ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಮಂದಿರವು ಚೆನ್ನಿದೆಯೆ, ಆರಾಮವಾಗಿದೆಯೆ ?

ನೀನೆ ನೀನೆ

June 9, 2008 - 3:56am — kalpana

ನನಗೆಲ್ಲಾ ನೀನೆ - ಅಲ್ಲಾ!!! ನಾನು ಬರೆಯ ಹೊರಟಿರುವುದು ಈ ಹಾಡಿನ ಬಗ್ಗೆ ಖಂಡಿತ ಅಲ್ಲ! ಬರೆಯುತ್ತಿರುವುದು, ಭಾರತ ಮತ್ತು ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ "ನೀನೆ ನೀನೆ" ಚಿತ್ರದ ಬಗ್ಗೆ. ಚಿತ್ರಕಥೆ ಕೇಳಲಿಕ್ಕೆ ಇಷ್ಟವಿಲ್ಲಾಂದ್ರೆ ದಯವಿಟ್ಟು ಮುಂದೆ ಓದಬೇಡಿ.

ಸಾಂಸಾರಿಕ ಚಿತ್ರ, ಮನೆಮಂದಿಯಲ್ಲ ನಿಸ್ಸಂಕೋಚವಾಗಿ ಕೂತು ನೋಡಬಹುದಾದ ಚಿತ್ರ ಅಂತೆಲ್ಲ ಪ್ರಚಾರವಿತ್ತಲ್ಲ, ಸರಿ, ನೋಡೋಣ ಅಂತ ಹೋದೆ. ಚಿತ್ರಮಂದಿರ ನೊಣ ಹೊಡೀತಿತ್ತು. ಯಾಕೋ ಮುಂಗಾರು ಮಳೆ, ಗಾಳಿಪಟದ hype ಈ ಚಿತ್ರಕ್ಕಿಲ್ಲ. ಶಿವಧ್ವಜ್ ಅವರ ಚೊಚ್ಚಿಲ ನಿರ್ದೇಶನದ ಚಿತ್ರ. ಆದ್ದರಿಂದ ಸ್ವಲ್ಪ ಲೋಪದೋಷಗಳನ್ನು ಮನ್ನಿಸಬೇಕಾಗುತ್ತೆ. ಆದರೂ, ನಿರ್ದೇಶನದಲ್ಲಿ ಬಿಗಿ ಹಿಡಿತವಿಲ್ಲ ಎಂಬುದು ನಿಜ ಮಾತು. ಕಥೆಯಲ್ಲಿ ಸ್ವಲ್ಪ ನವೀನತೆ ಇದೆ. ಅಭಿಶೇಕ್ (ಧ್ಯಾನ್) ಪ್ರೀತಿಸಿ ಶ್ರೀಮಂತಳಾದ ನಂದಿತಾ(ಐಶ್ವರ್ಯ ನಾಗ್)ಳನ್ನು ಮದುವೆ ಆಗುತ್ತಾನೆ. ಅವಳನ್ನು ಸುಖದ ಸುಪ್ಪತ್ತಿಗೆಯಲ್ಲಿರಿಸಬೇಕೆಂದು ಮೈತುಂಬ ಸಾಲ ಮಾಡಿಕೊಂಡು ಒದ್ದಾಡುತ್ತಾನೆ. ಈ ಮಧ್ಯದಲ್ಲಿ ಅವರಿಗೆ ಮಗು ಹುಟ್ಟಿ, ಅದರ ಜವಾಬ್ದಾರಿಯೂ ಹೆಗಲ ಮೇಲೇರಿ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತೆ. ಸುಖಾಂತ್ಯವೋ ಅಲ್ಲವೋ ನಿಮ್ಮ ಊಹೆಗೆ ಬಿಡುತ್ತೇನೆ.

ನನಗೆ ಧ್ಯಾನ್ ನನ್ನು ನೋಡಲು ಇಷ್ಟ, for obvious reasons Smiling (ಹಾಗೇನೆ ದಿಗಂತ್ ಸಹ, ಅವನ cute ಗುಳಿಗೋಸ್ಕರ, ಆದ್ರೆ ವಿಷಯಕ್ಕೆ ಬರೋಣ Smiling) ಹೂಂ... ಎಲ್ಲಿದ್ದೆ? ಹಾಂ! ಧ್ಯಾನ್ ಇನ್ನೂ ಎಮೋಶನಲ್ ಸೀನನ್ನು ಸರಿಯಾಗಿ ನಿಭಾಯಿಸುವ ಶಕ್ತಿ ಹೊಂದಿಲ್ಲ. ಯಾವುದಾದರೂ acting schoolಗೆ ಹೋಗಿ ಕಲಿತು ಬಂದರೆ ಚೆನ್ನ. ತನ್ನ ಮೊದಲ ಚಿತ್ರವಾದರೂ ಐಶ್ವರ್ಯ ತುಂಬಾ ಚೆನ್ನಾಗಿಯೇ ಮಾಡಿದ್ದಾಳೆ. ಒಳ್ಳೆಯ expressive ಕಣ್ಣು ಮತ್ತು ಮುಖಚರ್ಯೆ ಹೊಂದಿದ್ದಾಳೆ. ಮುಂದೆ ಮಿಂಚಬಹುದು. ಅನಂತನಾಗ್, ಶರಣ್ ಸಹನಟರಾಗಿ ಒಳ್ಳೆಯ ಅಭಿನಯ ನೀಡಿದ್ದಾರೆ.

ನನಗೆ ನಿರಾಶೆ ನೀಡಿದ್ದು ಕೆಲವೆಡೆ ಅಸಂಬದ್ಧವಾಗಿ ಹೆಣೆದ ಚಿತ್ರಕಥೆಯ ರೀತಿ ಮತ್ತು ನಿರ್ದಿಷ್ಟ ಗುರಿಯಿಲ್ಲದೆ ಚಿತ್ರೀಕರಣವಾದ ದೃಶ್ಯಗಳು. ಉದಾಹರಣೆಗೆ - ನಂದಿತ, ತೀರ್ಥಹಳ್ಳಿಯ ಮನೆಯಲ್ಲಿ, ಅಭಿಯ ತಾಯಿಯ ಬಗ್ಗೆ ತಿಳಿದೊಡನೆ ಅವನಿಗೆ ಮಾನಸಿಕ ಬೆಂಬಲ ಸೂಚಿಸಿ ಹತ್ತಿರವಾಗುತ್ತಾಳೆ. ಇದು ಒಂಥರ ಬಹಳ emotionally charged scene. ಇದರ ನಂತರದ ಅವಳ ಪ್ರಶ್ನೆ- "what's next?" - ಎಂಬುದು ತೀರ ಹಾಸ್ಯಾಸ್ಪದವಾಗಿದೆ. ಮತ್ತೆ ಮುಂದಿನ ದೃಶ್ಯದಲ್ಲಿ, ಇದುವರೆಗೂ ನಡೆದಿರುವುದಕ್ಕೆ ಸಂಬಂಧವೇ ಇಲ್ಲದಂತೆ ಅವರಿಬ್ಬರೂ ನೇರ ಹಾಸಿಗೆಯೇರಿ ಮೊದಲ ರಾತ್ರಿ ಆಚರಿಸುವುದು ನಮ್ಮನ್ನು(ನನ್ನನ್ನಂತು) ಕಕ್ಕಾಬಿಕ್ಕಿಯಾಗುವಂತೆ ಮಾಡಿತು Smiling ಕೆಲವು ಪಾತ್ರಗಳಂತೂ waste bodyಗಳಂತೆ ಬಂದು, ಯಾರಿವರು, ಯಾಕೆ ಬಂದರು ಅಂದುಕೊಳ್ಳುವಷ್ಟರಲ್ಲಿ ಹೊರಟು ಹೋಗುತ್ತವೆ. ಕತೆಯ ಹಲವಾರು ಎಳೆಗಳು ತುಂಡು ತುಂಡಾಗಿ ಗತಿಗಾಣದೆ ಹಾಗೆಯೇ ಅನಾಥವಾಗಿ ಉಳಿದು ಹೋಗುತ್ತವೆ.

ಹಾಡುಗಳಲ್ಲಿ, "ಏನೋ ಇದು ಏನೋ" ಮತ್ತು "ವಿ ಆರ್ ಇನ್ ಲವ್" ಚೆನ್ನಾಗಿವೆ. ನಾನು ಹಿಂದೊಮ್ಮೆ ಹೇಳಿದಂತೆ ನಮ್ಮ ಚೈತ್ರಾ, ಸುನೀಧಿ ಚೌಹಾನಳನ್ನು ನಾಚಿಸುವಂತೆ pop-effect ಕೊಟ್ಟು ಹಾಡುತ್ತಾಳೆ. ಅವಳಿಗೆ ಒಳ್ಳೆಯ ಹಾಡುಗಳು ಸಿಗಲಿ.

ಇನ್ನು, ನಿಮಗೆ ಕನ್ನಡ ಚಿತ್ರಗಳನ್ನು ಬೆಂಬಲಿಸಬೇಕೆಂದರೆ ಖಂಡಿತ ಚಿತ್ರ ನೋಡಲು ಹೋಗಿ. ನಾನು ಹೋಗಿದ್ದೂ ಅದಕ್ಕೇನೆ. ಮಚ್ಚು ಲಾಂಗು ಇಲ್ಲ, ತಲೆನೋವೇನು ಬರೋದಿಲ್ಲ. ಆದ್ರೆ, ಛೆ!, ಇದೇ ಚಿತ್ರನ ಇನ್ನೂ ಎಷ್ಟು ಚೆನ್ನಾಗಿ ತೆಗೀಬಹುದಿತ್ತು? ಅಂತ ಅನ್ನಿಸೋದಂತು ನಿಜ.

ನನ್ನ ರೇಟಿಂಗು - ೫ ರಲ್ಲಿ ೩ !

  • ಚಲನ ಚಿತ್ರ
  • ಚಿತ್ರ ವಿಮರ್ಶೆ
  • ನೀನೆ ನೀನೆ
~.~
  • kalpana ರವರ ಬ್ಲಾಗ್
  • Login or register to post comments
  • 351 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 23, 2008 - 12:37am — yuvapremi

ಉ: ನೀನೆ ನೀನೆ

yuvapremi's picture

ನಾನು ಈ ಚಿತ್ರದ ಬಗ್ಗೆ ಬಹಳ ನಿರೀಕ್ಷಿಸಿದ್ದೆ,
ಆದರೆ ಈ ಚಿತ್ರ ಮನಕ್ಕೆ ಅಷ್ಟು ನಾಟುವಂತಿಲ್ಲ ಎಂದು ತಿಳಿದು ಬೇಸರವಾಯ್ತು..!

ಹಾಯ ತಪ್ಪಿ ಗುಂಡಿಗೆ ಬಿದ್ದಂತಹ ಇತ್ತೀಚಿನ ರಾಶಿ ರಾಶಿ ಕನ್ನಡ ಚಿತ್ರಗಳ ಗೋಪುರದಲ್ಲಿ ಇದೊ ಒಂದಾಯ್ತು..! Sad
ನಮ್ಮೊರಿಗೊ, ಬಂದಿತ್ತಂತೆ, ಆದ್ರೆ ಒಂದೇ ದಿನಕ್ಕೆ ಮನಗೆ ಹೊರಟಿಹೋಯ್ತು....! Sad

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡೈರಿಯ ಕೆಲವು ಹಾಳೆಗಳು - ಭಾಗ ೨
  • ಹಸೀನಾ ಮತ್ತು ಪಹೇಲಿ
  • ಗಣೇಶ ಪಂಚರತ್ನ
  • ಹುಸಿ ಮುನಿಸಿನ ಹುಡುಗಿ
  • ಮಿಂಚಿನ ಓಟ
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
  • ನಾನು ಯಾವ ಕಾಲದಲ್ಲಿ ಇದ್ದೇನೆ...!?
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 548 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator