ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
ಸಂಪದಕ್ಕೆ ಇಂದು ಲಾಗ್ ಮಾಡಿದಾಗ ನುಡಿಮುತ್ತುಗಳ sectionಅಲ್ಲಿ ಹೀಗೆ ಬರೆದಿತ್ತು..
"ಪ್ರಶ್ಣೆ ಮಾಡುವುದನ್ನು ನಿಲ್ಲಿಸದಿರುವುದು ಬಹಳ ಮುಖ್ಯ" - ಆಲ್ಬರ್ಟ್ ಐನ್ಸ್ತಟೈನ್.
ಸ್ವಲ್ಪ ದೈರ್ಯ ಮಾಡಿ ಈ ಪ್ರಶ್ಣೆ ಕೇಳುತ್ತಿದ್ದೇನೆ.. ನೀವೆಲ್ಲಾ ನನ್ನ ಮೇಲೆ ಧಾಳಿ ಹೇಳುವ ಮುನ್ನ ನನ್ನ ಒಂದು ಮಾತು "ನಾನು ರಾಜ್ ಅಭಿಮಾನಿ, ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು".. ಒಬ್ಬ ನಟನಾಗಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಕನ್ನಡದ ಕೆಲವು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.. ಇದೆಲ್ಲಾ OK. ಆದ್ರೆ ಅವರು ಅಥವ ಅವರ ಕುತುಂಬದವರು ಒಂದು ರೀತಿಯ Monopolism ಸ್ರುಷ್ಟಿ ಮಾಡಿದ್ರು..
ಅವರಿಂದ ಅನಂತ್-ನಾಗ್ ಗೆ ಬಹಳಶ್ಟು ಅವಕಾಶಗಳು ತಪ್ಪು ಹೋದವು ಅಂತ ಕೇಳಿದ್ದೇನೆ.. ವಿಷ್ಣುವಿನ ವಿರುದ್ದವೂ ಬಹಳಷ್ಟು ಹಣಾಹಣಿ ನೆಡೆದು, ವಿಷ್ಣು ಕನ್ನಡ ಚಿತ್ರರಂಗ ತ್ಯಜಿಸುವ ನಿರ್ದಾರ ಕೈಗೊಂಡಾಗ, ಅವರ ನಡುವೆ ರಾಜಿ ಆಯಿತು ಅಂತಲೂ ಕೇಳಿದ್ದೇನೆ.. ಇವೆಲ್ಲಾ ಎಷ್ಟು ನಿಜವೋ ನನಗೆ ತಿಳಿಯದು. ಆದರೆ ಒಂದಂತೂ ನಿಜ.. ಅವರ ಮಕ್ಕಳು ಮಾಡಿದ ಅನೇಕ ಡಬ್ಬ ಚಿತ್ರಗಳು, ಒಳ್ಳೊಳ್ಳೆ ಚಿತ್ರಮಾಂದಿರಗಳಲ್ಲಿ ಜನ ಬರದಿದ್ದರೂ ೫೦ ದಿನ, ೧೦೦ ದಿನ ಹೀಗೆ ಒಡಿಸಿದ್ದನ್ನ ಕಣ್ಣಾರೆ ನೋಡಿದ್ದೇನೆ..ಇದರಿಂದ ಒಳ್ಳೆ ಚಿತ್ರಗಳ್ಗೆ ಅವಕಾಶ ತಪ್ಪಿಹೋಗಲ್ವೆ ? ಈಗ ಕನ್ನಡ ಚಿತ್ರರಂಗದಲ್ಲಿ ಇರುವ ಬಹಳಷ್ಟು ಜನ Dr-ರಾಜ್ ಸಂಬಂದಿಗಳೇ .. ಇದರಿಂದ ಬೇರೆ ನಿಜವಾದ talentsಗೆ ಅವಕಾಶ ತಪ್ಪಿ ಹೊಗ್ತಿದೆ ಅಂತ ಯಾರಿಗೂ ಅನ್ಸೊಲ್ವೆ ?
ರಾಜ್ ಬಹಳಷ್ಟು ಒಳ್ಳೆ ಕೆಲಸ ಮಾಡಿರಬಹುದು. ಆದ್ರೆ, ಕನ್ನಡ ಯಾವುದೇ ವ್ಯಕ್ತಿ ಅಥವ ವ್ಯಕ್ತಿತ್ವಕ್ಕಿಂತ ದೊಡ್ದದು... ಯಾರೂ ಅದನ್ನ Hijack ಮಾಡೊಕ್ಕೆ ಬಿಡ್ಬಾರ್ದು..

- kannadiga_1956 ರವರ ಬ್ಲಾಗ್
- Login or register to post comments
- 727 hits
- Email this blog




RSS:
ಪ್ರತಿಕ್ರಿಯೆಗಳು
Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀ
ಉತ್ತಮ ವಿಶ್ಲೇಷಣೆ.
ಅಣ್ಣಾವ್ರ ಬಗ್ಗೆ ಎಷ್ಟು ಅಭಿಮಾನ ಇದ್ರೂ ಸ್ವಲ್ಪ ಬೇಸರ ಇದೆ - ತಮ್ಮ ವ್ಯವಹಾರಿಕ ನಿರ್ಧಾರಗಳನ್ನು ಬೇರೆಯವರಿಗೆ ಬಿಟ್ಟಿದ್ದು.
ಸುಮಾರು ೪-೫ ತಿಂಗಳ ಹಿಂದೆ ವಿಜಯಕರ್ನಾಟಕ ದಲ್ಲಿ ವಿಷ್ಣುವರ್ಧನ್ ಬಗ್ಗೆ ಉತ್ತಮ ಲೇಖನ ಇತ್ತು. ಅವರಿಗೆ ಕೊಟ್ಟ ಕಿರುಕುಳ ( ಅಣ್ಣಾವ್ರ (ದುರ್) ಅಭಿಮಾನದ ಹೆಸರಲ್ಲಿ), ಅವರ ಮದುವೆ, ತಂದೆ ಸತ್ತಾಗ, ಬೆಂಗಳೂರಲ್ಲಿ ಮನೆ ಮಾಡಿ ನೆಲೆಸುವಾಗ ಕೊಟ್ಟ ಕಿರುಕುಳ ನಿಜಕ್ಕೂ ಕರುಳು ಹಿಂಡುವ ಸಂಗತಿಗಳು.
Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
ಕನ್ನಡ ರಂಗದ ಈ ಸ್ಥಿತಿಗೆ ಅನ್ನಬಹುದೇನೋ ! ರಾಜ್ ಒಬ್ಬ ವರ ನಟ ಇದ್ದರು ನಿಜ. ಮುಂದೆ ಯಾರೂ ಅವರ ಜಾಗವನ್ನು ಸ್ವಲ್ಪ ಮಟ್ಟಿಗಾದರೂ ತುಂಬುವ ಸಾಧ್ಯತೆಗಳು ಇದ್ದೇ ಇವೆ !
ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅಪಾರ. ಇದರಲ್ಲಿ ಬೇರೆ ಮಾತಿಲ್ಲ ! ಆದರೆ ಅವರು ಆಲದ ಮರದ ರೀತಿಯಲ್ಲಿ ಬೆಳೆದು, ಬೇರೆಯವರಿಗೆ ಇನ್ನೂ ಸೊಂಪಾಗಿ ಬೆಳೆಯಲು ಅವಕಾಶಮಾಡಿಕೊಡಬಹುದಾಗಿತ್ತೇನೊ ! ಅವರ ಜೊತೆಗೆ ನಿಟಿಸಿದ 'ಚಿಲ್ಲೆರೆ ನಟಿಯರೂ' ಒಂದೇ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದನ್ನು ನಾವು ಕಾಣುತ್ತೇವೆ !
ಇನ್ನು ರಾಜ್ ಮನಸ್ಸು ಮಾಡಿದ್ದರೆ ಏನೇನೋ ಮಾಡಬಹುದಿತ್ತು ! ತಮಿಳು ನಟರಿಗೆ ಹೋಲಿಸಿದರೆ ರಾಜ್ ಕುಮಾರ್ ಕೊಡುಗೆ ಏನು ? ಎಂದು ತಲೆ ಕೆರೆದುಕೊಳ್ಳಬೇಕಾಗುತ್ತೆ !
'ರಾಜ್ ರವರ ಅಭಿಮಾನಿ'ಗಳಲ್ಲಿ ಒಬ್ಬನಾದ ನನಗೆ ಬಹಳ ಬೇಸರ ತರುವ ವಿಷಯ ಇದು !
ಉದಾ: ಕನ್ನಡ ರಂಗ ಮಂಚದ ಪ್ರಾಕಾರಗಳು,ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ವಸತಿಗೃಹಗಳು, ಅವರಹೆಸರಿನಲ್ಲಿ ಪ್ರಶಸ್ತಿಗಳು,ಇತ್ಯಾದಿಗಳನ್ನು ಅವರು ಮಾಡಿದ್ದಾರೆಯೇ ?
ರಾಜ್ ರವರ ವ್ಯಕ್ತಿತ್ವ ಮೇರು ಶ್ರೇಣಿಯಲ್ಲಿ ಇದ್ದದ್ದರಿಂದ ಇಂತಹ ಕಾರ್ಯಗಳು ಅವರಿಗೆ ನೀರುಕುಡಿದಂತೆ ಆಗಿತ್ತು. ಅದರ ಸದುಪಯೋಗ ಅವರು ಮಾಡಲಿಲ್ಲ.
ಇನ್ನೂ ಒಂದನ್ನು ಅವರು ಸುಲಭವಾಗಿ ಮಾಡಬಹುದಿತ್ತು. ಒಂದೇ ಒಂದು ನಮ್ಮದೇ ಆದ ಕನ್ನಡದ 'ಟೀವಿ ಛಾನಲ್' ಮಾಡುವುದು ಅವರು ಮನಸ್ಸು ಮಾಡಿದ್ದಿದ್ದರೆ ದೊಡ್ದದೇನೂ ಆಗಿರಲಿಲ್ಲ! ಜಯಲಲಿತ ನೋಡಿ- ಇಂದಿಗೂ ಸುದ್ದಿಯಲ್ಲಿ ಇರುವುದು ಅವರು ತಮಿಳರಿಗೆ ಮಾಡಿದ ಸುಕಾರ್ಯಗಳಿಂದ !
ಉದಯ ಟೀವಿ- ತಮಿಳರ ಛಾನಲ್, ಇ-ಟೀವಿ ಕೂಡ ನಮ್ಮದೆಂದು ನಾವು ಹೇಳಬೇಕು ಅಷ್ಟೆ !
ರಾಜ್ ಬಗ್ಗೆ ಒಂದು 'ಕಹಿಮಾತು' ಇಲ್ಲಿ ಬೇಸರದಿಂದ ಹೇಳಲು ಬಯಸುತ್ತೇನೆ. ಅವರ ಮಕ್ಕಳನ್ನು ನಟಿಸಲು ಪ್ರಚೋದನೆ ಮಾಡಬಾರದಾಗಿತ್ತು. ರಾಜ್ ಹೆಸರಿನಲ್ಲಿ ಅವರ ಮಕ್ಕಳು ಎಷ್ಟುದಿನತಾನೇ ನಟಿಸಬಹುದು ? ನಟನೆ, ಒಳ್ಳೆಯ ಶಾರೀರ, 'ಸ್ವಂತ ವರ್ಚಸ್ಸು', ಮೇಲಾಗಿ 'ಚಂದದ ಮುಖ', ಮತ್ತು ಸರಿಯಾದ 'ನಟನಾಕೌಶಲ್ಯಗಳು' ಮಾತ್ರ ಜನರ ಮನಸ್ಸನ್ನು ಸೂರೆಗೊಳ್ಳಲು ಸಾಧ್ಯ ! ರಾಜ್ ನೆನೆಪು ತಿಳಿಯಾದಂತೆ ಅವರ ಕುಟುಂಬದ ಜನರೂ ನೆನಪಿನಿಂದ ಜಾರುವ, ಉದುರುವ ಸಾಧ್ಯತೆ/ ಅಪಾಯ ಹೆಚ್ಚು ದೂರ ಇಲ್ಲ ಅಲ್ಲವೇ ? ನಿಜ ಹೇಳಿ ?
ವೆಂ-
Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀ
ರಾಜ್‌ಕುಮಾರ್ ಅವರ ಅಭಿಮಾನಿ ನಾನು ಎಂದು ಹೇಳಿಕೊಂಡು ಅವರ ಬಗ್ಗೆ ಕಹಿ ಕಾರುವುದು ಬಹಳ ಜನರ ಒಂದು ಫ್ಯಾಶನ್ ಆಗಿರುವಂತಿದೆ. ಅವರ ಹೆಸರಿನಲ್ಲಿ ಅವರ ಮಕ್ಕಳ ನಟನಾ ಸಾಮರ್ಥ್ಯ, ಕುಟುಂಬದ ವ್ಯವಹಾರಗಳ ಬಗ್ಗೆ ಟೀಕೆ ಎಲ್ಲಾ ಬೇಕೆ? ಅವರು ಎನೂ ಮಾಡಿಲ್ಲ ಎನ್ನುವವರು, ಅವರು ಏನಾದರೂ ಮಾಡಿದ್ದರೆ ಇವರಿಗೆ ಯಾಕೆ ಬೇಕು ರಾಜಕೀಯ ಅಂತ ಹೇಳುವಂತಹವರೇ. ತಮಿಳು ನಟರೊಂದಿಗೆ ಹೋಲಿಕೆ ಯಾಕೆ?