Sex - ಕಾಮ; ಅದರ ಮಹತ್ವ !

ಕರ್ನಾಟಕ ನಾಟಕ ಅಕಡಮಿ ಅಯೋಜಿಸಿದ್ದ "ಜ್ನಾನಪೀಠ ಪುರಸ್ಕ್ರುತರ ನಾಟಕ ಉತ್ಸವ" ನೆನ್ನೆ ಮುಗೀತು. ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರ ಕಾದಂಬರಿಗಳನ್ನ ನಾಟಕ ರೂಪ ಮಾಡಿ ಹಲವಾರು ನಾಟಕ ತಂಡದವ್ರು ಪ್ರದರ್ಶನ ಮಾಡುದ್ರು. ನಾನು ಎರಡು ನಾಟಕ ಮಾತ್ರ ನೋಡ್ದೆ. ಒಂದು ಕುವೆಂಪು ಅವರ "ಶ್ರಿ ರಾಮಾಯಣದರ್ಶನಂ" ಮೇಲೆ ತೆಗ್ದಿದ್ದ ನಾಟಕ "ರಾವಣನ ಕಣಸು". ಕನಸು ಅಲ್ಲ, ಕಣಸು. ಕಣಸು ಅಂದ್ರೆ Vision, ನನ್ಗೂ ಅಲ್ಗೆ ಒದ್ಮೇಲೇ ಗೊತ್ತಾಗಿದ್ದು. ಹಸ್ರು ಸಖತ್ತಾಗಿ ಇಟ್ಬಿಟ್ಟು, ನಾಟಕ ಮಾತ್ರ ತೀರ ಕಳಪೆ. ಕುವೆಂಪು ಅವ್ರ ಹೆಸರನ್ನ ಹಾಳ್ಮಾಡ್ಬಿಟ್ರು . ನಾನಂತೂ ತಲೆ ಚೆಚ್ಚಿಕೊಂಡು ಅರ್ದಕ್ಕೇ ಎದ್ದ್ ಬಂದೆ.

ಇನ್ನೊಂದು ನಾಟಕ ಶಿವರಾಂ ಕಾರಂತರ ಅವರ "ಮೈ ಮನಗಳ ಸುಳಿಯಲ್ಲಿ". ನಾಟಕ ಮಾಡ್ದವ್ರು "ರೂಪಾಂತರ" ತಂಡ , ಅವ್ರ್ ಇನ್ನೊಂದ್ ನಾಟಕ ನೋಡಿದ್ದೆ, ತುಂಬಾ ಚೆನ್ನಾಗಿತ್ತು. ಅದೇ Expectations ಇಟ್ಕೊಂಡೇ ಹೋದೆ. ಸದ್ಯ ನನ್ನ Expectations ಹುಸಿ ಮಾಡ್ಲಿಲ್ಲ - ನಾನ್ ನೋಡಿದ್ ಮೊದಲನೇ ನಾಟಕಕ್ಕಿಂತ ಚೆನ್ನಾಗೇ ಮಾಡುದ್ರು. ಅದರಲ್ಲೂ ನಾಟಕದ ಸಂಗೀತ - ನನ್ನನ್ನ ಇನ್ನೂ ಕಾಡ್ತಾ ಇದೆ. ಅಕ್ಕಮಹಾದೇವಿ ಅವ್ರ ಚೆನ್ನಮಲ್ಲಿಕಾರ್ಜುನ ಗೀತೆಗಳು ಇಷ್ಟು ಇಂಪಾಗಿರುತ್ತೆ ಅಂತ ಗೊತ್ತೇ ಇರ್ಲಿಲ್ಲ !

ಈ ನಾಟಕದ ತಿರುಳು - "ಮೈ ಮತ್ತು ಮನಸ್ಸು ಬೇರೆ ಬೇರೆ ಅಲ್ಲ, ಎರಡೂ ಒಂದೇ" ಅಂತ ನಾನ್ ಅರ್ಥ ಮಾಡ್ಕೊಂಡಿದ್ದು.

