ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಮಂದಿರವು ಚೆನ್ನಿದೆಯೆ, ಆರಾಮವಾಗಿದೆಯೆ ?

ಗುನುಗುತಿಹೆ ನಾನು ಇಂದು - ೧

October 3, 2008 - 9:45pm — kalpana

ನನಗೆ ಶಾಸ್ತ್ರೀಯ ಸಂಗೀತ ಇಷ್ಟವಿದ್ದರೂ ಹಂಸಾನಂದಿಗಳ ತರಹ ಅದನ್ನು ಅರೆದು ತಿಳಿದುಕೊಂಡಿಲ್ಲ. ಜೊತೆಗೆ ಜಾಸ್ತಿ ಹೊತ್ತು ಶಾಸ್ತ್ರೀಯ ಸಂಗೀತ ಕೇಳಿಸಿಕೊಂಡರೆ ಒಂಥರ ಸಣ್ಣಗೆ ತಲೆನೋವು ಶುರುವಾಗುತ್ತೆ, ಬಹಳ ಕಷ್ಟದ ಗಣಿತ ಸಮಸ್ಯೆ ಬಿಡಿಸಿದ ಹಾಗೆ Smiling ಅದೇ ಚಿತ್ರಗೀತೆ ವಿಷಯ ಬೇರೆ. ಅದು ಕೇಳಿಸಿಕೊಳ್ಳದ ದಿನವೇ ಇಲ್ಲವೆನ್ನಬಹುದು. ಯಾಕೆ ಹೀಗೇಂತ? ಒಂದು ಸ್ವ-ವಿಶ್ಲೇಷಣೆ ಏನಪ್ಪ ಅಂದ್ರೆ, ಶಾಸ್ತ್ರೀಯ ಸಂಗೀತದಿಂದ ನನ್ನ ತಲೆಯ ನ್ಯೂರಾನ್ಸ್ ಸಿಕ್ಕಾಪಟ್ಟೆ ಉತ್ಸುಕಗೊಂಡು ಕುಣಿದಾಡಿ ದಣಿಯುತ್ತವೇನೋ. ಅದೇ ಅರ್ಥವಿಲ್ಲದ ಸಾಹಿತ್ಯದ ಜೊತೆಗೆ ಹೊಸೆದಿರುವ ಒಂದು ಸುಲಭದ ಚಿತ್ರಗೀತೆಯ ಸ್ವರ ನನ್ನ ನ್ಯೂರಾನ್ಗಳಿಗೆ ಹೆಚ್ಚು ತೊಂದರೆಯಿಲ್ಲದೆ ಜೀರ್ಣಿಸಿಕೊಳ್ಳುವಂತೆ ಮಾಡುತ್ತವೇನೋ. ಆದ್ದರಿಂದ ನಾನು ನನ್ನ ಮಟ್ಟಿಗೆ ಕಂಡುಕೊಂಡಿರುವ ಸತ್ಯ ಏನೆಂದರೆ, ಶಾಸ್ತ್ರೀಯ ಸಂಗೀತ ಮದುವೆಯೂಟದ ಹಾಗೆ, ಪದೇ ಪದೇ ತಿಂದರೆ ಜೀರ್ಣಿಸಿಕೊಳ್ಳಲು ಕಷ್ಟ. ಚಿತ್ರಗೀತೆಗಳು ತಿಳಿಸಾರನ್ನದ ಹಾಗೆ. ದಿನವೂ ತಿನ್ನಬಹುದು. ಆದ್ರೆ ಈಗ ಹಂಸಾನಂದಿಗಳು ದಿನವೂ ಹಬ್ಬದೂಟ ಬಡಿಸುತ್ತಿದ್ದಾರಲ್ಲ? ಅದನ್ನೂ ನೋಡಿಯೂ ತಿನ್ನದೆ ಹೇಗಿರಲಿ? ಹೀಗಾಗಿ ನಾನು ಅವರ ಲೇಖನ ಓದಿ, ಸಂಗೀತ ಕೇಳಿಸಿಕೊಂಡ ಮೇಲೆ ಒಂದು ಚಿತ್ರಗೀತೆ ಕೇಳಿಸಿಕೊಳ್ಳುತ್ತೇನೆ. ತಲೆನೋವು ಮಾಯ! (ನೋ ಅಫೆನ್ಸ್ ಹಂಸಾನಂದಿಗಳೆ Smiling)

ನಾನು ಈಗ ಗುನುಗುತ್ತಿರುವ ಚಿತ್ರಗೀತೆ ಇದು. ಸಾಹಿತ್ಯ ಏನಂದ್ರೆ ಅದು ಇದೆ, ಬಾಯಿಗೆ ಬಂದಿದ್ದು ಹಾಡಬಹುದು, ಪ್ರಾಸ ಹೊಂದಿದರೆ ಸರಿ Smiling


  • ಚಿತ್ರಗೀತೆ
~.~
  • kalpana ರವರ ಬ್ಲಾಗ್
  • Login or register to post comments
  • 256 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2008 - 9:53pm — hamsanandi

ಉ: ಗುನುಗುತಿಹೆ ನಾನು ಇಂದು - ೧

hamsanandi's picture

Smiling

ಇನ್ನೊಂದು ಐದು ದಿನ ಹಬ್ಬದೂಟ ಮಾಡಿಬಿಡ್ರೀ! ಆಮೇಲೆ ಸ್ವಲ್ಪ ಸುಧಾರಿಸ್ಕೋಬಹುದು. ಅಲ್ವಾ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:13pm — kalpana

ಉ: ಗುನುಗುತಿಹೆ ನಾನು ಇಂದು - ೧

kalpana's picture

ಹಂಸಾನಂದಿಗಳೆ,
ಭಾರತದಲ್ಲಿದ್ದಿದ್ದರೆ ದಿನವೂ ಮದುವೆ, ಮುಂಜಿಯೂಟ ಬೀಳುತ್ತಿತ್ತಲ್ವೆ? ಆದ್ದರಿಂದ ನಿಮ್ಮ ನಳಪಾಕ ಖಂಡಿತ ನಿಲ್ಲಿಸಬೇಡಿ. ನಾನೇ ಅಲ್ಲಿಯವರ ತರಹ ಹೊಟ್ಟೆ ಅಡ್ಜಸ್ಟ್ ಮಾಡ್ಕೋತೀನಿ Smiling

ಅಂದ ಹಾಗೆ, ಈ ಮೇಲಿನ ಹಾಡನ್ನು ಹಾಡಿರೋದು ಶಾಸ್ತ್ರೀಯ ಸಂಗೀತ ಸೊಗಸಾಗಿ ಹಾಡುವ ಬಾಂಬೆ ಜಯಶ್ರೀ! ಬಹಳ versatile ಅಲ್ವ?
~ಕಲ್ಪನ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 3:39am — hamsanandi

ಉ: ಗುನುಗುತಿಹೆ ನಾನು ಇಂದು - ೧

hamsanandi's picture

ಗೊತ್ತಿತ್ತು - ಆದ್ರೂ ನನಗೆ ಆಕೆ ಹೇಳೋ ಶಾಸ್ತ್ರೀಯ ಸಂಗೀತವೇ ಹೆಚ್ಚು ಹಿಡಿಸುತ್ತೆ Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತ್ಯಾಗರಾಜ ಮತ್ತು ಪಾಶ್ಚಾತ್ಯ ಸಂಗೀತ
  • ಪುರಂದರದಾಸರ ಎರಡು ಪದಗಳು
  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಒಂದು ಏರ್ಟೆಲ್ ಕಾಲರ್ ಟ್ಯೂನ್ ಬೇಕಾಗಿದೆ ?
  • ಜಪಾನಿಗ ಸಂತೋಶಕ್ಕೆ ಹಾಡಿದ ಕನ್ನಡದ ಹಾಡು
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಖಾಲಿ ಬಾಟಲಿ
  • ಮೌನ ಎದೆ
  • ನಾನೂ ಸಮರ್ಥನಾಗುವೆ-ಭಾಗ ೧
  • ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಖಾಲಿ ಬಾಟಲಿ
    January 9, 2009 - 2:07pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:05pm
  • mahesha
    ಉ: ಮೌನ ಎದೆ
    January 9, 2009 - 2:03pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:02pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:01pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:00pm
  • palachandra
    ಉ: ಖಾಲಿ ಬಾಟಲಿ
    January 9, 2009 - 2:00pm
  • mahesha
    ಉ: ಖಾಲಿ ಬಾಟಲಿ
    January 9, 2009 - 2:00pm
  • asuhegde
    ಉ: ಖಾಲಿ ಬಾಟಲಿ
    January 9, 2009 - 1:54pm
  • benaka
    ಉ: ಹಂಸನಾದ
    January 9, 2009 - 1:51pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 171 ಅತಿಥಿಗಳು ಆನ್ಲೈನ್ ಇರುವರು.


ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator