Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Kamalakar ರವರ ಬ್ಲಾಗ್

ಸ್ತ್ರೀವಾದಿ ಏಕಾಗಬಾರದು?

August 17, 2006 - 1:03pm — Kamalakar

ಇತ್ತೀಚೆ ದ ಹಿಂದೂ ಪತ್ರಿಕೆಯಲ್ಲಿ ಕಮಲಾ ದಾಸ್ ಜತೆ ಸಂದರ್ಶನ ಪ್ರಕಟವಾಗಿತ್ತು. ಅಲ್ಲಿ ತಮ್ಮ ಬರವಣಿಗೆ ಕುರಿತು ಮಾತನಾಡುತ್ತ ದಾಸ್ ತಾವು ಸ್ತ್ರೀವಾದಿ ಅಲ್ಲ ಎಂದು ಘೋಷಿಸಿದ್ದಾರೆ. ಅದನ್ನು ಓದಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಆಘಾತವಾಯಿತು. ಯಾಕೆಂದರೆ, ಮಲಯಾಳಂ ಹಾಗೂ ಇಂಗ್ಲೀಷನಲ್ಲಿ ಬರೆಯುವ ದಾಸ್ ಒಳ್ಳೆಯ ಕವಯಿತ್ರಿ ಹಾಗೂ ಕಥೆಗಾರ್ತಿ. ಅವರ ಪದ್ಯಗಳನ್ನು ಮೆಚ್ಚಿಕೊಂಡಿರುವ ನನಗೆ ಅವರು ಒಳ್ಳೆಯ ರಾಜಕೀಯ ಬರಹಗಾರ್ತಿ ಎನ್ನಿಸುತ್ತದೆ. ಮಹಿಳೆ ಅವರ ಕವನಗಳ ಕೇಂದ್ರ ಬಿಂದು. ಸ್ತ್ರೀಯ ಸಾಮಾಜಿಕ ಬದುಕಿನಲ್ಲಿ ಕಾಣುವ ವಿವಿಧ ಶೋಷಣೆ, ನೋವು ನಲಿವು, ಆಸೆಗಳು, ಪ್ರತಿಬಂಧಗಳ ಕುರಿತು ಸಾಮನ್ಯವಾಗಿ ಅವರ ಕವನಗಳು ದನಿಯೆತ್ತುತ್ತವೆ. ಅವರ ಕವಿತೆಗಳಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಈ ಎಲ್ಲ ಸ್ತರಗಳಲ್ಲೂ ಮಹಿಳೆ ಬೇಡುವ ಚಿತ್ರ ಕಾಣುವುದಿಲ್ಲ. ಈ ಎಲ್ಲ ಕಡೆ ಮಹಿಳೆಗೆ ಆಗುವ ಅನ್ಯಾಯಗಳ ಪ್ರಸ್ತಾಪವಿದ್ದರೂ, ಮಹಿಳೆಯ ಹಕ್ಕುಗಳ ಬಗ್ಗೆ ಅಧಿಕಾರಯುತ demand ಇದೆ. ಮಹಿಳೆಯ ಕಾಮದ ಬಯಕೆಗಳ ಬಗ್ಗೆ ಕೂಡ ಈ ಒತ್ತಾಯ ಇದೆ. ಹೀಗೆ ಅವರ ಕವನಗಳು ಹಕ್ಕೊತ್ತಾಯ ಮಾಡುವ ಬಗೆ ತೀವ್ರವಾಗಿ ಓದುಗರನ್ನು ತಟ್ಟುತ್ತದೆ.