ಒಬ್ಬಳು ವೇಷ್ಯೆ ಇರ್ತಾಳೆ. ಅವಳ ಜೀವನದಲ್ಲಿ ಅವಳ ಆಸೆಗಳು, ನಡೆಯುವ ಘಟನೆಗಳು, ಅವಳು ಜೀವನದಲ್ಲಿ ಬಂದು ಹೋಗುವ ವ್ಯಕ್ತಿಗಳು, ಇದರ ಸುತ್ತ ನಾಟಕದ ಕಥೆ ಸಾಗುತ್ತೆ. ಕಾಮವನ್ನ ಕೆಟ್ಟ ದ್ರುಷ್ಟಿಯಿಂದ ನೋಡೋ ನಮ್ಮ ಸಮಾಜಕ್ಕೆ ಕಾಮ ಅಂದ್ರೇನು, ಅದರ ಮಹತ್ವ ಏನು ಅಂತ ತೋರ್ಸಿದಾರೆ ನಮ್ಮ ಕಾರಂತರು ಈ ನಾಟಕದ ಮೂಲಕ. ಮನಸ್ಸು ಗಟ್ಟಿ ಮಾಡಿ ಇಂದ್ರಿಯಗಳನ್ನ ನಿಗ್ರಹಿಸಬೇಕು ಅಂತೆಲ್ಲಾ ಹೇಳಿಸ್ಕೊಂಡು ಬೆಳೆದ ಒಬ್ಬ ಸ್ವಾಮೀಜಿ ಪಾತ್ರನೂ ಇದೆ - ಅದಂತೂ ತುಂಬಾ ಚೆನ್ನಾಗ್ ಮಾಡಿದ್ರು. ಒಂದೊಂದು ಪಾತ್ರ, ಒಂದೊಂದು ಸಂಬಾಷಣೆ ಎಲ್ಲ ಎಷ್ಟು Powerful ಆಗಿತ್ತಂದ್ರೆ, ನಿಜವಾಗ್ಲೂ ಕನ್ನಡದಲ್ಲಿ ಈ ರೀತಿಯ ವಿಚಾರಗಳನ್ನೆಲ್ಲಾ Express ಮಾಡ್ಬೊದಾ ಅಂತ ಆಶ್ಚರ್ಯ ಆಯ್ತು.

ನಿವೂ Chance ಸಿಕ್ಕಿದ್ರೆ, ನಾಟಕ ನೋಡಿ, ಇಲ್ಲಾಂದ್ರೆ ಪುಸ್ತಕವನ್ನಾದ್ರು ಓದಿ. ಏನಿಲ್ಲ ಅಂದ್ರು, ಹುಡುಗಿರ ಮನಸ್ಸು ಹೇಗಿರುತ್ತೇಂತ, ಸ್ವಲ್ಪ ಮಟ್ಟಿಗೆ ಅರ್ಥ ಮಾಡ್ಕೊಬೋದು ;-)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: Sex - ಕಾಮ; ಅದರ ಮಹತ್ವ !

ಸಂಗನಗೌಡ's picture

ಒಂದು ಊರಲ್ಲಿ ಒಬ್ಬ ಸನ್ಯಾಸಿ, ಮತ್ತು ಅವನ ಮನೆಯ ಮಗ್ಗುಲಿಗೆ ಇನ್ನೊಂದು ಮನೆ, ಅದು ಒಬ್ಬ ಸೂಳೆಯದು.

ಸನ್ಯಾಸಿಯ ದೊಡ್ಡತನ, ಎಲ್ಲವನ್ನೂ ತೊರೆದು ಬರೀ ದೇವರ ಸುತ್ತ ಅವನ ಮನಸ್ಸು ಸುತ್ತುತ್ತಿರುತ್ತದೆ ಎಂದು ತಿಳಿದು ಸೂಳೆ ಹಗಲಿರುಳು ಆ ಸನ್ಯಾಸಿಯ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಆ ಸನ್ಯಾಸಿ ಯಾವಾಗಲೂ, ಏನಿದು ಎಷ್ಟು ಮಂದಿ ಬರುತ್ತಾರೆ ಇವಳ ಮನೆಗೆ, ಇಂದು ಎಷ್ಟು ಮಂದಿ ಬಂದಿದ್ದರು? ನಿನ್ನೆ ಎಷ್ಟು ಬಂದಿದ್ದರು ಅಂತ ಅವಳ ಮನೆ ಮುಂದಿನ ಚಪ್ಪಲಿ ಎಣಿಸುವದರಲ್ಲಿ ತನ್ನ ಆಯಸ್ಸು ಕಳೆದ.

