ಕನ್ನಡಿಗರಲ್ಲಿ ಜಾತಿ-ಭೂತ !
ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ಕನ್ನಡಿಗರಿರುವ Area ಗಳಲ್ಲಿ ಮನೆ ಮಾಡೋಣ ಅಂತ, ಜಯನಗರ, ಗಿರಿನಗರ ಇಂತ ಕಡೆ ಮನೆ ಹುಡುಕ್ತಾ ಇದ್ದೆ. Non-Veg ಅಂದ್ರೆ ಸಾಕು "ಬಾಡಿಗೆ ಇಲ್ಲ". ಒಂದು ಕಡೆ ಸ್ವಲ್ಪ compromise ಮಾಡ್ಕೊಂಡು ಹೇಳ್ದೆ - "ಮನೆಯಲ್ಲಿ Non-Veg ಮಡೊಲ್ಲಪ್ಪ ಅಂತ".. ಆದ್ರೂ ಒಪ್ಪಲಿಲ್ಲ.. "My consience doesn't permit" ಅಂತ ಹೇಳ್ದ. ಕೇಳಿ ಸುಸ್ತಾಗಿ ಹೋದೆ. ಈ ವಿಷಯದಲ್ಲೂ Consienceಏ ಅಂತ !!
ಅದಿರ್ಲಿ ಬಿಡಿ. ಜಯನಗರದ ಒಂದು ಕಡೆ - ಇದೆ ತರ ಒಂದು Vegetarian ಬಾಡಿಗೆದಾರನ ಮನಗೆ, ನನ್ನ ಸಹೋದ್ಯೋಗಿಗಳು ಬಾಡಿಗೆ ತಗೋಂಡ್ರು. ಅದರಲ್ಲಿ ಮೂವರು ಒರಿಸ್ಸಾ, ಒಬ್ಬ ಆಂದ್ರ. ಎಲ್ರೂ ಹೇಳ್ಕೊಳ್ಳೊಕೆ vegetarian. ಅದೇ ಬಾಡಿಗೆದಾರ ಇನ್ನೂ ನಾಲ್ಕು ಮನೆ ಬಾಡಿಗೆ ಕೊಟ್ಟಿದ್ದ. ಎಲ್ಲದರಲ್ಲೂ ಹೊರಗಿನವ್ರೇ .. ಕನ್ನಡಿಗರಿಗೆ ಒಂದು ಮನೆನೂ ಇಲ್ಲ.. ನನ್ನ ಸಹೋದ್ಯೋಗಿಗಳು ಇದ್ದ್ರಲ್ಲ , ಹೇಳ್ಕೊಳ್ಳೋಕೆ ಎಲ್ಲಾ vegetarian.. ತಿನ್ನೋದ್ ಮಾತ್ರ ವಾರಕ್ಕೆ ಮೂರ್ ಸಲ ಚಿಕನ್ನು, ಮಟನ್ನು. ತಿಂದರೆ ತಪ್ಪೇನು ಇಲ್ಲ ಬಿಡಿ, ನನಗೂ ಇಷ್ಟ, ಆದ್ರೆ ಕೊಪ ಬಂದಿದ್ದು ಆ ಮನೆ ಮಾಲಿಕನ್ ಮೇಲೆ.. ಎಲ್ಲಾ ಗೊತ್ತಿದ್ರೂ ಅವರತ್ರ ಅರ್ದಂಬರ್ದ ಹಿಂದಿ ಮಾತಾಡ್ತಾ ತನ್ನ Consienceಗೆ ತನ್ತಾನೆ ಮನವರಿಕೆ ಮಾಡ್ಕೊತಾ ಇರ್ತಾನೆ..
ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..

- kannadiga_1956 ರವರ ಬ್ಲಾಗ್
- Login or register to post comments
- 555 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕನ್ನಡಿಗರಲ್ಲಿ ಜಾತಿ-ಭೂತ !
ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..
ನೂರಕ್ಕೆ ನೂರು ನಿಜ. ಮಾತಾಡ್ಸೋದು, Consience ಅಲ್ಲ, ದುಡ್ಡು. ಒಂದು ದಿನ ಬೆಂಗಳೂರಿನ "ಬಾದಾಮಿ ಕಟ್ಟಡದ" ಹತ್ತಿರ, ಒಬ್ಬ ಪೇಪರ್ ಮಾರುವವನು, ಹೀಗೆ ಒಬ್ಬನಿಗೆ ಸರಿಯಾಗಿ ಉಗಿದಿದ್ದ.
ಕನ್ನಡದವರ ಹತ್ತಿರ ದುಡ್ಡಿಲ್ಲ ಅಂದುಕೊಂಡು, ಮೂರ್ಖರು ಯಾರ್ ಯಾರಿಗೋ ಏನೇನೋ ಮಾಡ್ಕೋಡ್ತಾರೆ. ನೀವೇ ಹೇಳೀ ಸಾರ್, ಕನ್ನಡದವರ ಹತ್ತಿರ ದುಡ್ಡಿಲ್ವಾ, ಎಂದು ನನ್ನನ್ನ ಕೇಳಿದ್ದ ?. ಎಲ್ಲಾ ಇದೆ. ಸಮಾಜಮುಖವಾಗಿ ಇಲ್ಲ. ಅಷ್ಟೇ. ಅವರೆಲ್ಲರೂ Global ಆಗಿಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ.