March 16, 2011 - 11:48am
ನನಗೆ ತಿರುಪತಿ ಎಂದರೆ, ವೆಂಕಟೇಶ್ವರ ಎಂದರೆ ಪಂಚಪ್ರಾಣ. ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡುತ್ತೇನೆ. ಪ್ರತಿ ವರ್ಷ ಜನವರಿ ೨೬ ರಂದು ಹೋಗುವ ಪರಿಪಾಟಲಿತ್ತು. ಈ ಬಾರಿ ಕೆಲವು ಕಾರಣಗಳಿಂದ ಅಂದು ಹೋಗಲಾಗಲಿಲ್ಲ. ನಂತರ ಹೋಗೋಣ ಎಂದುಕೊಳ್ಳುವಷ್ಟರಲ್ಲಿ ಮದುವೆ ಆಯಿತು. ಆಮೇಲೆ ಹೋಗೋಣ ಅನ್ನುವಷ್ಟರಲ್ಲಿ ಬಹಳಷ್ಟು ಮಂದಿ ಮದುವೆ ಆದ ಮೇಲೆ ೬ ತಿಂಗಳು ತಿರುಪತಿಗೆ ಹೋಗುವ ಹಾಗಿಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ಸಂಪರ್ಪಕವಾದ ಉತ್ತರ ಯಾರಿಂದಲೂ ಸಿಗುತ್ತಿಲ್ಲ. ಆದರೆ ಹೋಗಬಾರದು ಎಂದು ಮಾತ್ರ ಹೇಳುತ್ತಿದ್ದಾರೆ. ಯಾರಿಗಾದರೂ ಸರಿಯಾದ ಕಾರಣ ತಿಳಿದಿದ್ದರೆ ತಿಳಿಸುವಿರ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಜಯಂತ್, ಶ್ರೀನಿವಾಸ ದೇವರು ಪದ್ಮಾವತಿಯನ್ನು ಮದುವೆಯಾದ ನಂತರ ಆರು ತಿಂಗಳು ಸುವರ್ಣಮುಖಿ ನದಿ ತೀರದ ಅಗಸ್ತ್ಯಾಶ್ರಮದಲ್ಲಿ ಕಳೆದ ನಂತರ ಹೋಗಿದ್ದಂತೆ ತಿರುಪತಿಗೆ. ನವಿವಾಹಿತರು ಬೆಟ್ಟ ಹತ್ತಬಾರದು ಎನ್ನುವುದು ಲೋಕ ನೀತಿಯಂತೆ.ಹೆಚ್ಚು ದಣಿದರೆ ಗೃಹಸ್ಥಾಶ್ರಮದ ಇತರೆ ಕಾರ್ಯಗಳಿಗೆ ಅಡ್ಡಿ ಬರಬಹುದು ಎನ್ನುವ ಮುನ್ನೆಚ್ಚರಿಕೆ ಇರಬೇಕು.
ಸಾಮಾನ್ಯವಾಗಿ ನವಿವಾಹಿತರು romantic ಸ್ಥಳಗಳಿಗೆ ಹೋಗುತ್ತಾರೆ ಮದುವೆಯಾದ ಹೊಸತರಲ್ಲಿ.
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಅಬ್ದುಲ್ ಅವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.<<ಶ್ರೀನಿವಾಸ ದೇವರು ಪದ್ಮಾವತಿಯನ್ನು ಮದುವೆಯಾದ ನಂತರ ಆರು ತಿಂಗಳು ಸುವರ್ಣಮುಖಿ ನದಿ ತೀರದ ಅಗಸ್ತ್ಯಾಶ್ರಮದಲ್ಲಿ ಕಳೆದ ನಂತರ ಹೋಗಿದ್ದಂತೆ ತಿರುಪತಿಗೆ>> ಈ ಸಂಗತಿ ಹೇಳಿದ್ದರು.ಜೊತೆಗೆ ದೇವರೇ ಮದುವೆಯಾದ ಆರು ತಿಂಗಳು ಬೆಟ್ಟ ಹತ್ತಿರಲಿಲ್ಲ ಹಾಗಾಗಿ ನಾವು ಹತ್ತುವ ಹಾಗಿಲ್ಲ ಎನ್ನುತ್ತಾರೆ.<<ಹೆಚ್ಚು ದಣಿದರೆ ಗೃಹಸ್ಥಾಶ್ರಮದ ಇತರೆ ಕಾರ್ಯಗಳಿಗೆ ಅಡ್ಡಿ ಬರಬಹುದು ಎನ್ನುವ ಮುನ್ನೆಚ್ಚರಿಕೆ ಇರಬೇಕು.>> ಇದರ ಬಗ್ಗೆ ಯಾರೂ ಏನೂ ಹೇಳಿಲ್ಲ.
