ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...

ಯುಗ ಯುಗಾದಿ ಕಳೆದರೂ

April 8, 2008 - 12:16am — kalpana

ಜಗಳ ಮರಳಿ ಬರುತಿದೆ
ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!

ಇಲ್ಲಿ ಕೆಲವು ಬ್ಲಾಗಿಗರು ಕನ್ನಡಿಗರ ಮೇಲಿನ ತಮಿಳರ ಪುರಾತನ ಕ್ರೌರ್ಯಗಳನ್ನು ಪಟ್ಟಿ ಮಾಡಿದ್ದಾರೆ. ಮತ್ತೊಬ್ಬರು ತಮಿಳರ ದತ್ತು ಪುತ್ರ ರಜನಿಯನ್ನು ಬೆಂಬಲಿಸಿದ್ದಾರೆ. ಇದೆಲ್ಲ ಸರಿ, ಆದರೆ ಕನ್ನಡ-ತಮಿಳು ಜಗಳದಲ್ಲಿ ಇಬ್ಬರ ಕೂಸುಗಳೂ ಬಡವಾಗುವುದಿಲ್ಲವೆ? ಅದರ ಬಗ್ಗೆ ಯಾರು ಯೋಚಿಸಿತ್ತಿದ್ದಾರೆ? ದಿನನಿತ್ಯ ಕುಡಿಯುವ ನೀರಿಗೆ ಮೈಲಿಗಟ್ಟಲೆ ನಡೆಯುವ ಜನರಿಗೆ ಗಡಿ ವಿವಾದ ಕಟ್ಕೊಂಡು ಏನಾಗಬೇಕು ಸ್ವಾಮಿ?

ಹಳೆಯದೆಲ್ಲ ಮರೆತು, ಹೀಗೆ ಮಾಡಿದರೆ ಹೇಗೆ? ಅದೇನು ಯೋಜನೆ ಮಾಡ್ತಾರೋ, ಅದರ ಖರ್ಚು ಕರ್ನಾಟಕ-ತಮಿಳುನಾಡು ಅರ್ಧ-ಅರ್ಧ, ಅದರ ಫಲ ಅರ್ಧ-ಅರ್ಧ. ನಾನು ಇಬ್ಬರು ಮಕ್ಕಳ ತಾಯಿಯಾದ್ದರಿಂದ ನನ್ನ ತಲೆಗೆ ಹೊಳೆಯೋದು ಏನಿದ್ರೂ ಈ ತರಹದ ಸಿಂಪಲ್ ಸೊಲ್ಯೂಶನ್ Smiling ಖಂಡಿತ, ಆ ಭಾರತ ಮಾತೆಯೂ ಹೀಗೇನೇ ಯೋಚಿಸುತ್ತಿರುತ್ತಾಳೆ ಅಂತ ನನ್ನ ಊಹೆ. ಆದರೆ, ಏನು ಪ್ರಯೋಜನ? ಪಾಪ, ಭಾರತ ನಡೆಸೋ ಆ ಭಾರತ ಪಿತ ಹೇಗೆ ಯೋಚಿಸುತ್ತಾನೋ ಯಾರಿಗೆ ಗೊತ್ತು? Laughing out loud

  • ಕನ್ನಡ
  • ತಮಿಳು
  • ಯುಗಾದಿ
  • ಹೊಗೆನಕಲ್
  • ಹೊಸತು
~.~
  • kalpana ರವರ ಬ್ಲಾಗ್
  • Login or register to post comments
  • 438 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 9:07am — roopablrao

ಉ: ಯುಗ ಯುಗಾದಿ ಕಳೆದರೂ

roopablrao's picture

ಕಲ್ಪನಾರವರೇ
ನಿಮ್ಮ ಸಿಂಪಲ್ ಸೊಲ್ಯೂಷನ್ ಮಕ್ಕಳು ದೊಡ್ಡವರಾದಾಗ ಅನ್ವಯಿಸುವುದಿಲ್ಲ.
ಅವರವರು ದುಡಿದದ್ದು ಅವರವ್ರಿಗೆ ಹಾಗೆ ಆಗ ಎರೆಡೂ ರಾಜ್ಯಗಳ ಪಾಲಿಗೆ ಬಂದದ್ದು ಆ ರಾಜ್ಯಗಳಿಗೆ ಮೀಸಲು.
ಮತ್ತೊಬ್ಬರ ಆಸ್ತಿಗೆ ನಾವು ಬಾಯಿ ಬಿಡುತ್ತಿಲ್ಲ. ನಮ್ಮ ಆಸ್ತಿ ನಮಗುಳಿದರೆ ಸಾಕು. ಅದಕ್ಕೆ ಈ ಹೋರಾಟ. ಹೊಗೆನಕಲ್ ನಡುಗಡ್ಡೆ ಕರ್ನಾಟಕ ರಾಜ್ಯದ ನೆಲವಾಗಿದ್ದು ಅದನ್ನು ಅವರು ಹೇಗೆ ಅತಿಕ್ರಮಣ ಮಾಡಲು ಬಿಡುವುದು?
ಪಕ್ಕದಮನೆಯವರ ಬಗ್ಗೆ ಎಷ್ಟೆ ಪ್ರೀತಿ ಇದ್ದರೂ ಅವರಿಗೆ ನಮ್ಮ ಮನೆಯನ್ನು ಅವರೆದೆಂದು ಹೇಗೆ ಕೊಡುವುದು ?
ಕನ್ನಡಿಗರ ಬಗ್ಗೆ ಕಟು ಹೇಳಿಕೆ ನೀಡಿ ಅವರನ್ನು ಕೆರಳಿಸುವ ಬುದ್ದಿ ಅವರಿಗೇಕೆ?

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 10:10am — mahesha

ಉ: ಯುಗ ಯುಗಾದಿ ಕಳೆದರೂ

mahesha's picture

ನಿಮ್ಮ ಬೆನ್‌ದನಿ ನಮ್ಮದು!

ಒಂದು ಸಂತಸ ಇಬ್ಬರು ಸಂಪದತಿಯರ ಮಾತುಕತೆಯ ನಿಬ್ಬರ, ಅಪರೂಪ..

ಇಬ್ಬರಿಗೂ ಹಿರಿನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 10:24am — kalpana

ಉ: ಯುಗ ಯುಗಾದಿ ಕಳೆದರೂ

kalpana's picture

ನನಗೇನೋ ಈ ಸಮಸ್ಯೆ ಪರಿಹಾರವಾಗುವ ಹಾಗೆ ಕಾಣುತ್ತಿಲ್ಲ. ಕನ್ನಡಿಗರೂ, ತಮಿಳರೂ ಒಮ್ಮತದಿಂದ ಒಪ್ಪುವ ನ್ಯಾಯಂಗ ವರದಿ ಬರುವ ವೇಳೆಗೆ ಎಷ್ಟು ಜನರು ಸಾವು, ನೋವನ್ನಪ್ಪಿರುತ್ತಾರೋ ಗೊತ್ತಿಲ್ಲ. ನಾನೇನೋ ಇಲ್ಲಿ ದೂರದಲ್ಲಿ ಕೂತು ಮಾತನಾಡುತ್ತಿದ್ದೇನೆ. ಅಲ್ಲಿನ ನೆಲದಲ್ಲಿದ್ದಿದ್ದರೆ ಬಹುಶಃ ನನ್ನಲ್ಲೂ ನಿಮ್ಮಷ್ಟೇ ಕೆಚ್ಚಿರುತ್ತಿತ್ತೇನೋ? ಈಗಂತೂ ಇದು ಮಕ್ಕಳ ಜಗಳದ ಹಾಗೇ ಅನ್ನಿಸುತ್ತೆ.

ಇರಲಿ ಬಿಡಿ. ಸಂಪದದಲ್ಲಿ ಬೇರೆ ಯಾವ ಹೊರನಾಡು ಕನ್ನಡಿಗರೂ ಈ ವಿಷಯದಲ್ಲಿ ಚಕಾರವೆತ್ತಿದ ಹಾಗಿಲ್ಲ. ನಾನೂ ಸಹ ಇದು ನನಗೆ ಅರ್ಥವಾಗದ ಅಥವಾ ನನ್ನ ಪ್ರತಿಕ್ರಿಯೆಗೆ ಬೆಲೆಯಿಲ್ಲದ ಸಮಸ್ಯೆ ಅಂತ ಸುಮ್ಮನಿದ್ದುಬಿಡುವುದೇ ಲೇಸು. ಏಕೆಂದರೆ, ಎಷ್ಟಾದರೂ ದಿನನಿತ್ಯ ಅಲ್ಲಿನ ನ್ಯಾಯ-ಅನ್ಯಾಯಗಳ ಜೊತೆ ಏಗುವವರು ನೀವುಗಳು ತಾನೇ? (ಇದು ದಯವಿಟ್ಟು ವ್ಯಂಗ್ಯವೆಂದು ತಿಳಿಯಬೇಡಿ, ನಿಜವಿಷಯ ಹೇಳಿದ್ದೇನೆ ಅಷ್ಟೇ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 10:36am — roopablrao

