ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
೧. "ಕಡಿದಾಳ್ ಮತ್ತು ಚೆನ್ನಿ ಅಂತಹವರನ್ನು ನಕ್ಸಲ್ ಹಿತೈಷಿ ಅಂತ ಘೋಷಿಸಿದ ರಾಜ್ಯದ ಪೋಲಿಸ್ ಇಲಾಖೆ ಒಂದು ದೊಡ್ಡ ಜೋಕ್"
೨. "ಈ ಬೆಂಬಲಿಗರ ಪಟ್ಟಿಯ ಕ್ರಮ ಪೋಲಿಸ್ ಇಲಾಖೆಯ ವೃತ್ತಿ ದಾರಿದ್ರ್ಯಕ್ಕೆ ಹಿಡಿದ ಕೈಗನ್ನಡಿ"
೩. "ಕೋಮುವಾದಿ ಸರ್ಕಾರದ ಫ್ಯಾಸಿಸ್ಟ್ ಮನೋಭಾವಕ್ಕೆ ಇದೊಂದು ಉದಾಹರಣೆ"
೪. "ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಧೋರಣೆ"
೫. "ಇದೊಂದು ರಾಜಕೀಯ ದುರುದ್ದೇಶ ಪ್ರೇರಿತ ಕ್ರಿಯೆ"
೬. "ಸಮಾಜವಾದಿ ಎಂ.ಪಿ. ಪ್ರಕಾಶ್ ರ ಇಲಾಖೆಯಿಂದ ಇಂತಹ ಕ್ರಮ ಅನೀರೀಕ್ಷಿತ"
ಮೇಲಿನವುಗಳು ನಕ್ಸಲ್ ಬೆಂಬಲಿಗ ಸಂಘ, ಸಂಸ್ಥೆಗಳು ಮತ್ತು ವ್ಯಕ್ತಿಗಳ ಮಾಹಿತಿ ಕುರಿತ ಪಟ್ಟಿ ಹೊರಬಿದ್ದ ತಕ್ಷಣ ನಮ್ಮ ಪ್ರಗತಿಪರರು, ಚಿಂತಕರು ಎನ್ನಿಸಿಕೊಂಡವರು ಉದುರಿಸಿದ ನುಡಿಮುತ್ತುಗಳು !!
ಅವರ ಹೇಳಿಕೆಗಳ ರಭಸ, ಆವೇಶ, ಸಿಟ್ಟು ನೋಡಿದರೆ ಬಹುಶಃ ರಾಜ್ಯ ಪೋಲಿಸ್ ಇಲಾಖೆ ಏನೋ ದೊಡ್ಡ ದುರಂತಕ್ಕೆ ಕಾರಣವಾಗಿದೆ ಎಂದು ಭಾಸವಾಗುವಂತಿತ್ತು. ಅನೇಕರು ಶಂಕರ ಬಿದರಿಯವರ ಮೇಲೆ ಹರಿಹಾಯ್ದರು. ಇದೆಲ್ಲಾ ರಾಜಕೀಯ ಕುತಂತ್ರ ಎಂದರು. ಎಲ್ಲಾ ಹೋಗಲಿ ಸಮಾಜವಾದಿ ಕಡಿದಾಳ್ ಮತ್ತು ಚಿಂತಕ ಚೆನ್ನಿಯವರನ್ನು ಸೇರಿಸುವದೆಂದರೆ? ಇತ್ಯಾದಿ ಪ್ರಶ್ನೆಗಳು ಹೊರಹೊಮ್ಮಿದ್ದವು.
ಈ ಮಾದರಿಯ ಹೇಳಿಕೆಗಳಿಗೆ ಇಲ್ಲಿಯ ಸಂಪದ ಲೇಖನ ನೋಡಿ : http://sampada.net/blog/d_s_nagabhushana/27/06/2007/4705
ಇವರೆಲ್ಲರ ಒತ್ತಡಕ್ಕೆ ಮಣಿದು ಸರ್ಕಾರ ಪಟ್ಟಿಯನ್ನೇನೋ ಹಿಂತೆಗೆದುಕೊಂಡಿದೆ. ಆದರೆ ಅದರಿಂದ(ಕೀಳು ರಾಜಕೀಯದಿಂದ!) ಪೋಲಿಸ್ ಇಲಾಖೆಯ ಮೇಲಾಗುವ ಪರಿಣಾಮ ವಿಚಾರಿಸಿ!
ಇವರೆಲ್ಲರ ಹಾರಾಟ ಎಷ್ಟು ಖೋಟಾ ಎಂದು ತಿಳಿಯಲು ಇವತ್ತಿನ ವಿ.ಕ ಮುಖಪುಟದಲ್ಲಿರುವ ಚಿತ್ರ ನೋಡಿ. ಅಲ್ಲಿ ಅದೇ ಕಡಿದಾಳು ನಕ್ಸಲರ ಪಕ್ಕದಲ್ಲಿ ವಿರಾಜಮಾನರಾಗಿದ್ದಾರೆ!
ಚಿತ್ರದ ಕೊಂಡಿ : http://vijaykarnatakaepaper.com/pdf/2007/07/03/20070703a_001101006.jpg
ಏನು ಹೇಳಲಿ ಇವರ ಹಾರಾಟಕ್ಕೆ? ಬಲ್ಲವರು ವಿಚಾರಿಸಿ ![]()

- jaiguruji ರವರ ಬ್ಲಾಗ್
- Login or register to post comments
- 1009 hits
- Email this blog




RSS:
ಪ್ರತಿಕ್ರಿಯೆಗಳು
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ನಕ್ಸಲರ ಇತ್ತೀಚಿನ ಬಲಿ : http://sampada.net/article/4462
ದಿನ ಬೆಳಗಾದರೆ ಗಾಂಧಿವಾದವನ್ನು, ಲೋಹಿಯಾವಾದವನ್ನು ಜಪಿಸುವ ನಮ್ಮ ಚಿಂತಕರು, ಪ್ರಗತಿಪರರು ಇದನ್ನೂ ಹೇಗೆ ಬೆಂಬಲಿಸುತ್ತಾರೋ? ನನಗಂತೂ ಅರ್ಥವಾಗಿಲ್ಲ..!
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ವಿಶೇಷವಾಗಿ ಕಳೆದ ವಾರದಲ್ಲಿ ಪ್ರಜಾವಾಣಿ ವಾ.ವಾ.ದಲ್ಲಿ ಬರುತ್ತಿರುವ ಪತ್ರಗಳನ್ನ ಓದಿ ನೋಡಿ. ನಾನು ಮೇಲೆ ಹೇಳುತ್ತಿರುವದು ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತೆ.