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಜಯಂತ್
ಹೋಗಬಹುದು ಯಾವ ಅಡ್ಡಿಯೂ ಇಲ್ಲ. ನನಗೆ ತಿಳಿದಂತೆ ಮದುವೆ ಮುಂಜಿಯಾದ ನಂತರ ಶುಭಕಾರ್ಯ ಗಳನಂತರ ಮನೆದೇವರೆ ವೆಂಕಟೇಶ್ವರನಿದ್ದಲ್ಲಿ ಬೇಕೆಂದೆ ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಮಾಡುತ್ತಾರೆ. ನಮ್ಮ ಅತ್ತೆಯವರಲ್ಲಿ ಕೇಳಿದೆ ಅವರು ನಾವಂತು ಹೋಗುತ್ತೇವೆ , ಹೋಗಬಹುದು ಅಂದರು.
- ಹೋಗಿಬನ್ನಿ
(ಸೂಚನೆ: ಹೆಂಡತಿ ಗರ್ಭಿಣಿಯಾಗಿದ್ದಾಗ ಕರೆದೊಯ್ಯುವಂತಿಲ್ಲ ಅಂದರು ನಮ್ಮ ಅತ್ತೆಯವರು , :-) ನಿಮಗೆ ಸದ್ಯಕ್ಕೆ ಆ ಸಂದರ್ಪವಿಲ್ಲ ಅಂದುಕೋಳ್ತೀನಿ )
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಪಾರ್ಥಸಾರಥಿಯವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನೇನೋ ಹೋಗಲು ಸಿದ್ಧ ಆದರೆ ಹಿರಿಯರ ಮಾತು ಮೀರುವ ಹಾಗಿಲ್ಲ.
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಜಯಂತ್,
ತಿರುಪತಿಯಲ್ಲಿಯೇ ಮದುವೆಯಾಗುವವರು, ಮದುವೆಯಾದ ನಂತರ ತಿಮ್ಮಪ್ಪನ ದರ್ಶನ ಮಾಡದೇ ಕೆಳಗಿಳಿಯುತ್ತಾರೆಯೇ?
ಸುಮ್ಮನೇ ಪ್ರಶ್ನೆ ಬಂತು ಮನಸ್ಸಿನಲ್ಲಿ.
ನಾನಂತೂ ನನ್ನ ಮದುವೆಯಾಗಿ ಇಪ್ಪತ್ತೆರಡು ವರುಷ ಆಗುತ್ತಿದೆಯಾದರೂ, ಅತ್ತ ತಲೆ ಹಾಕಿಲ್ಲ.
ಅಲ್ಲದೇ, ನನ್ನ ಮದುವೆಗೆ ಮೊದಲೂ ನಾನತ್ತ ಹೋಗಿಲ್ಲ.
ಸದ್ಯಕ್ಕೆ ಆ ಯೋಚನೆಯೂ ಇಲ್ಲ.
-ಆಸು ಹೆಗ್ಡೆ
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
<<ತಿರುಪತಿಯಲ್ಲಿಯೇ ಮದುವೆಯಾಗುವವರು, ಮದುವೆಯಾದ ನಂತರ ತಿಮ್ಮಪ್ಪನ ದರ್ಶನ ಮಾಡದೇ ಕೆಳಗಿಳಿಯುತ್ತಾರೆಯೇ?>>ನನಗೂ ಇದೇ ಪ್ರಶ್ನೆ ಮೂಡಿ ಕೇಳಿದ್ದಕ್ಕೆ ಅದೆಲ್ಲ ತಲೆಹರಟೆ ಮಾಡಬೇಡ ಎಂದು ಉಪದೇಶಿಸಿದರು. :-)
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ನನ್ನ ಪ್ರಕಾರ ಇವೆಲ್ಲ ಮೂಢನಂಬಿಕೆಗಳೇ. ನಿಮಗೆ ಅದು ಸರಿ ಎನಿಸಿದರೆ ಆಚರಿಸಬಹುದು. ಇಲ್ಲ ಎಂದೆನಿಸಿದರೆ ಅದನ್ನು ಪಾಲಿಸಬೇಕಾಗಿಲ್ಲ. ಆದರೆ ಇಲ್ಲಿ ಒಂದು ವಿಷಯ. ನೀವು ಇದನ್ನು ಪಾಲಿಸದೇ ಇರುವುದರಿಂದ ನಿಮ್ಮ ಹಿತೈಷಿಗಳಿಗೆ ಬೇಜಾರಾಗುವುದಾರೆ ಅವರ ಮೇಲಿನ ಪ್ರೀತಿಗಾದರೂ ಆಚರಿಸಿ. ಯಾವುದೇ ತಪ್ಪಿಲ್ಲ. ಒಳ್ಳೆಯದೇ ಆಗುತ್ತದೆ.
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ನಿಜ ನೀರ್ಕಾಜೆ ಅವರೇ ಅವರಿಗೋಸ್ಕರ ಹೋಗದೇ ಸುಮ್ಮನಿದ್ದೇನೆ.
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
<<ಅದಕ್ಕೆ ಕಾರಣ ಕೇಳಿದರೆ ಸಂಪರ್ಪಕವಾದ ಉತ್ತರ ಯಾರಿಂದಲೂ ಸಿಗುತ್ತಿಲ್ಲ. ಆದರೆ ಹೋಗಬಾರದು ಎಂದು ಮಾತ್ರ ಹೇಳುತ್ತಿದ್ದಾರೆ.>>
ತಮ್ಮ ಅಪ್ಪ ಮತ್ತು ಅಮ್ಮ ಏನನ್ನುತ್ತಾರೆಯೇ, ಹಾಗೆಯೇ ಮಾಡಿ.
ನೂರು ಜನರನ್ನು ಕೇಳಲು ಹೋಗ್ಬೇಡಿ.
-ಆಸು
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಹೆಗ್ಡೆ ಅವರೇ ಅಪ್ಪ ಅಮ್ಮ ಕೂಡ ಹೋಗಬಾರದು ಎಂದಿದ್ದಾರೆ. <<ನೂರು ಜನರನ್ನು ಕೇಳಲು ಹೋಗ್ಬೇಡಿ.>>ಯಾರನ್ನೂ ಕೇಳುತ್ತಿರಲಿಲ್ಲ. ಆದರೆ ಸರಿಯಾದ ಮಾಹಿತಿ ಯಾರಿಂದಲಾದರೂ ಸಿಗಬಹುದೇನೋ ಎಂದು ಕೇಳಿದೆ ಅಷ್ಟೇ
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಕೆಲವು ಹಿರಿಯರು ಸ್ವಾನುಭವದಿಂದ (?) ಹೇಳುತ್ತಾರೆ, "ತಿಮ್ಮಪ್ಪನ ದರ್ಶನ ಮಾಡಬೇಕೆಂದು ಮನಸ್ಸಿನಲ್ಲಿ ಆಸೆಯಿಟ್ಟುಕೊಂಡಿದ್ದರೆ, ಆತನೇ ತನಗೆ ಬೇಕಾದಾಗ ಈ ರೀತಿ ಆಸೆ ಇಟ್ಟುಕೊಂಡವರನ್ನು ಪವಾಡಸದೃಶ್ಯವಾಗಿ ಕರೆದುಕೊಳ್ಳುತ್ತಾನೆ" ಎಂದು! ಹಾಗಿದ್ದರೆ ಅಲ್ಲಿಯವರೆಗೂ ನಿಶ್ಚಿಂತೆಯಿಂದಿರಬಹುದೇನೋ!
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಅದೂ ಸರಿ ಅನನ್ಯ ಅವರೇ. ನನಗೂ ಸುಮಾರು ಸಲ ಹೀಗೆ ಹೇಳಿದ್ದಾರೆ. ತಿರುಪತಿಗೆ ನಾವಂದುಕೊಂಡಾಗ ಹೋಗಲು ಆಗಲ್ಲ.ಆತನೇ ಕರೆಸಿಕೊಳ್ಳಬೇಕು ಎಂದು.
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಜಯಂತ್ ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು? ಈ ಪ್ರಶ್ನೆಗೆ ಉತ್ತರ ನನಗೆ ತಿಳಿದಿಲ್ಲ, ಇಂತದೊಂದು ಆಚಾರ ಇದೆ ಎನ್ನುವುದೇ ಇವತ್ತೇ ಗೊತ್ತಾಗಿದ್ದು, ಆದರೆ ತಿರುಪತಿಗೆ ಹೋಗುವುದಾದರೆ ಇದು ಸರಿಯಾದ ಸಮಯ. ನಾನು ಕಳೆದವಾರವಷ್ಟೇ ಹೋಗಿದ್ದೆ, ತಿರುಪತಿಯಲ್ಲಿ ಈಗ ಜನಜಂಗುಳಿ ಸಲ್ಪ ಕಡಿಮೆ ಇದೆ. ಕಳೆದವರುಷ ೩೦೦ ರುಪಾಯಿಯ ಶೀಘ್ರದರ್ಶನದಲ್ಲಿ ದೇವರದರ್ಶನಕ್ಕೆ ೩ ಘಂಟೆ ಸರತಿಯಲ್ಲಿ ನಿಂತಿದ್ದೆವು , ಆದರೆ ಈ ಬಾರಿ TTD ಯವರ ವೆಬ್ಸೈಟ್ ನಲ್ಲಿ ಬರೇ ೫೦ ರುಪಾಯೀಯ ಟಿಕೆಟ್ ನಲ್ಲಿ ೨ ಘಂಟೆಯಲ್ಲೇ ನಾವು ದೇವಸ್ಥಾನದ ಎಲ್ಲಾ ಕಾರ್ಯ ಮುಗಿಸಿ ಹೊರ ಬಂದೆವು.
ನಿಮ್ಮ
ಕಾಮತ್ ಕುಂಬ್ಳೆ
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ನಿಜ ಕುಂಬ್ಳೆ ಅವರೇ ಈಗ ಪರೀಕ್ಷಾ ಸಮಯವಾದ್ದರಿಂದ ಜನಜಂಗುಳಿ ಅಷ್ಟಾಗಿ ಇರುವುದಿಲ್ಲ. ದರ್ಶನಕ್ಕೆ ಇದು ಸೂಕ್ತ ಸಮಯ. ಆದರೆ ಏನು ಮಾಡುವುದು :-(
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಹಿಂದಿನಿಂದಲೂ ತಿರುಪತಿಗೆ ಹೋದವರೆಲ್ಲರೂ ಸಾಮಾನ್ಯವಾಗಿ ತಲೆ ಮುಡಿ ಕೊಡುವುದು ಪದ್ದತಿ, ಹಾಗಾಗಿ ಮದುವೆಯಾದ ತಕ್ಷಣ ತಿರುಪತಿಗೆ ಹೋದರೆ ಮುಡಿ ಕೊಡುವುದು ಸರಿ ಕಾಣುವುದಿಲ್ಲ ಇದನ್ನು ಗಮನದಲ್ಲಿ ಇಟ್ಟುಕೊಂಡು, ಮದುವೆಯಾದ ತಕ್ಷಣ ತಿರುಪತಿಗೆ ಬೇಡ ಎಂಬ ಪದ್ದತಿ ಮೂಡಿರಬಹುದು ಆದರೆ ಈಗ ಹಾಗಿಲ್ಲವಲ್ಲ. ಮುಡಿ ಕೊಡುವವರು ಕೊಡದಿದ್ದವರು ಎಲ್ಲರೂ ಹೋಗುತ್ತಾರೆ. ಆದ್ದರಿಂದ ದೇವರ ದರ್ಶನಕ್ಕೆ ಯವಾಗಲಾದರೆ ಏನಂತೆ ? ಅಂತೆಯೆ ಹಿರಿಯರ ನುಡಿ ದೈವೀಕ ನುಡಿತಾನೆ, ಆಮೇಲೆ ಹೋದರೂ ತಾನೆ ಏನು ಅಲ್ಲವೆ. ಇದು ನನ್ನ ಅನಿಸಿಕೆ. ತಮ್ಮ ವಿಶ್ವಾಸಿ ರಾಮಮೋಹನ
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
<<ಅಂತೆಯೆ ಹಿರಿಯರ ನುಡಿ ದೈವೀಕ ನುಡಿತಾನೆ,>>ಅದಕ್ಕೆ ಆಮೇಲೆ ಹೋಗೋಣ ಎಂದು ನಿರ್ಧರಿಸಿದ್ದೇನೆ ರಾಮ್ ಮೋಹನ್ ಅವರೇ
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ನವ ದಂಪತಿಗಳು ನವ ಉಲ್ಲಾಸದಲಿ ತಿರುಪತಿಯಲ್ಲಿ ಜನಜಂಗುಳಿ ಮರೆತು ಚೆಲ್ಲುಚೆಲ್ಲಾಗಿ ಆಡದಿರಲಿ ಎಂಬ ಉದ್ದೇಶದಿಂದ ಈ ರೀತಿ ಹೇಳಿಕೆ ಇದೆ ಎಂದು ನನಗೆ ಯಾರೋ ಹೇಳಿದ್ದು ನೆನಪಾಯ್ತು ...
ಉ: ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?
ಈ ಹೇಳಿಕೆ ಮೊದಲ ಬಾರಿ ಕೇಳಿದ್ದು ಭಲ್ಲೆ ಅವರೇ...ಸರಿಯಾಗಿ ಯೋಚಿಸಿದರೆ ಇದ್ದರೂ ಇರಬಹುದು ಅನಿಸುತ್ತೆ..