ಕೂನೆಗೆ ಸತ್ತಾಗ ಸೂಳೆ ಸ್ವರ್ಗಕ್ಕೆ ಮತ್ತು ಸನ್ಯಾಸಿ ನರಕಕ್ಕೆ ಹೋದರಂತೆ. ನಾವು 'ಈ ದಿನ' ಯಾವುದರ ಬಗ್ಗೆ ಚಿಂತನೆ ಮಾಡುತ್ತೇವೆಯೋ, ಆ ನಮ್ಮ ಚಿಂತನೆಗಳೇ ನಮ್ಮ ನಾಳೆಗಳಿಗೆ ರೂಪ ಕೊಡುತ್ತವೆ ಎಂದು ಹೇಳಬಹುದು.

Re: Sex - ಕಾಮ; ಅದರ ಮಹತ್ವ !

kannadiga_1956's picture

ಗೌದ್ರೆ,

ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ಆದ್ರೆ ಅದನ್ನ ಓದಿ ಸ್ವಲ್ಪ ಗೊಂದಲ ಆಗ್ಥ ಇದೆ. 

"ನಾವು 'ಈ ದಿನ' ಯಾವುದರ ಬಗ್ಗೆ ಚಿಂತನೆ ಮಾಡುತ್ತೇವೆಯೋ, ಆ ನಮ್ಮ ಚಿಂತನೆಗಳೇ ನಮ್ಮ ನಾಳೆಗಳಿಗೆ ರೂಪ ಕೊಡುತ್ತವೆ ಎಂದು ಹೇಳಬಹುದು".  ಇದನ್ನ ಯಾವ Context ಅಲ್ಲಿ ಹೇಳಿದ್ರಿ ?

ನಾನು ಕಾಮವನ್ನ ಒಂದು ಬಗೆಯ "Emotion" ಅಂತ ತಿಳ್ಕೊಂಡು ಬರ್ದಿದೀನಿ. Management theory ಅಲ್ಲಿ Basic needs ಹೇಳುವಾಗ ಕಾಮವೂ ಒಂದು ಬಗೆಯ Basic Need. ಅದು ದಕ್ಕದೇ ಇರುವಾಗ ಮಾತ್ರ ಅದರ ಬಗ್ಗೆ ಜಾಸ್ತಿ ಯೋಚಿಸಿ  ತಲೆ ಕೆಡಿಸಿಕೊಳ್ಳೋದು. ಮನಸ್ಸೇ ಹಾಗೆ, ಅದರ ಬಗ್ಗೆ ಚಿಂತಿಸ ಬೇಡ ಅಂದಾಗ್ಲೇ ಅದರ ಬಗ್ಗೆ ಜಾಸ್ತಿ ಯೋಚಿಸೋದು. ಸನ್ಯಾಸಿಗೆ ಪ್ರಕ್ರುತಿ ನಿಯಮದ ಪ್ರಕಾರ ಎಲ್ಲವೂ ಸಮಯಕ್ಕೆ ಸರಿಯಾಗಿ ದಕ್ಕಿದ್ದಿದ್ರೆ, ಅವನೂ ತಲೆ ಕೆಡಿಸಿಕೊಳ್ದೇ ಸ್ವರ್ಗದಲ್ಲೇ ಇರ್ತಾ ಇದ್ದ.

ಕಾರಂತರು ಅದನ್ನೇ "ಮೂಕಜ್ಜಿಯ ಕನಸು" ಕಾದಂಬರಿಯಲ್ಲೂ ಹೇಳಿದಾರೆ. ಕಾರ್ಲ್ ಸಗಾನ್ "Cosmos" ಪುಸ್ತಕದಲ್ಲೂ ಅದನ್ನೇ ಸ್ಪಷ್ತವಾಗಿ ಬರ್ದಿದಾರೆ.

Re: Sex - ಕಾಮ; ಅದರ ಮಹತ್ವ !

ಸಂಗನಗೌಡ's picture

ಮನಸ್ಸಿನಲಿ ಆಸೆ ಇದ್ದ ಮೇಲೆ ಸನ್ಯಾಸಿ ಯಾಕಾಗಬೇಕಲ್ಲವೇ?  ಹಾಗೆ ಮಾಡಿದರೆ ನಮಗೆ ನಾವೇ ಮೋಸ ಮಾಡಿಕೊಂಡಂತಲ್ಲವೇ?

Re: Sex - ಕಾಮ; ಅದರ ಮಹತ್ವ !

kannadiga_1956's picture

ಸರಿಯಾಗ್ ಹೇಳಿದ್ರಿ.  ಮನಸಲ್ಲಿ ಆಸೆ ಇದ್ದ್ ಮೇಲೆ, ಸನ್ಯಾಸಿ ಆಗ್ಬಾರ್ದು. ಆಸೆನೆಲ್ಲಾ ಬಿಟ್ಟು ಸನ್ಯಾಸಿ ಯಾಕಾಗ್ಬೇಕು ಅನ್ನೋದೂ ಒಂದು ಪ್ರಶ್ಣೆ ;-) ಆದ್ರೆ, ನಾನ್ ನೋಡಿರೋಹಾಗೆ, ಬಹಳಷ್ಟು ಮಠಾದೀಶರು, ಸನ್ಯಾಸಿಗಳು ಎಲ್ಲಾ ಚಿಕ್ಕ ವಯಸ್ಸಿನಲ್ಲೇ ಆರಿಸಿರೊರು. ೧೦-೧೨ ವರ್ಷದ್ ಆಟಾಡ್ಕೊಂಡಿರೋ ಮಕ್ಕಳನ್ನ ತಂದು ಪೀಠದ್ ಮೇಲೆ ಕೂರಿಸ್ತಾರೆ. ಪಾಪ ಎನೂ ಗೊತ್ತಿಲ್ದೇ ಇರೊರನ್ನ ಹಾಗೆ ಮಾಡುದ್ರೆ, ಅವ್ರು ತಾನೆ ಏನ್ ಮಾಡ್ತಾರೆ, ಗುರುಗಳು ಅನ್ನೋರು ಹೇಳಿದ್ದೇ ಸತ್ಯ ಅಂತ ತಿಳ್ಕೊಂಡು ಬದುಕ್ತಾರೆ. ನಿಜವಾದ ಸತ್ಯ ಗೊತ್ತಾಗೊ ಅಶ್ಟೊತ್ತ್ಗೆ ತ್ರಿಶಂಕು ಸ್ತಿತಿ.  

ಮೈ ಮನಗಳ ಸುಳಿಯಲ್ಲಿ

mahesha's picture

ಇದಕ್ಕೆ ನಂಟಾದ ಶಿವರಾಮ ಕಾರಂತರ "ಮೈ ಮನಗಳ ಸುಳಿಯಲ್ಲಿ" ಓದಬಹುದು.

ಸೂಳೆ ಮನೆತನದ ಮೂರು ತಲೆಮಾರುಗಳ ಬಣ್ಣನೆ ಇದೆ. ಅದಕ್ಕೆ ಅಂಟಿಕೊಂಡ ಬೇರೆಬೇರೆ ನೋಟಗಳೂ, ಸಂಗತಿಗಳೂ ಇವೆ.

ನನಗೆ ಬಹಳ ಹಿಡಿಸಿತು... ಇನ್ನೊಮ್ಮೆ ಓದಬೇಕು ಆದಾಗ!!

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

Re: ಧರ್ಮ, ಅರ್ಥ , ಕಾಮ ಮತ್ತು ಮೋಕ್ಷ

ವೈಭವ's picture

ಭೈರಪ್ಪನವರ 'ನಿರಾಕರಣ' ಓದುವಾಗ ಈ ವಿಚಾರ ಬರುತ್ತದೆ. ವೇದಾಂತದ ಪ್ರಕಾರ ಕೂಡ ಧರ್ಮ, ಅರ್ಥ, ಕಾಮ, ಮೋಕ್ಷ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಮನುಷ್ಯ ಪಡೀಬೇಕು ..ಇಲ್ಲ ಅಂದ್ರೆ ಅವನ ಬದುಕು ಸಾರ್ಥಕವಾಗುವುದಿಲ್ಲ...

ರೊಕ್ಕ, ಉಳುಗು

mahesha's picture

ಧರ್ಮ, ಮೋಕ್ಷಗಳ ಬಗ್ಗೆ ಒಂದು ಮಾತು. ಹೆಚ್ಚು ಮಂದಿ ಅದಕ್ಕಾಗಿ ಬದುಕಲ್ಲ.

ಬರಿ ರೊಕ್ಕ-ಉೞುಗು(ಉಳುಗು)ಗಳಿಗೆ ಬದುಕೋರನ್ನು 'ಕೀಳು'(ತುಚ್ಛಜೀವಿ) ಅಂತ ಅನ್ನೋರು ಇದ್ದಾರೆ.
'ಧರ್ಮ/ಮೋಕ್ಷ ಎಲ್ಲ bullshit ಯಾಕೆ ಸುಮ್ನೆ ಅದರ ಬಗ್ಗೆ ತಲೆಗೆಡಿಸಿಕೊಂಡು time waste ಮಾಡಬೇಕು ಅನ್ನೋರು ಇದ್ದಾರೆ.

ಅಲ್ಲದೆ ಧರ್ಮ ಮೋಕ್ಷ ಇವು ನಂಬಿಕೆಗಳು. ಅವನ್ನು ನಂಬುವವರಿಗೆ ಅವು ಬೇಕು. ನಂಬದವರಿಗೆ ಬೇಡ.

ಆದರೆ ಅರ್ಥ( ರೊಕ್ಕ ಇಲ್ಲಿ , ರೊಕ್ಕದಿಂದ ರೊಟ್ಟಿ, ಹಟ್ಟಿ :) ) ಮತ್ತು ಉೞುಗು(ಕಾಮ)
ಇವೆರಡು ನಂಬಿಕೆಗಳಲ್ಲ. ಇವು ಮಾನವನ ಪ್ರಾಣಿಸಹಜಗುಣಗಳು. ಹುಟ್ಟಿದ, ಉಸಿರಾಡುತ್ತಿರುವ ಎಲ್ಲ ಜಂತುಗಳಿಗೂ ಸಾಯುವ ತನಕ ಇರುತ್ತೆ. ಇವು ತಣಿದಿರಬೇಕು.

ರೊಕ್ಕ(ಊಟ) ಇಲ್ಲದೋನು, ಹೇಗೆ ಕೆಟ್ಟ ಕೆಲಸಕ್ಕೆ ಇಳೀತಾನೋ, ಹಾಗೆ ಮಸೆ ತೀರದವನು ಕೂಡ ಕೇಡುಗನಾಗ್ತಾನೆ.

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

Re: ರೊಕ್ಕ, ಉಳುಗು

ಸಂಗನಗೌಡ's picture

ಉಳುಗು ಮತ್ತು ಮಸಕಗಳಿಗಾಗಿ ನನ್ನಿ ಮಹೇಶಯ್ಯನವರೇ. :-)

Re: ರೊಕ್ಕ, ಉಳುಗು

mahesha's picture

ಗೌಡರೆ

ಕನ್ನಡದ ಕಾದಲ್, ಕಾದಲ್ಮೆ, ಕಾದಲ, ಕಾದಲೆ ನೋಡಿ, ದಂಗಾಗಿ ಹೋಗ್ತೀರ :D

ಹಂಗೆ ಒಸಿ ತೆಲುಗು "ಮಸಕಮು" ನೋಡಣ್ಣ :D

ಧರ್ಮ = ಅಱು
ಮೋಕ್ಷ = ಬಿಡುಗಡೆ, ಸಲಿಗೆ, ಅಂತ ನಾವು ಕನ್ನಡದಲ್ಲಿ ಹೇಳಿಕೋಬೋದು!

======
:)

Re: ರೊಕ್ಕ, ಉಳುಗು

ವೈಭವ's picture

 ಕಾಮ ಒಂದೇ ಸಹಜ ಗುಣ. ಉಳಿದೆಲ್ಲವು ನಾಗರೀಕತೆ ಬೆಳೆದಂತೆ ಬಹುಶಃ  ಧರ್ಮ, ಅರ್ಥ, ಮೋಕ್ಷದ concept ಗಳು ಬಂದಿದೆ ಅನ್ಸುತ್ತೆ. (ನಾಗರೀಕತೆ ಬರುವ ಮೊದಲು ರೊಕ್ಕ ಇಲ್ದೆ ರೊಟ್ಟಿ ಸಿಗ್ತಾ ಇತ್ತು:))

ಧರ್ಮ ಅಂದ್ರೆ ಒಂದು ನಿಯಮಗಳ ಪ್ರಕಾರ ನಡೆಯೋದು ಅಂತ ನನ್ನ ಅನಿಸಿಕೆ. ಆದ್ರೆ ಆ ನಿಯಮಗಳ ಅರಿತು ನಡೆಯೋದು ಜಾಣತನ. ಕಾಟಾಚಾರಕ್ಕೆ ಅಲ್ಲ. ಒಂದು ಸೌಹಾರ್ದ(harmonious) ನಾಗರೀಕ ಜೀವನ ನಡೆಸಲು ಧರ್ಮ ಬೇಕು.

ಉದಾ: ನಮ್ಮ ದೇಶದ ಸಂವಿಧಾನದ ಪ್ರಕಾರ ನಡೆಯೋದು ನಮ್ಮ ಧರ್ಮ. ಆದರೆ ಎಲ್ಲರು ಈ ಸಂವಿಧಾನವನ್ನು ಒಪ್ಪುತ್ತಾರೆ(ನಂಬುತ್ತಾರೆ) ಎಂದು ಹೇಳಲಾಗುವುದಿಲ್ಲ. ಆದರೆ majority ಒಪ್ಪುತ್ತಾರೆ ಅಷ್ಟೆ

ಧರ್ಮಕ್ಕೆ ಒಂದು ಸರ್ವಙ್ಞನ ವಚನ ನೆನಪಿಗೆ ಬಂತು( ಸರಿಯಾಗಿ ಗೊತ್ತಿಲ್ಲ..ತಪ್ಪಿದ್ದರೆ ತಿದ್ದಿ)

ವಿದ್ಯೆ ಕಲಿಸದ ಗುರುವು

ಬುದ್ಧಿ ಹೇಳದ ತಂದೆಯು

ಬಿದ್ದಿರಲು ಬಂದು ನೋಡದಾ ತಾಯಿಯು ಶುದ್ಧ ವೈರಿಗಳು ಸರ್ವಙ್ಞ

ಮೋಕ್ಷಕ್ಕೆ 'ಭಕ್ತ ಕುಂಬಾರ' ಚಿತ್ರದ ಹುಣಸೂರರ ಹಾಡು :-

"ಬರುವಾಗ ಬತ್ತಲೆ

ಹೋಗುವಾಗ ಬತ್ತಲೆ

ಬಂದು ಹೋಗುವ ನಡುವೆ... ಬರೀ... ಕತ್ತಲೆ....

.......

ಮುಕ್ತಿಗೆ ವಿಠಲನ ಕೊಂಡಾಡಬೇಕು"

-------------

ಉಳುಗು, ಮಸೆಗೆ ನನ್ನಿಗಳು ಮಹೇಶ

ಹಸಿವು, ಉಳುಗು

mahesha's picture

ವೈಭವ!

'ರೊಕ್ಕ'ದ ಬದಲು ಹಸಿವು ಅಂತ ಹೇಳಿದರೆ ಸರಿ...

ಹಸಿವು ಮತ್ತು ಉಳುಗು ಇವೆರಡು ಎಂದು ಹೇಳೋಣ.

ನನ್ನಿ!
======
:)

ಕಾಮ = ಬೇಟ

ಸಂಗನಗೌಡ's picture

ಕಾಮಕ್ಕೆ ಸರಿಯಾದ ಕನ್ನಡ ಒರೆ, ಬೇಟ (ಇಲ್ಲವೇ ಬೇಂಟ=sexual passion). ನಾಗಮಂಡಲದಲ್ಲಿ ಒಂದು ಹಾಡಿದೆ. "ಇಂಥ ಚೆಲುವಿಗೆ...." ಅದರಲ್ಲಿ "ಬ್ಯಾಟಕ್ಕ ಬಾರ ಹುಡುಗಿ..." ಅನ್ನೋ ಸಾಲಿನಲ್ಲಿ ಬರುತ್ತೆ ನೋಡಿ.

 

ಉೞುಗು, ಬೇಟ, ತೀಟೆ

mahesha's picture

ಬೇಟವೂ ಕೂಡ!

ಕನ್ನಡದಲ್ಲಿ ಏನು ಒರೆಗಳಿಗೆ ಕೊರೆತೆಯೇ :D... ಹುಡುಕಿದರೆ ತೀಟೆಗೂ ಇದೇ ತಿಳಿವು ಬರುತ್ತೆ.

ಈಗಲೇ ಉೞುಗು, ಬೇಟ, ತೀಟೆ(ತೀಂಟೆ ) ಮೂರಾದವು.!!

ಕನ್ನಡದ ಬೇಟದಿಂದಲೇ ಹಿಂದಿ 'ಬೇಟ' ಬರೋದು, ಬಂದಿರೋದು. }:) ( ಜೋಕು! )

======
:)

ಉ: ಉೞುಗು, ಬೇಟ, ತೀಟೆ

kannadakanda's picture

ಉೞ್ಗು=ಪ್ರೀತಿ. ಕಾಮವಾಂಛೆ ಆಗಬೇಕೆಂದೇನೂ ಕಾಣಿಸ್ತಿಲ್ಲ.

Re: Sex - ಕಾಮ; ಅದರ ಮಹತ್ವ !

aithalsandy's picture

@ yaduರವರ ಎರಡನೆ ಪ್ರತಿಕ್ರಿಯೆ

ಚಿನ್ನದಂತಹ ಮಾತು !!!!

ನಮ್ಮಲ್ಲಿ ಕಾಮವನ್ನು philosophically or holistically ನೋಡೋದು ಮರೆಯಾಗಿದ್ದು ಖೇದಕರ..
ಇದು ನಾಗರೀಕತೆಯ cyclicality ಅನ್ನಬಹುದ (Toynbee effect) ? ಅಥವಾ ಬಾಹ್ಯ ನಾಗರೀಕತೆಗಳ ಪ್ರಭಾವ ಅನ್ನಬಹುದ ?
ಒಂದು liberal ವಾತಾವರಣದ ಬಹಸಿದ್ದ ನಾಗರೀಕತೆಯ ಹೇಗೆ ಕಾಮವನು ನೋಡುವ ದೃಷ್ಟಿ diametrically opposite ಆಗಿದ್ದು ವಿಸ್ಮಯ.... ಇದು ಹೆಣ್ಣನ್ನು ಹದ್ದುಬಸ್ತಿನಲ್ಲಿ ಇಡಲು.. ಪುರುಷಸಿಂಹನ ಅಹಂ ತಣಿಸಲು ಬಳಕೆಯಾಗಿದ್ದು ಇನ್ನೊಂದು ದುರಂತ.

ಸಂದೀಪ್ ಐತಾಳ

ಉ: Sex - ಕಾಮ; ಅದರ ಮಹತ್ವ !

kadakolla05's picture

ಕನ್ನಡ ಪದಗಳ ಪ್ರಯೋಗ ತುಂಬಾ ಚನ್ನಗಿವೆ.

ಖುಷಿ ಆಯಿತು. ಖುಷಿ ಪದಕ್ಕೆ ಕನ್ನಡದ ನುಡಿ ನಿಮಗೆ ತಿಳಿದಿದ್ದರೆ ನಮಗೆ ತಿಳಿಸಿ. ಖುಷಿ ಇದು ಅರಬ್ಬೀ ನುಡಿ. ನನ್ನ ಇ-ಅಂಚೆ ವಿಳಾಸ: kadakolla@gmail.com

ಧನ್ಯವಾದಗಳು
ಕುಮಾರಸ್ವಾಮಿ
ಪುಣೆ.

ಉ: Sex - ಕಾಮ; ಅದರ ಮಹತ್ವ !

mahesha's picture

ಖುಶಿ = ನಲಿವು.. ಈ ಮಯ್ಲಿ ಮಾಡಕ್ಕ ಆಗಲಿಲ್ಲ.
=====================================
ಮಾಯ್ಸ!

ಉ: Sex - ಕಾಮ; ಅದರ ಮಹತ್ವ !

kannadakanda's picture

ಖುಷಿ=ನಲಿವು, ನಲವು, ನಲ್ವು

ಉ: Sex - ಕಾಮ; ಅದರ ಮಹತ್ವ !

kannadakanda's picture

ಈ ಲೈಂಗಿಕ ಕ್ರಿಯೆ ಮನಸ್ಸನ್ನಾವರಿಸದೇ ಹಾಗೆಯೇ ಗಂಡು ಹೆಣ್ಣುಗಳ ನಡುವೆ ಆಕಸ್ಮಿಕವೆಂಭಂತೆ ನಡೆದು ಹೋದರೆ ಅಷ್ಟಾಗಿ ತೊಂದರೆ ಏನಿಲ್ಲ. ಆದರೆ ಅದು ಒಂದು ವಿಚಾರವಾಗಿ ಮಾರ್ಪಟ್ಟರೆ ಅದೇ ರೋಗವಾಗುತ್ತದೆ. ಎಲ್ಲಿಯವರೆಗೆ ಲೈಂಗಿಕ ಆಸೆ ಬಱಿ ಆಸೆಯಾಗಿ ಅದಱ ಪೂರೈಕೆಯಾದಾಗ ಒಂದು ಸಹಜ ಸರಳ ಕ್ರಿಯೆಯಾಗಿ ಸುಂದರವಾಗಿರುತ್ತದೆ. ಆದರೆ ಇದು ಇಂದಿನ ಸಮಾಜದಲ್ಲಿ ಜಟಿಲವಾಗಿದೆ. ಹೆಣ್ಣುಗಂಡುಗಳ ಕೂಡು ಕೇವಲ ಲೈಂಗಿಕವಾಗಿರದೆ ಅದು ಇನ್ನೂ ಮುಂದೆ ಹೋಗುವುದಱಿಂದ ಸಮಸ್ಯೆಗೆ ಎಡೆಯಾಗುತ್ತದೆ. ಲೈಂಗಿಕ ವಿಚಾರವೇ ನೆನಪಾದರೆ ಅದು ಕಾಮುಕತೆ. ಅದು ಸಹಜ ಆಸೆಗಿಂತ ಭಿನ್ನವಾಗಿ ಒಂದು ಮಾನಸಿಕ ಖಾಯಿಲೆಯಾಗಿದೆ. ಈ ವಿಚಾರವೇ ಅನಾರೋಗ್ಯಕರವಾಗಿ ಮುಂದುವರೆದಾಗ ಸಲಿಂಗಕಾಮ, ವಸ್ತ್ರಕಾಮ ಇತ್ಯಾದಿ ಅಸಹಜ ಮಾನಸಿಕ ಕ್ರಿಯೆಯಾಗಿ ಮಾರ್ಪಡುತ್ತದೆ. ವ್ಯಕ್ತಿ ಸ್ವಸ್ಥ ಮನಸ್ಸಿನವನಿದ್ದಾಗ ಲೈಂಗಿಕತೆಯ ವಿಚಾರ ತನ್ನಮ್ನಸನ್ನಾವರಿಸಲು ಬಿಡುವುದಿಲ್ಲ.