~
ಹಳ್ಳಿ ಹಳ್ಳಿಗೂ Internet
ಒಬ್ಬ ರೈತ ಇವತ್ತು ತಾನು ಬೆಳೆದದ್ದನ್ನ ಮಾರಬೇಕು ಅಂದ್ರೆ ದಳ್ಳಾಳಿ ಕಾಲು ಹಿಡಿಬೇಕು. ದಳ್ಳಾಳಿ ಹೇಳಿದ್ದೇ Rateಉ. ಆಮೇಲೆ ಆ ದಳ್ಳಾಳಿ ಒಂದಕ್ಕೆ ಎರಡರಂಗೆ Retailer ಅತ್ರ ಮಾರ್ಕೊತಾನೆ. ಕಷ್ತ ಪಟ್ಟಿದ್ದೆಲ್ಲಾ ರೈತ, ಆದ್ರೆ ಹೆಚ್ಚಿನ ಲಾಭ ಪಡೆಯುವವ ದಳ್ಳಾಳಿ. ಈ ದಳ್ಳಾಳಿ ಪದ್ದತಿಯನ್ನ ಕಿತ್ತಾಕ್ಬೇಕು ಅಂದ್ರೆ ಅಂತರ್ಜಾಲದ ಮೂಲಕ Retailer ಮತ್ತು ರೈತರ ನಡುವೆ ನೇರ ಸಂಪರ್ಕ ಸಾದಿಸೋದು. ಅಷ್ಟೇ ಅಲ್ಲ ಅರೋಗ್ಯ, ಶಿಕ್ಷಣ, ಸರ್ಕಾರದ ಸೇವೆ ಸವುಲತ್ತುಗಳು, ಇದೆಲ್ಲದರ ಮಾಹಿತಿ ನೇರವಾಗಿ ಹಳ್ಳಿಗಾಡಿನ ಜನಕ್ಕೆ ಅಂತರ್ಜಾಲದ ಮೂಲಕ ತಲುಪ್ಸುದ್ರೆ ರೈತರಿಗೆ ಎಷ್ಟು ಅನುಕೂಲ ಅಲ್ವ ? ಇದೆಲ್ಲಾ ನಿಜವಾಗ್ಲೂ ಸಾಧ್ಯನ ಅಂತ ಕೇಳ್ತೀರಾ ? ನಮ್ಮ ಕೇಂದ್ರ ಸರ್ಕಾರ ಭಾರತದಲ್ಲಿ ಸುಮಾರು ಒಂದು ಲಕ್ಶ ಹಳ್ಳಿಗಳಿಗೆ ಈ ರೀತಿ ಅಂತರ್ಜಾಲದ ಸೇವೆ ಒದಗಿಸುವ ಕೇಂದ್ರಗಳನ್ನ(Common service centers - CSC) ಸ್ಥಾಪಿಸೊಕ್ಕೆ ಮುಂದಾಗಿದೆ. ನಿಜವಾಗ್ಲೂ ಈ ಯೋಜನೆ ಸಕ್ಸಸ್ ಆಯ್ಥು ಅಂದ್ರೆ ಒಂತರಾ ಇದು ನಮ್ಮ ರೈತಾಪಿ ಜನಗಳ್ಗೆ Shortcut to Empowerment. ಮೊದಲನೆ ಅಂತದಲ್ಲಿ ಕೇವಲ ೫ ರಾಜ್ಯಗಳು. ಅದರಲ್ಲಿ ಕರ್ನಾಟಕವೂ ಇದೆ.