ಉ: ಯುಗ ಯುಗಾದಿ ಕಳೆದರೂ

roopablrao's picture

ಕಲ್ಪನಾರವರೇ

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕಾವ್ಯವೇ ಇರುವಾಗ (ಮಹೇಶರವರೇ ಇದು ನನ್ನ ಸ್ವಂತದಲ್ಲ , ಕುವೆಂಪು ಅವರದು ಎಂದು ಹೇಳಿ ಮುಂದುವರೆಸುವೆ:))
ಎಲ್ಲೇ ಇದ್ದರೂ ಕನ್ನಡದಲ್ಲಿ ಕೀಲಿಸಿ ಖುಶಿಪಡುವ ನಿಮ್ಮ ಈ ಅಭಿಮಾನ ನಮ್ಮ ಕನ್ನಡಮ್ಮನ ಬೆನ್ನಿಗಿದ್ದರೇ ಸಾಕು.
ಅವಳ ಸಮಸ್ಯೆಗೆ ಪರಿಹಾರ ಕೊಡುವ ಹಕ್ಕು ಎಲ್ಲಾ ಕನ್ನಡಿಗರದ್ದಾಗಿದೆ. ಅದರ ಒಪ್ಪುತಪ್ಪಿನ ಪ್ರಶ್ನೆ ನಂತರದ್ದು
ನನ್ನ ಮುಂಚಿನ ಪ್ರತಿಕ್ರಿಯೆ ಇಂದನಿಮ್ಮ ಮನಸಿಗೇನಾದರೂ ನೋವಾಗಿದ್ದರೆ ಕ್ಷಮಿಸಿ. ಆ ಉದ್ದೇಶ ನನಗೆ ಖಂಡಿತ ಇರಲಿಲ್ಲ

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 10:43am — mahesha

ಉ: ಯುಗ ಯುಗಾದಿ ಕಳೆದರೂ

mahesha's picture

ಸಂಪದಿಗ ಸಂಪದತಿಯರು ಹಾಗೆಲ್ಲ ವಾದದ ಮಾತಿಗೆ ನೊಂದುಕೊಳ್ಳರು.. ಅಲಂ ವಿಷಾದೇಣ..!!

ಎಲ್ಲಾದರು ಇರು ಎಂತಾದರು ಎಂದೆಂದಿಗೂ ನೀ ಕನ್ನಡವಾಡ್ತಾರು.. ಆಗ ಕನ್ನಡವೇ ಸತ್ಯ ಕನ್ನಡವೇ ನಿತ್ಯ..!

ಕಡುನುಡಿಯುವುದು ಕನ್ನಡಿಗರ ಗುಣ [ಕರಾಮಾ].. ಅಲ್ವೇನೋ ಸುನಿಲ?!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 9:37pm — kalpana

ಉ: ಯುಗ ಯುಗಾದಿ ಕಳೆದರೂ

kalpana's picture

ಮಹೇಶರವರೇ,
ನಾನೂ ರೂಪಾ ಮಾತಾಡಿದರೆ ಅದ್ಯಾಕ್ರಿ ಅಷ್ಟೊಂದು ನನ್ನಿ ಹೇಳಿದ್ರಿ? ಇಬ್ಬರು ಹೆಂಗಸರು ಮಾತಾಡಿದರೆ ಅದು cat fight ಗೆ ತಿರುಗಬಹುದು ಅಂತ ಭಯಪಟ್ರಾ? Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 10:59pm — mahesha

ಉ: ಯುಗ ಯುಗಾದಿ ಕಳೆದರೂ

mahesha's picture

ಬೇಜಾರ್‍ ಮಾಡಿಕೋ ಬೇಡಿ...

"ಹೆಣ್ಣೇ ಕಾರಣ ಹಲ ಕದನ ಕಲಹ ವಿಶೇಷಗಳಿಗೆ! Smiling
ಹೆಂಗಳ್ ಇದ್ದೊಡೆ ಅತಿಸುಲಭ ಹುಲುಜಗಳ ಕಾದಾಟ"

ಅಂತ ನಾನೇನಾರ ಒಂದು ಪದ್ಯ ಬರೆದ್ರೆ, ನನ್ ಕತೆ... ದೇವಾ!!! Smiling

ಇಲ್ರೀ.. ಸಂಪದದಲ್ಲಿ ಹೆಂಗಸ್ರು ಬರೆಯೋದು ಕಡಿಮೆ ಅಶ್ಟೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 9:31pm — kalpana

ಉ: ಯುಗ ಯುಗಾದಿ ಕಳೆದರೂ

kalpana's picture

ರೂಪಾರವರೇ, ನಿಮ್ಮ ಮಾತಿನಿಂದ ನನ್ನ ಮನಸ್ಸಿಗೆ ಖಂಡಿತ ನೋವಾಗಲಿಲ್ಲ. ಆದರೆ, ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತಾಯಿತು. ವರುಷಕ್ಕೊಮ್ಮೆ ನಮ್ಮ ನಾಡಿಗೆ ಭೇಟಿಯಿತ್ತು, ನಮಸ್ಕಾರ-ಚೆನ್ನಾಗಿದ್ದೀರ-ಸರಿಯಿನ್ನು-ಹೋಗಿಬರ್ತೀವಿ, ಅಂತ ಪುರ್ರನೆ ಹಾರಿಬರುವವರು ನಾವು. ಅಲ್ಲಿ, ಕನ್ನಡ, ಶಾಲೆಗಳಿಂದ, ಅಂಗಡಿಗಳಿಂದ, ಆಟೋಗಳಿಂದ, ಮನೆಗಳಿಂದ, ಹೀಗೆ ಒಂದೊಂದೇ ಕಡೆಯಿಂದ ಕಣ್ಮರೆಯಾಗುತ್ತಿರುವುದನ್ನು ದಿನನಿತ್ಯ ನೋಡುತ್ತಿರುವವರು ನೀವು. ನಿಮ್ಮ ಮನಸ್ಸು ಈ ಪರಿಸ್ಥಿತಿಯಿಂದ ನನಗಿಂತ ಹೆಚ್ಚು ಉದ್ವಿಗ್ನಗೊಂಡರೆ ಅದು ಹೆಚ್ಚೇನೆಲ್ಲ.

ಮತ್ತು, ನನಗೆ ನನ್ನ ಅಭಿಪ್ರಾಯ ತಿಳಿಸುವ ಹಕ್ಕಿದೆ ನಿಜ. ಆದರೆ, ನಾನಿಲ್ಲಿ ದೂರದಲ್ಲಿ ಕೂತು ಕೇಳುವ ಸುದ್ದಿಯನ್ನು ಆಧರಿಸಿ ನೀಡುವ ಅಭಿಪ್ರಾಯಕ್ಕೆ ಬೆಲೆಯೇನು ಅಂತ ಅನ್ನಿಸಿತು? ಅಲ್ಲಿನ ನೈಜಸ್ಥಿತಿಗೆ ಅನ್ವಯವಾಗದೇ ಇರುವಂತಹ ನನ್ನ ಮಾತುಗಳು ಉರಿವ ಬೆಂಕಿಗೆ ತುಪ್ಪ ಸುರಿದ ಹಾಗಾಗಬಾರದು ನೋಡಿ! ಆದ್ದರಿಂದ, ಸುಮ್ಮನಿರುವುದೇ ಒಳ್ಳೆಯದು ಅಂದದ್ದು. ಇದು ನನ್ನ ಸ್ವಂತ "frustration"ನಿಂದ ಬಂದ ಮಾತು, ನಿಮ್ಮ ತಪ್ಪಿಲ್ಲ Smiling

ಕಡೆಯಲ್ಲಿ, ನಾನು ತಮಿಳರನ್ನು ಸಮರ್ಥಿಸುತ್ತಿಲ್ಲ. ಆದರೆ, ಪರಸ್ಪರ ದ್ವೇಷವಿಲ್ಲದ ಸಮರಸ ಜೀವನವನ್ನು ಸಮರ್ಥಿಸುತ್ತೇನೆ. ಇದು ಬರಿಯ ನನ್ನ ಕಲ್ಪನೆಯಾಗಿರಬಹುದು. ಆದರೆ, ಕಲ್ಪನ ನನ್ನ ಹೆಸರಲ್ಲವೇ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದ ರಾ ಬೇಂದ್ರೆಯವರ ಕವನ
  • " ಯುಗಯುಗಗಳು ಕಳೆದರೂ, ಯಗಾದಿ ಮರಳಿ ಬರುತಿದೆ "- ಬೇಂದ್ರೆಯವರ ಅಮರಗೀತೆ, ಇಂದಿಗೂ ಎಂದೆಂದಿಗೂ ಪ್ರಸ್ತುತ !
  • ಆಟೋ ರಿಕ್ಷಾ ಮೇಲೆ ಕಂಡದ್ದು .....
  • ಕನ್ನಡಪ್ರಭದಲ್ಲಿ ಯಡಿಯೂರಪ್ಪನವರ ಅರ್ಧಮೀಸೆ!
  • ೫೮ ನೆಯ 'ಗಣರಾಜ್ಯದಿನೋತ್ಸವ'ದ ಶುಭದಿನದ ಹಾರ್ದಿಕ ಶುಭಾಷಯಗಳು !
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 79 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator