ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

ಇವತ್ತು ಎಲ್ಲಾ ಸಮಾಚಾರ ಚಾನಲ್ ಗಳಲ್ಲಿ ಬರೀ "ಅಸ್ಸಾಂ ಹಿಂಸಾಚಾರದ" ಸುದ್ದಿನೇ ! ಅಸ್ಸಾಂನಲ್ಲಿ ಸುಮಾರು ೬೯ ಹಿಂದಿ ಮಾತಾಡುವ ಜನರನ್ನ ULFA ಗುಂಡಿಕ್ಕಿ ಕೊಂದಿದೆ. ಇದರಿಂದ ಅಸ್ಸಾಂನಿಂದ ಹಿಂದಿಗರ ವಲಸೆ ಶುರುವಾಗಿದೆ. ಎಲ್ಲಾ ಚಾನಲ್ ಗಳಲ್ಲೂ ವಿಮರ್ಶಕರು ಬೆರಳು ತೋರಿಸ್ತಾ ಇರೋದು ಪಾಕಿಸ್ತಾನದ ISI, ಬಾಂಗ್ಲಾದೇಶ etc etc. ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ ಶಸ್ತ್ರಾಸ್ತ್ರ ದೊರಕಿರಬಹುದು ಆದ್ರೆ ಈ ರೀತಿ ಹಿಂಸಾಚಾರಕ್ಕೆ ನಮ್ಮ ನೆರೆ ದೇಶದವರು ನೇರ ಕಾರಣವೆ ? ಮೊದಮೊದಲು ಇದನ್ನ ನಂಬಬೋದಿತ್ತು. ಆದ್ರೆ ಈಗ ನಾವೂ ಕೂಡ ಹಿಂದಿಗರ ಚಾಳಿಯನ್ನ ಕಣ್ಣಾರೆ ನೋಡಿದ್ದೇವೆ. ಭಾರತದಲ್ಲಿ ಎಲ್ಲೂ ಅವ್ರು ಬೇರೆ ಭಾಷೆಗೆ, ಬೇರೆ ಸಂಸ್ಕ್ರುತಿಗೆ ಮರ್ಯಾದೆ ಕೊಡೋದೇ ಇಲ್ಲ. ಅದೇನೋ ದುರಹಂಕಾರ. ಮಾತೆತ್ತಿದ್ರೆ ಹಿಂದಿ ರಾಷ್ತ್ರಭಾಷೆ ಅನ್ನೋದು, ಬೇರೆ ಭಾಷಿಕರನ್ನ ಅಪಹಾಸ್ಯ ಮಾಡೊದು - ಈ ತರ ಚಾಳಿನ ತೋರಿಸ್ತಾ ಇದ್ರೆ, ಯಾರ್ಗೆ ಆಗ್ಲಿ ಉರ್ದೋಗಲ್ವಾ ? ಒದ್ದು ಓಡುಸ್ಬೇಕು ಅಂತ ಅನ್ಸೊಲ್ವಾ ?

ನಮ್ಮ ಲಾಲೂ ಇತ್ತಿಚೆಗೆ ರೈಲ್ವೇ ಇಲಾಖೆಯಲ್ಲಿ ಹೊರಡಿಸಿದ ಮಸೂದೆಯನ್ನೇ ನೋಡಿ: ದೇಶದ ಎಲ್ಲ ರಾಜ್ಯಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ನಾಮಪಲಕ ಮಾತ್ರ ಇರಬೇಕು ಅಂತ ! ಇದಕ್ಕೂ ಮೋದಲು ಕರ್ನಾಟಕದ ರೈಲ್ವೆ ಟಿಕೆಟಿನಲ್ಲಿ ಕನ್ನಡ ಮಾಯ ಆಗಿದೆ - ಯಾರೂ ನೋಡ್ಕೊಂಡೇ ಇಲ್ಲ ! ಇದರ ಅರ್ಥ ಏನು ? ದೇಶದ ಎಲ್ಲಡೆ ರೈಲ್ವೆ ಹುದ್ದೆಗಳ್ಗೆ ಕೇವಲ ಹಿಂದಿಯವರ್ನೇ ನೇಮಕ ಮಾಡೋದು. recruitmentನ ಉತ್ತರಪ್ರದೇಶ, ಬಿಹಾರದಲ್ಲೇ ನೇಡೆಸಿ, ಅಲ್ಲೇ ಜನರನ್ನ ನೇಮಕಾತಿ ಮಾಡಿ, ಕೆಲಸಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಕಳಿಸೋದು. ರಾಜ್ಯದ ಮೂಲ ವಾಸಿಗಳಿಗೆ ಕೆಲಸವೇ ಇಲ್ಲ !