ಸಂಪೂರ್ಣ ನೆಟ್ವರ್ಕ್ ಹೇಗಿರುತ್ತೆ ಅಂದ್ರೆ, ರಾಜ್ಯದ ರಾಜಧಾನಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಒದಗಿಸುವ SWAN (State Wide Area Network)ಎಂಬ ನೆಟ್ವರ್ಕ್ ಇರುತ್ತೆ. ಹಾಗೆ ಪ್ರತಿಯೊಂದು ಜಿಲ್ಲೆಯಿಂದ ಎಲ್ಲಾ ತಲ್ಲೋಕು ಕೇಂದ್ರಗಳಿಗೆ ಮತ್ತು ಎಲ್ಲಾ ತಲ್ಲೋಕು ಕೇಂದ್ರಗಳಿಂದ ಪ್ರತಿ ಹಳ್ಳಿಗಳಿಗೆ ಸಂಪರ್ಕ ಒದಗಿಸುವ ಇನ್ನೊಂದು ನೆಟ್ವರ್ಕ್ ಇರುತ್ತೆ. ಈ ನೆಟ್ವರ್ಕ್ ಕೇವಲ ಸಂಪರ್ಕ ಒದಗಿಸಬೋದು, ಈ ಸಂಪರ್ಕ ಬಳಸಿಕೊಂಡು ಸರ್ಕಾರ ಅಥವಾ ಇನ್ಯಾವುದೇ ಉದ್ಯಮದವರು ತಮ್ಮ ತಮ್ಮ portal ಅಥವಾ ವೆಬ್ ಸೈಟ್ಗಳಿಂದ ತರ ತರದ ಸೇವೆಯನ್ನ ಜನರಿಗೆ ಮುಟ್ಟಿಸಬೋದು. ಈ ಯೋಜನೆ ಬರೀ ಸರ್ಕಾರದವ್ರೇ ಸಂಪೂರ್ಣವಾಗಿ ನೆಡೆಸ್ತಾರೆ ಅಂದ್ರೆ "ಇದು ಗ್ಯಾರಂಟಿ Flop" ಅನ್ಬೋದಿತ್ತು. ಆದ್ರೆ ಈ ಯೋಜನೆ ನೆಡೆಯೋದು Public-private-partnership ಇಂದ.
SWAN ನೆಟ್ವರ್ಕ್ ಪ್ರತಿ ರಾಜ್ಯದವ್ರು ಸ್ತಾಪಿಸಿದಾರೆ ಅಥವಾ ಸ್ಥಾಪಿಸ್ತಾ ಇದಾರೆ. ಇನ್ನು ಜಿಲ್ಲೆಯಿಂದ ತಲ್ಲೋಕಿನವರ್ಗೆ ಸಂಪರ್ಕ ಒದಗಿಸಿ ತಲೂಕಿನಲ್ಲಿ ಒಂದೊಂದು ಅಂತರ್ಜಾಲದ ಕೇಂದ್ರ ಸ್ಥಾಪಿಸುವ ಜವಾಬ್ದಾರಿ ಖಾಸಗಿ ಅವರದ್ದು. ಈ ತಲ್ಲೋಕು ಕೇಂದ್ರ ಸ್ಥಾಪನೆಗೆ ಮತ್ತು ಆ ಕೇಂದ್ರ ಸ್ವತಂತ್ರವಾಗಿ ಲಾಭ ಗಳಿಸುವ ವರ್ಗೂ, ಹಲವು ವರ್ಷಗಳ ಕಾಲ ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿಗೆ ಆರ್ಥಿಕ ಸಹಾಯ ಮಾಡುತ್ತೆ . ಅದೇ ರೀತಿ ಹಳ್ಲಿಗಳಲ್ಲಿ ಈ ರೀತಿಯ ಅಂತರ್ಜಾಲ ಕೇಂದ್ರ ಸ್ಥಪನೆಗೆ ಮತ್ತು ಕೆಲ ವರ್ಷಗಳ ಕಾಲ ಆರ್ಥಿಕ ನೆರವು ಒದಗಿಸೋ ಜವಾಬ್ದಾರಿ ರಾಜ್ಯ ಸರ್ಕಾರದವರ್ದು. ಹಳ್ಳಿಗಳಲ್ಲಿ ಈ ರೀತಿಯ ಕೇಂದ್ರ ಲಾಭದಾಯಕವಾಗಿ ನೆಡೆಸೋದು ಖಾಸಗಿಯವರ್ಗೆ ಬಿಟ್ಟಿದ್ದು. ಈ ರೀತಿಯ ಮಾದರಿ ನಿಜವಾಗ್ಲೂ ಗೆಲುವು ಸಾದಿಸಬೋದು ಅಂತ ನನ್ನ ಅನಿಸಿಕೆ.
ಇನ್ನು ಮುಖ್ಯವಾದ ವಿಷಯಕ್ಕೆ ಬರೋಣ. ನಮ್ಮ ರಾಜ್ಯ ಸರ್ಕಾರ ಈ ಮಹತ್ತರ ಯೋಜನೆಗೆ ಸಿದ್ದವಾಗಿದೆಯೇ ?? ಈ ಯೋಜನೆ ಸಫಲವಾಗೋದಕ್ಕೆ ಏನೇನು Groundwork ಮಾಡ್ತಾ ಇದೆ ? ಅಂತರ್ಜಾಲದಲ್ಲಿ ಎಷ್ಟು ಹುಡುಕಾಡಿದ್ರೂ ಕರ್ನಾಟಕ ಮತ್ತು ಈ ಯೋಜನೆ ಒಳಗೊಂಡಿರೋ ಒಂದು ದಾಖಲೆಯೂ ಸಿಗ್ಲಿಲ್ಲ. ಬಹಳ ಬೇಸರ ಆಯ್ಥು. ಎಲ್ರೂ ನಿದ್ದೆ ಒಡಿತಾ ಇದಾರೆ ಅನ್ಸುತ್ತೆ. ಕನ್ನಡವನ್ನ ಅಂತರ್ಜಾಲದಲ್ಲಿ ಹಬ್ಬಿಸೋಕ್ಕೆ ಇದಕ್ಕಿಂತ ಅವಕಾಶ ಬೇಕೆ ? ಈ ಯೋಜನೆಅಡಿ ಕನ್ನಡದಲ್ಲಿ ಎಲ್ಲಾ ಸೇವೆಗಳು ಜನರಿಗೆ ತಲುಪೋ ಹಾಗೆ ಮಾಡುದ್ರೆ Digital Divide ಎಷ್ಟು ಕಡಿಮೆ ಆಗುತ್ತಲ್ವಾ ? ದಯವಿಟ್ಟು ಈ ವಿಷಯವನ್ನ ಯಾರಾದ್ರೂ ಪರ್ತಕರ್ತರು ಪ್ರಕಟಿಸಿ ನಮ್ಮ ಸರ್ಕಾರ ಈ ಯೋಜನೆಯನ್ನ ಬಹಳ Seriousಆಗಿ ಪರಿಗಣಿಸಬೇಕು ಅಂತ ತಿಳಿಸಿ.
ಈ ವಿಷಯದ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಕಂಡ ಲಿಂಕ್ನಲ್ಲಿ ದೊರೆಯುತ್ತೆ
http://www.mit.gov.in/csc/MediaBrief.asp
http://www.mit.gov.in/cscguidelines.asp
ಯದುನಂದನ್

- kannadiga_1956 ರವರ ಬ್ಲಾಗ್
- Login or register to post comments
- 436 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
Re: ಹಳ್ಳಿ ಹಳ್ಳಿಗೂ Internet
ನನ್ನ ಅನಿಸಿಕೆಯಲ್ಲಿ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕ ಒದಗಿಸುವುದು ವಿದ್ಯಾಭ್ಯಾಸ, ಆರೋಗ್ಯ ಸೇವೆಯ, ಸರ್ಕಾರಿ ಕಚೇರಿಗಳ ದೃಷ್ಟಿಯಿಂದ ಅನುಕೂಲ ಆಗಬಹುದು ಅಷ್ಟೆ. ವಿದ್ಯಾಭ್ಯಾಸದ ದೃಷ್ಟಿಯಿಂದಲೂ, ಗ್ರಾಮೀಣ ಪ್ರಾಥಮಿಕ ಶಿಕ್ಷಣದಲ್ಲಿ ಬದಲಾಣೆಗಳಾಗದಿದ್ರೆ ಏನೂ ಪ್ರಯೋಜನವಿಲ್ಲ.
ರೈತರಿಗೆ ಇದರಿಂದ ವ್ಯವಹಾರದಲ್ಲಿ ಉಪಯೋಗ ಆಗೋ ಸಾಧ್ಯತೆ ಕಡಿಮೆ. ಈಗಾಗಲೇ 'ಮೆಟ್ರೋ' ದಾಳಿಯಿಂದ ಎ.ಪಿ.ಎಂ.ಸಿ ಮತ್ತಿತರ ಸ್ಥಳೀಯ ಮಾರುಕಟ್ಟೆಗಳು ನೆಲ ಕಚ್ಚಿವೆ. 'ವಾಲ್-ಮಾರ್ಟ್' ಆಗಮನ, ರೈತ/ಸಣ್ಣ ಕಾರ್ಮಿಕರನ್ನಲ್ಲದೇ ರೀಟೈಲ್ ದಿನಸಿಯವರಿಗೆ ಏಟು ಬೀಳುತ್ತದೆ. ದಲ್ಲಾಳಿ ವ್ಯವಸ್ಥೆ ಸರಿಯಿಲ್ಲ ನಿಜ, ಆದರೆ ಇಂಟರ್-ನೆಟ್ ಮೂಲಕ ರೈತ ಬೇರೆಲ್ಲಿಗೋ ತನ್ನ ಸರಕನ್ನು ಮಾಡಿ ಹೆಚ್ಚು ಹಣ ಮಾಡುತ್ತಾನೆಂಬುದು ಭ್ರಮೆಯೆನಿಸುತ್ತದೆ.
'ಮೆಟ್ರೋ' ಆಗಮನದಿಂದ, ಸಿಕ್ಕಾಪಟ್ಟೆ ಕಾನೂನುಬಾಹಿರ ಚಟುವಟಿಕೆಗಳು ಶುರು ಆಗಿವೆ. ಜನರು 'ಸಣ್ಣ ಅಂಗಡಿಗಳ ಲೈಸೆನ್ಸ್'ಗಳನ್ನು ಪಡೆದು ಮೆಟ್ರೋನತ್ತ ನಡೆಯುತ್ತಿದ್ದಾರೆ!
ರಿಲೆಯನ್ಸ್, ಸುಭಿಕ್ಷಾ, ಫುಡ್-ವರ್ಲ್ಡ್ ಗಳ ಆಗಮನದಿಂದ ರೈತರ (ತಯಾರಕ) ಹಾಗೂ ಮಧ್ಯಮ ವರ್ಗದವರ (ಗ್ರಾಹಕ) ಸ್ಥಿತಿಯೇನೂ ಬದಲಾಗಿಲ್ಲ! ಬದಲಾಗಿ ಬೀದಿ ಮೇಲೆ ದಿನಕ್ಕೆ ೩೦-೪೦ ರೂ ದುಡಿಯಲು ಬರುವ ಸೊಪ್ಪಿನವನ, ಹಣ್ಣಿನವನ ಜೊತೆ ೫೦ ಪೈಸೆಗೆ ಚೌಕಾಸಿ ಮಾಡೋ ಬುದ್ಧಿ ಜಾಸ್ತಿಯಾಗಿದೆ (ಸೂಪರ್-ಮಾರ್ಕೆಟ್ ಗಳ 'ಆಫರ್' ನೋಡಿ!).
'ಕನ್ಸ್ಯೂಮರಿಸಂ' ಜೀವನದತ್ತ ಸಾಗುತ್ತಿರುವ ನಮ್ಮಲ್ಲಿ, ಬಡವ ಇನ್ನೂ ಬಡವನಾಗುತ್ತಿದ್ದಾನೆ, ಶ್ರೀಮಂತ ಇನ್ನೂ ಶ್ರೀಮಂತನಾಗುತ್ತಿದ್ದಾನೆ!
ವಿ.ಸೂ: ನಾನು ಸಮಾಜವಾದಿಯಲ್ಲ ಮತ್ತು ಈ ಸಮಸ್ಯೆಗಳ ವೈಜ್ಞಾನಿಕ ಅಧ್ಯಯನ ಮಾಡಿಲ್ಲ