ನಮ್ಮ ಸಮಾಜದ Empowerment
ನಮ್ಮ ಕಂಪನಿಲಿ ಕನ್ನಡ ರಜ್ಯೋತ್ಸವ ಮಾಡ್ದಾಗ T.N.ಸೀತಾರಾಮ್ ಹೀಗ್ ಹೇಳಿದ್ರು - "ಈ ಬಂಡವಾಳಶಾಹಿ ಕಾಲದಲ್ಲಿ ಎಲ್ಲವೂ ಮಾರಾಟದ್ ವಸ್ತು ಹಾಗ್ಬಿಟ್ಟಿದೆ. ಒಂದು ಚಿಕ್ಕ ಹುಡುಗಿ - My Daddy has the Big Car ! ಅಂತಾಳೆ. ಅಪ್ಪ ದೊಡ್ಡ ಕಾರ್ ತಗೊಳ್ಳೊ ಶಕ್ತಿ ಇದೆ ಅಂತ ಆತ ಒಳ್ಳೆ ಅಪ್ಪ ಅನ್ನುಸ್ಕೊತಾನೆ. ಮಮತೆ, ಪ್ರೀತಿ ಇವ್ನೆಲ್ಲಾ ಮಾರಾಟದ್ ವಸ್ತು ಮಾಡಿ ದಿನಾಗ್ಲು TV ಅಲ್ಲಿ ತೋರ್ಸಿ ತೋರ್ಸಿ, ಜನ ಈ ತರದ ಮಾಹಿತಿಯನ್ನೇ ಜ್ನಾನ ಅಂತ ತಿಳ್ಕೊಳಕ್ಕೆ Start ಮಾಡಿದಾರೆ. ಇದೊಂದು ದೊಡ್ಡ ದುರಂತ" ಅಂತ.
ನೆನ್ನೆ ನಮ್ Friend ಜೊತೆ ಎಣ್ಣೆ ಹೊಡಿತಿರ್ವಾಗ ಯಾವ್ದೋ ವಿಚಾರಕ್ಕೆ, ಈ ವಿಷಯ ಬಂತು. ಅವ್ನೇಳ್ದ - "ಅಮೇರಿಕದಲ್ಲೇನಾದ್ರು ಈ ತರ ಜಾಹಿರಾತು ಕೊಟ್ರೆ, ಜನ ಚಪ್ಪಲಿ ತಗೊಂಡ್ ಹೊಡಿತಾರೆ. ಆ ಕಾರ್ ಒಂದೂ ಮಾರಾಟ ಹಾಗೊಲ್ಲ ಅಂತ".. ಅವ್ನೇಳಿದ್ದು ಸರಿ. ಅಮೇರಿಕಾದ ತುಂಬಾ ಜಾಹಿರಾತನ್ನ ನೋಡಿದ್ದಿನಿ. ಅಲ್ಲಿ ಮೌಲ್ಯಗಳ್ಗೆ ತುಂಬ ಮಹತ್ವ ಕೊಡ್ತಾರೆ. "Fair and Lovely" ಜಾಹಿರಾತು ಕೊಡ್ಲಿ ಅಮೇರಿಕಾದಲ್ಲಿ ನೋಡೋಣ. Sue ಮಾಡಿ ಕಂಪನಿ ಮುಚ್ಚಾಕುಸ್ತಾರೆ.
ನಮ್ಮ ದೇಶದಲ್ಲಿ ಅಂಗಿದ್ರೆ ಈ ತರ ಜಾಹಿರಾತು ಯಾಕೆ ಮಾಡ್ತಾರೆ ? ಈ ತರದ್ದನ್ನ ಜನ ಒಪ್ಪ್ಕೊಳ್ತಾರ್ರಿ ! ಅದಕ್ಕೆ. ಮೌಲ್ಯನ ಮಾರಾಟದ್ ವಸ್ತು ಮಾಡಿರೋದು ಬಂಡವಾಳಶಾಹಿ ಸಿದ್ದಾಂತ ಅಲ್ಲ, ಮಾಡಿರೋದು ನಮ್ ಜನ !! ಮಾರುತಿ Esteem ಕಾರ್ ಜಾಹಿರಾತ್ ನೊಡಿದೀರ ? Esteem ಕಾರ್ ಇದ್ರೆ lifeಅಲ್ಲಿ Esteem ಬರುತ್ತಂತೆ !! ಇದೇ ತರ "Fair and Lovely", "Fair and Handsome" ಈ ತರ ಜಾಹಿರಾತ್ ಕೊಟ್ಮೇಲೇ ಅವ್ರ Sales ಜಾಸ್ತಿ ಹಾಗಿರೋದು. ಭಾರತದಲ್ಲಿ ಆ valuesಉ, ಈ valuesಉ ಅಂತಾರಲ್ಲ, ಎಲ್ಲಾ ಬರೀ ಬೊಗಳೆ.
ನಮ್ಮ ಸಮಾಜ ಇನ್ನೂ Empower ಹಾಗಿಲ್ಲ. ಇಲ್ಲಿನ್ ಜನಕ್ಕೆ ಎನೋ ಒಂತರ Complex. ಈ ಜನರಲ್ಲಿರೋ weaknessನೆ Marketing ಅವ್ರು ಬಳುಸ್ಕೊತಾರೆ. ಬಹುಶಹ Empowerment ಹಾದಿಅಲ್ಲಿದೆ ಅಂತ ತಿಳ್ಕೊತೀನಿ. ನಮ್ ಮಕ್ಳು ಕಾಲಕ್ಕಾದ್ರು ಉದ್ದಾರ ಹಾಗ್ಬೊದೇನೋ, ನೋಡ್ಬೇಕು..

- kannadiga_1956 ರವರ ಬ್ಲಾಗ್
- Login or register to post comments
- 380 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
Re: ನಮ್ಮ ಸಮಾಜದ Empowerment
houdu america dalli nanu jasthi family values ndotah idene iga bharathadalli illa. yella bittu abri muru hottu kela madthare. illi family ge importance kodtahre. makkalanna nodkolake avra school bagge yella aasakthi thoristhare/
illi hengasraige bahal maryade kkodthare. matte neevu yene kelsa amdidaru adakke bele ide.
sumne tv nalli america bagge thorisodu ella nija alla. evaru manushayaru ivarigu values ide matet ivru honest .
Re: ನಮ್ಮ ಸಮಾಜದ Empowerment
EMPOWER ಅಂದ್ರೆ ಏನು ನಿಮ್ಮ ಪ್ರಕಾರ ? ಏನು ಆಗಬೇಕೆಂದು ನೀವು ಬಯಸುತ್ತಿರಾ ?
Advertise ಗಳನ್ನು ನೋಡಿ ಸಮಾಜವನ್ನು judge ಮಾಡುವುದೆ ?
ಇನೊಂದು ವಿಷಯ ಅಂದ್ರೆ ನಮ್ಮ ಜನ ಜಾಹಿರಾತು ನೋಡುತ್ತಾರಾ ?
-ನಿಮ್ಮ ಬೆಂಬಿಡದ ಬೇತಾಳ .....
Re: ನಮ್ಮ ಸಮಾಜದ Empowerment
ಬೇತಾಳವ್ರೆ,
Empower ಅಂದ್ರೆ, ಕನಿಷ್ಟಪಕ್ಷ "ಮಾಹಿತಿ" ಮತ್ತು "ಜ್ನಾನ" ಇದರ ಅರಿವು ಎಲ್ಲ ಜನ್ರಿಗೆ ಇರ್ಬೇಕು. ಈ ಕಲಸ ದೊಡ್ದು, ಆ ಕೆಲ್ಸ ಚಿಕ್ದು ಅಂತೆಲ್ಲ ಭಾವನೆ ಹೋಗ್ಬೇಕು. ಅದು ಹೋದ್ರೆ, ಜನರಲ್ಲಿ ಕೀಳರಿಮೆ ಹೋಗುತ್ತೆ. ಜೊತೆಗೆ ಸಮಾಜದ ಹಾಗು ಹೋಗುಗಲಲ್ಲಿ ಎಲ್ಲಾ ಭಾಗವಹಿಸ್ಬೇಕು.
Advertisement ಕೋಡ ಸಮಾಜದ ಒಂದು ರೀತಿಯ ಕನ್ನಡಿ.
ಜನ ಜಾಹಿರಾತ್ ನೋಡ್ತಾರ ? ನೋಡೋದೇ ಅಲ್ಲ.. Influence ಕೂಡ ಹಾಗ್ತಾರೆ..
Re: ನಮ್ಮ ಸಮಾಜದ Empowerment
ಈ ಕಲಸ ದೊಡ್ದು, ಆ ಕೆಲ್ಸ ಚಿಕ್ದು ಅಂತೆಲ್ಲ ಭಾವನೆ ಹೋಗ್ಬೇಕು - ಅಂದ್ರೆ ಅದು ಕೊಡೊ ಸಂಬಾವನೆ ಕೂಡ ಸಮಾನವಾಗಬೇಕು ಅನ್ನಿಸುತ್ತೆ... ಅಂತ ನನ್ನ ಅಬಿಪ್ರಯ
-ನಿಮ್ಮ ಬೆಂಬಿಡದ ಬೇತಾಳ ...
Re: ನಮ್ಮ ಸಮಾಜದ Empowerment
ಇದು ಸಂಬಾವನೆ ಪ್ರಶ್ಣೆ ಅಲ್ಲ. ಒಂದು ಉದಾಹರಣೆ ಕೊಡ್ತೀನಿ - ನಮ್ಮಳ್ಳಿಲಿ ಒಮ್ಮೆ ಒಬ್ಬರ ಮನೆಗೆ ಹೋಗಿದ್ದೆ. ಅವರ ಮಗ ಬೆಂಗಳೂರಲ್ಲಿ Hotel ಒಂದರಲ್ಲಿ Manager ಕೆಲ್ಸ ಮಾಡ್ತಿದ್ದ. ಅವರಪ್ಪನಿಗೆ ಅದೇನೋ Hotel ಅಂದ್ರೆ ಆಗ್ದು. "ಇಲ್ಲಿ ವ್ಯವಸಾಯ ಮಾಡೊ ಅಂದ್ರೆ ಎಂಜಿಲ್ ಎತ್ತಕ್ಕೋಗೌನೆ" ಅಂತ ಮಾತಾಡ್ತಿದ್ರು. ಈ ತರದ್ Mentality ಹೋಗ್ಬೇಕು ಅಂದೆ ಅಷ್ಟೆ..