ಇನ್ನು ರಾಷ್ತ್ರಭಾಷೆ ಅಂತ ಹೇಳಿ ಎಲ್ಲ ಕಡೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಿ ದೇಸಿ ಭಾಷೆಗಳ Marketಗಳನ್ನ ಕ್ಷೀಣಿಸ್ತಾ ಇರೋದು. ಇವತ್ತು ಕನ್ನಡ ಚಿತ್ರರಂಗ ಮತ್ತೆ ಇತರ ಕನ್ನಡ ಮನೋರಂಜನೆ ಉದ್ದಿಮೆಗಳ ದುಃಸ್ತಿತಿಗೆ 'ಕ್ಶೀಣಿಸುತ್ತಿರೋ ಮಾರುಕಟ್ತೆನೇ' ಕಾರಣ. ನಮ್ಮ ಕನ್ನಡ ಮತ್ತು ಇತರ ಭಾಷೆಗಳನ್ನ ಕ್ಷೀಣಿಸಿ ತಾನೆ ಹಿಂದಿ ಬೆಳ್ದಿರೋದು ?

ಬೆಂಗಳೂರಲ್ಲಿ ನಾವು ಈಗೀಗ ನೋಡ್ತಾ ಇದ್ದಿವಿ - IBM ಸಾಂಸ್ಕ್ರುತಿಕ ಕಾರ್ಯಕ್ರಮದಲ್ಲಿ ಹಿಂದಿಗರು ಕನ್ನಡ ಹಾಡುವುದನ್ನ ನಿಲ್ಲಿಸಿದ್ದು, ಹಿಂದಿಗರು ಇಲ್ಲಿ ತೆರೆಯುವ ಎಲ್ಲಾ ಉದ್ದಿಮೆಗಳಲ್ಲಿ ಬರೀ ಹಿಂದಿಗರಿಗೇ ಕೆಲಸ ಕೊಡ್ತಾ ಇರೋದು, ಕನ್ನಡದ ಬಗ್ಗೆ ಅವರ ತಾತ್ಸಾರ ಮನೋಭಾವ , ಇದನ್ನೆಲ್ಲಾ

ನಮ್ಮ ದೇಶ ಕೇವಲ ಹಿಂದಿ ಮಾತಾಡವ್ರ ದೇಶ ಆಗ್ಬಿಟ್ಟಿದೆ. Parasites ತರ ಎಲ್ಲಾ ಕಡೆ ದೇಸಿ ಸಂಸ್ಕ್ರುತಿಯನ್ನ ನಾಶ ಮಾಡ್ತಾ ಇದಾರೆ. ನನಗನ್ನಿಸೋ ಪ್ರಕಾರ ಇದು ULFA ಕೋಪಕ್ಕೆ ನೇರ ಕಾರಣ. ಕೇಂದ್ರ ಸರ್ಕಾರದವ್ರು ಮಲತಾಯಿ ದೋರಣೆ ಬಿಟ್ಟು ಎಲ್ಲ ರಾಜ್ಯ ಮತ್ತು ಭಾಷೆಗಳ್ನ ಮೊದ್ಲು ಸಮಾನವಾಗಿ ನೋಡ್ಬೇಕು. ಅದು ಬಿಟ್ಟು ಎನೇನೋ ಸಬೂಬು ಹೇಳ್ಕೊಂಡ್ ಕೂತಿದ್ರೆ ಇವತ್ತು ಅಸ್ಸಾಂ, ನಾಳೆ ಕರ್ನಾಟಕ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

hpn's picture

ನಿಜ, ನಮ್ಮಲ್ಲಿ ಬಹಳಷ್ಟು ಜನರಿಗೆ ಕಾರಣ ಗೊತ್ತಿಲ್ಲ. ಅದಕ್ಕೆ ಕಾರಣ ಬಹುಶಃ ಈ ಮೀಡಿಯ ಚ್ಯಾನಲ್ಲುಗಳು ಮತ್ತು ಪತ್ರಿಕೆಗಳೇ. ಅಭಿಷೇಕ್ ಬಚ್ಚನ್ ಮದುವೆ ಸುಳಿವು ಬಗ್ಗೆ ತಿಳಿಸಿದಷ್ಟು ಸೀರಿಯಸ್ ಆಗಿ ಸುದ್ದಿಯ ಹಿನ್ನೆಲೆ ತಿಳಿಸೋದಿಲ್ಲ.

ಡೆಕ್ಕನ್ ಹೆರಾಲ್ಡ್ ದಿನವೂ ಓದೋದಕ್ಕೆ ವಾಕರಿಕೆ ಬರುತ್ತದೆ ಇತ್ತೀಚೆಗೆ - ಅದೇ "ಅವರು ಇದನ್ನ ಉದ್ಘಾಟಿಸಿದರು, ಅವರು ಹೀಗೆ ಹೇಳಿದರು, ಇವರು ಹೀಗೆ ಹೇಳಿದರು, ಅವರಿಗೆ ಹಿಂಗಾಯ್ತು, ಇವರಿಗೆ ಹಿಂಗಾಯ್ತು" - ಇಷ್ಟೇನಾ ನ್ಯೂಸು?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

Re: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

ಸಂಗನಗೌಡ's picture

ಹಿಂದಿ ಹೇರಿಕೆಯ ಗಬ್ಬು ನಾತ, ಬರಿ ಕರ್ನಾಟಕ, ಆಸ್ಸಾಮ್ ಅಲ್ಲ, ಮಹಾರಷ್ಟ್ರ, ಅಂಧ್ರಗಳಲ್ಲೂ ಹೊಡಿತಿದೆ. ತಮಿಳರು ಜಾಣರು ಮೊದಲಿಂದಲೂ ಹಿಂದಿ ಹೇರಿಕೇನ ಅಲ್ಲಗಳೀತ ಬಂದಿದಾರೆ. ತುಂಬಾ ಕನ್ನಡಿಗರು ಹಿಂದಿ ಬೇಡ ಅನ್ನೋರನ್ನಾ ಪಕ್ಕಾ terrorist ಗಳಂತೆ ನೋಡತಾರೆ.

ಉ: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

Sunil Jayaprakash's picture

ಹಿಂದಿ ಹೇರಿಕೆಯ ಬಗ್ಗೆ ತುಂಬಾ ನಗು ಬಂದಿದ್ದು ಮೊನ್ನೆ ಬಾಳಾ ಠಾಕ್ರೆ ಮರಾಠಿ ಕಲೀರೋ ಮಕ್ಳಾ ಎಂದದ್ದು.

Re: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

kesari's picture

ಅದು ಹಾಗಲ್ಲ. ULFA ಒಂದು ಉಗ್ರಗಾಮಿ ಪಡೆ. ಅವರಿಗೆ ಭಾರತದ ಅಂಗವಾಗಿರಲು ಇಷ್ಟವಿಲ್ಲ. ಅವರಲ್ಲಿ ಇಂತಹ ಭಾವನೆಗಳನ್ನು ತುಂಬುವ ಕೆಲಸವನ್ನು ಮಾಡಿ ISI ಅವರಿಗೆ ಶಸ್ತ್ರಗಳನ್ನು ಒದಗಿಸುತ್ತದೆ. ಇವರಿಗೆ ಬಾಂಗ್ಲಾದಲ್ಲಿರುವ ನೆರವು ಸಿಗುತ್ತದೆ. ಆದರೆ ಅಸ್ಸಾಂನ ಮಂದಿಗೆ ಇವರ ಬಗ್ಗೆ ಅನುಕಂಪ ಮೂಡಬೇಕಲ್ಲ. ಅದಕ್ಕಾಗಿ ಅಸ್ಸಾಂ ಎದುರಿಸುತ್ತಿರುವ ಹಿಂದೀ ಹೇರಿಕೆಯನ್ನು ಒಂದು ನೆಪವಾಗಿ ಬಳಕೆ ಮಾಡುತ್ತಿದ್ದಾರೆ.

ತಮಿಳುನಾಡಿನದೂ ಇದೇ ಕತೆ. ಪೆರಿಯಾರ್ ರಾಮಸ್ವಾಮಿ ಗುಡಿಯೊಂದರಲ್ಲಿ ಬ್ರಾಹ್ಮಣರಿಂದ ಅವಮಾನವಾಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ರಚನೆಯನ್ನು ಬೆಂಬಲಿಸಿ ದ್ರಾವಿಡಸ್ಥಾನ ರಚನೆಗೆ ಮುಂದಾದ. ಈ ದೇಶದ್ರೋಹಿ ಕೆಲಸಕ್ಕೆ ಬೆಂಬಲ ಸಿಗಲು ಬಳಸಿದ್ದು 'ಹಿಂದೀ ಹೇರಿಕೆ'. ಎಲ್ಲಿಯವರೆಗೆ ಹಿಂದೀ ಹೇರಿಕೆಯ ದೆವ್ವ ಮುಂದುವರಿಯುವುದೋ ಅಲ್ಲಿಯವರೆಗೆ ಈ ದೇಶದಲ್ಲಿ ನೆಮ್ಮದಿ ಇರುವುದಿಲ್ಲ.

-----

hinduwisdom

ನನ್ನ ಬ್ಲಾಗ್

ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ

tksbhat's picture

ಕೇಸರಿಯವರ ದೇಶಭಕ್ತಿ ಮೆಚ್ಚುಗೆಗೆ ಅರ್ಹ. ಆದರೆ ಈ ಭಕ್ತಿಯಲ್ಲಿ ಕೇವಲ ಕೇಸರಿ ಮಾತ್ರ ತುಂಬಿಕೊಂಡಂತೆ ಇದೆ. ದೇಶಭಕ್ತಿ ಸಮಗ್ರ ಮತ್ತು ಸಂಪೂರ್ಣವಾಗಬೇಕೆಂದರೆ ಬಿಳಿ ಮತ್ತು ಹಸಿರು ಜತೆಗೆ ಅಶೋಕ ಚಕ್ರದ ಸಂದೇಶವೂ ಸೇರಬೇಕು. ಉಲ್ಫಾ ಉಗ್ರರನ್ನು ಟೀಕಿಸುವುದಕ್ಕೆ ಕೇಸರಿ ಉಗ್ರರ ಸಾಹಿತ್ಯವನ್ನು ಬಳಸುವುದಕ್ಕಿಂತ ಸ್ವಲ್ಪ ಸ್ವಂತ ಸಂಶೋಧನೆ ನಡೆಸುವುದು ಉತ್ತಮ. ದೇಶಭಕ್ತಿ ಎಂಬುದು ವಿವೇಚನೆಯನ್ನು ಕಿತ್ತುಕೊಳ್ಳುವಂಥದ್ದಲ್ಲ ಎಂಬುದು ನನ್ನ ನಂಬಿಕೆ. ಕೇಸರಿಯವರೂ ಇದನ್ನು ಒಪ್ಪುತ್ತಾರೆಂದು ಭಾವಿಸುತ್ತೇನೆ.

Re: ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ

ಶ್ಯಾಮ ಕಶ್ಯಪ's picture

ಯಾಮಿನಿಯವರ ಕಾಮೆಂಟ್‍ನಲ್ಲಿ ಇರುವುದನ್ನು ನಾನೂ ಕೇಳಿದ್ದೇನೆ. ನನಗೆ ಕೆಲವು ಮಿತ್ರರಿದ್ದಾರೆ ನಾರ್ತ್-ಈಸ್ಟ್‍ನಿಂದ. ಅವರ ಜೊತೆಯ ಮಾತುಕತೆ ಮತ್ತು ಈಗಿನ ಕೆಲವು ಸುದ್ದಿಗಳನ್ನು ನೋಡಿ ನನ್ನ ಅನಿಸಿಕೆ ವ್ಯಕ್ತಪಡಿಸುತ್ತಿದ್ದೇನೆ.
೧. ನಾರ್ತ್-ಈಸ್ಟಿನ ಮೇಲೆ ಕೇಂದ್ರ ಸರ್ಕಾರದ್ದೂ ಯಾವತ್ತೂ ಮಲತಾಯಿ ಧೋರಣೆ, ಹಾಗು ಅಲ್ಲಿರುವ ಸಾಂಸ್ಕೃತಿಕ ವೈವಿಧ್ಯಗಳನ್ನು ಒಪ್ಪಿಕೊಳ್ಳದಿರುವುದು... ಇವುಗಳಿಂದಾಗಿ ಹಲವರಲ್ಲಿ ಸಹಜವಾಗಿಯೇ ಸಿಟ್ಟಿದೆ.
೨. ಮತ್ತೊಂದು ಮುಖ್ಯ ಕಾರಣ ಇತರ ರಾಜ್ಯಗಳಿಂದ ವಲಸೆ ಬಂದ ಕೆಲಸಗಾರರು ಮತ್ತು ಸರ್ಕಾರಿ ನೌಕರರು (ಆಫಿಸರನ್ನೊಳಗೂಡಿ). ಅವರಿಂದ ಸ್ಥಳೀಯರ ಅಭಿವೃದ್ಧಿಗೆ ಭಾದೆಯಾಗಿದೆ ಎಂಬುದು ಅವರ ಆಂಬೋಣ. ಇದಕ್ಕೆ ಒಪ್ಪುವ ಕೆಲವು ಸಂಗತಿಗಳನ್ನು ನೋಡಿರುವೆ ತಿಂಗಳ ಕೆಳಗೆ ಸಿಎನ್ಎನ್-ಐಬಿಎನ್ ನಲ್ಲಿ ಬಂದ ವಿಶೇಷ ಕಾರ್ಯಕ್ರಮವೊಂದರಲ್ಲಿ.
೩. ಬಾಂಗ್ಲಾದಿಂದ ಅಧಿಕೃತ/ಅನಧಿಕೃತ ವಲಸೆ,ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ. ಇದರಿಂದ ಸ್ಥಳೀಯರಿಗಿಂತ ಹೆಚ್ಚು ಸವಲತ್ತುಗಳು ಅವರಿಗೇ ಸಿಗುವಂತಾಗಿದೆ ಎಂಬುವುದು..

ಇನ್ನು ಬಹಳಷ್ಟು ದು:ಖಮಯ ವಿಷಯಗಳೂ ಇವೆ, ಬೇಸತ್ತ ಜನ (ULFA ಅಲ್ಲ) Quit India Movement ತರಹದ ಆಂದೋಲನಗಳಂತೆ ಭಾರತದ ವಿರುದ್ಧವೇ ಹಲವು ಆಂದೋಲನಗಳನ್ನೂ ನಡೆಸಿದ್ದಾರಂತೆ ಅಲ್ಲಿ! ನಾನೇನು ಭಯೋತ್ಪಾದನೆಗಾಗಲೀ Anti-India sentimentಗಾಗಲೀ ಸಮಜಾಯಿಷಿ ಕೊಡುತ್ತಿಲ್ಲ, ನಾನು ಕೇಳಿದ್ದನ್ನು ಹೇಳಿದ್ದೇನೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