ಅಂದಹಾಗೆ, ಇವತ್ತಿನ ’ಹೊಸದಿಗಂತ’ ದಿನಪತ್ರಿಕೆಯಲ್ಲಿಯೂ ಕೂಡ ಎರಡು ಫೋಟೊ ಪ್ರಕಟಿಸಿದ್ದಾರೆ ಎಂದು ಮಿತ್ರರೊಬ್ಬರು ಹೇಳಿದರು. ನೋಡಬೇಕು, ಪಕ್ಕಾ ರಾಜಕಾರಣಿಗಳಂತೆ ನಮ್ಮ ಚಿಂತಕರು ಕೂಡ ಅವೆಲ್ಲಾ fake photo ಅನ್ನುತ್ತಾರೇನೊ?
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಸರಿಯಾಗಿ ಹೇಳಿದಿರಿ ಗುರೂಜಿ.
ಇಲ್ಲಿ ಎರಡು ವಿಷಯಗಳು:
೧. "ಪ್ರಖರ ಬುದ್ದಿಜೀವಿ"ಗಳಾದ ಮಾತ್ರಕ್ಕೆ ಅವರು ಮಾಡಿದ್ದೆಲ್ಲಾ ಸರಿ ಎಂಬಂತೆ ಸರಕಾರ/ಪೋಲೀಸರು ನಡೆದುಕೊಳ್ಳಬೇಕಾಗಿಲ್ಲ. ಅವರೂ ಕಾನೂನಿನ ವ್ಯಾಪ್ತಿಗೇ ಬರುತ್ತಾರೆ.
೨. ನಕ್ಸಲ್ ಬೆಂಬಲಿಗರೆಂದರೆ ಬಂದೂಕು ಹಿಡಿದುಕೊಂಡು ತಿರುಗುವುವವರು ಮಾತ್ರ ಅಲ್ಲ. ಅವರಿಗೆ ವೈಚಾರಿಕ ಬೆಂಬಲ ನೀಡುವವರೂ ಸಂಶಯಿಸಲ್ಪಡುವುದು ನಿಶ್ಚಯ. ಸ್ವ ಇಚ್ಛೆಯಿಂದ ಅವರ ಜೊತೆ ಸೇರುವುದು,ಅವರ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಕೂಡ ಇದೇ ಪಟ್ಟಿಗೆ ಬರುತ್ತಾರೆ.
ನಕ್ಸಲೈಟ್ ಸಮಸ್ಯೆಯ ಭೀಕರತೆ ಅರಿಯಲು ಈ ಕೊಂಡಿ ನೋಡಿ:
http://naxalwatch.blogspot.com/
ಹಿಂದೊಮ್ಮೆ ನಮ್ಮ "ಮುರಳಿ ದೇವರು" ಈ ಕೊಂಡಿ ಪೋಸ್ಟ್ ಮಾಡಿದ್ದರು.
ಧನ್ಯವಾದ,
ಕೇಶವ ಮುರಳಿ.
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಆಹಾ ಏನು ಚೆನ್ನಾಗಿದೆ. ವಿಜಯಕರ್ನಾಟಕ ಫೋಟೋ ಪ್ರಕಟಿಸುವುದು. ಅದನ್ನಿಟ್ಟುಕೊಂಡು ನಾವು ಚರ್ಚಿಸುವುದು. ಕೆಲವರು ಜನಪರ ಹೋರಾಟಗಾರರೆಲ್ಲರನ್ನೂ ವಾಚಾಮಗೋಚರವಾಗಿ ಬೈಯ್ಯುವುದು. ಚಿತ್ರ ನಾಲ್ಕು ವರ್ಷಗಳ ಹಿಂದಿನದ್ದೇ ಆಗಿದ್ದರೆ ಪಾರ್ವತಿ, ಬಿ.ಜಿ.ಕೃಷ್ಣಮೂರ್ತಿ ಮುಂತಾದವರೆಲ್ಲಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅದಕ್ಕೆ ಪ್ರೆಸ್ ಫೋಟೋಗ್ರಾಫರ್ ಗಳಿಗೆ ಪ್ರವೇಶವೂ ಇದ್ದರೆ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಈ ಕೊಂಡಿಯನ್ನು ಪೋಸ್ಟ್ ಮಾಡಿದವರು ಮತ್ತು ಅದಕ್ಕೆ 'ಕಳ್ಳರನ್ನು ಹಿಡಿದುಬಿಟ್ಟೆವು' ಎಂಬ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿರುವವರಿಗೆ ಸಾಮಾನ್ಯ ಜ್ಞಾನದ ಅಪಾರ ಕೊರತೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಈಗ ನಕ್ಸಲೈಟರು ಎಂದು ಗುರುತಿಸುತ್ತಿರುವ ವ್ಯಕ್ತಿಗಳು ಈ ಫೋಟೋ ತೆಗೆದ ದಿನಗಳಲ್ಲಿ ಇನ್ನೂ ನಕ್ಸಲೈಟರಾಗಿರಲಿಲ್ಲ. ಅಥವಾ ಅವರಿಗೆ ಇರುವ ಅಂಥಾ ಸಂಪರ್ಕಗಳು ಪೊಲೀಸರಾದಿಯಾಗಿ ಯಾರಿಗೂ ತಿಳಿದಿರಲಿಲ್ಲ ಎಂದರ್ಥವಲ್ಲವೇ?
ಹೀಗೆ ಸತ್ಯವನ್ನು ಮುಚ್ಚಿಡುವುದಕ್ಕೆ ಆವರಣ ಎಂದು ಕರೆಯುತ್ತಾರೆಂದು ತಮಗೆಲ್ಲರಿಗೂ ಪ್ರಿಯರಾದ ಭೈರಪ್ಪನವರೇ ಹೇಳಿದ್ದಾರೆ. ಅಂದಹಾಗೆ ಇನ್ನೊಂದು ಮಾತು. ಗುಜರಾತಿನಲ್ಲಿ ಹಿಟ್ಲರ್ ನಂತೆ ನರಮೇಧವೊಂದಕ್ಕೆ ನೇತೃತ್ವ ನೀಡಿದ ನರೇಂದ್ರ ಮೋದಿ ಎಂಬ ರಾಜಕಾರಣಿಯ ಜತೆ ಯಾರದ್ದೆಲ್ಲಾ ಫೋಟೋ ಇದೆ ಎಂದು ತಮಗೆಲ್ಲರಿಗೂ ತಿಳಿದಿರಬೇಕೆಂದು ನಾನು ಭಾವಿಸುತ್ತೇನೆ. ಹಾಗೆಯೇ ಗಾಂಧೀ ಹತ್ಯೆಯಲ್ಲಿ ಯಾರೆಲ್ಲಾ ಆರೋಪಿಗಳಾಗಿದ್ದರು ಎಂಬುದರ ಬಗ್ಗೆ ಎಲ್ಲರಿಗೂ ಮಾಹಿತಿ ಇರಬೇಕಲ್ಲವೇ?
ರಮೇಶ್ ಸಮಗಾರ
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ರಮೇಶ,
ಸ್ವಲ್ಪನಾದ್ರೂ logical ಆಗಿ ವಿಚಾರ ಮಾಡಿ. ನನಗೆ ಗೊತ್ತು, ನಿಮಗೆ ಸತ್ಯವನ್ನ ಒಪ್ಪಲಾಗುತ್ತಿಲ್ಲ ..
ಒಂದೊಂದೆ ಪಾಯಿಂಟು..
೧. "ಈಗ ನಕ್ಸಲೈಟರು ಎಂದು ಗುರುತಿಸುತ್ತಿರುವ ವ್ಯಕ್ತಿಗಳು ಈ ಫೋಟೋ ತೆಗೆದ ದಿನಗಳಲ್ಲಿ ಇನ್ನೂ ನಕ್ಸಲೈಟರಾಗಿರಲಿಲ್ಲ."
ನಕ್ಸಲೈಟರಾಗಿರಲಿಲ್ಲ ಎಂದು ನಿಮಗೆ ಇಷ್ಟೊಂದು ನಿರ್ದಿಷ್ಟವಾಗಿ ಹೇಗೆ ಗೊತ್ತು? ನಿಮ್ಮ ಜೊತೆಗೇನಾದರೂ ಬೈ-ಟು ಟೀ ಕುಡಿತಾ ಈ ಮಹಾತ್ಮರು ಹರಟೆ ಹೊಡಿತಾ ಇದ್ರಾ? ಅಥವಾ ಕಡಿದಾಳ್ ಅವರ ಮನೆಯಲ್ಲಿ ಆಗಿರೋ ಯಾವುದಾದರೂ ಶುಭ ಸಮಾರಂಭಕ್ಕೆ ನೀವು ಅವರ ಜೊತೆ ಹೋಗಿದ್ರಾ?
೩. "ಪ್ರೆಸ್ ಫೋಟೋಗ್ರಾಫರ್ ಗಳಿಗೆ ಪ್ರವೇಶವೂ ಇದ್ದರೆ .."
. ಬೇರೆಯವರು (ನಕ್ಸಲ್ ರಾಗಿರಬಹುದು ಅಥವಾ ಬೆಂಬಲಿಗರೂ ಆಗಿರಬಹುದು!) ತೆಗೆದಿರೋ ಫೋಟೋಗಳನ್ನು ವಿ.ಕ. ಪ್ರಕಟಿಸಬಾರಬೆಂಬ ನಿಯಮವಿದೆಯೇ?
ಪತ್ರಿಕೆಗಳಲ್ಲಿ ಬರುವ ಎಲ್ಲ್ಲಾ ಫೋಟೋಗಳನ್ನು ಪ್ರೆಸ್ ಫೋಟೋಗ್ರಾಫರ್ ಗಳೆ ತೆಗೆದಿರುವದಿಲ್ಲ ಮತ್ತು ತೆಗೆಯಲು ಸಾಧ್ಯವೂ ಇಲ್ಲ ಎಂಬ ಅತಿ ಸಾಮಾನ್ಯ ಜ್ಞಾನದ ಅಪಾರ ಕೊರತೆ ನಿಮಗೇಕೆ ಅಯಿತು?
೩.ಪಾರ್ವತಿ, ನಕ್ಸಲ್ ಸಂಪರ್ಕಕ್ಕೆ ಬಂದದ್ದು ಯಾವಾಗ? ಹತರಾದದ್ದು ಯಾವಾಗ ? ಎಂಬ ಸಾಮಾನ್ಯ ಜ್ಞಾನಕ್ಕಾಗಿ ತಾವು ಪೋಲಿಸ್ ಅಧಿಕಾರಿ ಡಾ:ಡಿ.ವಿ.ಗುರುಪ್ರಸಾದ್ ಬರೆದಿರುವ "ಕರ್ನಾಟಕದಲ್ಲಿ ನಕ್ಸಲಿಯರು" ಪರಾಮರ್ಶಿಸಬೇಕಾಗಿ ವಿನಂತಿ. ನಿಮಗೆ ಬೇಕಿದ್ದರೆ ನಾನು ಪುಸ್ತಕ ಎರವಲು ನೀಡುವೆ.
೪. ಇನ್ನು ಭೈರಪ್ಪ, ಮೋದಿ, ಗಾಂಧೀ ಹತ್ಯೆ (ಗೋಡ್ಸೆ ಹೆಸರೇ ಇಲ್ವಲ್ಲಾ ಛೇ!) ಇವೆಲ್ಲಾ ನಿಮಗೆ ಅತ್ಯಂತ ಪ್ರೀತಿ ಪಾತ್ರ ವಿಷಯಗಳೆಂದು ಎಲ್ಲರಿಗೂ ಗೊತ್ತು. ಎಮ್ಮೆ ಕರು ಹಾಕಿದರೂ ಕೂಡ ಆ ಚರ್ಚೆಯಲ್ಲಿ ನೀವು ಈ ಮೂರನ್ನೂ ಎಳೆದು ತರುತ್ತೀರಿ ಎಂದು ನನಗೆ ಗೊತ್ತು. ಹೀಗಾಗಿ..no comments
!
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ನೀವು ಅಲ್ಲಿ ಪ್ರಕಟವಾಗಿರುವ ಫೋಟೊ fake ಎಂದು ಕೈ ತೊಳೆದುಕೊಂಡಿಲ್ಲ. ಅದಕ್ಕಾಗಿ ಧನ್ಯವಾದಗಳು !
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ರಮೆಶ್ ಅವರೆ ನಿಮ್ಗೆ ವಾದಕ್ಕಾಗಿ ವಾದ ಮಾಡೊ ಚಟ ಹೊರತು ಯೇನು ಅಲ್ಲ ಅಂತ ತಿಳ್ಕೊಳಬೇಕೊ. ಯೇನಾದ್ರು ಅದ್ರೆ ಗುಜರಾತ್ ಅಂತೀರಿ ನಿಮ್ಮ ಕೇರಳದಲ್ಲಿ ಕಮ್ಯೂನಿಸ್ಟರ ಹೊಡೆತಕ್ಕೆ ಸತ್ತವರು ಇದ್ದಾರೆ ಗೊತ್ತೋ? ಅಲ್ಲಿ ಪಶಿಮ ಬಂಗಾಳ ದಲ್ಲಿ ಮೋನ್ನೆ ಮೋನ್ನೆ ಪೊಲೀಸ್ ಗುಂಡಿಗೆ ಸತ್ರು ಕೆಲವರು ಗೋತ್ತೊ?..ನಿಮ್ಮ ಹಾಗೆ ವಾದ ಮಾಡುವಾತ ಒಬ್ಬ ಗುಜರ್‍ಅತ್ ಬಗ್ಗೆ ಹೇಳಿದ ಮಾತು. ಅಲ್ಲಿ ಮೋದಿ ಇಲ್ಲದಿದ್ದರೆ ಈಗ ಗುಜರಾತ್ ಇನೊಂದು ಕಾಶ್ಮೀರ ಆಗುತ್ತಿತ್ತು ಅಂತ ನಾವು ಅದಕ್ಕೆ ಸೊಪ್ಪು ಹಾಕ ಬಾರದು ನೆಕ್ಸೆಲ್ ಚಟುವಟಿಕೆ ಕರ್ನಾಟಕದಲ್ಲಿ ಕಮ್ಮಿ ಮಾಡಲು ಪ್ರಯತ್ನಿಸುವ ಪೋಲೀಸರಿಗೆ ಸಹಾಯ ಮಾಡೊಣ ಅದು ಆಗಿಲ್ಲದಿದ್ರೆ ಸುಮ್ಮನಿರೊಣ.
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಒಂದು update:
ಕೆಳಗಿನ ಕೊಂಡಿ ನೋಡಿ:
http://thatskannada.oneindia.in/news/2007/07/04/naxals_identified.html
ಮೊನ್ನೆ ಬಸ್ಸಿಗೆ ಬೆಂಕಿ ಕೊಟ್ಟವರ ನೇತೃತ್ವ ಬಿ.ಜಿ.ಕೃಷ್ಣಮೂರ್ತಿಯವರಂತೆ. (ಮೇಲೆ ನೀಡಿದ ವಿ.ಕ. ದ ಚಿತ್ರದಲ್ಲಿದ್ದಾರೆ).
ಸತ್ಯಮೇವ ಜಯತೇ,
ಧನ್ಯವಾದ,
ಕೇಶವ ಮುರಳಿ
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಇಷ್ಟೆ ಅಲ್ಲ, ನಕ್ಸಲರು ದರೋಡೆಯಲ್ಲೂ ಸಿದ್ಧಹಸ್ತರು ಅನ್ನೋದನ್ನ ಅಗಾಗ ಸಬೀತು ಮಾಡ್ತಾ ಇರ್ತಾರೆ. ೩-೪ ದಿನಗಳ ಮಲೆನಾಡಿನಲ್ಲಿಯೇ ಒಬ್ಬರ ಮನೆಗೆ ನುಗ್ಗಿ ದರೋಡೆ ಮಾಡಿರುವ ಸುದ್ದಿ ಪೇಪರ್ ನಲ್ಲಿ ಬಂದಿದೆ.
ನಕ್ಸಲರ ಇನ್ನು ಹೆಚ್ಚಿನ ದರೋಡೆ ಪ್ರಕರಣಗಳ ಮಾಹಿತಿಗೆ ಡಾ. ಡಿ.ವಿ. ಗುರುಪ್ರಸಾದ್ ಬರೆದಿರುವ "ಕರ್ನಾಟಕದಲ್ಲಿ ನಕ್ಸಲೀಯರು" ಪುಸ್ತಕವನ್ನು ಓದಬಹುದು!
ಈಗೆಲ್ಲಿ ಮಾಯವಾಗಿದ್ದಾರೆ ನಕ್ಸಲ್ ಸಿದ್ಧಾಂತಕ್ಕೆ (ಅದೊಂದು ಸಿದ್ಧಾಂತವೇ?) ಬೆಂಬಲ ತೋರುವ ಹೋರಾಟಗಾರರು?
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಬಹುಮುಖ ಪ್ರತಿಬೆಯ ನಮ್ಮ ನಾಡಿನ ಪ್ರಗತಿಪರರ ಆಷಾಡಬೂತಿತನಕ್ಕೆ ಉದಾಹರಣೆಯಾಗಿ ಇಲ್ಲೊ೦ದು ನಿದರ್ಶನ ನೋಡಿ. ಈ ವಾರ್ತೆ ಇ೦ದಿನ ಟೈಮ್ಸ್ ಆಪ್ ಇ೦ಡಿಯಾದಲ್ಲಿ ಬ೦ದಿದೆ. ಇದರ ಕೊ೦ಡಿ ನಕಲಿಸಲು ಕಷ್ಟವಾದ್ದರಿ೦ದ ಪೂರ್ಣ ಲೇಖನದ ತುಣುಕನ್ನ ಅ೦ಟಿಸುತ್ತಿದೇನೆ.
Naxal sympathisers enter the scene now
Rakesh Prakash | TNN
Bangalore: The terror trail has led the intelligence sleuths to more worrisome news: of Naxal sympathisers entering the scene in the name of human rights.
Investigations have revealed that a frontal organisation of Naxals has rallied behind the family of Glasgow bombing suspects Kafeel Ahmed and Sabeel Ahmed in providing them legal and logistical support.
“We really don’t understand why these sympathisers have to get involved in jihadi terror. This kind of cross-fertilisation of sympathies portends a dangerous trend,’’ police said. Two prominent Bangalore-based Naxal sympathisers have come under the spotlight following interception of a few telephonic talk in the past fortnight.
According to sources, these Naxal sympathisers were instrumental in getting two advocates for the doctor couple Maqbool Ahmed and Zakia, parents of the terror suspects. “The couple had not pleaded for legal assistance when they realised their sons had been detained in UK, but the Naxal sympathisers rushed them unsolicited legal help.’’
The advocates, R M Javed and B T Venkatesh, during their interactions with the media, said they had been engaged by a Mumbai-based rights network, which thought it necessary to help the family in distress.
“But investigations have shown that the local human rights activists who have liaised between the family members and the advocates are actually Naxal sympathisers,’’ the sleuths said. In fact, one of them was sighted visiting the house of the Ahmeds when entry to relatives and media was completely barred. Intelligence inputs have quoted the activist as saying: “I went inside to console the Ahmeds.’’
“We are looking into this angle as it is a serious security issue. There have been several instances of different terror groups establishing linkages under similar circumstances. Our Mumbai counterparts have been alerted to check the antecedents of the human rights network,’’ the sleuths maintained.
ಅಣ್ಣಾವರ ಹಾಡಿನ ಒ೦ದು ತುಣುಕು ಇಲ್ಲಿ ನೆನಪಿಗೆ ಬರುತ್ತದೆ "ನಗುವುದೋ ಅಳುವುದೋ ನೀವೇ ಹೇಳಿ! ಈ ಜನರ ಮದ್ಯ ನಾನು ಹೇಗೇ ಬಾಳಲಿ..ನಗುವುದೋ ಅಳುವುದೋ..."
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
೧. ಪ್ರತಿಯೊಬ್ಬನಿಗೂ ವಕೀಲರನ್ನು ನಿಯೋಜಿಸಿಕೊಳ್ಳುವ ಹಕ್ಕು ಇದೆ. ( ಹೌದು - ಅತ್ಯಂತ ನೀಚ ಅಪರಾಧಿಗೂ ಕೂಡ ). ಈ ರೀತಿ ಇರುವಾಗ ಕಫೀಲ್ ಅಹ್ಮದ್ ತಂದೆ ತಾಯಂದಿರಿಗೆ ಅದನ್ನು ಕೊಡಬಾರದು ಎನ್ನಲು ಯಾವ ಆಧಾರ ಇದೆ? ಅವರನ್ನೂ ಅಪರಾಧಿಗಳನ್ನಾಗಿ (ಅಪರಾಧ ಸಾಬೀತಾಗದೆ) ಮಾಡಲು ಪತ್ರಕರ್ತರಿಗಾಗಲೀ, ಪೋಲೀಸರಿಗಾಗಲೀ ಹಕ್ಕಿಲ್ಲ. ಅಷ್ಟಕ್ಕೂ ಯಾರದೋ ದುಡ್ಡು ( ವಕೀಲ = ದುಡ್ಡು
) ನಮಗೇಕೆ ಉರಿ? ಅಕಸ್ಮಾತ್ ಕಫೀಲನ ತಂದೆ-ತಾಯಂದಿರೂ ಇದರಲ್ಲಿ ಭಾಗಿಯಾಗಿದ್ದರೆ, ಕೇಸು ಹಾಕಿ ಕೋರ್ಟಿಗೆ ಹೋದರೆ, ಅವರಿಗೆ ವಕೀಲರು ಸಿಕ್ಕದೇ ಹೋದರೆ, (ರೆ-ರೆ-ರೆ....), ಅವರ ಪರವಾಗಿ ನ್ಯಾಯಾಲಯವೇ ವಕೀಲರನ್ನು ನೇಮಿಸುತ್ತದೆ. ಆಗ TNNನವರು ಹೀಗೆ ಬರೆಯುತ್ತಾರೋ?
೨. ನಕ್ಸಲರೂ ರಾಜಕಾರಣಿಗಳೇ ಸ್ವಾಮಿ. ಅವರಿಗೂ ಅವರ ಅಜೆಂಡಾ ಸಾಧಿಸಲು ಹಣಕಾಸು-ಬೆಂಬಲದ ಅವಶ್ಯಕತೆ ಇದೆ. ಇದೆಲ್ಲಾ ಮಾಡಲು ಅವರು ತುಳಿಯಲ್ಪಟ್ಟಿದ್ದಾರೆ ಎಂದು ಅನಿಸಿದವರ ಸಹಾಯಕ್ಕೆ ಧಾವಿಸುವ ಮುಖವಾಡ ಹಾಕುತ್ತಾರೆ. ಅದಕ್ಕೂ ಹೆಚ್ಚಾಗಿ ಮಾರ್ಕ್ಸಿಸಂನ (ಹಾಗೂ ಅದರ ಉಪಜಾತಿಗಳ) "comradeship"ಗೂ, ಮುಸ್ಲಿಮರ "brotherhood"ಗೂ ಬಹಳ ಹೋಲಿಕೆಗಳಿವೆ. "ಅತ್ತೂ ಕರೆದೂ ಔತಣ ಹಾಕಿಸಲಿಕ್ಕೆ" ಇದೂ ಕಾರಣ ಇರಬಹುದು.
ಕೊಸರು: ಪಾಪ ಆ ಪತ್ರಿಕಾ ಪ್ರತಿನಿಧಿಗೆ ಎಲ್ಲೋ ಮಾತಾಡಿಸುವ ಅವಕಾಶ ನಿರಾಕರಿಸಿರಬೇಕು. ಅದಕ್ಕೇ ಸ್ವಲ್ಪ ಮುನಿಸಿಕೊಂಡು ಬರ್ದಿದ್ದಂತಿದೆ.
ಕೊತ್ತಂಬರಿ: ಲಿಬರಲ್ ಅಥವಾ ವಿಚಾರವಾದಿ ಅಥವಾ "ನಕ್ಸಲ್ ಬೆಂಬಲಿಗ" ( ಗಮನಿಸಿ ನಕ್ಸಲ್ ಬೇರೆ ಜಾತಿ!!) ಆಗೋದು ಹೇಗೆ? ಇಲ್ಲಿದೆ ನೋಡಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಶ್ರೀನಿಧಿ,
ಪಾಯಿಂಟ್ ನಂ ೧. ಏಕೋ ನೀವು ಆ ವರದಿಯನ್ನು ಸರಿಯಾಗಿ ತಿಳಿದುಕೊಂಡಿಲ್ಲವೆನಿಸುತ್ತದೆ. ವರದಿ, ಆತಂಕ ವ್ಯಕ್ತಪಡಿಸಿರುವದು, ಬಾಂಬ್ ದಾಳಿ ಮಾಡಿರುವವರ ಪಾಲಕರು ಯಾವುದೇ ಸಹಾಯ ಮಾಡಲು ಯಾಚಿಸದಿದ್ದಾಗಲೂ ಅವರು ಮೈಮೇಲೆ ಬಿದ್ದು ಸಹಾಯಕ್ಕೆ ಧಾವಿಸುತ್ತಿರುವ ಕಾರಣವೇನು? ಇದು ಕೇವಲ ಮೇಲೆ ಕಾಣುವಂತೆ ’ಮಾನವೀಯ’ ವರ್ತನೆಯೇ? ಅಥವಾ ಇನ್ನೊಬ್ಬ ’ಅಫ್ಜಲ್ ಗುರು’ ವನ್ನು ಹುಟ್ಟಿಸುವ ತಯಾರಿಯೇ? ಕೇವಲ ಮಾನವೀಯ ವರ್ತನೆಯಿಂದಾದರೆ ಯಾರೂ ಆತಂಕ(ಮುಖ್ಯವಾಗಿ ಪೋಲಿಸರು) ಪಡುವದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಇದು ಸರ್ಕಾರದ ವಿರುದ್ಧ ಮತೀಯವಾದಿಗಳ ಜೊತೆ ಸೇರಿ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿರಬಹುದು.
ಮತ್ತು ಈ ನಕ್ಸಲ್ ಬೆಂಬಲಿಗರಾರಿಬಹುದು? ಹಾಗೂ ಮುಂಬಯಿ ಮಾನವ ಹಕ್ಕುಗಳ ಸಂಸ್ಥೆ ಯಾವುದು? ಅದರ ಪದಾಧಿಕಾರಿಗಳಿಗೂ ಇಲ್ಲಿಯ ಬೆಂಬಲಿಗರಿಗೂ ಯಾವ ರೀತಿ ದೋಸ್ತಿ ಇದೆ ಎನ್ನುವದನ್ನು ನಾವೆಲ್ಲಾ ವಿಚಾರಿಸಬೇಕು.
ಏನೇ ಆಗಲಿ, ಪೋಲಿಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲಾ ಬೆಂಬಲಿಸಬೇಕು.
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಮೈಮೇಲೆ ಬಿದ್ದು ಸಹಾಯ ಮಾಡಿದರೂ ಅವರ ಅನುಮತಿ ಇಲ್ಲದೆ ಅವರ ಪರವಾಗಿ ವಕೀಲರು ವಾದ ಮಾಡುವಂತಿಲ್ಲ. ಅವರಾಗಿಯೇ ಕೇಳಿಯೋ ಅಥವಾ ಅಲ್ಲವೋ, ಕಾರಣಕ್ಕಿಂತ ಅವರನ್ನು ಪ್ರತಿನಿಧಿಸಲು ಆ ವಕೀಲರಿಗೆ ಅನುಮತಿ ಇದೆ ಅಷ್ಟೆ. ಅದಕ್ಕಾಗಿ ಯಾರೂ ಆತಂಕ ಪಡಬೇಕಿಲ್ಲ ಅನ್ನಿಸುತ್ತದೆ. ಕಫೀಲನ ಬಂಧುಗಳ ತಪ್ಪಿದ್ದರೆ ಪೋಲೀಸರು ಅವರ ಮೇಲೂ ತನಿಖೆ ನಡೆಸಲು ಪೋಲೀಸರಿಗೂ ಹಕ್ಕಿದೆ. ಆತಂಕ ಪಟ್ಟು ಸುಮ್ಮನೆ ಕುಳಿತರೆ ಸಾಕಾಗುವುದಿಲ್ಲ. ತನಿಖೆ ನಡೆಸಿ ಕೇಸು ಹಾಕಬೇಕಷ್ಟೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
"ನಕ್ಸಲರೂ ರಾಜಕಾರಣಿಗಳೇ ಸ್ವಾಮಿ." - ಆದರೆ ನಮ್ಮ ರಾಜಕಾರಣಿಗಳು ಕಾಡಿನಲ್ಲಿ ಬಂದೂಕು ಬಾಂಬ್ ಹಿಡಿದುಕೊಂಡು ತಿರುಗಾಡುವದಿಲ್ಲವಲ್ಲ. ಹಾಡುಹಗಲೇ ಸರ್ಕಾರದ ಖಜಾನೆಯನ್ನ ತಿಂದು ತೇಗುತ್ತಾರೆ ವಿನಃ ನಡುರಾತ್ರಿ ಇನ್ನೊಬ್ಬರ ಮನೆಗೆ ಹೋಗಿ ದುಡ್ಡು ದರೋಡೆ ಮಾಡುವದಿಲ್ಲ! ಹೀಗಾಗಿ ನಕ್ಸಲ್ ರನ್ನ ರಾಜಕಾರಣಿಗಳು ಅನ್ನಬಹುದೇ?
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಒಂದು ಕತ್ತೆ ಊರಿನಲ್ಲಿ ಮೋಟುಗೋಡೆಯ ಬಳಿ ಬ್ಯಾಂಕಿನ ಪೇಪರ್ ತಿನ್ನುತ್ತದೆ. ಮತ್ತೊಂದು ಬೇರೆಯವರ ಗದ್ದೆಗೆ ನುಗ್ಗಿ ಪಯಿರು ಮೇಯುತ್ತದೆ. ಆದರೂ ಎರಡೂ ಕತ್ತೆಗಳೇ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ನಕ್ಸಲಿಸಂ ಭಾರತದ್ಲ್ಲಿ ಶುರುವಾದದ್ದು ಒಂದು ಚಳುವಳಿಯಾಗಿ ಹಾಗೂ ನೇಪಾಳದಲ್ಲಿ ಆದಂತೆ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅದಕ್ಕೆ ಯಾವ ರಾಜಕೀಯ ಆಯಾಮವೂ ಇಲ್ಲ. ನಕ್ಸಲೀಯರೂ ರಾಜಕಾರಣಿಗಳೇ ಎನ್ನುವ ನಿಮ್ಮ ಅಭಿಪ್ರಾಯ ತಪ್ಪು. ಆದರೆ ನಕ್ಸಲ್ ಬೆಂಬಲಿಗರದು ’ರಾಜಕೀಯ’ ಅಂದರೆ ಪರವಾಗಿಲ್ಲ.
ಅದೆಲ್ಲೋ ದೂರದ ದೇಶದಲ್ಲಿ ಒಬ್ಬ ಹುಡುಗ ಭಯೋತ್ಪಾದನೆಯ ಆರೋಪದಲ್ಲಿ ಬಂಧಿತನಾದಾಗ ಆತನ ಕುಟುಂಬದ ವಿಚಾರಣೆ ನಡೆಸಿ ದೊರೆಯಬಹುದಾದ ಮಾಹಿತಿಯನ್ನು ಪಡೆಯುವುದು ಪೊಲೀಸರ ಕರ್ತವ್ಯ ಅವರದನ್ನು ಮಾಡಿದ್ದಾರೆ. ಅವರನ್ನು ಇಂಟರಾಗೇಟ್ ಮಾಡಲು ಇಂಗ್ಲೆಂಡಿನ ಪೊಲೀಸರ ಅನುಮತಿಯನ್ನೇನು ಪಡೆಯಬೇಕಿಲ್ಲ. ಹೀಗೆ ಇಂಟರಾಗೇಟ್ ಮಾಡಿದ ನಂತರ ಅವರ ಮೇಲೆ ಆರೋಪ ಪಟ್ಟಿ ದಾಖಲಿಸಿದರೆ ತಮಗೆ ಲಾಯರನ್ನು ನೇಮಿಸಿಕೊಳ್ಳಲು ವೈದ್ಯ ದಂಪತಿಗಳಾದ ಹಾಗು ಸೌಕರ್ಯಗಳಿರುವ ಅವರಿಗೆ ಸಾಧ್ಯವಿದೆ. ಇದರಲ್ಲಿ ನಕ್ಸಲರ ಬೆಂಬಲಿಗರದ್ದೇನು ರಾಜಕೀಯ? ನಾವು ನಿಮ್ಮ ಮಗ ಮಾಡಿದ ಕೆಲಸವನ್ನು ಬೆಂಬಲಿಸುತ್ತೇವೆ ಎಂದು ಅವರು ಪ್ರತಿಪಾದಿಸಿದಂತಾಗುವುದಿಲ್ಲವೇ? ಈ ಆಶಾಡಭೂತಿತನದಿಂದಾಗಿ ಜನ ರೋಸೆದ್ದಿದ್ದಾರೆ.
ಕೊನೆಯಲ್ಲಿ ಶ್ರೀನಿಧಿಯವರು ಆ ವರದಿಯ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆಯೋ ಅಥವಾ ನಕ್ಸಲೀಯರ ಚಟುವಟಿಕೆ ಗಾಬರಿ ತರುವಂಥದ್ದೇನಲ್ಲ ಎಂದು ಪ್ರತಿಪಾದಿಸುತ್ತಿದ್ದಾರೋ ಸ್ಪಷ್ಟವಾಗಲಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಕೊನೆಯಲ್ಲಿ ಶ್ರೀನಿಧಿಯವರು ಆ ವರದಿಯ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆಯೋ ಅಥವಾ ನಕ್ಸಲೀಯರ ಚಟುವಟಿಕೆ ಗಾಬರಿ ತರುವಂಥದ್ದೇನಲ್ಲ ಎಂದು ಪ್ರತಿಪಾದಿಸುತ್ತಿದ್ದಾರೋ ಸ್ಪಷ್ಟವಾಗಲಿಲ್ಲ
ಹೆ ..
ನಾನು ನನ್ನ ಹಿಂದಿನ ಕಾಮೆಂಟಿನಲ್ಲಿ ಕೊಟ್ಟ ೨ನೇ ಕಾರಣ ನೋಡಿ ..
ನಕ್ಸಲೀಯರ ಚಟುವಟಿಕೆ ಗಾಬರಿ ತರುವಂಥದಲ್ಲ ಎಂದು ನಾನು ಹೇಳಿಲ್ಲ. ಆದರೆ ಪೋಲೀಸರು ಆತಂಕ ತೋರಿಸಿಕೊಂಡರೆ ಚೆನ್ನಾಗಿರೋದಿಲ್ಲ. ತನಿಖೆ ನಡೆಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅನ್ನುವುದು ನನ್ನ ಅಭಿಪ್ರಾಯ. ನಕ್ಸಲ್ ಬೆಂಬಲಿಗರ ಮೇಲೂ TADA ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಬೇಕು.
ಕೆಲ ವರ್ಷಗಳ ಹಿಂದೆ : ಮನೆಗೆ ಬಂದ ಅತಿಥಿಯನ್ನು ಅವನು ಯಾರು ಎಂದು ತಿಳಿಯದೇ ಇದ್ದರೂ ಪ್ರೀತಿಯಿಂದ ಮಾತಾಡಿಸುತ್ತಿದ್ದ ಮಲೆನಾಡಿನ ಜನರೆಲ್ಲಿ?
ಇಂದು : ಮನೆಗೆ ಪರಿಚಯದವರು ಬಂದರೂ ಆತ ನಕ್ಸಲನಿರಬಹುದೇ ಎಂದು ಅನುಮಾನದಿಂದಲೇ ಕಿಟಕಿಯಿಂದ ಮಾತಾಡಿಸುವ ಜನರೆಲ್ಲಿ? ಇದು ನಕ್ಸಲರ ಭಯೋತ್ಪಾದನೆಯಲ್ಲದೇ ಮತ್ತೇನು?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ನಕ್ಸಲ್ ರಿಂದಾಗಿ ಮಲೆನಾಡಿನ ಜನತೆ ಹೇಗೆ ಬದಲಾಗಿದ್ದಾರೆ, ಅನುಮಾನ ಪಡುವವರಾಗಿದ್ದಾರೆ ಎಂಬುದನ್ನ ಚೆನ್ನಾಗಿ ಹೇಳಿದ್ದೀರಿ.
ಇಷ್ಟಕ್ಕೂ ಈ ನಕ್ಸಲ್ ರಿಗೆ ಮಲೆನಾಡಿನ ಮೇಲೆ ಅದ್ಯಾಕೆ ಅಷ್ಟೊಂದು ಪ್ರೀತಿಯೊ ಗೊತ್ತಿಲ್ಲ. ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳು ಎಲ್ಲ ರೀತಿಯಲ್ಲಿಯೂ ನಿಜವಾಗಿ ಹಿಂದುಳಿದ ಜಿಲ್ಲೆಗಳು. ಶೈಕ್ಷಣಿಕ ಸೌಲಭ್ಯ, ನೀರಾವರಿ, ಕೃಷಿ, ಮೂಲಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಇತ್ಯಾದಿಗಳಿಗೂ ಜನ ಪರದಾಡುತ್ತಾರೆ ಮತ್ತು ಈಗೀಗ ಜನರೂ ಕೂಡ ಸಮಸ್ಯೆಗಳಿಗೆ ಹೊಂದಿಕೊಂಡು ಬದುಕುತ್ತಿದ್ದಾರೆ!
ನಿಜವಾಗಿ ಬದಲಾವಣೆ ತರಬೇಕಾದದ್ದು ಅಲ್ಲಿಯ(ಉತ್ತರ ಕರ್ನಾಟಕದ) ಜನರಲ್ಲಿ, ಅದು ಬಿಟ್ಟು ಎಲ್ಲ ರೀತಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗಿಂತ ಮೊಂದುವರಿದಿರುವ ಮಲ್ನಾಡ ಜಿಲ್ಲೆಗಳಿಗಾಗಿ, ಅಲ್ಲಿಯ ಪುಟಗೋಸಿ ಸಮಸ್ಯೆಗಳಿಗಾಗಿ ನಮ್ಮ ರಾಯಚೂರು, ಬೀದರ್, ಗುಲ್ಬರ್ಗಾದ ಹುಡುಗ/ಹುಡುಗಿಯರನ್ನ ಒಯ್ದು ಈ ನಕ್ಸಲರು ಸಿದ್ಧಾಂತದ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾರಲ್ಲ! ಇವರಿಗೆಲ್ಲಾ ಯಾವುದರಿಂದ ಬಾರಿಸಬೇಕು?
ಅವರಿಗೆ ನಿಜವಾದ ಧೈರ್ಯವಿದ್ದರೆ ಕಾಡಿನ ನಡುವೆ ಅವಿತುಕೊಂಡು ಬಾಂಬ್ ಎಸೆಯುವ, ದರೋಡೆ ಮಾಡುವ ವೃತ್ತಿ ಬಿಟ್ಟು ನಮ್ಮ ಬಯಲು ಸೀಮೆಯಲ್ಲಿ ಬಂದು, ನೀರು ಕಾಣದೆ ಬಿರುಕು ಬಿಟ್ಟ ಗದ್ದೆಗಳ ಮಧ್ಯೆ ಕ್ರಾಂತಿ ಮಾಡಲಿ. ಕಬ್ಬಿಗೆ ನಿಜವಾದ ಬೆಂಬಲ (ಬೆಲೆ ಅಥವಾ ಕಾರ್ಖಾನೆ) ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನಿಗೆ ಸಾಂತ್ವನ ಹೇಳಲಿ. ಹಳ್ಳಿ, ಹಳ್ಳಿಗೂ ಸ್ವಚ್ಛ ಕುಡಿಯುವ ನೀರು, ಕನಿಷ್ಟ ೧ ಪ್ರಾಥಮಿಕ ಶಾಲೆ, ಆರೈಕೆಗಾಗಿ ಪ್ರತಿ ಹಳ್ಳಿಯಲ್ಲಿ atleast ಡಾಕ್ಟರ್ ಇಲ್ಲಾಂದ್ರೆ ಕೊನೆಪಕ್ಷ ಒಬ್ಬ ನರ್ಸ್ ಸಿಗುವಂತೆ ಮಂತ್ರಿ ಮಹೋದಯರಿಗೆ ಬೆನ್ನತ್ತಿ ಕಾಡಲಿ.
ನಮ್ಮಲ್ಲಿ ಎಷ್ತೊಂದು ಲಂಬಾಣಿ ತಾಂಡಾಗಳಲ್ಲಿ ಇವತ್ತಿಗೂ ಈ ಅನೇಕ ಮೂಲಸೌಲಭ್ಯಗಳಿಲ್ಲ. ಅವಕ್ಕ್ಯಾಕೆ ಇವರು ಒತ್ತಾಯ ಮಾಡುವದಿಲ್ಲ?
ಅದೆಲ್ಲಾ ಬಿಟ್ಟು ಕಳ್ಳರಂತೆ ಕಾಡಿನಲ್ಲಿ ಅವಿತುಕೊಂಡು ಜನರನ್ನ ಭಯಭೀತರನ್ನಾಗಿ ಮಾಡಿ ಯಾವ ಅಭಿವೃದ್ಧಿಯನ್ನ ಈ ಜನ ಮಾಡಬಲ್ಲರು?
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ನಕ್ಸಲರೇ ಬಯಲು ಸೀಮೆಗೆ ಬನ್ನಿ ಎಂಬ ನಿಮ್ಮ ತೆರೆದ ಆಹ್ವಾನ ಭಯ ಹುಟ್ಟಿಸುತ್ತಿದೆ. ತಮ್ಮೂರು ಬಯಲುಸೀಮೆಯೇ?
*ಅಶೋಕ್
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಹೌದು ! ಪಕ್ಕಾ ಗಂಡು ಮೆಟ್ಟಿನ ಪ್ರದೇಶ ನಮ್ಮದು.
ಕರೆದರೂ ಅಲ್ಲಿಗೆ ಯಾರೂ ಬರುವದಿಲ್ಲ. ನೀವು ಹೆದರಬೇಡಿ
ಬೆಂಗಳೂರು ಕಡೆಯವರಿಗೆ ನಮ್ಮ ಜಿಲ್ಲೆಗಳಿಗೆ ವರ್ಗವಾದರೆ ಅದನ್ನೊಂದು ಶಾಪ, ಶಿಕ್ಷೆ ಎನ್ನುವದನ್ನು ನೋಡಿದ್ದೇನೆ !
ಅದೆಲ್ಲಾ ಬಿಡಿ, ನಮ್ಮ ಕಡಿಯ ರಾಜಕಾರಣಿಗಳೇ ಗೆದ್ದ ಮ್ಯಾಲ ಬೆಂಗಳೂರಿನಲ್ಲಿ ಠಿಕಾಣಿ ಹೊಡೆಯುತ್ತಾರೆ, ಇಲ್ಲವಾದರೆ ನಾಲ್ಕಾರು ಪ್ರಭಾವಿ ಮಂತ್ರಿಗಳನ್ನ ಮಂತ್ರಿ ಮಂಡಲಕ್ಕೆ ದಂಡ ಮಾಡಿರುವ ಗುಲ್ಬರ್ಗಾ ಎಂದೋ ಉದ್ಧಾರವಾಗಬೇಕಿತ್ತು ! ಅದು ಆಗಿಲ್ಲಾಂದ ಮ್ಯಾಲೆ ಈ ನಕ್ಸಲರು ಕೂಡ ಏನೂ ಮಾಡಲಿಕ್ಕಿ ಸಾಧ್ಯ ಇಲ್ಲ ಅನ್ನು ಖಾಯಸ್ ನನಗ ಅದ. ಹಿಂಗಾಗಿ ಸಿದ್ಧಾಂತ ಪಿದ್ಧಾಂತ ಅಂತ ಏನರೇ ಇವರು ಅಕಡಿ ಬಂದ್ರ ಸುಮ್ಮನಿ ಸತ್ತ ಹೋಗ್ತಾರ ಅಷ್ಟೇ !
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ಮೊನ್ನೆ ನಡೆದ ಎನಕೌಂಟರ್ ಗೆ ಇವತ್ತು ಪತ್ರಿಕೆಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ನಮ್ಮ ರಾಜಕಾರಣಿಗಳು ಎಷ್ಟೊಂದು ನಿರ್ಲಜ್ಜರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಮುಖ್ಯವಾಗಿ ನಮ್ಮ ರಾಜ್ಯದ ಮಾಜಿ ಮು.ಮಂ ಮತ್ತು ಮಾಜಿ ಸ್ಪೀಕರ್ ಇವರು ಕೊಟ್ಟಿರುವ ಹೇಳಿಕೆಗಳನ್ನು ಓದಲಿಕ್ಕೂ ಅಸಹ್ಯವೆನಿಸುತ್ತದೆ. ತಲೆಯಿರುವ ಜಾಗದಲ್ಲಿ ಇವರಿಗೆ ಮತ್ತೇನಾದರೂ ಇದೆಯಾ ಎಂದು ಅನುಮಾನವುಂಟಾಗುತ್ತದೆ.