ಕನ್ನಡ ಪುಸ್ತಕಗಳು - Getting Started
ನಮ್ಮಲ್ಲಿ ಎಷ್ಟೋ ಜನಕ್ಕೆ ಕನ್ನಡ ಪುಸ್ತಕಗಳನ್ನ ಓದೋಕ್ಕೆ ಆಸಕ್ತಿ ಇದ್ರೂ "ಯಾವುದನ್ನ ಓದೋದು ?" ಅನ್ನೋದೇ ದೊಡ್ಡ ಪ್ರಷ್ಣೆ. ನನಗೂ ಅದೇ ಪ್ರಷ್ಣೆ ಕಾಡ್ತಾ ಇತ್ತು. ಆದ್ರೆ ನನ್ನ ಗೆಳೆಯ ಮಂಜು ನಮ್ಮಂತವರಿಗಾಗಿನೇ ಕನ್ನಡ ಪುಸ್ತಕಗಳ ಒಂದು ಪಟ್ಟಿ ತಯಾರ್ಸಿದಾರೆ. ಈ ಪಟ್ಟಿ Sampleಗೆ ಮಾತ್ರ, ಇನ್ನೂ ತುಂಬಾ ಪುಸ್ತಕಗಳಿವೆ. ಪಟ್ಟಿನ ಡೌನ್ಲೋಡ್ ಮಾಡುವ ಲಿಂಕ್

- kannadiga_1956 ರವರ ಬ್ಲಾಗ್
- Login or register to post comments
- 665 hits
- Email this blog




RSS:
ಪ್ರತಿಕ್ರಿಯೆಗಳು
Re: ಕನ್ನಡ ಪುಸ್ತಕಗಳು - Getting Started
ನಿಮ್ಮ ಫೈಲನ್ನ ಸಂಪದಕ್ಕೇ ಅಪ್ಲೋಡ್ ಮಾಡಿರುವೆ. ನೋಡಿ.
ಧನ್ಯವಾದಗಳು,
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅನಿಸಿಕೆ: ಕನ್ನಡ ಪುಸ್ತಕಗಳು - ಮೊದಲ ಓದಿಗಾಗಿ
ಇದು ಸಂಪದದಲ್ಲಿ ಅಪ್‌ಲೋಡ್ ಮಾಡಿರುವ ಪಿ.ಡಿ.ಎಫ್.ಅನ್ನು ಓದಿ ಬರೆಯುತ್ತಿರುವ ಪ್ರತಿಕ್ರಿಯೆ. ಈ ಪಟ್ಟಿ ವೈಯಕ್ತಿಕ ಅಭಿಪ್ರಾಯ ಅಂತಲೂ ಗೊತ್ತು. ಹಾಗಾಗಿ ನನ್ನ ಅನಿಸಿಕೆಯನ್ನು ತಪ್ಪು ತಿಳಿಯಬೇಡಿ.
ಪಟ್ಟಿ ಚೆನ್ನಾಗಿದೆ. ಶಿವರಾಮ ಕಾರಂತರ ಪಟ್ಟಿಯಲ್ಲಿ "ಬೆಟ್ಟದ ಜೀವ" ಮತ್ತು "ಅಳಿದ ಮೇಲೆ" ಎರಡನ್ನು ನಾನು ಸೇರಿಸೋದಕ್ಕೆ ಇಷ್ಟ ಪಡುತ್ತೀನಿ.
- ಶ್ಯಾಮ್ ಕಿಶೋರ್
ಪ್ರ: ಕನ್ನಡ ಪುಸ್ತಕಗಳು - Getting Started
ಇದೂ ಕೂಡ ನನ್ನ ವೈಯಕ್ತಿಕ ಅಭಿಪ್ರಾಯವೇ. ಸಂಪದದಲ್ಲಿ ಈ ಹಿಂದೆ ಶ್ರೀಕಾಂತ ಮಿಶ್ರಿಕೋಟಿಗಳು ಸಂಸ್ಕೃತ ಸುಭಾಷಿತಗಳು ಎಂಬುದಾಗಿ ದೀರ್ಘವಾದ ಲೇಖನಗಳನ್ನು ಬರೆದಿದ್ದರು. ಆಗ ಕನ್ನಡ ಸುಭಾಷಿತಗಳ ಬಗ್ಗೆ ನಾನು ಕೇಳಿದ ಪ್ರಶ್ನೆಯಿಂದ ನನಗೆ ಸೋಮೇಶ್ವರ ಶತಕದ ಪಾಯಿಂಟರ್ ಸಿಕ್ಕಿತ್ತು. ಮಾರನೆಯ ದಿನ ಅದನ್ನು ಕೊಂಡುಕೊಂಡು ಓದಿದ್ದೆ. ನನ್ನ ಅಭಿಪ್ರಾಯದಲ್ಲಿ ಸೋಮೇಶ್ವರ ಶತಕವನ್ನು ಎಲ್ಲರೂ ಓದಲೇಬೇಕು.
ಮಂದಹಾಸ: ಪರ್ವ - Getting Startedಎ
ಕನ್ನಡಿಗ_1956(ಅಂದ ಹಾಗೆ ನಿಮ್ಮ ಹೆಸರು ಏನು ?), ಈ ಪಟ್ಟಿಯನ್ನು ಎಲ್ಲರೊಡನೆ ಹಂಚಿಕೊಂಡಿದ್ದಕ್ಕಾಗಿ ಸವಿಯೊದಗು. ಆದರೆ ಒಂದು ಮಾತು ಕೇಳಬೇಕಿತ್ತು, ನಿಜಕ್ಕೂ ಪರ್ವ ಮೊದಲ ಓದನಲ್ಲಿ ಇರಬೇಕೇ. ಪರ್ವ ತುಂಬಾ ದೊಡ್ಡ ಕಾದಂಬರಿ. ಅಲ್ಲದೇ ತಾಳ್ಮೆಯೂ ಬೇಕು.
Re: ಮಂದಹಾಸ: ಪರ್ವ - Getting Startedಎ
Link
ಮೇಲಿನ ಲಿಂಕನಲ್ಲು ಕನ್ನಡ ಪುಸ್ತಕಗಳ ಪಟ್ಟಿ ಸಿಗುತ್ತದೆ.
ನೀವು ಲೇಖಕ ಅಥವ ಕೃತಿಗಳ ಹೆಸರಿನಲ್ಲಿ ಶೋಧಿಸಬಹುದು.
- ಜೈ ಕರ್ನಾಟಕ
Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ
ನೀವು ಕೊಟ್ಟಿರುವ ಇಂಡಿಯಾವಾರ್ತಾ ಕೊಂಡಿಯಲ್ಲಿ ಕನ್ನಡ ಪುಸ್ತಕ ಮಾರಾಟ ನಿಲ್ಲಿಸಿದ್ದಾರೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ
ಇಲ್ಲ .. ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕೆಳಗೆ ನೋದಿ....ಕಾದು ನೋಡೋಣ
Thank you for choosing Indiavarta.com to place an order for Kannada books.
The page is not available temporarily as the price of the books is being updated.
We regret the inconvenience.
- ಜೈ ಕರ್ನಾಟಕ
Re: ಮಂದಹಾಸ: ಪರ್ವ - Getting Started
ಸುನಿಲ್ ಅವರೆ,
ನಿಮ್ಮ ಅಭಿಪ್ರಾಯ ೧೦೦ % ಸತ್ಯ. ಪರ್ವ ಓದಿ ಜೀರ್ಣಿಸಿಕೊಳ್ಳಲು ಸಾಕಷ್ಟು ಪುಸ್ತಕಗಳನ್ನು ಓದಿ, ವಿಚಾರ ಮಾಡಿ, ಸ್ವಲ್ಪ ಮಟ್ಟಿನ maturity ಹೊಂದಿರಬೇಕು.
ನನಗೆ ನೆನಪಿದೆ - ನನ್ನ ೧೮ ನೆ ವಯಸ್ಸಿನಲ್ಲಿ ನಾನು ಪರ್ ಓದಲು ಕುಳಿತಾಗ ಬಹಳ ಕಷ್ಟ ಆಯ್ತು. ಕಾರಣಗಳು
೧. ಭೈರಪ್ಪನವರು ಮಹಾಭಾರತದ ಪಾತ್ರಗಳನ್ನು ಕರೆದುತಂದು ನೇರ ನಿಮ್ಮ ಪಕ್ಕಕ್ಕೆ ಕೂರಿಸಿರುವುದು ಮತ್ತು ನಮಗಿದರಿಂದಾಗುವ ದಿಗ್ಭ್ರಮೆ!
೨. ಪ್ರತಿ ಪುಟ ಓದಿ ಅರ್ಥೈಸುವುದಕ್ಕೆ ಬೇಕಾದ ಸಮಯ, ಪ್ರಭುದ್ಧತೆ.
ಕ್ರಮೇಣ ಸತತ ಪ್ರಯತ್ನದಿಂದ ಓದಿ ಮುಗಿಸಿದಾಗ ಆದ ಸಂತೋಷ ಹೇಳಲಸಾಧ್ಯ!! ಈಗಂತೂ ಹಲವಾರು ಬಾರಿ ನನ್ನ ನೆಚ್ಚಿನ ಪರ್ವದ ಅಧ್ಯಾಯಗಳನ್ನು ಓದುವಾಗ, ಪ್ರತಿ ಸಲ ಬೇರೆ ಬೇರೆ ಭಾವನೆ, ಚಿಂತನೆಗಳು ಮೂಡುತ್ತವೆ!
'ಪರ್ವ' ಅರಗಿಸಿಕೊಂಡೋನು, ಏನನ್ನಾದ್ರೂ ಸುಲಭವಾಗಿ ಅರಗಿಸಿಕೊಳ್ಳುತ್ತಾನೆ ಅನ್ಸತ್ತೆ!
ವಂದನೆಗಳು
ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ
ಏನು ಹೇಳ್ತೀರಾ, ಮೈಸೂರು ಮಂಜು ಅವರೆ, ನೀಮಗೆ ಪರ್ವ ಓದಿನಲ್ಲಾದ ಅನುಭವ ನನಗೆ ಸಾರ್ಥ ಓದುವಾಗ ಆಯಿತು. ತಲೆಕೆಟ್ಟು ಗೊಬ್ಬರ ಆಗುವುದೊಂದು ಬಾಕಿ.
ಸಾರ್ಥ, ವೇದಾಂತ, ಮಂಡನಮಿಶ್ರ, ವಾಮಾಚಾರ, ಬೌದ್ಧ ಧರ್ಮ, ಶಂಕರಾಚಾರ್ಯ ಎಲ್ಲವೂ ಬರುತ್ತದೆ ಅದರಲ್ಲಿ. ಆದರೆ ಎಲ್ಲಿಯೂ ಕೂಡ ವಿಶ್ರಮಿಸಬೇಕು ಅಂತ ಅನ್ನಿಸುವುದೇ ಇಲ್ಲ.
ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ
ಸಾರ್ಥದಲ್ಲಿ "ಪರಕಾಯ ಪ್ರವೇಶ" ಮತ್ತು "ಶಂಕರ-ಮಂಡನಮಿಶ್ರ"ರ ವಾದದ ಸನ್ನಿವೇಶಗಳಂತೂ ನಿಜಕ್ಕೂ ಅದ್ಭುತ ಅಲ್ಲವೇ? ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿಸುವುದು ಅಂದರೆ ಇದೇ ಇರಬೇಕೇನೋ?
- ಶ್ಯಾಮ್ ಕಿಶೋರ್
ದನಿಗೂಡು : ಸಾರ್ಥದ ಪರಕಾಯ ಪ್ರವೇಶ
ಈ ಸನ್ನಿವೇಶ ನಿಜಕ್ಕೂ ರೋಮಾಂಚನಕಾರಿ. ಅದೂ ಅಲ್ಲಿ, ಯಾಕೆ ಪರಕಾಯ ಪ್ರವೇಶ ಮಾಡಬೇಕಾಯಿತು ಎಂಬುದೂ ಕೂಡ ಅಷ್ಟೇ ರೋಚಕ.
ಗಂಡನನ್ನು ಬಿಟ್ಟುಕೊಡಲಾರದವಳೊಂದು ಕಡೆ. ವಾದದಲ್ಲಿ ಗೆಲ್ಲಲೇ ಬೇಕೆಂಬ ಹಠ ಮತ್ತೊಂದೆಡೆ, ಈ ವಾದಗಳು ಅತ್ಯಂತ ರೋಚಕವಾಗಿವೆ. ಇಂಥ ಕೃತಿಗಳನ್ನು ಓದುವಾಗ ನಿಜಕ್ಕೂ ಊಟ, ತಿಂಡಿ, ಫೋರಂ, ಸಿನಿಮಾ, ನಾಟಕ, ಹಾಡು ಇವುಗಳಾವುದೂ ಬೇಡ ಅನ್ನಿಸಿಬಿಡತ್ತೆ.
ಹಾಗೆಯೇ ಅಲ್ಲಿ ಶೃಂಗಾರ ರಸಕ್ಕೂ ಏನು ಮೋಸ ಆಗಿಲ್ಲ ಬಿಡಿ. ಹೇಳರವಾಗಿವೆ.
Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ
ನಾನು ಕಳೆದ ವರಾಂತ್ಯದಲ್ಲೆ 'ಸಾರ್ಥ' ಕೊಂಡುಕೊಂಡೆ. ಓದುವ ತವಕ ಇನ್ನಷ್ಟು ಹೆಚ್ಚುಸಿತ್ತಿದ್ದೀರಿ. ಧನ್ಯವಾದಗಳು.
ಈಗ ತಾನೆ "ಭೈರಪ್ಪನವರ ಕಾದಂಬರಿಗಳು - ಒಂದು ಅಧ್ಯಯನ" ( ಪ್ರಕಾಶಕರು: ಭಂಡಾರ್ ಕಾರ್ಸ್ ಕಾಲೇಜು, ಕುಂದಾಪುರ) ೯೦% ಓದಿ ಮುಗಿಸಿದ್ದೇನೆ. ಇದು ಒಂದು ವಿಶಿಷ್ವವಾದ ಪುಸ್ತಕ . ಇದರಲ್ಲಿ ವಿಮರ್ಶಕರು ಬೇರೆ ಬೇರೆ ಆಯಾಮಗಳಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಚರ್ಚಿಸಿದ್ದಾರೆ ಮತ್ತು ಸ್ವತ: ಭೈರಪ್ಪನವರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.
ನನ್ನ ಪ್ರಕಾರ ಅವರ ಸರಳವಾದ( ಗಾತ್ರದಲ್ಲು ಚಿಕ್ಕದಾದ
) "ಧರ್ಮಶ್ರೀ", " ಜಲಪಾತ" ಮತ್ತು "ನಾಯಿ-ನೆರಳು" ಕ್ರಮವಾಗಿ ಮೊದಲು ಓದುವುದು ಸರಿಯೆನಿಸುತ್ತದೆ.
Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ
@ ಎಲ್ಲರಿಗೂ: ಉತ್ತಮ ಅನಿಸಿಕೆ ಮತ್ತು ಪ್ರತಿಕ್ರಿಯೆಗಳು.
'ಸಾರ್ಥ' ಕೂಡ ನಮ್ಮ ತಲೆ ತಿನ್ನೋದ್ ಅಂತೂ ನಿಜ.
ಹಾಗೆ ನೋಡಿದ್ರೆ ಭೈರಪ್ಪನವರ ಬಹುಶ: ಎಲ್ಲ ಕಾದಂಬರಿಗಳಲ್ಲೂ ಒಂದೆರಡು ಪಾತ್ರಗಳ/ವಿಷಯಗಳ ಚಿತ್ರಣ ನಿಜಕ್ಕೂ ಅದ್ಭುತ.
ಟಿಪ್ಪಣಿ ೧: ಭೈರಪ್ಪನವರ 'ಭಿತ್ತಿ' ಮರು-ಮುದ್ರಣಗೊಂಡಿದೆ. 'ಅಂಕಿತ' ಮತ್ತು 'ಸಪ್ನ' ದ ಟಾಪ್-೧೦ ಗೆ ಹೋಗಿದೆ ಒಂದು ವಾರದಲ್ಲಿ (ಆಶ್ಚರ್ಯ ಏನಿಲ್ಲ ಬಿಡಿ
)
ಟಿಪ್ಪಣಿ ೨: ಭೈರಪ್ಪನವರ ಹೊಸ ಕಾದಂಬರಿ ಬರಲಿದೆ ಮಾಸಾಂತ್ಯದಲ್ಲಿ ಅಂತ ಕೇಳಿದೆ - ಇಸ್ಲಾಮ್ ಬಗೆಗಿನ ವಿಷಯ. ಇದಕ್ಕಾಗಿ ಅವರು ಸ್ವಲ್ಪ ಕಾಲ ಇಸ್ರೇಲ್ ಪ್ರವಾಸ ಮಾಡಿದ್ದಾರೆ (ಮೂಲ: ಪ್ರತಾಪ್ ಸಿಂಹ ಲೇಖನ) ಹಾಗೂ ಮಧ್ಯ-ಪ್ರಾಚ್ಯದ ಇತಿಹಾಸಕಾರರ ಸಾಹಿತ್ಯಗಳನ್ನು ಸಂಶೋಧಿಸಿದ್ದಾರೆ (ಮೂಲ: ನಂಬಲರ್ಹ ಗೆಳೆಯರೊಬ್ಬರು). ಹೆಚ್ಚಿನ ಮಾಹಿತಿ ಇದ್ರೆ ತಿಳಿಸಿ.
ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು
ಭೈರಪ್ಪನವರ ಪುಸ್ತಕಗಳನ್ನು ಓದುವ ಕ್ರಮ (order) ಬಗ್ಗೆ ವೈಭವ ಅವರು ಬರೆದದ್ದಕ್ಕೆ ನನ್ನ ವೈಯಕ್ತಿಕ ಅನಿಸಿಕೆಯಿದು.
ನಾನು ಮೊದಲು ಎರಡು ಬಾರಿ ಅವರ ಪುಸ್ತಕಗಳನ್ನು ಪ್ರಕಟವಾದ ಕ್ರಮದಲ್ಲಿ ಓದಿದೆ. ಮೂರನೇ ಬಾರಿ ಓದುವುದಕ್ಕೆ ಪ್ರಾರಂಭಿಸುವಷ್ಟರಲ್ಲಿ "ಭಿತ್ತಿ" ಬಿಡುಗಡೆಯಾಗಿತ್ತು. ಆಗ ನನಗೆ ಅನ್ನಿಸಿದ್ದು: ಮೊದಲು "ಭಿತ್ತಿ", ಅದರ ಜೊತೆಯಲ್ಲೇ "ಗೃಹಭಂಗ" (ಭಿತ್ತಿಯನ್ನು ಒಂದು ಮುನ್ನೂರು ಪುಟ ಓದಿ ನಿಲ್ಲಿಸಿ ಪ್ಯರಲೆಲ್ ಆಗಿ ಗೃಹಭಂಗ ಓದೋದು), "ನಿರಾಕರಣ" ಮತ್ತು "ಧರ್ಮಶ್ರೀ" ಓದಿದೆ. ಒಂಥರಾ ಹೊಸ ಅನುಭವ ದಕ್ಕಿದಂತಾಯಿತು. ಆಮೇಲೆ "ಅನ್ವೇಷಣ", "ಜಲಪಾತ" ಓದಿದೆ. ಆದರೆ "ಪರ್ವ" ಓದುವ ಮೊದಲು "ನಾನೇಕೆ ಬರೆಯುತ್ತೇನೆ" ಓದುವುದು ನಿಜಕ್ಕೂ ಒಳ್ಳೆಯದು ಅಂತ ನನ್ನ ಅಭಿಪ್ರಾಯ. ಲೇಖಕರ ಮೂಲ ಆಶಯ ನಮಗೆ ಅರ್ಥ ಆಗುತ್ತದೆ. ಆಗ "ಪರ್ವ"ವನ್ನು ಮೂಲ ಮಹಾಭಾರತದಿಂದ ಬಿಡಿಸಿಕೊಂಡು ಓದಲು ಸಹಾಯವಾಗುತ್ತದೆ. ನಿಮ್ಮ ಅಭಿಪ್ರಾಯಗಳನ್ನೂ ತಿಳಿಸಿ.
ಭೈರಪ್ಪನವರ ಹೊಸತೊಂದು ಕಾದಂಬರಿ ಭಯೋತ್ಪಾದನೆಯನ್ನು ಕುರಿತದದ್ದು ಅಂತ ಅವರೇ ಸುಳಿವು ಕೊಟ್ಟಿದ್ದಾರೆ (ಯಾವುದೋ ಒಂದು ವೇದಿಕೆಯಲ್ಲಿ ಮಾತನಾಡುತ್ತಾ ಅವ್ರೇ ಹೇಳಿದಂತೆ ನೆನಪು; ಬಹುಷಃ ವಿಶ್ವ ಕನ್ನಡ ಸಮ್ಮೇಳನದಲ್ಲಿ ಇರಬೇಕು). ಆದರೆ ಇಷ್ಟು ಬೇಗ ಬಿಡುಗಡೆಯಾಗುತ್ತೆ ಅಂತ ಅಂದುಕೊಂಡಿರಲಿಲ್ಲ.
- ಶ್ಯಾಮ್ ಕಿಶೋರ್
Re: ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು
ನಾನು ಓದಿದ ಭೈರಪ್ಪನವರ್ ಮೊದಲ ಕಾದಂಬರಿ - ಭೀಮಕಾಯ (ತರಂಗದ ಧಾರವಾಹಿಯಾಗಿ) ನನ್ನ ೧೩ನೇ ವಯಸ್ಸಿನಲ್ಲಿ. ಆಗಿನ್ನೂ ಓದಬೇಕು ಎಂಬ ಆಸೆ ಇತ್ತೇ ಹೊರತು ಹೆಚ್ಚು ಆಳವಾದ ಅರ್ಥವಾಗಿರಲಿಲ್ಲ. ನಂತರ ಗೃಹಭಂಗ. ಓದಿ ಸುಸ್ತಾಗಿದ್ದೆ, ಭೈರಪ್ಪನವರ ಮೋಡಿಗೆ ಮರುಳಾಗಿದ್ದೆ. ನಂತರ ಸಾರ್ಥ (ತರಂಗದಲ್ಲಿ ಅದರ ಬಗೆಗೆ ಲೇಖನ ಓದಿದ ನಂತರ) ಕಳೆದ ಆರು ತಿಂಗಳ ಹಿಂದೆ ಪರ್ವ. ಸಾರ್ಥ ಓದುತ್ತಿರುವವರೆಗೂ ನಾನೇ ನಾಗಭಟ್ಟನಾಗಿದ್ದೇನೆಯೋ ಎಂಬಷ್ಟು ತಲ್ಲೀನತೆ ಬರಿಸಿತ್ತು. ಅಷ್ಟು ವಿವರಗಳು ಅದರಲ್ಲಿ. ಆದರೆ ಎಲ್ಲಾ ವಿವರಣೆಗಳೂ ಮಾನಸಿಕ ಸ್ತರದ್ದು. ಹೊರಗಿನ ಪ್ರಪಂಚ ಅತಿಯಾಗಿ ವರ್ಣಿಸಿಲ್ಲ.
ಸದ್ಯಕ್ಕೆ ಬರಲಿರುವ ಅವರ ಹೊಸ ಕಾದಂಬರಿಗಾಗಿ ಕಾಯುತ್ತಿದ್ದೇನೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