ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › jaiguruji ರವರ ಬ್ಲಾಗ್

ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

April 27, 2007 - 12:50pm — jaiguruji

ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು.

ಕೆಲ ದಿನಗಳ ಹಿಂದೆ ಪ್ರತಾಪ ವಿಜಯ ಕರ್ನಾಟಕದ ಬೆತ್ತಲೆ ಜಗತ್ತು ಅಂಕಣದಲ್ಲಿ ಅವರ ಬಗ್ಗೆ ಬರೆದಿದ್ದರು. ಪುನಃ ಇವತ್ತು ಅದರ ಸಾರಾಂಶವನ್ನು ವಿಕದಲ್ಲಿ ಮುದ್ರಿಸಿದ್ದಾರೆ. ವಿದ್ಯಾನಂದರ ಕಣ್ಮರೆಯಿಂದ ನಮ್ಮ ಮುಂದಿನ ಪೀಳಿಗೆ ಅವರ ಭಾರತ ದರ್ಶನ ಉಪನ್ಯಾಸದಿಂದ ವಂಚಿತರಾಗಲಿದ್ದಾರೆ. ಒಬ್ಬ ವ್ಯಕ್ತಿ ಒಂದೆರಡು ಪೀಳಿಗೆಯ ಮೇಲೆ ಯಾವ ರೀತಿ ಪ್ರಭಾವ ಬೀರಬಲ್ಲರು ಎಂಬುದಕ್ಕೆ ಅವರು ಸಾಕ್ಷಿ. ಅವರ ವಾಗ್ಝರಿಯಿಂದ ಭವ್ಯ ಭಾರತದ ಇತಿಹಾಸವನ್ನು ಕೇಳುತ್ತಿದ್ರೆ ಎಂತಹ ವ್ಯಕ್ತಿಯಲ್ಲಿಯೂ ಕೂಡ ರೋಮಾಂಚನವುಂಟಾಗುವದು, ಒಂದು ಕ್ಷಣವಾದರೂ ಇಂತಹ ದೇಶದಲ್ಲಿ ಹುಟ್ಟಿದ ನಾವು ಧನ್ಯ ಎಂಬ ಭಾವನೆ ಬರುವದು.

೭೦ ರ ದಶಕದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ನಗರಸಭೆಯ ಸದಸ್ಯರಾಗಿದ್ದ ಅವರು ಬಯಸಿದ್ದರೆ ರಾಜಕೀಯದಲ್ಲಿಯೆ ಮುಂದುವರಿದು ಏನೇನೋ ಆಗಬಹುದಿತ್ತು, ಬಹುಶಃ ಗೂಟದ ಕಾರಿನಲ್ಲಿಯೂ ತಿರುಗಬಹುದಿತ್ತು. ಆದರೆ ಅದೆಲ್ಲವನ್ನು ತ್ಯಾಗ ಮಾಡಿ ಸಂಘಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟರು. ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಹಗಲಿರುಳು ಶ್ರಮಿಸಿದರು. ಅವರಿನ್ನೂ ನಮ್ಮ ಮಧ್ಯೆ ಇರಬೇಕಾಗಿತ್ತು, ಇಂದಿನ ವಿಧ್ಯಭ್ಯಾಸ ಪದ್ಧತಿಯಲ್ಲಿ ಶಾಲೆ ಕಲಿತು ಹೊರಬರುವ ಯುವ ಪೀಳಿಗೆಗೆ ಭಾರತದ ಹಿರಿಮೆ ಗರಿಮೆಗಳನ್ನು ತಿಳಿಸಿಕೊಡುವದು ಅತ್ಯಂತ ಅವಶ್ಯಕವಾಗಿದೆ, ಅದಕ್ಕೆ ವಿದ್ಯಾನಂದರಕ್ಕಿಂತಲೂ ಸೂಕ್ತ ವ್ಯಕ್ತಿ ಬೇರಿಲ್ಲ.

ಅವರು ಬಿಟ್ಟುಹೋಗಿರುವ ಕಾರ್ಯವನ್ನು ಮುಂದುವರಿಸುವದೆ ನಾವೆಲ್ಲಾ ಅವರಿಗೆ ಸಲ್ಲಿಸಬಹುದಾದ ನಿಜವಾದ ಶೃದ್ಧಾಂಜಲಿ. ಅವರು ಭಾರತ ದರ್ಶನ ಕಾರ್ಯಕ್ರಮವನ್ನು ಆಧರಿಸಿ ಹೊರಬಂದಿರುವ ಪುಸ್ತಕ ಅನೇಕ ವಾರ ಟಾಪ್ ಟೆನ್ ನಲ್ಲಿ ಇತ್ತು. ನಾವೆಲ್ಲಾ ಅವರ ಪುಸ್ತಕ ಒದೋಣ, ಭಾರತ ದರ್ಶನ ಧ್ವನಿಮುದ್ರಿಕೆಯನ್ನು ಮತ್ತೆ ಮತ್ತೆ ಕೇಳೋಣ. ಸಾಧ್ಯವಾದರೆ ನಾವೂ ಕೂಡ ಭಾರತ ದರ್ಶನದಂತಹ ಕಾರ್ಯಕ್ರಮ ಮಾಡಲು ಪ್ರಯತ್ನಿಸೋಣ. ಇವತ್ತು ಮಧ್ಯಾಹ್ನ ೩ ಘಂಟೆಗೆ ಶೃದ್ಧಾಂಜಲಿ ಸಭೆ ಮತ್ತು ಅಂತಿಮ ದರ್ಶನವನ್ನು ಕೇಶವ ಶಿಲ್ಪದಲ್ಲಿ ಏರ್ಪಡಿಸಲಾಗಿದೆ.

ವಿಳಾಸ: ಕೇಶವ ಶಿಲ್ಪ, ರಾಷ್ಟ್ರೋತ್ಥಾನ ಪರಿಷತ್ , ಉಮಾ ಥೇಟರ್ ಹತ್ತಿರ, ಚಾಮರಾಜ ಪೇಟೆ, ಬೆಂಗಳೂರು.

  • ಕನ್ನಡ
  • ಭಾರತ ದರ್ಶನ
  • ವಿದ್ಯಾನಂದ ಶೆಣೈ
~.~
  • jaiguruji ರವರ ಬ್ಲಾಗ್
  • Login or register to post comments
  • 458 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 27, 2007 - 10:25pm — venkatesh

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

venkatesh's picture

ಶೆಣೈ ರವರ ನಿಧನ ನಮಗೆಲ್ಲಾ ತೀವ್ರವಾದ ದುಃಖವನ್ನು ತಂದಿದೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2007 - 11:09am — muralihr

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

muralihr's picture

ಸತ್ತವೆರಿಗೆಲ್ಲಾ ದು:ಖ ಪಡುವುದು ಅನಗತ್ಯ.
ಎಷ್ಟು ಜನಕ್ಕೆ ದು:ಖ ಪಡಬಹುದು ಸ್ವಾಮಿ ನೀವು - ಮೊನ್ನೆ ತೇಜಸ್ವಿ , ಅದಾದ ಮೇಲೆ ಅಮೇರಿಕಾದಲ್ಲಿ ಗು೦ಡೇಟಿನಿ೦ದ ಸತ್ತವರಿಗಾಗಿ ಶೋಕ ವ್ಯಕ್ತ ಪಡಿಸಿದ್ರಿ, ಆಮೇಲೆ ಈವತ್ತು ಈ ಸ೦ಸಾರವಿಲ್ಲದಿರುವ ಸ್ವಾಮಿಜಿಗೆ.
ಬೇಜಾರು ಪಟ್ಟಿಕೊಳ್ಳ ಬೇಡಿ ಹೀಗೆ ಹೇಳ್ತಾ ಇದ್ದೀನಿ ಅ೦ತಾ.

SomeTimes i think this deadly world is obsessed so much with death.
ಅದೇ ರೀತಿ ಹೊಸದಾಗಿ ಹುಟ್ಟಿದ ಕೂಸಿನ ಸ೦ತಸ ವನ್ನುಹ೦ಚಿಕೊಳ್ಳ ಬಾರದೇಕೆ ?
ನನ್ನ ಮೊಮ್ಮಗ ನ್ ಫೋಟೋ ನೋಡಿ.. ಅಥವಾ ಆಟವಾಡುತ್ತಿರುವ ಕೂಸಿನ ಚಿತ್ರವನ್ನು ಪೋಸ್ಟ ಮಾಡಿ.

ಮನಸ್ಸಿಗೆ ದು:ಖ ಪಡುವ Capacity is very limited. ಅದೇ ರೀತಿ ಸು:ಖ ಪಡಬಹುದಾದ Capacity ಇಸ್ ಅಲ್ಸೊ ಲಿಮಿಟೆಡ್.
ನಿತ್ಯ ಒಬ್ಬರಾದ ಮೇಲೆ ಒಬ್ಬರು ಸಾಯುತ್ತಲೆ ಇರುತ್ತಾರೆ.
ಎಲ್ಲರೂ ನಮ್ಮ ದೇಶವನ್ನು ಉದ್ದಾರ ಮಾಡೋದಕ್ಕೆ ಹುಟ್ಟಿ ಉದ್ದೇಶ ಪರಿಪೂರ್ಣವಾಗುವ ಮು೦ಚೆ ಸತ್ತವರೇ.
ಗೀತೆ ಯಲ್ಲೂ ನಿಜ ಪ೦ಡಿತರೂ ಸತ್ತವರಿಗಾಗಲಿ , ಹುಟ್ಟುವವರಿಗಾಗಲಿ ವ್ಯಥೆ ಪಡುವುದಿಲ್ಲಾ ಅ೦ತಾ ತಿಳಿಸಿದ್ದಾನೆ ಶ್ರಿ ಕೃಷ್ಣ.
ಮು೦ದೆ ಹುಟ್ಟ ಬಹುದಾದ ಅವತಾರ ಪುರುಷನ ಜನ್ಮಕ್ಕೆ ಪ್ರಾರ್ಥಿಸೋಣವೇ??
ಅಥವಾ ಇನ್ನೆರಡು ಉಳಿದಿರುವ ದಿನಗಳಲ್ಲಿ ನಗು ನಗುತ್ತಾ ಬದುಕೋಣವೇ?
ನಗು ನಗುತ್ತಾ ನಲಿ ನಲಿ ಏನೇ ಆಗಲಿ.........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2007 - 3:07pm — ಸಂಗನಗೌಡ

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

ಸಂಗನಗೌಡ's picture

ಮುರುಳಿ, ನೀವ್ಯಾಕೆ ವೆಂಕಟೇಶ್ ಅವ್ರನ್ನ ಗೊಳು ಹುಯ್ಕೋತೀರಾ? ಪಾಪ , ಮೊನ್ನೆ ಅವ್ರಿಗೆ 'ತಾತ, ನಿನ್ ಮೊಮ್ಮಗ ಇನ್ಫೋಸಿಸ್‍ನಲ್ಲಿ ಕೆಲಸ ಮಾಡ್ತಾನಾ?' ಅಂತ್ ಕೇಳಿದ್ರಿ. ನಿಮ್ಮಿಬ್ಬರಿಗೂ ಹಳೇ ದೋಸ್ತಿ ಇರಬೇಕು ಅಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2007 - 6:19pm — muralihr

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

muralihr's picture

ನಾನು ತಪ್ಪು ಮಾಡಿದ್ದೇ . ಆ ಕಮೆ೦ಟ್ ಹಾಕಬಾರದಿತ್ತು. "ತಾತ" ಎ೦ದು ಸ೦ಭೋದನೆ ಮಾಡಬಾರದಿತ್ತು.
ತು೦ಬಾ cheap comment ಅನ್ನಿಸ್ತು. ಕ್ಷಮಾಪಣೆ ಕೋರುವೆ.

ಇವರು ಯಾವಾಗಲೂ ಎಲ್ಲೋ ಯಾರೋ ಸತ್ತರೆ Tension ಮಾಡ್ಕೊ೦ಡು ಒಳಗೊಳಗೆ ಗೋಳಾಡ್ತಾರೆ.ಗೋಳಾಟವಾಡ್ತಿರೋ ಇ೦ತಹವರನ್ನು ಕ೦ಡಾಗ ಹೃದಯ ಮಮ್ಮಲ ಮರಗುತ್ತದೆ. ಇದು ಮರ್ತ್ಯಲೋಕವೆ೦ಬುದು ಮರೆತರಾದಿತೇ ?
ಈ ಮನೋಭಾವದಿ೦ದಲೇ ಸುದ್ದಿ ಮಾಧ್ಯಮಗಳು ಯುದ್ದ ಮತ್ತು ಬಾ೦ಬುಗಳ ಸುದ್ದಿ ಮೊದಲನೇ ಪುಟದಲ್ಲಿ ಹಾಕುತ್ತವೆ.
ನೀವೇ ಹೇಳೀ "ಯಾರಿಗಾದರೂ ಮಕ್ಕಳು ಹುಟ್ಟಿದ" ಸುದ್ದಿ ಮೊದಲನೇ ಪುಟದಲ್ಲಿ ನೋಡಿರುವಿರೇನು ?

ಇಲ್ಲಿ ತೋರಿರುವ ದು:ಖ ನಿಜವಾದ ದು:ಖವಲ್ಲಾ.ನಿಜವಾದ ದು:ಖವನ್ನು ಅನುಭವಿಸುವ ಚೇತನಾ ಶಕ್ತಿ ಮನುಷ್ಯಾ ಕಳೆದುಕೊ೦ಡಿದ್ದಾನೆ.ನಿಜವಾದ ದು:ಖ ಅನುಭವಿಸಿದಾಗಲೂ ಒ೦ದು ರೀತಿ ಸು:ಖವಿರುತ್ತೆ.
ಯಾವುದಾದರೂ ದುರ್ಘಟನೆ ನಡೆದಾಗ ನಮ್ಮ ಪ್ರತಿಕ್ರಿಯೆ ಯಾದರೇನು ?

ಮೊನ್ನೆ ನಮ್ಮ ದೊಡ್ಡಮ್ಮ ಸತ್ತಾಗ, ಯಾರು ದು:ಖ ಪಡುವರೇ ಇಲ್ಲಾ.ಎಲ್ಲರಿಗೂ ಅವಸರ.ಆಮೇಲೆ ಹೆಣ ಕ೦ಡ್ರೆ ಭಯ.
ಆದ್ರೆ ದಿನಪತ್ರಿಕೆ ಓದಿ ದೂರದ ಅಮೇರಿಕಾದಲ್ಲಿ ಅಥ್ವಾ ಇರಾಕ್ ನಲ್ಲಿ ಸಾಯುವ ಮ೦ದಿಗೆ ಕಣ್ಣೀರು ಬಿಡ್ತಿದ್ದರು. ಅ೦ದ್ರೆ ನಮ್ಮ ಮನಸ್ಸಿನ ಪ್ರಪ೦ಚ ಮಾಧ್ಯಮಗಳ ಪ್ರಭಾವದಲ್ಲಿ ಸಿಳುಕಿ ನಮ್ಮ ಎದುರುಗಡೆ ಇರುವ ಪ್ರಪ೦ಚವನ್ನೇ ಮರೆಸಿಬಿಡುತ್ತೆ.

ಅಮೇರಿಕಾ ಸ೦ಸ್ಖ್ರುತಿಯ ಬುನಾದಿ ಈ ಮಾಧ್ಯಮ ಸ೦ಸ್ಕೃತಿ. ಅಲ್ಲಿ ಕೂಡ ಸಾವು ಅ೦ದರೆ ಎಲ್ಲರೂ ಬಾಯಿ ಹಲ್ಲು ತೆಗೆದು
ಚಿ೦ತಿಸುತ್ತಾರೆ. ಸದಾ ಮೃತ್ಯುವಿನತ್ತ ಮುಖಮಾಡಿ ಬದುಕುವುದಾದರು ಏಕೆ ?
ಸಾಯುವವರ್ಯಾರು?

ತಪ್ಪಾಗಿದ್ದರೆ ಕ್ಷಮೆ ಇರಲಿ. ಈ ಲೋಕದಲ್ಲಿ ಸಾವಿದೆ , ಅದಕ್ಕೆ ಕ್ಷಮೆ ಇದೆ.
Death is forgetting and forgiving. Yet why do man live with a life full of vengeance and revenge ? ಅನ್ನೋ ಪ್ರಶ್ನೆ ಅಗಾಗ ಕಾಡ್ತಾಯಿರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2007 - 3:12pm — mahesha

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

mahesha's picture

ಮುರಳಿ,

ಹೌದು ಸತ್ತು ಹೋದೋರ ಮೇಲೆ ನಂದುಕೊಂಡು ದುಕ್ಕ ಪಡಬಾರದು....

ಮೊನ್ನೆ ಆ ಹುಡುಗ ಮಾವು ತಿನ್ನಕ್ಕೆ ಹೋಗೆ ಕೊಳವೆ ಬಾವಿಗೆ ಬಿದ್ದು ಸತ್ತ.

ನೆನ್ನೆ ನನ್ನ ಒಬ್ಬ online ಒರಕೂಟದ ಗೆಳೆಯ ತಂಗೊಲೆ( ತನ್ನ ಕೊಲೆ ) ಮಾಡಿಕೊಂಡ!! ನನಗೆ ಅದನ್ನು ತಿಳಿದು ತಲೆಯಲ್ಲ ಕೆಟ್ಟಿ ಹೋಯ್ತು.!!

ನಾವು ಒಂದಿವಸ ಗೋಒಒಒವಿಂದ!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2007 - 10:08pm — venkatesh

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

venkatesh's picture

ಮುರಳಿ, ಮಹೇಶ್, ಸಂಗನಗೌಡರ ಪ್ರತಿಕ್ರಿಯೆಗಳನ್ನು, ಕ್ರಿಯಾಕರ್ಮಗಳನ್ನು ಮಾಡಬೇಕಾದವರಿಗೆ ಸ್ವಲ್ಪ ಬುದ್ಧಿಮಾತನ್ನು ನೀಡಿದಷ್ಟು ಉತ್ತಮವಾಗಿವೆ. ತೆರಳಿದ ವ್ಯಕ್ತಿಗಳ ಬಗ್ಗೆ ಅನುಕಂಪ, ದುಗುಡವನ್ನು ಅವರ ಮನೆಯವರನ್ನೇ ಕೇಳಿ ?

ಅಪೇಕ್ಷಿಸುತ್ತಾರೆಯೋ ಇಲ್ಲವೋ ಎಂದು.

ಇದು ಲೋಕಾರೂಡಿ ಸಂಪ್ರದಾಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 28, 2007 - 10:12pm — venkatesh

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

venkatesh's picture

ನಾನು ಶೆನೈ ಅವರನ್ನು ಕಂಡಿಲ್ಲ. ತೇಜಸ್ವಿಯವರನ್ನು ಕಂಡಿಲ್ಲ. ಓದಿದ್ದೇನೆ. ಆದರೆ ಅವರ ಅಗಲಿಕೆ ನನಗೆ ತುಂಬಾ ಬೇಸರವನ್ನೇನೋ ತಂದಿದೆ. ಇದು ಒಬ್ಬ ವ್ಯಕ್ತಿ ಇನ್ನೊಬ್ಬರ ಬಗ್ಗೆ ಸ್ಪಂದಿಸಬಹುದಾದ ಒಂದು ಸನ್ನಿವೇಷ ಪ್ರಜ್ಞೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2007 - 7:13am — venkatesh

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

venkatesh's picture

ಡೀ. ವೀ. ಜಿ ರವರ ’ಜೀವನ ಧರ್ಮ ಯೋಗ” ಓದಿದರೆ ಸಾಲದೆ ?

ಅಥವ ’ಅನುಭವಾಮೃತ,” ಯಾಕೆ ಓದಬಾರದು ?

ಹೊಸಬೆಟ್ಟು, ರವರ’ ಜೀವನ” ಇದೆಯಲ್ಲ. ಓದುವವರಿಗೆ ಸುಮಾರು ಗ್ರಂಥಗಳಿವೆ.

ಇನ್ನು ಒಮ್ಮೆ ಸಿಗೋಣ. ಈ ಅಂಕಣದಲ್ಲಿ ವ್ಯರ್ಥವಾಗಿ ’ಕಾಡುಹರಟೆ” ಬೇಡ ಅಲ್ಲವೆ !
ಪ್ರತಿದಿನ ರೇಡಿಯೋ ನಲ್ಲಿ ಬೆಳಗ್ಯೆ, ಚಿಂತನ ಎಂಬ ಕಾರ್ಯಕ್ರಮ ಬರುತ್ತೆ. ಈಗಲೂ ಇರಬಹುದು. ಅದರಲ್ಲಿ, (ದಿ)ಜೀ. ಪಿ. ರಾಜರತಂ, ಇತರೆ ಕವಿಪುಂಗವರು, ಜೀವನದ ರಹಸ್ಯಗಳನ್ನು ಕುರಿತು ಚಿಕ್ಕ-ಚೊಕ್ಕ ಮಾತುಗಳನ್ನು ಹೇಳುತ್ತಿದ್ದರು. ಕಣ್ಣನ್, ಈಗ ಇದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
  • ಡಾ|| ಹೆಚ್. ನರಸಿಂಹಯ್ಯನವರು - ನಂ ಗುರುಗಳು
  • ಪ್ರೇಮದ ಓಲೆ
  • ನನ್ನ ಕಾವ್ಯ
  • ಸರಿಯಾದ ಪದ ಯಾವುದು?
Syndicate content

ಲೇಖಕರು

jaiguruji's picture

ಪರಿಚಯ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ನ ಮುಕುತಿ !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 26 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator