Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ನನ್ನ ಲೋಕದಲ್ಲಿ ತುಸು ಹೊತ್ತು ವಿಹರಿಸಿ.

ಸಂತೋಷ ಆಹಾ.. ಆಹಾ..

March 25, 2008 - 11:29pm — kalpana

ಈ ದಿನನಿತ್ಯದ ಜಂಜಾಟದಲ್ಲಿ ಸಂತೋಷದ ಸಿಂಚನವೇ ಇಲ್ಲವಾಗಿದೆಯೆನಿಸಿ ಅದನ್ನು ಸಂಪಾದಿಸುವ ಬಗೆ ಹುಡುಕತೊಡಗಿದೆ. ಆದರೆ ಸಂತೋಷವೆಂಬುದು ಒಂದು ಮನಸ್ಸಿನ ಸ್ಥಿತಿಯಲ್ಲವೆ? ಅದನ್ನು ದುಡ್ಡಿಗೆ ಕೊಳ್ಳಲಾದೀತೇ? ಹೌದು, ಎಂದಿತು ನಾ ಓದಿದ ಒಂದು ಲೇಖನ. ಈ ಬ್ರಾಂಡ್ ನೇಮ್ ವಸ್ತುಗಳ ಹಿಂದೆ ಬಿದ್ದಿರುವ ಜನಾಂಗಕ್ಕೆ "Gucci" ಪರ್ಸ್ ಹಿಡಿದು ಹೊರಟರೆ ಸಿಗುವ ಸುಖ ಯಾವುದೋ ನೇಮ್ಲೆಸ್ ಬ್ರಾಂಡ್ನಿಂದ ಸಿಗೊಲ್ಲವಂತೆ. ಇದು ಕ್ಷಣಿಕ ಸಂತೋಷವೇ ಇರಬಹುದು, ಆದರೆ ದುಡ್ಡಿಗಂತೂ ಸಿಗುತ್ತೆ.

ಮತ್ತೆ ಇನ್ನೊಂದು ಬರಹದ ಪ್ರಕಾರ ನಮ್ಮ ಸಂತೋಷ ನಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಸ್ಥಿತಿಗತಿಯನ್ನು ಸಹ ಅವಲಂಬಿಸಿರುತ್ತದಂತೆ. ಅಂದರೆ, ನಮ್ಮ ಮನೆಯಲ್ಲಿ ಟಿವಿ, ಫ್ರಿಡ್ಜ್ ಇಲ್ಲದಿದ್ದರೆ, ನಮ್ಮ ನೆರೆಹೊರೆ ಮತ್ತು ಹತ್ತಿರದ ನೆಂಟರ ಮನೆಯಲ್ಲೂ ಇದೇ ರೀತಿ ಇದ್ದರೆ ನಾವು ಖುಷಿಯಾಗಿರುತ್ತೇವೆ. ಅವರ ಮನೆಯಲ್ಲೇನಾದರೂ ಬಿಗ್ ಸ್ಕ್ರೀನ್ ಟೀವಿ ತಂದರೆ, ಮುಗಿಯಿತು ಕತೆ, ಬಿತ್ತು ನಮ್ಮ ಸಂತೋಷಕ್ಕೆ ಕುತ್ತು Smiling ಹಾಗಾದರೆ, ಟಾಟ-ಬಿರ್ಲಾ ಮನೆಯವರು ಅಪ್ಪಿ ತಪ್ಪಿ ನನಗೆ "ಹಾಯ್" ಅಂದರೂ ನಾನು ಮಾತ್ರ ನನ್ನ ಸಂತೋಷ ಕಾಪಾಡಲು ಅವರಿಗೆ "ಟಾಟಾ-ಬೈಬೈ" ಅನ್ನಬೇಕಾಗುತ್ತೆ ನೋಡಿ! (ದುಂಡಿರಾಜ್ ಅವರ ಕ್ಷಮೆ ಬೇಡಿ ಅವರ ಜೋಕ್ ತಿರುಚುತ್ತಿದ್ದೇನೆ Eye-wink )

ನಿಮಗೇನಾದರೂ ಈ ಜಗತ್ತಿನಲ್ಲಿ ಸಂತೋಷದ ಸಾಗರದಲ್ಲಿ ತೇಲುತ್ತಿರುವ ಜನ ಯಾರು ಎಂಬ ಕುತೂಹಲವೇ? ಸರ್ವೆ ಮಾಡಿದವರು ಡೆನ್ಮಾರ್ಕಿನ ಜನ ಎಂದು ಖಚಿತಪಡಿಸಿದ್ದಾರೆ. ಡೇನಿಶ್ ಜನರು ಅಲ್ಪತೃಪ್ತರಂತೆ. ಎಲ್ಲರೂ ಹೆಚ್ಚು ಕಮ್ಮಿ ಒಂದೇ ರೀತಿಯ ಬದುಕು ಆರಿಸಿಕೊಂಡು, ಯಾವ ಅಪೇಕ್ಷೆಯೂ ಇಲ್ಲದೆ ಅದರಲ್ಲೇ ಜೀವಮಾನ ಕಳೆಯುತ್ತಾರಂತೆ. ಹುಂ...ಮತ್ತೆ ಹಾಗಾದರೆ ಎಲ್ಲರಿಗಿಂತಲೂ ಹೆಚ್ಚಿನದೇನಾದರೂ ಸಾಧಿಸಬೇಕು, ಈ ಸಮಾಜವನ್ನು ಉದ್ಧಾರ ಮಾಡಬೇಕು ಎನ್ನುವ ನನ್ನ ಮಹೋತ್ತರ ಆಸೆಗಳಿಗೆ ಇಂದೇ ತಿಲಾಂಜಲಿ ಕೊಡಬೇಕೇನೋ Smiling

ಸಂತೋಷದ ಹುಡುಕಾಟದಲ್ಲಿ ನನಗೆ ಅರಿವಾಗಿದ್ದು, ನಾನು ಸಂತೋಷವಾಗಿರಬೇಕಾದರೆ ನನ್ನ ಬಂಧು, ಬಳಗ, ಸ್ನೇಹಿತರು ಯಾರೂ ನನಗಿಂತ ಹೆಚ್ಚಿನ ಅಭಿವೃದ್ಧಿಗೆ ಬರದಿರಲಿ ಎಂದು ಹಾರೈಸಬೇಕು. ಜೊತೆಗೆ, ನಾನು ಯಾವುದೇ ಉನ್ನತ ಗುರಿಗಳನ್ನೂ ಹೊಂದದೆ ಬರಿಯ ಉ.ಮ.ಹೆ. ಯ ಜೀವನವನ್ನು ಸ್ವಾಗತಿಸಬೇಕು! ಎಲ್ಲರೂ ಹೀಗೇ ಯೋಚಿಸಿದರೆ, ಸ್ವಸಂತೋಷಕ್ಕೋಸ್ಕರ ಸೋಮಾರಿಗಳ ಸಾಮ್ರಾಜ್ಯವನ್ನು ಸ್ಥಾಪಿಸಬೇಕಾಗುತ್ತೆ ಅಷ್ಟೆ Smiling

ಮತ್ತೆ ಆಸೆಯೆ ದುಃಖಕ್ಕೆ ಮೂಲ ಅನ್ನುತ್ತಾರಲ್ಲ ವಿರಾಗಿಗಳು? ಆದರೆ, ಆಸೆಯನ್ನು ತ್ಯಜಿಸಿದರೆ ಸೃಷ್ಟಿಯೇ ನಿಂತುಹೋಗುವುದಿಲ್ಲವೆ? ಮಾನವಕುಲವೇ ನಾಶವಾಗುವುದಿಲ್ಲವೇ? ಇದೆಲ್ಲ ಯೋಚಿಸಿದರೆ ಕೊನೆಗನ್ನ್ನಿಸುವುದು, ಇದು ಒಂಥರ catch-22 ತರಹ. ಪೂರ್ಣ ಸಂತೃಪ್ತರಾದರೆ, ನಿಂತಲ್ಲೆ ನಿಲ್ಲುತ್ತೇವೆ, ಪ್ರಗತಿ ಸಾಧ್ಯವಿಲ್ಲ. ಆದರೆ ಬೇಕು ಎನ್ನುವ ತನಕ ದುಃಖ ತಪ್ಪಿದ್ದಲ್ಲ, ಸಂತಸ ಸಿಕ್ಕುವುದಿಲ್ಲ. ತಾವರೆಯ ಎಲೆಯ ಮೇಲಿನ ನೀರ ಹನಿಯಂತಿರಬೇಕು ಅಂತ ಮಾತ್ರ ಹೇಳಬೇಡಿ, ಪ್ಲೀಸ್! What a boring way to live! ಸುಖದಲ್ಲೂ, ದುಃಖದಲ್ಲೂ, ತಟಸ್ಥವಾಗಿ ಕಲ್ಲಿನಂತಿರಬೇಕೆ?

ಅಂತೂ ನನ್ನ ಸಂತೋಷ ಹೇಗೆ ಪಡೆಯಬೇಕೆಂಬ ಪ್ರಶ್ನೆಗೆ, ಉತ್ತರಗಳಿಗಿಂತ ಮರುಪ್ರಶ್ನೆಗಳೇ ಹೆಚ್ಚಾಗಿ ಕಾಣುತ್ತಿವೆ. ಈ ದೇವರು ವಿಚಾರ ಮಾಡಲು ತಲೆಗೊಂದಿಷ್ಟು ಬುದ್ಧಿ ಸುರಿದು ನಮ್ಮ ಜೀವನವೇ ಹಾಳು ಮಾಡ್ಬಿಟ್ಟ ಅನ್ಸುತ್ತೆ! Smiling ಒಟ್ಟಿನಲ್ಲಿ ಪುಟ್ಟ ಮಕ್ಕಳಂತೆ, ನಗು ಬಂದಾಗ ನಕ್ಕು ಬಿಟ್ಟು, ಅಳು ಬಂದಾಗ ಅತ್ತುಬಿಡೋದೆ ಒಳಿತು. ಏನೇನೋ ಮಾಡಿ, ಕಷ್ಟಪಟ್ಟು ಸಂತೋಷದ ಭಾವನೆ ಮನಸ್ಸಿನಲ್ಲಿ ಬಲವಂತವಾಗಿ ಬರಿಸಿಕೊಳ್ಳುವುದು ಹುಚ್ಚುತನ ಅನ್ನಿಸುತ್ತೆ. ಅದು ಮನಸ್ಸಿಗೆ ಬರಬೇಕಾದರೆ ಬರುತ್ತೆ, ಒಂದು ಕ್ಷಣ ನಿಲ್ಲುತ್ತೆ, ಆಗ ಅತ್ಯುತ್ತಮವಾಗಿ ಅದನ್ನು ಅನುಭವಿಸಿದರೆ ಸಾಕು. ಅಯ್ಯೋ, ಇದಲ್ಲ ಆ ಪರಮಾನಂದ, ಇನ್ನೂ ಏನೋ ಸಾಧನೆ ಮಾಡಿದರೆ ಮಾತ್ರ ಸಿಗುತ್ತಂತೆ, ಅದು ಇನ್ನೂ ಖುಷಿ ಕೊಡುತ್ತಂತೆ ಅಂತ ಕಾದು ಕುಳಿತು, ಈ ಸಂತೋಷದ ಕ್ಷಣವನ್ನೂ ಅನುಭವಿಸದೆ ಬಿಡುತ್ತೇವಲ್ಲ, ಅದು ಬಹುಶಃ ತಪ್ಪು. ಆ ಒಂದು ಸಂತೋಷದ ಕ್ಷಣ ಈ ಬರಹ ಬರೆಯುತ್ತಿರುವಾಗಲೇ ನನಗೆ ಏಕಿರಬಾರದು, ಈ ಬರಹ ಓದುತ್ತಿರುವಾಗಲೇ ನಿಮಗೇಕಿರಬಾರದು?

  • ತೃಪ್ತಿ
  • ಬದುಕು
  • ಸಂತೋಷ
  • ಸುಖ
Ornamental seperator
  • kalpana ರವರ ಬ್ಲಾಗ್
  • Login or register to post comments
  • 369 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 26, 2008 - 12:31pm — roopablrao

ಉ: ಸಂತೋಷ ಆಹಾ.. ಆಹಾ..

roopablrao's picture

ನನ್ನ ಚಿಕ್ಕಂದಿನಲ್ಲಿ ಸೈಕಲ್ ತೆಗೆದುಕೊಳ್ಳಬೇಕೆಂಬ ಆಸೆ ಬಹಳ ಇತ್ತು. ಆ ದಿನಗಳು ಬಹಳ ಕಷ್ಟದಾಗಿದ್ದರೆಂದ ಅದು ಸಾಧ್ಯವಾಗಿರಲಿಲ್ಲ. ಹಾಗು ಒಮ್ಮೆ ಗೊತ್ತಿರುವವರಿಂದ ಪಡೆದ ಸೈಕಲ್ನ ಒಂದು ವಾರ ತುಳಿದಾಗ ಆಗಿದ್ದ ಸಂತೋಷ ಈಗ ಕಾರ್ ಓಡಿಸಿದರೂ ಸಿಗಲಿಲ್ಲ
ನಮಗೆ ಹಂಬಲಿಸಿ ಪಡೆದ ವಸ್ತು ನಮಗೆ ಅತೀ ಸಂತೋಷ ಕೊಡುತ್ತವೆ ಅನ್ನಬಹುದೇನೋ?

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 9:49pm — kalpana

ಉ: ಸಂತೋಷ ಆಹಾ.. ಆಹಾ..

kalpana's picture

ಪ್ರತಿಕ್ರಿಯೆಗೆ ಧನ್ಯವಾದಗಳು ರೂಪ!

ನಾನು ಕಡೆಯಲ್ಲಿ ಹೇಳ ಹೊರಟಿದ್ದು - ಈ ಹಂಬಲಿಸಿ ಪಡೆವ ಉತ್ತುಂಗ ಸುಖದ ಭ್ರಮೆಯಲ್ಲಿ, ಈ ಗಳಿಗೆಯ ಸಂತೋಷವನ್ನು ಕಡೆಗಣಿಸುತ್ತಿದ್ದೇವಲ್ಲವೇ? ಸೈಕಲ್ ತುಳಿದ ಸಂತೋಷ ಕಾರು ಓಡಿಸುವುದಕ್ಕಿಂತ ಜಾಸ್ತಿ ಎಂದು ಕಾರಿನಲ್ಲಿ ಕೂತು ನೆನೆಸಿಕೊಳ್ಳುವುದು ತಪ್ಪೇನೋ ಎಂದು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಸರ್ವಸ್ವ'ದ ಬಗ್ಗೆ ಸರ್ವೇಸಾಮಾನ್ಯನ ಒಂದು ಸರ್ವೆ!
  • ಕನಸು
  • ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
  • ಸುಳ್ಳು
  • ಪ್ರೀತಿಗೆ ಯಾವ ಇನ್ಸುರನ್ಸೂ ಇಲ್ಲಾರಿ!!
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:53pm
  • Shivakumar.Revadi
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:40pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:26pm
  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:31pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator