ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮರು ಜನ್ಮ - secondlife.com

ಕೆಲ ದಿನಗಳ ಹಿಂದೆ CNN ನಲ್ಲಿ ಈ ವೆಬ್-ಸೈಟ್ನ ಬಗ್ಗೆ ನೋಡಿದ್ದೆ. ತುಂಬಾ ಕುತೂಹಲಕಾರಿಯಾಗಿತ್ತು. ನೆನ್ನೆ ಕೊನೆಗೂ ಹೋಗಿ ನೋಡ್ದೆ.  ನಿಜಕ್ಕೂ ಅದ್ಭುತವಾಗಿದೆ. ಯಾರು "The Matrix" ಚಿತ್ರವನ್ನ ಹೆಚ್ಚ್ಹಾಗಿ ಇಷ್ಟ ಪಟ್ಟಿದ್ರೋ ಅವ್ರಿಗಂತೂ ಇದು ಇಷ್ಟ ಆಗೋದ್ರಲ್ಲಿ ಸಂದೇಹವೇ ಇಲ್ಲ.

Secondlife.com ಕಂಪೂಟರ್ ಒಳಗೇ ಸ್ರುಷ್ಟಿ ಆಗಿರೋ ಒಂದು 3D ಪ್ರಪಂಚ.  ಅದರೊಳಗೆ ಪ್ರವೇಶ ಮಾಡಿದ್ರೆ, ನಿಮ್ಮ ಒಂದು 3D ರೂಪ ಕಾಣುತ್ತೆ.  ಹಾಗೆ ಲಾಗಿನ್ ಆದವ್ರ ಬೇರೆ 3D ಮಾನವ ಚಿತ್ರಗಳೂ ಇರುತ್ತೆ. ಒಳಗೆ ಒಂದು 3D ಪ್ರಪಂಚವೇ ಇದೆ.  ಸಮುದ್ರಗಳು, ಅದರ ಮಧ್ಯೆ ಸಾವಿರಾರು  ದ್ವೀಪಗಳು, ಪ್ರತಿಯೊಂದು ದ್ವೀಪಗಳಲ್ಲಿ ಅಂಗಡಿ ಮುಂಗಟ್ಟುಗಳು ಎಲ್ಲವೂ ಇದೆ.  ಆ ಅಂಗಡಿಗಳಲ್ಲಿ ನಾವು ಲಿಂಡೆನ್ ಎಂಬ Currencyಯಲ್ಲಿ ಖರೀದಿಯನ್ನೂಮ ಾಡಬೋದು. Coca-cola, Pepsi ಹೀಗೆ ಹಲವಾರು ಕಂಪನಿಗಳು ನಿವೇಶನಗಳನ್ನು ಕೊಂಡು ಈ ಪ್ರಪಂಚದಲ್ಲಿ ಜಾಹಿರಾತನ್ನೂ ಆರಂಬಿಸಿದ್ದಾರೆ.  ನಾವು  ನೆಡೆಯಬಹುದು, ಓಡಬಹುದು, ಹಾರಬಹುದು, ಯಾವ ಬಟ್ಟೆಯನ್ನಾದ್ರೂ ಧರಿಸಬಹುದು,  ಯಾರೋಡನೆಯಾದ್ರೂ ಮಾತಾಡ್ಬೋದು, ನಿವೇಶನಗಳನ್ನು ಕೊಂಡು ನಮ್ಮದೇ ಉದ್ಯಮವನ್ನೂ ಸ್ಥಾಪಿಸಬೋದು.  ನಿಜಕ್ಕೂ ವಿಸ್ಮಯಕಾರಿ !

ನನ್ನ ಒಂದು ಪುಟ್ಟ ಯೋಚನೆ. ನಾವೆಲ್ಲಾ ಸೇರಿ ಈ ಪ್ರಪಂಚದಲ್ಲಿ ಒಂದು ದ್ವೀಪವನ್ನು ಕೊಂಡು ಅದರಲ್ಲಿ ಒಂದು "ಕನ್ನಡ ಭವನ"ವನ್ನ ಸ್ಥಾಪಿಸಬೇಕು.  ಕನ್ನದ ಭವನದಲ್ಲಿ ಕನ್ನಡದ ಬಗ್ಗೆ ಮಾಹಿತಿಯನ್ನ ಕೊಡ್ಬೇಕು - ಸಖತ್ತಾಗಿರುತ್ತೆ ಅಲ್ವಾ ?  ;)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ದನಿಗೂಡು: ಮರು ಜನ್ಮ - secondlife.com

Shyam Kishore's picture

ನಾನಿನ್ನೂ ಈ ತಾಣಕ್ಕೆ ಭೇಟಿ ನೀಡಿಲ್ಲ. ನಾನೂ ಮೊನ್ನೆ CNN ನಲ್ಲಿ ಇದರ ಬಗ್ಗೆ ಓದಿದ್ದೆ. ನಿಜಕ್ಕೂ ವಿಸ್ಮಯಕರ!

ನಿಮ್ಮ ಆಲೋಚನೆ ಕೂಡ ಸೊಗಸಾಗಿದೆ ಮತ್ತು ಹೊಸತಾಗಿದೆ. ಕಾರ್ಯರೂಪಕ್ಕೆ ತರುವುದು ಹೇಗೆ ಮತ್ತು ತಗುಲುವ ವೆಚ್ಚ ಎಷ್ಟು ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ಸಾಧ್ಯವೇ? ಬೇಕಿದ್ದಲ್ಲಿ ಇದರ ಬಗ್ಗೆ ಒಂದು "ಆಸಕ್ತರ ಗುಂಪ"ನ್ನು ಯಾಹೂನಲ್ಲೋ, ಇನ್ಯಾವುದರಲ್ಲಾದರೂ ಆರಂಭಿಸಿ, ಕ್ರಮೇಣ ಒಂದು ರೂಪು ಕೊಡಬಹುದು. ನಾನು ಬೇಕಾದ್ರೆ ಈ ವಾರಂತ್ಯದಲ್ಲಿ ಯಾಹೂಗ್ರೂಪ್ಸ್‌ನಲ್ಲಿ ಒಂದು ಆಸಕ್ತರ ಗುಂಪನ್ನು ಶುರು ಮಾಡುವೆ. ಏನಂತೀರಾ?

- ಶ್ಯಾಮ್ ಕಿಶೋರ್

Re: ದನಿಗೂಡು: ಮರು ಜನ್ಮ - secondlife.com

kannadiga_1956's picture

ತುಂಬಾ ಸಂತೋಷ.  ನನ್ನ ಕೆಲವು ಗೆಳೆಯರೂ ಇದರ ಬಗ್ಗೆ ಆಸಕ್ಥಿ ತೋರಿದ್ದಾರೆ.  ಯಾಹೂ ಗ್ರೂಪ್ ನ ಬಗ್ಗೆ ಮಾಹಿತಿ ಇದರಲ್ಲೇ ಹಾಕಿ. ಆಸಕ್ತರು ಸೇರಲಿ. ಇದಕ್ಕೆ ತಗುಲುವ ಕರ್ಚು ವೆಚ್ಚ್ಹಇತ್ಯಾದುಗಳನ್ನ ನಂತರ ಚರ್ಚಿಸಬೋದು. ಆ ಕನ್ನಡ ಭವನದಲ್ಲಿ ಕನ್ನಡ ಇತಿಹಾಸ, ಸಾಹಿತ್ಯ , ಕನ್ನಡ ವೆಬ್-ಸೈಟ್ಗಳು ಇತ್ಯಾದಿ ಮಾಹಿತಿಗಳನ್ನ ಕೊಡಬಹುದು.

ಉ: ದನಿಗೂಡು: ಮರು ಜನ್ಮ - secondlife.com

hpn's picture

ಯಾಹೂ ಗುಂಪು ಯಾಕೆ? ಸಂಪದದಲ್ಲೇ ಗುಂಪು ಮಾಡಿಕೊಳ್ಳಿ ;)

ಇದೇ ಸರ್ವರಿನಲ್ಲಿ ಒಂದು ಮೇಯ್ಲಿಂಗ್ ಲಿಸ್ಟ್ ಹಾಕಿಕೊಳ್ಳಿ! (ತಾಂತ್ರಿಕವಾಗಿ ನಾನು ಸಹಾಯ ಮಾಡುವೆ)

btw, Second life ಬಗ್ಗೆ ನಾನೂ ಓದಿದ್ದೆ, ಕೇಳಿದ್ದೆ - ಆದರೆ ನೋಡಲಾಗಿಲ್ಲ. ಅದಕ್ಕೆ ಹಣ ಕೊಟ್ಟು ಏನಾದರೂ ಲಾಗಿನ್ ಆಗಬೇಕೋ ಹೇಗೆ? ಒಳಹೋದ್ಮೇಲಂತೂ ಹಣವಿಲ್ಲದಿದ್ದರೆ ಏನೂ (at least virtualಆಗಿ) ಸಿಗೋಲ್ಲ ಅನ್ಸತ್ತೆ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

secondlife

hpn's picture

ಈಗ ತಾನೆ ನೋಂದಾಯಿಸಿಕೊಂಡೆ. ಆದ್ರೆ ತಮಾಷೆ ಏನಂದ್ರೆ ಲಿನಕ್ಸಿಗಾಗಿ ಇರುವ ಅವರ ಪ್ರೋಗ್ರಾಮು ಇನ್ನೂ "ಅಲ್ಫಾ" ಸ್ಥಿತಿಯಲ್ಲಿದೆ (at least ಲಿನಕ್ಸಿಗೆ ಪ್ರೋಗ್ರಾಮಾದ್ರೂ ಇದೆಯಲ್ಲ ಅಂತ ಖುಷಿಯಾಯ್ತು!).

ಈಗ ಬಳಸಿ ನೋಡೋಕೆ ಸಾಧ್ಯವಾಗದು, ಬಹುಶಃ. ಶನಿವಾರ ಪ್ರಯತ್ನ ಮಾಡಿ ನೋಡುವೆ ;)

* ಆಲ್ಫಾ - "ಉಲ್ಫಾ" ಅಂತ ಓದಿಬಿಟ್ಟೀರಿ ಮತ್ತೆ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಮರು ಜನ್ಮ (secondlife.com)ಕ್ಕೊಂದು "ಪತ್ರದ ಗುಂಪು" ಬಗ್ಗೆ

Shyam Kishore's picture

ಖಂಡಿತ ಆಗಬಹುದು. ಯಾಹೂ ಗುಂಪೇ ಆಗಬೇಕೇನೂ ಅಂತಿಲ್ಲ. ಒಟ್ಟಿನಲ್ಲಿ "ಸಂಪದ"ದಲ್ಲಿ ಎಲ್ಲರಿಗೂ ಸುಮ್ಮನೆ ತಲೆ ತಿನ್ನದೇ ಇರೋಹಾಗೆ ಒಂದು "ಪತ್ರದ ಗುಂಪು" ಆದರೆ ಸಾಕು! ಆಸಕ್ತಿಯಿರುವವರು ನೋಂದಾಯಿಸಿಕೊಳ್ಳಲಿ; ಆ ಗುಂಪಿನಲ್ಲೇ ಮುಂದಿನ ವಿಚಾರಗಳ ಬಗ್ಗೆ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.

ಆದರೆ ಇದೇನೂ ಬಹಳ "ತುರ್ತು ಕೆಲಸ" ಅಲ್ಲವೇನೋ! ಈ ಬಗ್ಗೆ ಆಸಕ್ತರು ಇಲ್ಲೇ (ಇದೇ thread ನಲ್ಲಿ) ಪ್ರತಿಕ್ರಿಯೆಗಳನ್ನು ನೀಡಿದಲ್ಲಿ, ಎಷ್ಟು ಜನರಿಗೆ ಇದರ ಬಗ್ಗೆ ಆಸಕ್ತಿಯಿದೆ ಅಂತ ಗೊತ್ತಾಗುತ್ತೆ. ಆಮೇಲೆ "ಪತ್ರದ ಗುಂಪು" ತಯಾರು ಮಾಡೋ ಬಗ್ಗೆ ಯೋಚಿಸ್ಬಹುದು. ಏನಂತೀರಾ?

- ಶ್ಯಾಮ್ ಕಿಶೋರ್