ಅವರ ಕವನಗಳಲ್ಲಿ ಬರುವ ಈ ರಾಜಕೀಯಕ್ಕೂ ಸ್ತ್ರೀವಾದಕ್ಕೂ ತೀವ್ರ ವ್ಯತ್ಯಾಸವಿಲ್ಲ. ಹೀಗಿರುವಾಗ ದಾಸ್ ಏಕೆ ತಾವು ಸ್ತ್ರೀವಾದಿ ಅಲ್ಲ ಎಂದು ಹೇಳಲಿಚ್ಛಿಸುತ್ತಾರೆ ಎನ್ನುವ ಪ್ರಶ್ನೆ ಬರುತ್ತದೆ. ನಮ್ಮ ಸಮಾಜದಲ್ಲಿ ಸ್ತ್ರೀವಾದಿ ಎಂದರೆ ಗಂಡಸು-ದ್ವೇಷಿ ಎಂಬ ಅನ್ನಿಸಿಕೆ ಇದೆಯೇ? ಯಾವಾಗ, ಸ್ತ್ರೀವಾದಿ ಕವನಗಳನ್ನು ಬರೆಯುವ ಮಹಿಳೆ ತನ್ನನ್ನು ತಾನೇ ಸ್ತ್ರೀವಾದಿ ಅಲ್ಲ ಅನ್ನುತ್ತಾಳೊ ಆಗ, ರಾಜಕೀಯವಾಗಿ ನಾವು ಸಾರ್ವಜನಿಕವಾಗಿ ತಳೆಯುವ ಧೋರಣೆಯ ಕುರಿತು ಪ್ರಶ್ನೆ ಬರುತ್ತದೆ.
ಕಮಲಾ ದಾಸ್ ಒಳ್ಳೆಯ ಕವಿಯಿತ್ರಿ, ಆದರೆ ಇಲ್ಲಿ ನನ್ನ ಪ್ರಶ್ನೆ ಅವರ ಕಾವ್ಯದ ರಾಜಕೀಯ ಹಾಗೂ ಅವರ ನಿತ್ಯದ ರಾಜಕೀಯದ ಕುರಿತಾಗಿದೆ. ಮುಂದುವರಿಸಿ ಹೇಳ ಬೇಕೆಂದರೆ ಇನ್ನೂ ನಾವು ಪುರುಷಪ್ರಧಾನ ವ್ಯವಸ್ಥೆಯ ಹೊರಬರಲು ಒಟ್ಟೂ ಸಮಾಜದ ಸ್ತರದಲ್ಲಿ ಮನಸ್ಸು ಮಾಡಿಲ್ಲವೆಂದೇ ಅನಿಸುತ್ತದೆ. ಎಲ್ಲಿಯವರೆಗೆ ನಾನು ಸ್ತ್ರೀವಾದಿ ಅಲ್ಲ ಅನ್ನುವ ಜರೂರತ್ತು ಇರುತ್ತದೆಯೋ ಆವರೆಗೆ ಲಿಂಗಭಾವಮುಕ್ತ ಸಮಾಜವಾಗಲು ನಮ್ಮ ತಯಾರಿಯೇ ಇಲ್ಲವೆಂದಾಗುತ್ತದೆ.
ಪ್ರಸಕ್ತ, ಜಾಗತೀಕರಣ ಹಾಗೂ ಸಾರ್ವಜನಿಕ ವಲಯವು ಅಮೌಲ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ದಾಸ್ ಮಾತು ಮಡಿವಂತಿಕೆಯ ಮಾತಿಗಿಂತ ಬೇರೆಯಾಗಲಾರದು. ಈ ಮಡಿವಂತಿಕೆಗಳು ಹಲವು ಸ್ವಾಮಿತ್ವಗಳು ತಮ್ಮ ಅಧಿಕಾರವನ್ನು ಎಲ್ಲೆಡೆ ಹೇರುತ್ತಿರುವಾಗ, ದಾಸ್ಯಗಳನ್ನು ವಿರೋಧಿಸುವ ಶಕ್ತಿ ಕಮ್ಮಿಯಾಗುತ್ತಿರುವಾಗ, ನಾಶದ ಕಡೆ ನಮ್ಮನ್ನು ನೂಕುತ್ತದೆ.
ಸ್ತ್ರೀವಾದಿ ಏಕಾಗಬಾರದು?

Ornamental seperator
  • Kamalakar ರವರ ಬ್ಲಾಗ್
  • Login or register to post comments
  • 1058 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 20, 2006 - 9:05am — ritershivaram

ಸ್ತ್ರೀವಾದ ಏಕೆ?

ritershivaram's picture

ನಾನೂ ಕೂಡ ಕಮಲದಾಸ್ ಅವರ ಬಗ್ಗೆ ಈ ಹಿಂದೆ ಓದಿಕೊಂಡ ನೆನಪಿದೆ. ಇದೀಗ ನಮ್ಮ ಸಮಾಜ ಪುರುಷ ಪ್ರಧಾನವಾಗಿ ಉಳಿದಿಲ್ಲ. ಹೆಣ್ಣು ತನಗಾಗುತ್ತಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ದನಿ ಎತ್ತಬಲ್ಲವಳಾಗಿದ್ದಾಳೆ. ಆಕೆ ಎಲ್ಲ ಕ್ಷೇತ್ರಗಳಲ್ಲಿ ಹಿಂದೆಂದಿಗಿಂತಲೂ ಮಿಗಿಲಾಗಿ ತನ್ನ ದಕ್ಷತೆ ಪ್ರದರ್ಶಿಸುತ್ತಿದ್ದಾಳೆ ಕೂಡ. ನನ್ನ "ಸ್ತ್ರೀವಾದ ಮತ್ತು ಸಮಾಜ" ನೋಡಿ. ಕೌಟುಂಬಿಕ ವಿಷಯ ಬಂದಾಗಲಂತೂ ಹಿರಿಯರಾದ ನಾವು ಗಂಭೀರವಾಗಿ ಚಿಂತಿಸಬೇಕಾದ ಕಾಲವಿದಾಗಿದೆ. ಆದ್ದರಿಂದ, ಕಮಲದಾಸ್ ಈ ವಿಷಯದಲ್ಲಿ ಬದಲಾಗಿದ್ದಾರೆ ಎನಿಸುತ್ತದೆ. ಹೌದು, ಬದಲಾವಣೆ ಈ ಜಗದ ನಿಯಮವೇ.ಹಳೆಯ ವಾದಗಳೂ ಈಗ ಹೊಸ ಹೊಳವು ಕಂಡುಕೊಳ್ಳಬೇಕಾಗಿದೆಯಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
July 14, 2007 - 7:29pm — HV SURYANARAYAN...

ಉ: ಸ್ತ್ರೀವಾದಿ ಏಕಾಗಬಾರದು?

HV SURYANARAYANA SHARMA's picture

ಕಮಲಾ ದಾಸ್ ಅವರು ಇಸ್ಲಾಂ ಗೆ ಮತಾಂತರಗೊಂಡನಂತರ ಅವರ ಎಲ್ಲಾ ಸ್ವಾತಂತ್ರವೂ ಹರಣವಾಗಿದೆ. ಇನ್ನೆಲ್ಲಿಯ ವಾದ, ಬುರ್ಖಾದೊಳಗೆ ಮುಸುಗುಡುತ್ತಾ ಇದ್ದಾರೆ, ಹೊರಗೆ ಹೇಳಿಕೊಳ್ಳುವ ಸ್ವಾತಂತ್ರವನ್ನೂ ಬಲಿಕೊಟ್ಟಿದ್ದಾರೆ. ಹೇಗಿದ್ದವ್ರು ಹೇಗಾದ್ರು !

  • Login or register to post comments
  • link
  • Email this ಪ್ರತಿಕ್ರಿಯೆ
July 14, 2007 - 10:05pm — ritershivaram

ಉ: ಸ್ತ್ರೀವಾದಿ ಏಕಾಗಬಾರದು?

ritershivaram's picture

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
ನಿಮ್ಮ ಮಾತು ಒಪ್ಪುತ್ತೇನೆ. ವಾದವೇ ಬೇರೆ. ವಾಸ್ತವವೇ ಬೇರೆ. ಹೀಗೂ ಉಂಟಲ್ಲವೇ..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೀಸಣಿಗೆಯ ನೆಪದಲ್ಲಿ ...
  • ಸಾಹಿತ್ಯಲೋಕದಲ್ಲಿ ಸ್ತ್ರೀವಾದ
  • ಟೌನ್ ಹಾಲ್ ಎದುರು ಕ್ಯಾಂಡಲ್ ಲೈಟ್ ವಿಜಿಲ್
  • ವಾಸ್ತವವೆಂದರೆ ವಾಸ್ತವವೇ?
  • ಡಿ.ಎಸ್. ನಾಗಭೂಷಣ ಮತ್ತು ಪ್ರೊ. ರವಿ ವರ್ಮ ಕುಮಾರ್
Syndicate content

ಲೇಖಕರು

Kamalakar's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator