ವೇದ ಸುಳ್ಳಾದರೂ ಗಾದೆ ಸುಳ್ಳಾಗದು !!
.....ಅಂತ ಹಿರಿಯರು ಹೇಳಿದ್ದಾರೆ. ಕೆಲವು ಗಾದೆಗಳು ಅದನ್ನು ನಿರೂಪಿಸಿದೆ ಹಾಗೂ ಇವತ್ತಿಗೂ ಸತ್ಯವೇ! ಈ ಸತ್ಯದ ಪರವಾಗಿ ಒಂದು ಗಾದೆ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಬನ್ನಿ ಸ್ವಾಮಿ ಸ್ವಲ್ಪ ಸಮಾಜದಲ್ಲಿ ಇಣುಕೋಣ. ಸತ್ಯ ಏನೆಂದು ತಿಳಿಯಲು ಹೋದರೆ ಎಲ್ಲಿದೆ ! ಎಲ್ಲದರಲ್ಲಿಯೂ ಸುಳ್ಳಿನ ಸರಮಾಲೆ. ಕೋಕಾಕೋಲಾ ಕುಡಿಯಿರಿ ಅದರಲ್ಲಿ ಕೀಟನಾಶಕ ಇಲ್ಲ ಇದನ್ನು ಹೇಳುವದು ನಮ್ಮ ತಾರಾಮಣಿಗಳು, ತಾರಾ ಆಟಗಾರರು!! ಪ್ರಯೋಗಶಾಲೆಯಲ್ಲಿ ಏನು ಪರೀಕ್ಷೆ ಮಾಡುತ್ತಾರೆ? ಅದಕ್ಕಿಂತ ಹೆಚ್ಚಿನ ಮುತುವರ್ಜಿ ನಾವು ಅದನ್ನು ತಯಾರಿ ಮಾಡುವಾಗ ವಹಿಸುತ್ತೇವೆ ಎಂದು ಕೋಲಾ ಕಂ. ಉವಾಚ ಯಾರು ಸತ್ಯ ಯಾವದು ಸತ್ಯ !!
ಸ್ಯಾಂಪಲ್ ೨ : ನಮ್ಮ ಸಾಬೂನಿನಲ್ಲಿ ನಿಮ್ಮ ಮಕ್ಕಳನ್ನು ಸ್ನಾನ ಮಾಡಿಸಿ. ಅವಳು ವಿಶ್ವ ಸುಂದರಿ ಗ್ಯಾರಂಟಿ !! ಸಾಬೂನು ಕಂ. ಉವಾಚ.
ಸ್ಯಾಂಪಲ್ ೩ : ಸೈಕಲ್ ಮೇಲೆ ಸಿಮೆಂಟ್ ಚೀಲ ಇದ್ದರೆ ಅದು ಟ್ರಕ್ಕಿಗೆ ಡಿಕ್ಕಿ ಹೊಡೆದಾಗ ಟ್ರಕ್ ಗಾಯಬ್ ಸಿಮೆಂಟ್ ಚೀಲ ಇರುವ ಸೈಕಲ್ ಗೆ ಸಣ್ಣ ಗೀರು ಸಹ ಇಲ್ಲ !!! ಸಿಮೆಂಟ್ ಮಜಬೂತಾಗಿದೆ.
ಹೀಗೆಯೆ ಬೇಕಾದಷ್ತು ವಿಷಯಗಳಿವೆ.
ಹೀಗಾಗಿ ಪ್ರಚಲಿತದಲ್ಲಿ ಗಾದೆಯು ಹೀಗೆ ಇದ್ದರೆ ಸೂಕ್ತವೇನೋ !!
-
ಸತ್ಯ ಹೇಳಿದವ ಸತ್ತೇ ಹೋದ ! ಅನ್ಯಾಯ ಮಾಡಿದವ ಅನ್ನ ತಿಂದ !!
ಹುಡುಕಾಟದಲ್ಲಿ ಕಳೆದುಹೋದ ಕಡೇಶಮ್ಮಿ !!

- kadeshammi ರವರ ಬ್ಲಾಗ್
- Login or register to post comments
- 444 hits
- Email this blog




RSS:
ಪ್ರತಿಕ್ರಿಯೆಗಳು
ಉ: ವೇದ ಸುಳ್ಳಾದರೂ ಗಾದೆ ಸುಳ್ಳಾಗದು !!
ಅಡ್ವರ್ಟೈಸ್ ಮೆಂಟುಗಳ್ನು ನೋಡಿ ನೀವು ಗಾದೆಯನ್ನು ಬದಲಾಯಿಸಬೇಕಾದ ಅಗತ್ಯವಿಲ್ಲ. ಜಾಹೀರಾತು ಅಂದರೇನೇ ಸುಳ್ಳು ಹೇಳುವುದು ಎಂದರ್ಥ. ಅಥವಾ ಇದೊಂದು ರೀತಿಯಲ್ಲಿ, ಅರ್ಧ ಅಥವಾ ಸತ್ಯದ ಒಂದು ಪಾರ್ಶ್ವವನ್ನು ಮಾತ್ರ ಹೇಳುವುದು ಎಂದರ್ಥ. ಈಗ ನೀವು ನಿಮ್ಮ ಗೆಳೆಯನೊಬ್ಬನ ಬಗ್ಗೆ ನಿಮ್ಮ ಮನೆಯವರಿಗೆ ಪರಿಚಯಿಸಬೇಕು ಅಂದುಕೊಳ್ಳಿ ಆಗ ನೀವು ಸತ್ಯ ಸಂಧರಾಗಿ ಇವನು ಸಿಗರೇಟು ಸೇದುತ್ತಾನೆ, ಕುಡಿಯುತ್ತಾನೆ ಆದರೆ ತೂರಾಡುವುದಿಲ್ಲ. ರಸ್ತೆಯಲ್ಲಿ ಹೋಗಿ ಬರುವ ಹೆಣ್ಣು ಮಕ್ಕಳನ್ನು ಕೆಣಕುತ್ತಾನೆ ಎಂದು ಹೇಳಿ ಇವನು ನನ್ನ ಬೆಸ್ಟ್ ಫ್ರೆಂಡು ತುಂಬಾ ಜಾಣ ಅಂತ ಹೇಳುತ್ತೀರೋ ಅಥವಾ ನಂತರದ ಎರಡೇ ಸಂಗತಿಯನ್ನು ಹೇಳಿ ಸುಮ್ಮನಾಗುತ್ತೀರೋ...? ಇದೂ ಒಂದು ಬಗೆಯ ಜಾಹೀರಾತು ಅಲ್ಲವೇ?
ಕೆಲವು ಅತಿರೇಕದ ಉದಾಹರಣೆಗಳನ್ನು ಕೊಟ್ಟು ನನ್ನನ್ನು ಸಿಕ್ಕಿಸಬೇಡಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com