತಾಯಿ ಧೋರಣೆ. ಬೇರೆ ಭಾಷೆಗಳಲ್ಲಿ ಬರುವ "colloquial"/rustic ಚಿತ್ರಗಳನ್ನು ನೋಡಲು ಹಿಂಜರಿಯದ ನಮ್ಮ ಜನ(ಉದಾ: ಗೋವಿಂದನ ಪಿಕ್ಚರ್ ಗಳು.), ಅದೇ ರೀತಿಯ ಚಿತ್ರಗಳನ್ನು ಎಲ್ಲರ (esp. ಪರಭಾಷಿಕರ) ಮುಂದೆ ಹೀಗಳಿಯಲು ಯಾವಾಗಲೂ ಮುಂದು.

ಹರಟೆಗೆ ಮರಳುತ್ತಾ...
ಸಮ ವಯಸ್ಕರೊಡನೆ, ಸಮ ಮನಸ್ಕರೊಡನೆ ಹರಟೆ ಕೊಚ್ಚುವುದು ಜಳ್ಳಿನಿಂದ ಕಾಳು ತೆಗೆದಂತೆ. ನಮ್ಮ ತಲೆಯಲ್ಲಿ ಓಡುವ ಎಲ್ಲಾ ಐಡಿಯಾಗಳಿಗೆ ಜೀವ ಕೊಡುವುದು ಅಸಾಧ್ಯ. ಹರಟೆಯಲ್ಲಿ ಸಿಗುವ ಫೀಡ್ ಬ್ಯಾಕ್ ನಮ್ಮ ಐಡಿಯಾಗಳನ್ನು evolve ಮಾಡುತ್ತವೆ.
ಪ್ರೋಗ್ರಾಮಿಂಗ್ ಲಾಂಗ್ವೇಜ್ ಗಳ ಬಗ್ಗೆ ಮಾತನಾಡುವಾಗ, "worse is better"[1] ಅಂತ ಹೇಳ್ತಾರೆ.

ಒಂದು ಮುಖ್ಯ worse is better characteristic:
- ಯಾವಾಗಲೂ ಸರಿಯಾಗಿ ಇರುವುದಕ್ಕಿಂತ ಸರಳವಾಗಿರುವುದು ತುಸು ಮೇಲು.(It is slightly better to be simple than correct.)

ಈ ಪ್ರತ್ಯುತ್ತರ ಬರೆಯಲು ಕುಳಿತಾಗ ಮೊದಲು ಹೊಳೆದಿದ್ದೇ 'worse is better'. ಆದರೆ, ಇಂಗ್ಲಿಷ ನಿಂದ ಕನ್ನಡಕ್ಕೆ ಅನುವಾದ ಮಾಡುವ ತಪ್ಪಾಗಬಹುದೇನೋ ಅಂತ ಕಳವಳ. ಆಮೇಲೆ ಹೊಳೀತು... ಇದೆಲ್ಲ ಹರಟೆ ತಾನೆ. so, its OK. Eye-wink

[1] The rise of worse is better - http://www.ai.mit.edu/docs/articles/good-news/subsection3.2.1.html

  • Login or register to post comments
  • link
  • Email this ಪ್ರತಿಕ್ರಿಯೆ
September 10, 2006 - 2:14am — anilkumar

ಹರಟೆ, ತಲೆ-ಮತ್ತು-ಕಾಡು ಹರಟೆಯ ಕರ್ತೃ 'ಕಮ್ಮಿ ನಿಷ್ಠನೇ'?

anilkumar's picture

ಮೊದಲ ಹರಟೆಮಲ್ಲನೆ೦ದರೆ ಸಾಕ್ರೆಟಿಸನೇ ಇರಬೇಕು. ನೀವು --ಆಗ ಬದುಕಿದ್ದಿದ್ದಲ್ಲಿ--ಏನಾದರೂ ಹೇಳಿ, ಏನನ್ನಾದರೂ ಹೇಳುವುದು ಕಷ್ಟ ಎ೦ದಾದರೂ ಹೇಳಿ. ಸಾಕ್ರೆಟಿಸ್, "ಅದೇಗೆ ಹಾಗೆ ಹೇಳ್ತೀಯ?" ಎ೦ದು ಕೇಳಿಬಿಡುತ್ತಿದ್ದ. "ನನಗೇನೂ ಗೊತ್ತಿಲ್ಲ ಗುರುವೆ. ನಿನಗೇ ಎಲ್ಲ ಗೊತ್ತಿರೋದು, ಬಿಟ್ಟಾಕು" ಎ೦ದರೂ ಅಷ್ಟೇ. "ಅದೇಗೆ ಹೇಳ್ತೀಯ?" ಅ೦ದುಬಿಡೋನು ಸಾಕ್ರೆಟಿಸ್. "ಸಾಕೆತ್ರಿ ಸಾ.." ಎನ್ನುವ೦ತೆ ಮಾಡಿಬಿಡುತ್ತಿದ್ದನು ಆತ.

ಕಾಸು ತೆಗೆದುಕೊ೦ಡು, ತತ್ವ ಹೇಳಿಕೊಡುತ್ತಿದ್ದವರು 'ಸ್ಟಾಯಿಕ್' ತತ್ವಜ್ನರು. ಅ೦ತಹವರ ಕಾಲದಲ್ಲಿದ್ದವನು ಸಾಕ್ರೆಟಿಸ್. ಉದಾಹರಣೆಗೆ ನಾಲ್ಕಾಣೆಗೆ ಒ೦ದು ತತ್ವ ಹೇಳಿಕೊಡುತ್ತಿದ್ದರು ಅವರು ಎ೦ದಿಟ್ಟುಕೊಳ್ಳಿ. ನೀವು ಮೋರಾಣೆ ಕೊಟ್ಟಿರೆ೦ದಿಟ್ಟುಕೊಳ್ಳೀ. "ಮೋಕ್ಷ ಎ೦ದರೆ..." ಎ೦ದು ನಿಲ್ಲಿಸಿಬಿಡುತ್ತಿದ್ದರು. "ಪೂರ್ತಿ ಹೇಳಯ್ಯಾ!" ಎ೦ದು ಕಾಸುಕೊಟ್ಟ ನೀವು ಕೇಳಿದರೆ, "ಇನ್ನೂ ಒ೦ದಾಣೆ ಬಾಕಿ ಇದೆ, ಕೊಟ್ಟುಬಿಡು" ಅನ್ನುತ್ತಿದ್ದರು. ಆಗ ನಿಮಗೆ ಕೂಡಲೆ ಜ್ನಾನೋದಯವಾಗಿಬಿಡುತ್ತಿತ್ತು, ಸ್ಟಾಯಿಕರ ಬಗ್ಗೆ!! ಇದಕ್ಕೆ ವಿರುದ್ಢವಾದುದು, ಅ೦ದರೆ ಸಾಕ್ರೆಟಿಸ್ ಪರವಾದುದು--ಈ ಹರಟೆ.

ಏಕೆ೦ದರೆ ಹರಟುವಾಗ ಅದು ಆಸಕ್ತಿಯುತವಾಗಿದ್ದರೆ, ಜಿಪುಣ, ಜುಗ್ಗರೂ ಕಾಸುಬಿಚ್ಚಿಬಿಡುತ್ತಾರೆ. ಕೋಶಿಸ್‍ನಲ್ಲಿ ಒ೦ದು ಕಾಫಿ ಕುಡಿದು ನಾಲ್ಕು ಗ೦ಟೆ ಕೂರಬಹುದು -- ಅ೦ಡನ್ನು ಮತ್ತು ವಾದವನ್ನು. ಯಾರೂ ಓಡಿಸರು. ಆದರೆ ಆಸಕ್ತಿ ಬೆಳೆದರೆ ಒ೦ದು ಕಾಫಿ ನಾಲ್ಕಾಗಬಹುದು. ನಾಲ್ಕು ಐದಾಗಬಹುದು, ಏಕೆ೦ದರೆ ಕಾಫಿಯ ಲೆಕ್ಕದಲ್ಲಿ ನಾಲ್ಕು ಮೊರಾಗದು! ಕಾಫಿಯ ಲೆಕ್ಕದಲ್ಲಿ ಯಾವುದೂ ನೆಗೆಟಿವ್ ಇಲ್ಲ, ಎಲ್ಲವೂ ಪಾಸಿಟೀವೇ, ಅಡಿಟೀವ್ ಮತ್ತು ಅಡಿಕ್ಟೀವ್!!

"ಅದೇನು ಕಾಡುಹರಟೆ ಕಣಯ್ಯ. ನಿಮ್ಮ ಜೀವನವೇ ಅದೆಷ್ಟು ವೇಷ್ಟು!"

"ಅದೆಷ್ಟು ವೇಷ್ಟು ಎ೦ಬ ಬಗ್ಗೆಯೇ ಹರಟೆ"

"ಶುದ್ಧ ತಲೆಹರಟೆಗಳು ನೀವು"

"ಬೇಗ ಡಿಸೈಡ್ ಮಾಡಿ. ನಾವು ಕಾಡುಹರಟೆಗಳೋ ಅಥವ ತಲೆಹರಟೆಗಳೋ?"

"ಅಯ್ಯೋ, ಪಾಪಿಗಳ, ಯಾಕ್ರಯ್ಯ ಜೀವ್ನಾನ ಸುಮ್ನೆ ವೇಸ್ಟ್ ಮಾಡ್ತೀರ?"

"ವೇಸ್ಟ್ ಎಲ್ಲಿ ಮಾಡ್ತಿದ್ದೀವಿ?"

"ಈಗ ಮಾಡ್ತಿರೋದ್ ಏನು?"

"ವೇಸ್ಟ್ ಎಲ್ಲಿ ಮಾಡ್ತಿದ್ದೀವಿ ಅ೦ತ ಗ೦ಭೀರವಾಗಿ ನಿಮ್ಮನ್ನೇ ಪ್ರಶ್ನಿಸುತ್ತಿಲ್ಲವೆ?"

"ಹೌದು!"

"ಹಾಗಾದರೆ ವೇಸ್ಟ್ ಆಗುತ್ತಿರುವುದೇನು? ಅದೂ ನಿಮ್ಮ ಹತ್ತಿರ ಮಾತನಾಡುವುದೆ೦ದರೆ ವೇಸ್ಟ್ ಹೇಗೆ ಅದು?!"

*
ಹರಟೆಯ ರುಚಿ, ವಿಠ್ಠಲನಾಮದ ಕಲ್ಲುಸಕ್ಕರೆಯ೦ತದ್ದು, ಬಲ್ಲವರೇ ಬಲ್ಲರದರ ರುಚಿಯನ್ನು. ಬಲ್ಲದವರು ಮೇಲಿನ ಸ೦ಭಾಷೆಣೆ ನಡೆಸಲಾರರು. ಅ೦ತಹವರು ಕೊನೆಯ ಡೈಲಾಗಿಗೆ ಉತ್ತರಿಸಲೂ ಆರರು. ಮೌನಕ್ಕಿ೦ತ ಹರಟೆ ಹೆಚ್ಚು ಮೌಲ್ಯದ್ದು. ಹರಟೆ ನಮ್ಮೊಳಗೂ ಆಗಬಹುದು! ನಮ್ಮೊಳಗೇ ಆಗಬೇಕು. "ತನ್ನ೦ತೆ ಪರರನ್ನು ಬಗೆದೊಡೆ" ಎ೦ಬ ವಚನ ಕಸಾಯಿಖಾನೆಯಲ್ಲಿ ಅದೆಷ್ಟು ಬೆಲೆಯುಳ್ಳದ್ದು. ಎದೆಬಡಿದುಕೊ೦ಡು ಸತ್ತ ಕುರಿಯು ತನ್ನೆದುರಿನ ಜೀವ೦ತ ಕುರಿಪಟ್ಟಲಿಯನ್ನು ಹೀಗೆ ಕೇಳಿತ೦ತೆ, "ತನ್ನ೦ತೆ ಪರರನ್ನು ಬಗೆದೊಡೆ, ಕೈಸಾಲದ ಬಿನ್ನಾಣವೇಕೋ" ಎ೦ದು. ಈ ಹೇಳಿಕೆಯ ಒರಿಜಿನಲ್ ಎ೦ಬ೦ತೆ ಕೇಳಿಸುವವರ ಸ೦ಬ೦ಧಿಸಿದ೦ತೆ ಕ೦ಡವರ ಕ್ಷಮೆಯೋ ಈ ಮು೦ಚಿನ ವಾಕ್ಯದ ಹೇಳಿಕೆಗೆ ಅನವಶ್ಯಕ. ಏಕೆ೦ದರೆ ಅದೊ೦ದು ಹರಟೆ. ಹರಟೆಗೆ ಕ್ಷಮೆಯಿಲ್ಲ--ಆದ್ದರಿ೦ದ ಹರಟುವವರು ಒಳ್ಳೆಯ ಹಠಕ್ಕೆ ಬಿದ್ದ ಕಮ್ಯುನಿಕೇಟರ್ ಆಗುತ್ತಾರೆ. ಹೆಚ್ಚು ಹಠಕ್ಕೆ ಬಿದ್ದರೆ ಕಮ್ಯುನಿಸ್ಟರಾಗುತ್ತಾರೆ. ಹರಟೆಯ ಹಠವೇ ಇಲ್ಲದವರು ಕಮ್ಮಿನಿಸ್ಠರಾಗುತ್ತಾರೆ.

ಈ ಮೇಲಿನ ಹರಟೆಗೆ ರೆಟ್ಟೆ ಗಟ್ಟಿಯೋ ಹೇಗೆ? ಮೇಲಿನದು ವೇಸ್ಟಾಗಿದ್ದರೆ, ಇಲ್ಲಿಯವರೆಗೂ ನೀವದನ್ನು ಓದಿದ್ದು?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಕೊರೆತ
  • ಮಧ್ಯರಾತ್ರಿಯ ಹರಟೆಗಳು
  • ಮನುಸ್ಮೃತಿ
  • ನನ್ನನ್ನೂ ಸೇರಿಸ್ಕೋತೀರ ತಾನೆ?
  • ಅನಿಸುತಿದೆ ಯಾಕೋ ಇಂದು..
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.

ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator