ಕನಸಿನ ಕನಸು
ಸಿಗದ ಸುಖದ ಕನಸು,
ಸಿಕ್ಕ ಮೇಲೆ ಹೊಸೆಯುವ,
ಸುಖಸಿಂಚಿತ ಕನಸುಗಳಿಗಿಂತ,
ಸೊಗಸು.
ಬೆಚ್ಚಗೆ ಮನದಲ್ಲಿ ಹುದುಗಿರು,
ಆಕಾರವ ಪಡೆಯದಿರು,
ಎಂದೂ ನನಸಾಗದೆ,
ನನ್ನಲ್ಲೇ ಇರು ನನ್ನ,
ಕನಸು.
- kalpana's blog
- Login or register to post comments
- 501 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕನಸಿನ ಕನಸು
:)
ಉ: ಕನಸಿನ ಕನಸು
ಇದಕ್ಕೆ ನಿಮ್ಮ ಕವಿತೆಯೇ ಸ್ಪೂರ್ತಿ ಅಂತೇನು ಹೇಳ್ಬೇಕಾಗಿಲ್ಲ ಅಲ್ವ? :-)
~ಕಲ್ಪನ
ಉ: ಕನಸಿನ ಕನಸು
ಹೇಳೋದೇನು ಬೇಕಿಲ್ಲ...ಗೊತ್ತಾಯ್ತು :)
ನನ್ನಿ!
--ಶ್ರೀ
ಉ: ಕನಸಿನ ಕನಸು
ನಿಮ್ಮ ಕನಸೆಂದೂ ನನಸಾಗದೇ ಇರಲಿ!
ಕನಸು ನನಸಾದರೆ ಇರುಳಲ್ಲಿ ನಿದ್ದೆ ಬೋರಿಂಗ್ ಆಗಬಹುದು. :)
ಉ: ಕನಸಿನ ಕನಸು
ಕಲ್ಪನಾ ಲೋಕದ ಕಲ್ಪನ
ಕನಸನ್ನು ಕನಸಾಗೆ ಉಳಿಸುವಾಸೆ
ಏಕೆ ಗೆಳತಿ ?!!
ಕಲ್ಪನೆಯ ಸೊಬಗು
ಸ್ವಪ್ನದ ಅರಹು
ಬದುಕಿನ ಹಾದಿ ತೋರುವುದು
ಅಲ್ಲವೆ ಗೆಳತಿ ?!!
:D :-D
ಉ: ಕನಸಿನ ಕನಸು
ಅಂತೂ ಮೌನ ಮುರಿದಿರಲ್ಲ :-) ನಿಮ್ಮ ಕವಿತೆಯೆ ನನ್ನದಕ್ಕಿಂತ ಚೆನ್ನಾಗಿದೆ :-)
~ಕಲ್ಪನ
ಉ: ಕನಸಿನ ಕನಸು
:D ಧನ್ಯವಾದ
ಕಲ್ಪನೆಯ ಮೊಗ್ಗು
ಮೌನವಾಗೆ ಅಲ್ಲವೆ ಬಿರಿಯುವುದು!!!!!
ಉ: ಕನಸಿನ ಕನಸು
ಒಮ್ಮೆ ನನಸಾದ ಮೇಲೆ ಮತ್ತೆ ಕನಸಿಲ್ಲ.
ಸೂಪರ್ ಥಾಟು :-)
ಉ: ಕನಸಿನ ಕನಸು
ಧನ್ಯವಾದಗಳು!
~ಕಲ್ಪನ
ಉ: ಕನಸಿನ ಕನಸು
ನಾವು ಕಂಡ ಸವಿಗನಸುಗಳು ನನಸಾಗಲಿ ಅಂತ ಬಯ್ಸಸುತ್ತಿದ್ದರೆ ನನಸಾಗದೆ ಕನಸಾಗೇ ಉಳಿ ಅಂತಿದೀರಾ !
ಆಸೆ ಇಲ್ಲ, ಕನಸ ನನಸಾಗಿಸುವ ಬಯಕೆ ಇಲ್ಲ , ವೈರಾಗ್ಯದ ಸಂಕೇತವೆ ?
ನಿಮ್ಮ ಕನಸಿಗೆ ಕೊಟ್ಟಿರುವ ಆಕಾರ ಚೆನ್ನಾಗಿದೆ
ರೂಪ
ಉ: ಕನಸಿನ ಕನಸು
ಧನ್ಯವಾದ ರೂಪ. ಈ ತರಹದ ಯೋಚನೆಗಳು ವೈರಾಗ್ಯವೆ ಎನ್ನುವುದು ನನಗೂ ಗೊತ್ತಿಲ್ಲ :-)
~ಕಲ್ಪನ
ಉ: ಕನಸಿನ ಕನಸು
ಹಿಂದೆ ಒಮ್ಮೆ ತಲಕಾವೇರಿಯ ಕಾವೇರಿ ಉಗಮ ಸ್ಥಾನ ನೋಡುತ್ತಾ ಖುಷಿಯಾಗಿ ನಿಂತಿದ್ದೆವು. ಆಗ ಹಿಂದಿಂದ ಕೇಳಿತು ನಮ್ಮೊಂದಿಗೆ ಬಂದಿದ್ದ ಒಬ್ಬ ತಿಮ್ಮ ಯಾರಿಗೋ ಹೇಳ್ತಾ ಇದ್ದ "ಇದೆಂತದು, ಬರೀ ಒಂದು ಹೊಂಡ, ನಾನೇನೋ ಅಂದುಕೊಂಡಿದ್ದೆ !". ಇದ ಕೇಳಿ ನಾವೆಲ್ಲಾ ಸುಸ್ತು :)
ಕಲ್ಪನಾರ ಮಾರ್ಮಿಕ ಕವನ ಓದಿ ಮೇಲಿನ ನನ್ನ ತಲಕಾವೇರಿಯಲ್ಲಾದ ನಿಜ ಅನುಭವ ನೆನಪಾಯಿತು. ಹೀಗೆ ನಮ್ಮ ಅನೇಕ ಕನಸು ನನಸಿನಲ್ಲಿ ಒಂದು ಹೊಂಡವೇ ಆಗಿರುತ್ತದೇನೋ ಅಲ್ಲವೇ :(
- ಅರವಿಂದ
ಉ: ಕನಸಿನ ಕನಸು
"ಹೀಗೆ ನಮ್ಮ ಅನೇಕ ಕನಸು ನನಸಿನಲ್ಲಿ ಒಂದು ಹೊಂಡವೇ ಆಗಿರುತ್ತದೇನೋ ಅಲ್ಲವೇ"
ಹೌದು, ಬೇರೆಯವರು ತಿಳಿ ಹೇಳಿದರೂ ಒಮ್ಮೊಮ್ಮೆ ಗೊತ್ತೆ ಆಗುವುದಿಲ್ಲ :-)
~ಕಲ್ಪನ
ಉ: ಕನಸಿನ ಕನಸು
ಬೇರೆಯವರು ಹೇಳಿದ್ದ ಕೇಳಿದರೆ ಎಲ್ಲಿ ಅವರ ಅಡಿಯಾಳಾಗುತ್ತೇವೇನೋ ಎನ್ನುವ ಭಯ !
- ಅರವಿಂದ
ಉ: ಕನಸಿನ ಕನಸು
ಅ.ನ.ಕೃ ಹೇಳಿದಂತೆ
ಒಳ್ಳೆದು ಅಂತ ಎಲ್ಲಿ ಇದ್ರೂ ನೀ ತಲೆಗೆ ಹಾಕ್ಕೊ ಅಂತ ನನ್ನ ಭಾವನೆ.
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಉ: ಕನಸಿನ ಕನಸು
ಕಲ್ಪನ
ನಿಮ್ಮ ಕನಸು ಚಂದ ಉಂಟು :)
ರಾಕೇಶ್ ಶೆಟ್ಟಿ :)
ಉ: ಕನಸಿನ ಕನಸು
ವಂದನೆಗಳು ರಾಕೇಶ್!
~ಕಲ್ಪನ
ಉ: ಕನಸಿನ ಕನಸು
ಕನಸುಗಳೇ ಹಾಗೆ ..........
ಕನಸೆಂದರೆ ರಾತ್ರಿಯ ಸುಖ ನಿದ್ದೆಯಲ್ಲಿ ಕಾಣುವಂತದ್ದಲ್ಲ, ಕನಸೆಂದರೆ ರಾತ್ರಿಯ ನಿದ್ದೆಯನ್ನು ಸೀಳಿಹಾಕುವಂತದ್ದು, ಅಂತಹ ಕನಸಾದರೆ ಎಂದೆಂದಿಗೂ ಸರಿ
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಉ: ಕನಸಿನ ಕನಸು
ಅರವಿಂದ್,
ನನಗೇನೋ ಕನಸನ್ನ ಸೀಳಿ ಹಾಕುವಂತಹ ಆಳವಾದ (ಕುಂಭಕರ್ಣನ) ನಿದ್ದೆ ಇಷ್ಟ . . ಕನಸೇ ಬೇಡ :)
- ಅರವಿಂದ
ಉ: ಕನಸಿನ ಕನಸು
ಅವರವರ ಭಾವಕ್ಕೆ ಭಕುತಿಗೆ............ ಅಲ್ವಾ ಅರವಿಂದ
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಉ: ಕನಸಿನ ಕನಸು
ಜ್ಯೋತಿಷ್ಯದಲ್ಲಿ ಹೇಳ್ತಾರಲ್ಲ . . ದ್ವಾದಶ ಭಾವಗಳು ಅಂತ :)
ಉ: ಕನಸಿನ ಕನಸು
ಹೌದು, ಇದೇ ತರಹ ಅಬ್ದುಲ್ ಕಲಾಮ್ ಹೇಳಿದ ಹಾಗೆ ನೆನಪು..
~ಕಲ್ಪನ
ಉ: ಕನಸಿನ ಕನಸು
ಅಮೂರ್ತ ಮನಸ್ಸಿಗೆ
ಕನಸಿನ ಮೂರ್ತದ ಬೆಚ್ಚನೆಯ ಭಾವವು ಸದಾ ಬದ್ರವಾಗಿರಲಿ.
ಕವನ ಚೆನ್ನಾಗಿದೆ.
manjunath s reddy
ಉ: ಕನಸಿನ ಕನಸು
ಧನ್ಯವಾದಗಳು !
~ಕಲ್ಪನ