’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ.
ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ.
ಕೆಲವರು ದುಡ್ಡಿಗಾಗಿ, ಕೆಲವರು ದ್ವೇಷಕ್ಕಾಗಿ, ಕೆಲವರು ಹೆಸರಿಗಾಗಿ ಹೀಗೆ ನೂರೆಂಟು ಕಾರಣಕ್ಕೆ ’ಆವರಣ’ದ ಸುತ್ತಮುತ್ತ ಕೃತಿಗಳು ಮತ್ತು ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಒಳ್ಳೆಯದು, ಇನ್ನೊಂದು ರೀತಿಯಲ್ಲಿ ಇದು ಕೆಟ್ಟದ್ದು.
ಒಟ್ಟಿನಲ್ಲಿ "ಏನಕೇನಪ್ರಕಾರೇಣ...." ಎಂಬಂತಿದೆ ಈಗಿನ ಪರಿಸ್ಥಿತಿ.

- jaiguruji ರವರ ಬ್ಲಾಗ್
- Login or register to post comments
- 458 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕ ಬಿಡುಗಡೆ ಹಾಗೂ ಬಿಡುಗಡೆ ಸಮಾರ೦ಬಗಳು ಕಡಿಮೆಯಾಗಿದ್ದುವು. ಅವರಣ ಕೃತಿಯ ಬಿಡುಗಡೆ ಈ ಕೊರತೆಯನ್ನ ನೀಗಿಸಿದೆ!. ಇನ್ನಷ್ಟು ??-ಕೃತಿ ಗಳನ್ನ ನೀರಿಕ್ಷಿಸಿ.
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
ಆದ್ರೆ..ವಿಚಿತ್ರ ನೋಡಿ. ’ಆವರಣ’ ಬಿಡುಗಡೆಗೆ ಭೈರಪ್ಪ ಅಥವಾ ಸಾಹಿತ್ಯ ಭಂಡಾರದವರು ಯಾವುದೇ ಸಮಾರಂಭ ಮಾಡಲಿಲ್ಲ. ಆದರೆ ಅದರ ಮೇಲೆ ಬರೆದಿರೋ ಸಣ್ಣ ಸಣ್ಣ bookletಗಳ(ಉದಾ: ಎನ್.ಎಸ್. ಶಂಕರ ಬರೆದಿರೋ ’ಆವರಣ ಅನಾವರಣ’, ಅದಕ್ಕೆ ಪುಸ್ತಕ ಅನ್ನಲು ಸಾಧ್ಯವಿಲ್ಲ.) ಬಿಡುಗಡೆಗೆ ದೊಡ್ಡ ದೊಡ್ಡ ಸಮಾರಂಭ ಮಾಡಿ ತಮ್ಮ ತಮ್ಮ ’ಉದ್ದೇಶ’ ಈಡೇರಿಸಿಕೊಳ್ಳುತ್ತಿದ್ದಾರೆ. ನಾನು ಅಂಕಿತದಲ್ಲಿ ಭೈರಪ್ಪ ಮತ್ತು ಆವರಣದ ಸುತ್ತಮುತ್ತ ಗಿರಕಿ ಹೊಡೆಯುವಂತಹ ೩-೪ ಪುಸ್ತಕಗಳನ್ನ ನೋಡಿದೆ. ಏನೇ ಇರಲಿ, ಜನ ಚರ್ಚಿಸುತ್ತಿದ್ದಾರೆ, ಒಂದು ರೀತಿಯಲ್ಲಿ ಒಳ್ಳೆಯದೆ.
ಅದ್ರೂ ನಮ್ಮ ಕಡಿ ಮಾತನಾಗ ಹೇಳಬೇಕಂದ್ರ "ಮೂಗಿಗಿಂತ ಮೂಗಬಟ್ಟ ವಜ್ಜಿ ಆಗ್ಲಿಕತ್ತೇದ" (ಮೂಗಿಗಿಂತ ಮೂಗುತಿ ಭಾರ!)
ಆದದ್ದೆಲ್ಲಾ ಒಳಿತೆ ಆಯಿತು!
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
ನಾನೂ ಆ ಪುಸ್ತಕನ ಸ್ವಪ್ನ ಬು ಹೌಸ್ ನಲ್ಲಿ ನೋಡಿದೆ. ಗೌರಿ ಲಂಕೇಶ್ ಅವರು ಸಂಪಾದಿಸಿದ್ದಾರೆ. ಶ್ರೀ ಪೂ ಚಂ ತೇ, ಅನಂತ ಮೂರ್ತಿ, ಲಂಕೇಶ್ ಮೊದಲಾದವರ ಹೇಳಿಕೆಗಳ ಸಂಗ್ರಹ.
ಅಂದ ಹಾಗೆ ನಮ್ಮ ಕಡೆ ಅದನ್ನು "ಮಂತ್ರಕ್ಕಿಂತ ಉಗುಳೇ ಹೆಚ್ಚು" ಅಂತಾರೆ