ಒಂದು ಮಗುವನ್ನು ಹೊಂದಿದ ಒಂದು ಕುಟುಂಬ ಇತ್ತು,ಅಂದು ತಾಯಿ ಆ ೩ ವರುಷದ ಮಗುವನ್ನು ತಂದೆಯ ಜವಾಬ್ದಾರಿಯಲ್ಲಿ ಬಿಟ್ಟು ತನ್ನ ಕೆಲಸಕ್ಕೆಂದು ಹೊರಹೊಗಿದ್ದಳು.ತಂದೆ ಸಂಜೆಯ ಸಮಾಚಾರ ನೋಡುತ್ತಾ ಹೊರ ಕೋಣೆಯಲ್ಲಿ ಕೂತಿರಲು, ಒಳಗೆ ಮಗುವು ತನ್ನ ಜನುಮದಿನದಂದು ಯಾರೋ ಉಡುಗೊರೆ ನೀಡಿದ ಅಡುಗೆಮನೆ ಪರಿಕರದ ಆಟಿಕೆಯೊಂದಿಗೆ ಆಡುತ್ತಿತ್ತು.
ಸಲ್ಪ ಸಮಯದಲ್ಲಿ ಮಗು ಒಂದು ಟೀ ಕಪ್ ನಲ್ಲಿ ತಾನು ಮಾಡಿರುವ ಟೀ ಕುಡಿಯಿರಿ ಎಂದು ತಂದೆಗೆ ಹೇಳಿದಾಗ, ಆ ತಂದೆ ತಂದ ನೀರನ್ನೇ ಟೀ ಎಂದು ಕುಡಿದರು, ಹೀಗೆ ಪ್ರತಿ ೨ ನಿಮಿಷಕ್ಕೊಮ್ಮೆ ಮಗು ತಂದೆಗೆ ಟೀ ಮಾಡಿ ತಂದು ಕೊಡುತ್ತಿದ್ದರೆ ತಂದೆ ಒಂದರ ಹಿಂದೆ ಒಂದರಂತೆ ಕಪ್ ಖಾಲಿ ಮಾಡುತ್ತಾ ಮಗುವನ್ನು ಹೊಗಳುತ್ತಿದ್ದರು, ಮಗುವಿಗೂ ತಾನು ಏನೋ ಸಾಧನೆ ಮಾಡಿದ್ದೇನೆ ಎಂಬ ಭಾವನೆ.
೧ ಘಂಟೆಯ ಬಳಿಕ ತಾಯಿ ಮನೆಗೆ ಬರುತ್ತಿದ್ದಂತೆ ಗಂಡ ಅವಳನ್ನು ತಡೆದು ನಿಲ್ಲಿಸಿ, ಮಗುವಿನ ಅಂದಿನ ಆಟದ ಬಗ್ಗೆ ಅವಳಿಗೂ ತಿಳಿಸುತ್ತಿದ್ದಂತೆ ಮಗು ಇನ್ನೊಂದು ಕಪ್ ಟೀ ತಂದಿತು, ತಂದೆ ಅದನ್ನು ಆಕೆಗೆ ನೀಡಿ ಕುಡಿ ಮಗು ಸಂತೋಷ ಪಡುತ್ತದೆ, ತುಂಬಾ ರುಚಿ ಯಾಗಿರುತ್ತೆ ನಮ್ಮ ಮಗು ಮಾಡಿದ ಟೀ ಎಂದು ವರ್ಣಿಸಲಾರಂಬಿಸಿದ.
ಅದಕ್ಕೆ ತಾಯಿ "ಮನೆಯಲ್ಲಿ ಮಗುವಿನ ಕೈಗೆ ನೀರು ಎಟಕುವ ಜಾಗ ಟಾಯ್ಲೆಟ್ ಬಿಟ್ಟು ಬೇರೆ ಯಾವುದಿಲ್ಲ ಎಂದು ನೀವು ವಿಚಾರ ಮಾಡಿದ್ದೀರಾ ....? "ಎಂದು ಕೇಳಲು ತಂದೆ ಪೆಚ್ಚು ಮೋರೆ ಹಾಕಿದರು.
ಮಿಂಚಂಚೆಯಿಂದ ಭಟ್ಟಿ ಇಳಿಸಿದ ಕಥೆ :)
ಕಾಮತ್ ಕುಂಬ್ಳೆ
ಮಗುವನ್ನೂ ಮೀರಿಸಿದ ಮುಗ್ದತೆ
October 8, 2010 - 1:09pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಹ್ಹ ಹ್ಹ...ಚೆನ್ನಾಗಿದೆ..
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಕೊನೆಗೆ ಥೂ ....ಅಂತ ಅನಿಸಿದರೂ, ಅಪ್ಪ ಮಗುವಿನ ಬಾಂಧವ್ಯ ಚೆನ್ನಾಗಿ ಮೂಡಿ ಬಂದಿದೆ.
ಕೆಳಗಿನ ಕಾಗುಣಿತ ಸರಿ ಪಡಿಸುವಿರಾ?
<<ತಂಗೆಗೆ ಟೀ ಮಾಡಿ >> ತಂದೆಗೆ
<<ತೊಯಿಲೆಟ್ ಬಿಟ್ಟು ಬೇರೆ >> ಟಾಯ್ಲೆಟ್
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು,ಮೇಲಿನ ತಪ್ಪುಗಳನ್ನು ತಿದ್ದಿದ್ದೇನೆ .
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಭಟ್ಟಿ ಇಳಿಸಿದಿರಾ ಚೆನ್ನಾದ ಹಾಸ್ಯ
ಧನ್ಯವಾದಗಳು
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಕುಂಬ್ಳೆ...ಚೆನ್ನಾಗಿದೆ...ಮೊದಲು ನಾನು ಬೇರೇನೆ ಊಹಿಸಿದ್ದೆ...ನಂತರ ಟಾಯ್ಲೆಟ್ ನೀರು ಅಂದ ಮೇಲೆ ಅನುಮಾನ ಬಗೆಹರಿಯಿತು...
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಈ ಮೇಲು ನನಗೂ ಬಂದಿತ್ತು. ಅನುವಾದ ಚೆನ್ನಾಗಿ ಮಾಡಿದ್ದೀರ!
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಹ.ಹ.ಹ.ಹ. ಚೆನ್ನಾಗಿದೆ.
ನಮಸ್ಕಾರಗಳೊ೦ದಿಗೆ.
ನಿಮ್ಮವ ನಾವಡ.
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು ನಾವುಡ ಸರ್
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಇವು 'ಥೂ~~~.ಯೀಕ್' ಅನಿಸಿಯೂ ನಗು ಬರಸಿ, ಹಗುರಾಗಿಸುವ ನಗೆಹನಿಗಳು :)
ಈ ಥರದ್ದೆ ಇನ್ನೊಂದು.
ಅಪ್ಪ: ನಾನು ಹೊಡೆದಾಗ ನಿನಗೆ ಸಿಟ್ಟು ಬರುತ್ತಲ್ವಾ..ಅದನ್ನು ಹೇಗೆ ಕಂಟ್ರೋಲ್ ಮಾಡ್ತಿಯಾ?
ಮಗ: ಹೋಗಿ ಟಾಯಿಲೆಟ್ ಕ್ಲೀನ್ ಮಾಡ್ತಿನಿ....
ಅಪ್ಪ: ಅರ್ರೆ..ಅದ್ಹೇಗೆ ನಿಂಗೆ ತೃಪ್ತಿ ಕೊಟ್ಟು ಸಿಟ್ಟನ್ನು ತಣಿಸುತ್ತೆ??
ಮಗ (ಕೂಲಾಗಿ) : ಹೇಗಂದ್ರೆ...ನಾನು ಟಾಯಿಲೆಟ್ ನ್ನು ನಿನ್ನ ಟೂತ್ ಬ್ರಷ್ ಲ್ಲಿ ಕ್ಲೀನ್ ಮಾಡ್ತೇನೆ...
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಚೆನ್ನಾಗಿದೆ ಕಾಮತರೆ.
ಅಂತೂ ತಂದೆಗೆ ಮಗು ಟಾಯ್ಲೆಟ್ ನೀರು ಕುಡಿಸ್ತು ಅನ್ನಿ.
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಕೋಮಲ್ ಅಣ್ಣ ಧನ್ಯವಾದಗಳು
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು,,, ಇದು ಚೆನ್ನಾಗಿದೆ :D
ಕಾಮತ್ ಕುಂಬ್ಳೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಕಾಮತ್ ರೆ...ಚೆನ್ನಾಗಿದೆ....ಚೆನ್ನಾಗಿದೆ.....ಹ,ಹ,ಹ...............
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಧನ್ಯವಾದಗಳು
ಕಾಮತ್ ಕುಂಬ್ಳೆ