ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಇವತ್ತಿನ ಪತ್ರಿಕೆಗಳಲ್ಲಿಯ ವರದಿಯನ್ನು ನೋಡಿದರೆ ಯಾಕೋ ಅನಂತಮೂರ್ತಿ ಮತ್ತವರ ಪಟಾಲಂನ ಉಪದ್ವ್ಯಾಪತನ ಅತಿಯಾಯಿತು ಅನಸತದ. ಅಲ್ಲಿಯ ಭಾಷೆಯನ್ನು ನೋಡಿದರ (ಉದಾ : "ಬಾಡಿಗೆ ಹಂತಕ", "ಹಾಸಿಗೆ ವಿಷಯ", "’ಆವರಣ’ದ ಮಾರಾಟ ಮತ್ತು ಜನಪ್ರಿಯತೆ ಕಂಡು ದಿಗಿಲು!" ಇತ್ಯಾದಿ) ಯಾಕೋ ಎಂದಿನದೋ ಸಿಟ್ಟನ್ನ ಇಂದ ಕಾರಕೊಂಡಾರ ಅನಸಲಿಕ್ಕತ್ತೇದ. ಮೂರ್ತಿಯವರ ಈ ವೈರತ್ವ, ದ್ವೇಷದ ಬೇರುಗಳನ್ನು ಭಿತ್ತಿಯಲ್ಲಿನ್ನೂ ಓದಬಹುದು..
ಆದ್ರ ಯಾಕೋ ಸುದ್ದಿ ಓದಿದ ಮ್ಯಾಲೆ "ಥತ್..ಎಲ್ಲೀಗಿ ಬಂತು..ಕನ್ನಡ ಸಾಹಿತ್ಯ" ಅಂದುಕೊಂದೆ....

- jaiguruji ರವರ ಬ್ಲಾಗ್
- Login or register to post comments
- 1388 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಸಾಹಿತಿಗಳ ವರ್ತನೆಯನ್ನೂ, ಅವರ ಬರವಣಿಗೆಯನ್ನು ಪ್ರತ್ಯೇಕವಾಗಿ ನೋಡಬೇಕು. ಅಲ್ಲವೇ?
*ಅಶೋಕ್
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
’ಆವರಣ’ದ ಭಾಷಾಶೈಲಿಯನ್ನು ಇದಕ್ಕೆ ಹೋಲಿಸಿದರೆ, ಯಾವುದು ಹೆಚ್ಚು ಹರಿತ ಎಂದು ತೀರ್ಪಿಸುವುದೇ ಕಷ್ಟ!
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅನಂತಮೂರ್ತಿ ಮತ್ತು ಅವರ ಪಟಾಲಂನಂತೆಯೇ ಭೈರಪ್ಪ ಮತ್ತು ಅವರ ಪಟಾಲಂ ಕೂಡಾ ಇದೆಯೆಲ್ಲಾ? ಈಗ ನೀವು ಹೇಳಿದಂತೆಯೇ ಭೈರಪ್ಪ ಮತ್ತು ಅವರ ಪಟಾಲಂನ ಉಪದ್ವ್ಯಾಪ ಹೆಚ್ಚಾಯಿತು ಎಂದೂ ಹೇಳಬಹುದಲ್ಲವೇ? "ಆವರಣ" ಭೈರಪ್ಪನವರ ಕೆಟ್ಟ ಮನಸ್ಸಿನ ಪ್ರತಿಬಿಂಬ ಎಂಬುದರಲ್ಲಂತೂ ಸಂಶಯವಿಲ್ಲ.
-ಯಾಮಿ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಬೈರಪ್ಪನವರ ಕಾದ೦ಬರಿ ಎ೦ತಹ ಆಳವಾದ ವಿಚಾರವಿರುತ್ತದೆ ಎ೦ದು ಎಲ್ಲ ಕನ್ನಡಿಗರಿಗೂ ಗೊತ್ತು. ಅನ೦ತ ಮೂರ್ತಿಯವರ ವಿರೊದ ಎರಡು ತರಹದ್ದು, ಒ೦ದು ಅವರಿಬ್ಬರೂ ಮೊದಲಿ೦ದಲೂ ಬದ್ದ ವೈರಿಗಳು ಎರಡು ಅನ೦ತ ಮೂರ್ತಿಯವರು ಎಡಪ೦ಥೀಯರು. ಎಡಪ೦ಥೀಯರಿಗೆ ಯಾವುದೇ ತರಹದ ಹಿ೦ದೂ ದರ್ಮದ ಹೊಗಳಿಕೆ ಇಷ್ಟವಾಗುವುದಿಲ್ಲ.
ಅಲ್ಲದೇ ವ್ಯಕ್ತಿ ಸ್ವಾತ೦ತ್ರ್ಯ, ಮದ್ಯಮ ಸ್ವಾತ೦ತ್ರ್ಯ ಬಗ್ಗೆ ಒತ್ತು ಕೊಡುವ ಎಡಪ೦ಥೀಯರು, ಬೈರಪ್ಪನವರ ಲೇಕನ ಸ್ವಾತ೦ತ್ರ್ಯಕ್ಕೇಕೆ ಕಡಿವಾಣವಾಕಬೇಕು?
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅವರುಗಳೇನೋ ದೊಡ್ಡ ಮನುಷ್ಯರು ಜಗಳ ಆಡ್ತಾರೆ .ಅಭ್ಯಾಸ, ಸಮಾಜದಲ್ಲಿ ಇಮೇಜ್ ಇಟ್ಟಿರುತ್ತಾರೆ, Maintain ಮಾಡೋಕ್ಕೆ
ಇಷ್ಟೆಲ್ಲಾ ಕಷ್ಟ ಪಡಬೇಕು. ಜನರಿಗೆ ಜ್ನಾನ ಕೊಡೊದಕ್ಕೆ ಆಗೋದಿಲ್ಲಾ. ಜಗಳ ಇವೆಲ್ಲಾ ಆಡಿ ಪುಸ್ತಕ ಸಾಹಿತ್ಯದೊ೦ದಿಗೆ ಜನರಿಗೆ ಮನೋರ೦ಜನೆ ಕೊಡುವ ಉದ್ದೇಶ ಹೊ೦ದಿರುತ್ತಾರೆ.
ಅವರುಗಾಲು ಜಗಳ ಆಡಿದರೆ ಈ ದಿನಪತ್ರಿಕೆ ಯವರಿಗೆ ಮುಖಪುಟದ ನ್ಯೂಸ್ ಆಗುತ್ತೆ. ನೀವುಗಳು ಯಾಕೆ ಜಗಳಾ ಆಡ್ತೀರೋ ???
ನೀವು ಜಗಳ ಆಡಿದರೆ ಬರೀ ಮನಸ್ಸು ಬೇಜಾರಾಗುತ್ತೆ.
ಇರಲಿ ಒ೦ದು ಪದ್ಯ...
*********************************
ಇಬ್ಬರು ನ೦ಬಿದ್ದು ಕನ್ನಡ ಲಿಪಿ
ಅವರಿಬ್ಬರ ತಲೆ ಮೇಲೆ ಪೇಪರ್ ಠೋಪಿ.
ಅದೆಷ್ಟೋ ದೊಡ್ದ ಪುಸ್ತಕ ಚೀಪಿ ಚೀಪಿ
ಪಡೆದದ್ದು ನೋಡು ಆಆಆ - ಜ್ನಾನದ ಠೋಪಿ.
ಅವರ೦ದದ್ದು ಇವನೇ ಪಾಪಿ.
ಇವರೆ೦ದದ್ದು ಅವನೇ ಮಹಾಪಾಪಿ.
ಆದರೆ ಇಷ್ಟೆಲ್ಲಾ ಓದಿ ,, ಇಬ್ಬರು ಊದಿದ್ದು ವೈರದ ಪೀಪಿ.
ಡ್ಯಾಮೇಜ್ ಆಗಿದ್ದು ಸಿರಿ ಕನ್ನಡ ಲಿಪಿ...
*********************************
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅದಕ್ಕೆ ಬೇಡಾ ಈ ವಿಸ್ಯದ ಮೇಲೆ TP...
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಯಾವತ್ತೂ ಇಲ್ಲದ ಆಸಕ್ತಿ ಭೈರಪ್ಪನವರ ಪುಸ್ತಕಗಳ ಮೇಲೆ ಜ್ನಾನಪೀಠಿಗಳಿಗೆ ಈವಾಗ ಯಾತಕ್ಕೆ ಬಂತೋ ಗೊತ್ತಾಗ್ತಿಲ್ಲ. ಅವರ ಮಾತುಗಳಲ್ಲಿ ಈರ್ಷ್ಯೆ ಎದ್ದು ಕಾಣುತ್ತಿದೆ. ಜನರನ್ನು ಯಾರೂ ಭೈರಪ್ಪನವರ ಪುಸ್ತಕಗಳನ್ನು ಓದಿ ಎಂದು ಒತ್ತಾಯಿಸಿಲ್ಲ. ಅವರೂ ನನಗೆ ಜ್ನಾನಪೀಠ ಕೊಡಿಸಿ ಎಂದು ಯಾರ ಕಾಲಿಗೂ ಬಿದ್ದಿಲ್ಲ. ಅವರಿಗಿಷ್ಟ ಬಂದದ್ದು ಬರೆಯುವ ಸ್ವಾತಂತ್ರ್ಯ ಅವರಿಗೆ ಇದ್ದೇ ಇದೆ. ಅಷ್ಟಕ್ಕೂ ಅವರೇನು ಸಾಕಷ್ಟು ಆಧಾರಗಳಿಲ್ಲದೆ ಆ ಪುಸ್ತಕವನ್ನು ಬರೆದಿಲ್ಲ. ಆಥವಾ ಅದು ಸಾಮಾಜಿಕ ಸಾಮರಸ್ಯಕ್ಕೆ ಅಡ್ಡಿ ಮಾಡತಕ್ಕ ಯಾವ ಅಂಶಗಳನ್ನೂ ಹೊಂದಿಲ್ಲ. ಇತಿಹಾಸದ ನೈಜ ಚಿತ್ರಣ ಇದೆ ಅಷ್ಟೇ.
"ಆವರಣ"ದ ದಾಖಲೆ ಮಾರಾಟ ಎಡಪಂಥೀಯ "ಸುದ್ದಿ"ಜೀವಿಗಳಿಗೆ ಹೊಟ್ಟೆಯುರಿ ತರಿಸಿದೆ ಅನ್ನಿಸುತ್ತೆ.
ನಮಸ್ಕಾರ,
ಕೇಶವ ಮುರಳಿ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಮುರಳಿ ಮಾತು ಒಪ್ಪ
ಸುಮ್ನೆ ಯಾಕೆ ಜಗಳ!!
- ಮಾಯ್ಸ
ಉ:
ಸರಿಯಾದ ಲಾ ಪಾಯಿಂಟ್ ಪ್ರಪಂಚ !
ಯಾಮಿನಿಯವರೆ,
ಪಾಪ ಅನಂತಮೂರ್ತಿ ಮತ್ತವರ ಗ್ಯಾಂಗಿನ ಹಣೆಬರಹ ಏನಾಗಿದೆ ಅಂದ್ರೆ, ಯಾವುದೇ ಸಾಹಿತ್ಯಿಕ ಅಥವಾ ಕಲಾತ್ಮಕ ವಿಷಯವೇ ಆಗಿರಲಿ, ಎಷ್ಟೇ ವಿವಾದಾತ್ಮಕವೇ ಆಗಿರಲಿ..ಅವರು ದಿನಾ ಮುಂಜಾನಿ ಎದ್ದು ಬಾಯಿ ಬಾಯಿ ಬಡಕೊಳ್ಳುದೇನಂದ್ರ.."ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಫ್ಯಾಸಿಸ್ಟ್ ಶಕ್ತಿಗಳು ಅಡ್ಡಿ, ಆತಂಕವನ್ನುಂಟು ಮಾಡುತ್ತಿವೆ" ...ಈಗ ಏನ ಅಗೇದಪಾ ಅಂದ್ರ...’ಆವರಣ’ ಒಳ್ಳೆ ಬಿಸಿ ತುಪ್ಪ ಅಧ್ಹಂಗ ಅಗ್ಯೇದ..ಇತ್ಲಾಗ ಉಗುಳಲಿಕ್ಕೂ ಅಗೂದಿಲ್ಲ..ಅತ್ಲಾಗ ನುಂಗಲಿಕ್ಕೂ ಅಗುದಿಲ್ಲ..ಹಿಂಗಾಗಿ..ಪಾಪ ’ಆವರಣ’ ಜನಪ್ರಿಯತೆ ಕಂಡು ದಿಗಿಲು ಪಡೋದು ಮಾತ್ರ ಮಾಡಲಿಕ್ಕೆ ಸಾಧ್ಯ..ಇನ್ನೇನೇನೂ ಇಲ್ಲ...
ಪಾಪ ಅನಸ್ತದ..ಅವರ ಹಣೆಬರಹ ನೋಡಿ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
*ಅಶೋಕ್
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನಿಮ್ಮ ಪರಿಚಯ ಹೇಳಿ ಸಾರ್..
ಯಾಕೆ ಗುರುತು ಮುಚ್ಚಿಟ್ಟಿದ್ದೀರಿ? ನಿಮ್ಮ ಹೆಸರೇ Jaiguruji ಅಂತವೇ?
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಮಹೇಶ = ಮಾಯ್ಸ so ಗುರು = ಜೈಗುರುಜಿ that's it ! ಇನ್ನೂ ಹೆಚ್ಚಿನ ಜನ್ಮ ಕುಂಡಲಿ ಬೇಕಾದ್ರೆ ನನ್ನನ್ನ direct ಆಗಿ ಕೇಳಬಹುದು.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನಿಮಗೆ direct ಆಗಿ ಕೇಳಿದ ಪ್ರಶ್ನೆಗೆ ಉತ್ತರ ಹೇಳಿದ್ದಕ್ಕೆ ನನ್ನಿ!
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಸರಿಯಾಗಿ ಗ್ರಹಿಸಿದಿರಿ ಗುರುಜಿಯವರೆ.
ಮಾತೆತ್ತಿದರೆ ಪತ್ರಿಕಾ ಸ್ವಾತ೦ತ್ರ್ಯ, ಮಾದ್ಯಮ ಸ್ವಾತ೦ತ್ರ್ಯ ಮತ್ತು ಕಲೆಯಾಲ್ಲಿ ಸ್ವಾತ೦ತ್ರ್ಯದ ಬಗ್ಗೆ ಮಾತನಾಡುವ ಇವರು, ಬೈರಪ್ಪನವರ೦ತ ಅಸಮಾನ್ಯ ಕಾದ೦ಬರಿಕಾರರನ್ನ ತೀರ ನಿಕೃಷ್ಟವಾಗಿ ಮಾತನಾಡಲು ಇವರೇನು ಪಾಳೆಯಗಾರರೆ.
ಬೇಕಾದರೆ ಕಾದ೦ಬರಿಯ ವಿಶಯಗಳನ್ನ ಕೈಗೆತ್ತಿಕೋ೦ಡು, ಬೈರಪ್ಪನವರ ಸತ್ಯ ಶೊದನೆ ತಪ್ಪು ಎ೦ದು ಎತ್ತಿ ತೋರಿಸಲಿ. ಇವತ್ತು ವಿ.ಕ. ದಲ್ಲಿ ಎಲ್ಲ ಸಾಹಿತಿಗಳಿ೦ದ ಮ೦ಗಳಾರತಿಯನ್ನ ಮಾಡಿಸಿಕೋ೦ಡಿದ್ದರೆ.
ಹಾಗೆ ನೋಡಿದರೆ ಅನ೦ತ ಮೂರ್ತಿಯವರು ಇವತ್ತು ಕೇವಲ ರಾಜಕಾರಣಿಯೇವರತು, ಸಾಹಿತಿಯಲ್ಲ. ರಾಜಕಾರಣದಲ್ಲೇಸಾಕಷ್ಟು ಸಮಯ ಕಳೆಯುತ್ತಿದಾರೆ.
ಬೈರಪ್ಪನವರು ಪರ್ವ,ಧರ್ಮಶ್ರಿ,ವ೦ಶವೃಕ್ಷ ಮೋದಲಾದ ಶ್ರೇಷ್ಟ ಕಾದ೦ಬರಿಗಳನ್ನ ಬರೆದಿದ್ದಾರೆ. ನಿನ್ನೆ ಆ೦ದ್ರದಲ್ಲಿ NTR ಪ್ರಶಸ್ತಿ ಕೂಡ ಕೊಟ್ಟಿದ್ದಾರೆ.
ಅನ೦ತ ಮೂರ್ತಿಯವರು ಇನ್ನು ಮು೦ದೆ ಸಾಹಿತ್ಯವಲಯವನ್ನ ಬಿಟ್ಟು ಸಿ.ಪಿ.ಎಮ್ ರಾಜ್ಯದಲ್ಲಿ ಬಲಪಡಿಸಲು ಮು೦ದಾಗಬೇಕು.!!!!
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಸಂಪತ್,
ಪರ್ವ, ಸಾರ್ಥ, ಗೃಹಭಂಗ, ತಬ್ಬಲಿ ನೀನಾದೆ ಮಗನೇ ,ಇವೆಲ್ಲ ಬಲು ಮೇಲ್ಮಟ್ಟದ ಕಾದಂಬರಿಗಳು ಎಂದು ಎಲ್ಲರೂ( ಹಲವರು ) ಒಪ್ಪಿದ್ದಾರೆ.
ಆದರೆ,
ಇಲ್ಲಿ ಮಾತು ಭೈರಪ್ಪನವರ "ಆವರಣ" ಹೊತ್ತಗೆಯ ಬಗ್ಗೆ ನಡೇತಾ ಇರೋದು. ಅನಂತ ಮೂರ್ತಿಯವರೂ "ಆವರಣ"ವನ್ನು ಮನಸಲ್ಲಿಕ್ಕಿ ಮಾತು ಹೇಳಿರೋದು.
ನೀವು 'ಆವರಣ' ಓದಿಕೊಂಡಿದ್ದೀರ ಎಂದು ಅಂದುಕೊಳ್ಳುವೆನು. !! ಸಂಪದದಲ್ಲೇ 'ಆವರಣ'ದ ಕುರಿತು ಹಿಂದೆ ನಡೆದ ಹಲವು ಎಳೆಗಳನ್ನು ನೋಡಬಹುದು.
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಇಲ್ಲ ಮಹೇಶರೆ,
ಇವತ್ತಿನ ವಿ.ಕ. ಓದಿ ತಿಳಿಯುತ್ತದೆ.
ಅನ೦ತ ಮುರ್ತಿಯವರು ಬೈರಪ್ಪನವರನ್ನ ಅವರೊಬ್ಬರು ಸಾಹಿತಿಯೇ ಅಲ್ಲ, ಅವರೊಬ್ಬರು ಕಾದ೦ಬರಿಕಾರರೇ ಅಲ್ಲ ಎ೦ದು ಹೇಳಿರುವುದು ಅವರ ಅಬಿಮಾನಿಗಳಾದ ನಮಗೆ ತೀವ್ರ ನಿರಾಸೆಯಾಗಿದೆ. ಎಲ್ಲ ಸಾಹಿತಿಗಳ ಪ್ರತಿಕ್ರಿಯೆಯೂ ಇದೇ ಆಗಿದೆ.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅವರ ಕಿತ್ತಾಟ ಅತ್ತ ಇರಲಿ... ನಮ್ಮ ಕನ್ನಡದ ಕವಿಗಳ ಕಚ್ಚಾಟ ಇಂದಿನದಾ?
ನೀವು "ಆವರಣ" ಅನ್ನು ಓದಿಲ್ಲ ಎಂದಿರಿ.
ಆದರೆ ನಿಮಗೆ ಯಾಕೆ ಈ 'ಆವರಣ'ದ ಕುರಿತು ಇಷ್ಟೊಂದು ತೀಯಾಟ ಯಾಕೆ ಅಂತ ತಿಳಿಯುವ ತವಕ ಇದ್ದರೆ, ಬಿರ್ರನೆ ಅನ್ನು ಓದಿಕೊಳ್ಳಬೇಕು.
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅನ೦ತಮೂರ್ತಿಯವರು ಬರಿ ಆವರಣದ ಬಗ್ಗೆ ಮಾತಡಿದ್ದರೆ ಇಷ್ಟೋ೦ದು ತಲೆ ಕೆಡಿಸ್ಕೋಬೇಕಾಗಿರ್ಲಿಲ್ಲ. ಆದರೆ ಅವರು ಭೈರಪ್ಪವರನ್ನು ಒಬ್ಬ ಚರ್ಚಾಪಟುವೆ ಹೊರತು, ಕಾದಬರಿಕಾರರಲ್ಲ ಎ೦ದು ಹೇಳಿಕೆ ಕೊಟ್ಟಿದ್ದಾರೆ. ಈ ಕೆಳಗಿನ ಕೊ೦ಡಿ ನೋಡಿ.
http://thatskannada.oneindia.in/sahitya/article/280507avarana_ananthmurt...
ಏನೇ ಇರಲಿ, ಇದರಿ೦ದ ಅನ೦ತಮೂರ್ತಿಯವರು ಮತ್ತೆ ಸುದ್ದಿಗೆ ಬ೦ದರು, ’ಆವರಣ ಅನಾವರಣ’ ದ ಪ್ರಚಾರವಾಯಿತು. ಆದರೆ ಎಲ್ಲರೂ ಬರಿ ಅನ೦ತಮೂರ್ತಿಯವರ ಹೇಳಿಕೆಗೆ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದೇ ಸ೦ದರ್ಭದಲ್ಲಿ ಹೇಳಿದ N.S. ಶ೦ಕರ ಅವರ ಹೇಳಿಕೆಗೆ ಯಾವದೇ ಪ್ರತಿಕ್ರಿಯೆ ಬ೦ದಿಲ್ಲವಲ್ಲ?
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
^^
ಒಳ್ಳೇ ಪಾಯಿಂಟ್ ಎತ್ತಿದ್ದೀರಿ....
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅನಂತಮೂರ್ತಿಯವರೇ ಭೈರಪ್ಪನವರನ್ನು ಹೊಗಳಿ, ಎನ್.ಬಿ.ಟಿ ಸದಸ್ಯರಾಗಿದ್ದಾಗ ಗ್ರಹಭಂಗ ಕುರಿತು ತಮಗೆ ಎಂಥಾ ಮೆಚ್ಚಿಕೆ ಇತ್ತೆಂದರೆ ಹದಿನಾಲ್ಕು ಭಾಷೆಗಳಿಗೆ ಅನುವಾದಗೊಳ್ಳಬೇಕಾದ ಕನ್ನಡದ ಕೃತಿಗಳಲ್ಲಿ ಗ್ರಹಭಂಗದ ಹೆಸರನ್ನು ಶಿಫಾರಸು ಮಾಡಿದ್ದೆ ಎಂದ ಮಾತು ನಿಮಗೆ ವಿಕದಲ್ಲಿ ಸಿಗಲಿಲ್ಲ ಅಲ್ಲವೆ? ವಿಕ ಓದಿ ವಾದಿಸಬೇಡಿ. ಪೂರ್ಣ ಭಾಷಣ ಕೇಳಿ ವಾದಿಸುವುದು ಒಳ್ಳೆಯದು. ಅಲ್ಲದೆ ನೀವು ಕಾದಂಬರಿಯನ್ನು ಕೂಡ ಓದಿಲ್ಲ!
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನೀವು ಅನಂತಮೂರ್ತಿಯವರ ಆವರಣ ಕುರಿತ ಭಾಷಣ ಸರಿಯಾಗಿ ಕೇಳಿದ್ದೀರಾ? ಅದರಲ್ಲಿ ಅನಂತಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದರೆ ಅದೇನೆಂದು ನಿರ್ದಿಷ್ಟವಾಗಿ ತಿಳಿಸಬಲ್ಲಿರಾ. ನಿಮ್ಮ ಪ್ರತಿಕ್ರಿಯೆ ನೋಡಿದರೆ ನಿಮಗೆ ಓದಲು ಅವರ ಭಾಷಣದ ಪೂರ್ಣಪಾಠವಾಲಿ ಕೇಳಲು ಅದರ ರೆಕಾರ್ಡಿಂಗ್ ಆಗಲೀ ಸಿಕ್ಕಿದಂತೆ ಕಾಣುತ್ತಿಲ್ಲ. ಯಾವ ಆಧಾರದ ಮೇಲೆ ತಾವು ಬರೆಯುತ್ತಿದ್ದೀರ ಅಂತ ಸಂಪದದ ಸದಸ್ಯರಿಗೆ ತಿಳಿಸಿ.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಯಾಮಿನೀ ಯವರ ತಿರುಗುಬಾಣ ಚೆನ್ನಾಗಿದೆ. ( ತಮಾಷೆಗೆ )
ಇದು ಇನ್ನೋದು 'ಪತ್ರಿಕಾಸಮರ'ಕ್ಕೆ ನಾಂದಿ ಅಂತ ತೋರುತ್ತಿದೆ
ವಿಕಕ್ಕೆ ಹೊಸದೊಂದು ಪಗರಣ ಸಿಕ್ಕಿತು 
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಇನ್ನೋದು = ಇನ್ನೊಂದು ಅಂತ ಅಂದುಕೊಳ್ಳಿರಿ.
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಅನಂತಮೂರ್ತಿಯವರ ಬಗ್ಗೆ ಕನ್ನಡಿಗರಲ್ಲಿ ಕೊಂಚವಾದರೂ ಗೌರವ ಉಳಿಯ ಬೇಕಾದರೆ ಅವರು ಭೈರಪ್ಪನವರ ಕೃತಿಯ ಸಾಹಿತ್ಯಿಕ ವಿಕರ್ಶೆಗೆ ಮುಂದಾಗಲಿ. ಭೈರಪ್ಪ ಒಳ್ಳೆಯ ಸಾಹಿತಿ ಅಲ್ಲ, ಮಹಾತ್ಮಾ ಗಾಂಧಿ ಒಳ್ಳೆಯ ರಾಜಕೀಯ ಅಲ್ಲ ಅಂತೆಲ್ಲಾ ಹೇಳಲು ಅವರು ಬೀದಿ ಬದಿಯಲ್ಲಿ ನಿಂತು ಕಾಮೆಂಟ್ ಮಾಡುವ ಸಾಮಾನ್ಯರಲ್ಲ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನಮಗೆ ಇಬ್ಬರೂ ಬೇಕು. ಬರವಣಿಗೆಯನ್ನೇ ಆಧಾರವಾಗಿ ತೆಗೆದುಕೊಂಡರೆ, ಯಾರು ಹೆಚ್ಚು ಯಾರು ಕಡಿಮೆ ಹೇಳೊದು ಕಷ್ಟ. ಆದರೆ ಜ್ಞಾನ ಪೀಠ ಪ್ರಶಸ್ತಿವಿಜೇತರು ತಮ್ಮ ಫೀಲ್ಡ್ ನಲ್ಲೇ ಇರುವ ಒಬ್ಬ ಮೃದು ಸ್ವಭಾವದ ಪ್ರತಿಭಾವಂತನಿಗೆ ಅವಮಾನ ಮಾಡುವುದು ತರವಲ್ಲ.
ಹಾಗಂದಮಾತ್ರಕ್ಕೆ ಅನಂತ ಮೂರ್ತಿ ಬರೆದಿರುವುದಲ್ಲಾ ಮಹಾ ಸಾಹಿತ್ಯವಲ್ಲ. ಅದನ್ನು ಒಪ್ಪದಿರುವವರೂ ಬೇಕಾದಷ್ಟು ಜನ ಇದಾರೆ. ಯಾರ್ ಯಾ ರ್ ಜೊತೇಗೋ ಸೇರ್ಕೊಂಡ್ ಏನೇನೋ ಮನಸ್ಸಿಗ್ ಬಂದದ್ ಹೇಳೊದ್ ಅವರಿಗೆ ತರವಲ್ಲ. ನಮ್ಗೂ ಬೇಸ್ರ ಆಗತ್ತೆ. ವಿವಾದಗಳಲ್ಲಿ ಸಿಕ್ಕು ಹಾಕಿಕೊಳ್ಳದೆ ಇರೋದೇ ಒಳ್ಳೆ ಸಾಹಿತಿ ಲಕ್ಷಣ. ಮತ್ತೊಂದು.
ವ್ಯಂಗ್ಯ ಚಿತ್ರಕಾರ ಲಕ್ಷ್ಮಣ್ ನೇ ನೋಡಿ. ೫೫ ವರ್ಷದಲ್ಲಿ ಅವ್ರು ಎಲ್ಲರ್ ಬಗ್ಗೆನೂ ಹೇಳಿದಾರೆ , ಬರ್ದಿದಾರೆ. ಎಲ್ಲೂ ಅವಹೆಳನಕ್ಕೆ ಗುರಿಯಾಗಿಲ್ಲ. ಸ್ಮಾರ್ಟ್ ನೆಸ್ ಅಂದ್ರೆ ಅದು. ಸರಿಯಾದ್ ಪಾಯಿಂಟ್ ನಲ್ಲಿ ಹೇಗೆ ಹೊಡೀತಾರೆ ಅಂದ್ರೆ, ಮುಟ್ನೋಡ್ಕೊ ಬೇಕು.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಮೊದಲು
uniquesupri ಇವರ ಪರಿಚಯವಾಗಲಿ...
ನಿಮ್ profile ಅಲ್ಲಿ "I am a simple life loving person with a sensitive heart." ಅಂತ ಬಿಟ್ಟು ಮತ್ತೇನು ಇಲ್ಲವಲ್ಲ.
ಅದಕ್ಕೆ ನಿಮಗೆ ನಾನು ಉತ್ತರ ಬರೆಯಲ್ಲ.!
ನನ್ನ ಹೆಸರು ಮಹೇಶ. ಊರು ಬೆಂಗಳೂರು. ಕನಿಷ್ಠ ಇಷ್ಟಾದರು ಇರಬೇಕು.!!!
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನನ್ನ ಹೆಸರು ಸುಪ್ರೀತ್.ಕೆ.ಎಸ್
ಊರು ದಾವಣಗೆರೆ
ಓದುತ್ತಿರುವುದು ಬೆಂಗಳೂರಿನಲ್ಲಿ
ಕೋರ್ಸ್: ಇಂಜಿನಿಯರಿಂಗ್
ವಯಸ್ಸು: ೧೯
ಆಯಸ್ಸು: ತಿಳಿದರೆ ತಿಳಿಸುವೆ!
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನನ್ನಿ!!
ಚನ್ನಾಗಿದೆ ಸಾಲು!!

- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಪತ್ರಿಕೆಗಳಲ್ಲಿ ಬಂದ ಆಯ್ದ ಭಾಗಗಳನ್ನು ಓದಿ ವಾದಿಸುತ್ತಿರುವುದು ಎಷ್ಟು ಸರಿ? ಅನಂತಮೂರ್ತಿಯವರ ಭಾಷಣದ ಪೂರ್ಣ ಪಠ್ಯ ತಮಗೆ ದೊರಕಿದೆಯೆ? ಅಥವಾ ತಾವು ಭಾಷಣ ಕೇಳಿಸಿಕೊಂಡಿದ್ದೀರಾ? ಇಲ್ಲಿ ವಾದಿಸಿದ ಅನೇಕರಿಗಿಂತ ಅನಂತಮೂರ್ತಿಯವರು ಭೈರಪ್ಪನವರ ಬಗ್ಗೆ ಗೌರವಯುತವಾಗಿ ಮಾತನಾಡಿದ್ದಾರ್‍ಎ. ಅವರೊಂದಿಗೆ ತಮಗಿದ್ದ ಒಡನಾಟದ ನೆನಪುಗಳನ್ನು ಕುರಿತು ಮಾತನಾಡಿದ್ದಾರೆ. ಅಷ್ಟರ ಮೇಲೆ ಅವರ ಕಾದಂಬರಿಯ ಕುರಿತು ತಮಗನಿಸಿದ್ದನ್ನು ಹೇಳಿದ್ದಾರೆ. ಅದನ್ನು ಒಪ್ಪಬಹುದು, ಬಿಡಬಹುದು. ಆದರೆ ಅವರೇನೋ ಮಹಾ ತಪ್ಪು ಮಾಡಿದ್ದಾರ್‍ಎ ಎಂಬಂತೆ ಹರಿಹಾಯುವುದು ಯಾಕೆ? ಅನಂತಮೂರ್ತಿಯವರು ಭೈರಪ್ಪ ಕಾದಂಬರಿಕಾರರೇ ಅಲ್ಲ ಎಂದ ಮಾತ್ರಕ್ಕೆ ನಾಳೆಯಿಂದ ಭೈರಪ್ಪ ಕಾದಂಬರಿ ಬರೆಯಲಾರದವರಾಗಿ ಬಿಡುತ್ತಾರೆಯೆ ಅಥವಾ ಜನ ಅವರನ್ನು ಓದುವುದನ್ನು ಬಿಟ್ಟು ಬಿಡುತ್ತಾರೆಯೆ?
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ಭೈರಪ್ಪನವರ ಪಟಾಲಮ್ಮಿನ ಬಗ್ಗೆ ಹೆಚ್ಚಿನದನ್ನು ತಿಳಿಯಬಯಸುತ್ತೇನೆ. ಅವರು ಯಾವ ಯಾವ 'ಕ್ರೀಡಾ ಪಟು'ಗಳನ್ನು ಸೇರಿಸಿಕೊಂಡು ಸಮಕಾಲೀನ ಲೇಖಕನ ಮೇಲೆ ವಾಗ್ದಾಳಿಗೆ ನಿಂತಿದ್ದಾರೆ ಎಂಬುದನ್ನು ತಿಳಿಸಿದರೆ ಪುಣ್ಯ ಬಂದೀತು. ಹಾಗೆಯೇ 'ಆವರಣ'ವನ್ನು ಲೇಖಕನ ಕೃತಿಯಾಗಿ ನೋಡಲಾಗದೆ ತಮ್ಮ ಕಪ್ಪು ಗಾಜಿನ ಕನ್ನಡಿಯಲ್ಲಿ ಇನ್ನೊಬ್ಬರ ಪ್ರತಿಬಿಂಬವನ್ನು ನೋಡಹೊರಡುವುದು ಆರೋಗ್ಯಕರವಲ್ಲ ಎಂಬ ದೊಡ್ಡವರ ಮಾತನ್ನು ನೆನೆಯುತ್ತೇನೆ.
ಯಾರನ್ನೂ ನೋಯಿಸುವ ಇರಾದೆ ನನ್ನದಲ್ಲ...
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
http://thatskannada.oneindia.in/sahitya/article/280507avarana_ananthmurthy_debate.html
ಇನ್ನಷ್ಟು ಜಗಳವನ್ನು ಕಂಡು ನಲಿಯಲು, ಅಲ್ಲಿ ಇಣುಕಿ. ( comments ನೋಡಿ )
- ಮಾಯ್ಸ
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
ನರೇಂದ್ರ ಅವರ ಮಾತುಗಳಿಗೆ ನನ್ನ ಸಹಮತವಿದೆ. ಗೆಳೆಯರೊಬ್ಬರ ಮೂಲಕ ಆಕಸ್ಮಿಕವಾಗಿ ನಿನ್ನೆ ತಾನೇ ಅನಂತಮೂರ್ತಿ ಅವರ ಭಾಷಣದ ಪೂರ್ಣ ಪಾಠ ಓದಲು ಸಿಕ್ಕಿತು. ಆ ಇಡೀ ಭಾಷಣದಲ್ಲಿ ಅವರು ತಾವು ಭೈರಪ್ಪನವರ ಮೇಲೆ ಮಾಡಿದ ಆರೋಪಗಳಿಗೆ ಸಮರ್ಥನೆಯನ್ನೂ ಒದಗಿಸಿದ್ದಾರೆ ಅಂತನ್ನಿಸಿತು. ಪತ್ರಿಕಾ ಮಾಧ್ಯಮಗಳು ಅವರ ಕೆಲವೇ ಕೆಲವು ಮಾತುಗಳನ್ನಷ್ಟೇ ಹೈಲೈಟ್ ಮಾಡಿ ವಿವಾದ ಎಬ್ಬಿಸಿವೆ. ಭೈರಪ್ಪನವರ ಜೊತೆಗಿನ ಅವರ ಒಡನಾಟದ ಬಗ್ಗೆ, ತಮ್ಮ ಮಾತಿಗೆ ಅವರು ಒದಗಿಸುವ ಸಮರ್ಥನೆಯ ಬಗ್ಗೆ ಎಲ್ಲಿಯೂ ಯಾರೂ ಬರೆದಿಲ್ಲ.
ತಮಾಷೆ ಎಂದರೆ, ಅವರು ಆ ಭಾಷಣದಲ್ಲೇ ತಮಗೆ ಪತ್ರಿಕಾ ಪ್ರತಿನಿಧಿಗಳೆಂದರೆ ಭಯ, ಏನೋ ಹೇಳಿದ್ದನ್ನು ಏನೇನೋ ಮಾಡಿ ಹಾಕಿರುತ್ತಾರೆ ಅಂತ ಹೇಳಿದ್ದರು! ಇಷ್ಟಾಗಿಯೂ ಅವರು ಹೇಳಿದ್ದು `ಏನೇನೋ' ಆಗಿಯೇ ಪ್ರಕಟವಾಗಿದ್ದು ದುರಂತ.
ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
Kadambariyalli baruva Shastri patra tave endukodu sahisade adida matu adare avara vyaktitvakke edu sariyada helike yallvo athava avara nijaswarupane aduvo