24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭಾರತದ ರಾಜಕಾರಣಿಗಳ ಸಮಸ್ಯೆ

June 6, 2011 - 7:46pm
Kadesh Karaguppi

 ಬಹಳ ಹಿಂದೆ ಕೇಳಿದ ಕಥೆ.
     (ಈ ಕಥೆ ನಡೆಯುವ ಕಾಲಘಟ್ಟದಲ್ಲಿ ಸ್ಯಾಮ್ ಪಿಟ್ರೋಡಾ ಅವರಿಂದ ಭಾರತದಲ್ಲಿ ಇನ್ನೂ ಮೊಬೈಲ್ ಕ್ರಾಂತಿ ನಡೆದಿರಲಿಲ್ಲ ಎಂದು ಭಾವಿಸಬೇಕು!)
 
     ಒಂದು ಸಲ ಭಾರತದ ರಾಜಕಾರಣಿಯೊಬ್ಬರು ಒಂದು ಅಪಘಾತದಲ್ಲಿ ಕಾರಿನಿಂದ ಪಾರಾಗುತ್ತಾರೆ(ಬಹಳಷ್ಟು ಹಗರಣಗಳಿಮದ ಪಾರಾದಂತೆ!). ಅಲೆದಾಡುತ್ತ ಒಂದು ಗದ್ದೆಯಲ್ಲಿ ಒಬ್ಬ ರೈತನನ್ನು ಕಂಡು, 'ನಾನು ರಾಜಕಾರಣಿ, ನನಗೆ ಊಟ ಕೊಡು' ಎನ್ನುತ್ತಾನೆ. ಆದರೆ ರೈತ ಒಂದು ಶರತ್ತಿನ ಮೇಲೆ ಊಟ ನೀಡುತ್ತೇನೆನ್ನುತ್ತಾನೆ. ನನ್ನ ಗದ್ದೆಯ ಕೆಲಸ ಮಾಡಿದರೆ ಮಾತ್ರ ನಿನಗೆ ಊಟ ಎನ್ನುತ್ತಾನೆ.
 
    ರಾಜಕಾರಣಿ: ಏನು ಕೆಲಸ?
  
    ರೈತ: ಅಲ್ಲಿ ನೋಡು, ಗದ್ದೆಯಲ್ಲಿ ಅಲ್ಲಲ್ಲಿ ಸಗಣಿ ಗೊಬ್ಬರದ ಗುಡ್ಡೆ ಬಿದ್ದಿದೆ, ಅದನ್ನು ಎಲ್ಲ ಕಡೆ ಸಮಾನವಾಗಿ ಹರಡು.
    
    ರಾಜಕಾರಣಿ, ರೈತ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ. ರೈತನಿಗೆ ರಾಜಕಾರಣಿಯ ಕೆಲಸ ನೋಡಿ ಖುಷಿ, ಆಶ್ಚರ್ಯ ಎರಡೂ ಒಟ್ಟಿಗೆ ಆಗುತ್ತವೆ. ರೈತ ರಾಜಕಾರಣಿಗೆ ಊಟ ಕೊಡುತ್ತಾನೆ.
    
     ಮರುದಿನ ಬೆಳಿಗ್ಗೆ ರೈತ ರಾಜಕಾರಣಿಗೆ, 'ಇವತ್ತು ನಿನಗೆ ಬಹಳ ಸರಳವಾದ ಕೆಲಸ' ಎನ್ನುತ್ತಾನೆ. ರಾಜಕಾರಣಿ 'ಏನು?' ಎಂದು ಕೇಳಿದಾಗ, ರೈತ, 'ಅಲ್ಲಿ ನೋಡು, ಆಲೂಗಡ್ಡೆಗಳ ರಾಶಿ ಬಿದ್ದಿದೆ, ಅದರಲ್ಲಿ ದೊಡ್ಡ ಆಲೂಗಡ್ಡೆಗಳನ್ನು ಆ ಮೂಲೆಯ ಹತ್ತಿರ ಇಡಬೇಕು, ಸಣ್ಣ ಆಲೂಗಡ್ಡೆಗಳನ್ನು ಈ ಮೂಲೆಯ ಬಳಿ ಇಡಬೇಕು' ಎಂದು ಹೇಳಿ ಹೊರಗಡೆ ಹೋಗುತ್ತಾನೆ.
    
     ಸ್ವಲ್ಪ ಸಮಯದ ನಂತರ ರೈತ ಬಂದು ನೋಡಿದಾಗ ಆಲೂಗಡ್ಡೆಗಳು ಇದ್ದ ಜಾಗದಲ್ಲೇ ಇರುತ್ತವೆ. ರಾಜಕಾರಣಿ ಒಂದು ಮೂಲೆಯಲ್ಲಿ ಅಳುತ್ತಾ ಕುಳಿತಿರುತ್ತಾನೆ.
    
     ರೈತ: ಏನಾಯ್ತು? ಯಾಕೆ ಅಳುತ್ತಿದ್ದೀಯ?
    
     ರಾಜಕಾರಣಿ: ನೀನು ಹೇಳಿದ ಕೆಲಸ ನನಗೆ ಮಾಡಲಾಗಲಿಲ್ಲ(ಅಳು), ಕೆಲಸ ಮಾಡದಿದ್ದರೆ ನೀನು ಊಟ ಕೊಡುವುದಿಲ್ಲ(ಜೋರಾಗಿ ಅಳು)
    
     ರೈತ: ಅಲ್ಲಯ್ಯ, ನಿನ್ನೆ ಅಷ್ಟು ತ್ರಾಸದಾಯಕ ಸಗಣಿ ಗೊಬ್ಬರ ಹರಡುವ ಕೆಲಸವನ್ನು ಒಬ್ಬನೇ ಮಾಡಿದೆ ಇವತ್ತು ಇಷ್ಟು ಸರಳ ಕೆಲಸವನ್ನು ನಿನಗೆ ಮಾಡಲಾಗಲಿಲ್ಲವೆ?
    
     ರಾಜಕಾರಣಿ: ಅದು ನಿನಗೆ ಗೊತ್ತಾಗಲ್ಲ, ನಮ್ಮ ರಾಜಕಾರಣಿಗಳ ಸಮಸ್ಯೆ ನಮಗಷ್ಟೇ ಗೊತ್ತು.
 
     ರೈತ: ಏನು ನಿಮ್ಮ ಸಮಸ್ಯೆ?
    
     ರಾಜಕಾರಣಿ: ಅಂಥಾ ಹೊಲಸು ಹಿಡಿಸುವ ಕೆಲಸ ಯಾವುದಿದ್ದರೂ ಹೇಳು, ನಾವು ಮಾಡುತ್ತೇವೆ. ಆದರೆ ಈ ಥರಾ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾತ್ರ ನಮ್ಮಿಂದ ಆಗದ ಮಾತು!!
 
    ಇದು ನಮ್ಮ ಭಾರತದ ಬಹುತೇಕ ರಾಜಕಾರಣಿಗಳ ಸಮಸ್ಯೆ.
 
                                                                         ಇಂತಿ ಎಲ್ಲರವ,
                                                                 ಕಾಡಸಿದ್ಧೇಶ್ವರ ಕರಗುಪ್ಪಿ
                                                                        ಹಿಡಕಲ್ ಡ್ಯಾಮ್


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ರಾಜಕಾರಣ ಎಂದರೆ ಏನೆಂದು ತುಂಬ ಮಾರ್ಮಿಕವಾಗಿ ಹೇಳಿದ್ದೀರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Kadesh Karaguppi on

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.