ಇದು ಸೋಲುವ ಯುದ್ಧವೇ ?
ನಾವೆಲ್ಲಾ ನಮ್ಮ ಭಾಷೆಗಾಗಿ ಹೋರಾಡ್ತಾ ಇರೋದು ಈ Globalization ಅನ್ನೋ ಪೀಡೆಯಿಂದ. ಈ Globalization ನಿಂದ, ಬಲಿಷ್ಟವಾದ್ದು ಬಹು ಬೇಗ ಎಲ್ಲಾ ಕಡೆ ಅವರಿಸುತ್ತೆ, ಹಾಗೆ Weak ಆಗಿರೋದು ಅಷ್ಟೇ ಬೇಗ ಮುದುಡಿ ಹೋಗತ್ತೆ. ಸ್ವಲ್ಪ ಮೇಲಕ್ ಹೋಗಿ ಯೋಚಿಸಿದ್ರೆ "Survival of the fittest". ವಿಕಸನ ಅಥವಾ Evolution ನೀತಿನೇ ಅದು - ಎನೂ ಮಾಡಕ್ಕಾಗಲ್ಲ. ನಾವು ಒಪ್ತೀವೋ ಬಿಡ್ತಿವೋ , ಕಟುವಾದ ಸತ್ಯ ಅಂದ್ರೆ - English ಭಾಷೆ ಈ ಪ್ರಪಂಚನ ಆವರಿಸ್ತಾ ಇದೆ. ಮೆಲ್ ಮೆಲ್ಗೆ ಬೇರೆ ಎಲ್ಲಾ ಭಾಷೆನೂ ಕ್ಷೀಣಿಸ್ತಾ ಇದೆ. ನಿನ್ನೆ ಸಂಸ್ಕ್ರುತ ಇರ್ಬೋದು, ಇವತ್ತು ಕನ್ನಡ ಇರ್ಬೋದು, ನಾಳೆ ಇನ್ಯಾವುದೋ ಭಾರತದ್ ಭಾಷೆ ಇರ್ಬೋದು. ಕನ್ನಡ Weak ಭಾಷೆ ಅಂತಲ್ಲ - ಸಂಸ್ಕ್ರುತನೂ Gramatically perfect ಭಾಷೆ, ಆದ್ರೆ ಏನಾಯ್ತು ? ಅದ್ರುಷ್ಟ, ಐತಿಹಾಸಿಕ ಘಟನೆಗಳು etc etc ಎಲ್ಲಾ ಸೇರಿ ಯಾವುದೇ ವಸ್ತುನ Survivalಗೆ capable ಅಥವ incapable ಅಂತ ತೀರ್ಮಾನ್ಸುತ್ತೆ. ಸಹಜವಾದ ಪರಿವರ್ತನೆ - Natural Changes. ಇದರ ವಿರುದ್ದ ಹೋರಾಟ - ಕೊನೆಗೆ ಸೋಲುವ ಹೋರಾಟ.. ಇದನ್ನ ಯೋಚಿಸುವಾಗ ಸ್ವಲ್ಪ ದುಃಖ ಹಾಗುತ್ತೆ. ಆದ್ರೂ ಒಂದು ಪ್ರಷ್ಣೆ ಕಾಡ್ತಾ ಇರುತ್ತೆ "ಕನ್ನಡ ಸಹಜವಾದ ಸಾವನ್ನ ಅಪ್ಪುತ್ತಿದೆಯೇ ?" ನಾವು ಮಾಡ್ತಾ ಇರೋದು ಸೋಲುವ ಯುದ್ಧನೇ ?

- kannadiga_1956 ರವರ ಬ್ಲಾಗ್
- Login or register to post comments
- 549 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
Re: ಇದು ಸೋಲುವ ಯುದ್ಧವೇ ?- ಸೋತು ಆಗಿದೆಯೇ?
ಸೋಲನ್ನು ಡಿಕ್ಲೇರ್ ಮಾಡುವದಷ್ಟೇ ಬಾಕಿ ಏನೋ ?
ಈ ಲೇಖನವನ್ನೇ ನೋಡೋಣ- ಕನ್ನಡ ಪರ ಚಿಂತನೆಯ ಈ ಲೇಖನದಲ್ಲಿ ೧೯ ಇಂಗ್ಲೀಷ್ ಶಬ್ದಗಳನ್ನು ಕಾಗುಣಿತ( ಅಂದ್ರೆ ಸ್ಪೆಲ್ಲಿಂಗು ಸ್ವಾಮೀ! )ದ ತಪ್ಪಿಲ್ಲದೇ ಬರೆದಿದ್ದಾರೆ! ನಾಲ್ಕು ಕನ್ನಡ ಪದಗಳನ್ನು
ತಪ್ಪಾಗಿ ಬರೆದಿದ್ದಾರೆ.
ನಾವು ಈಗ ಇಂಗ್ಲೀಷಿನಲ್ಲೇ ಯೋಚನೆ ಮಾಡ್ತಾ ಇದ್ದೀವಿ. ಇಂಗ್ಲೀಶ್ ಅಬಿವ್ಯಕ್ತಿಯ ಮಾಧ್ಯಮ ಎಂದಾರೋ ಅಪ್ಪಣೆ ಕೊಡಿಸಿದ್ದಾರೆ. ಹಳ್ಳಿಗರ ಕನ್ನಡದಲ್ಲೂ ಇಂಗ್ಲೀಷ್ ನುಸುಳಿದೆ. ಅದು ಮೂನು (moon), ಇದು ಸನ್ನು ಎಂದೆಲ್ಲ ಎಳೆಯ ಮಕ್ಕಳಿಗೆ ಹೇಳಿಕೊಡುವದನ್ನು ೨೦ (20 ಕಣ್ರೀ) ವರ್ಷಗಳ ಹಿಂದೆಯೇ ನೋಡಿದ್ದೇನೆ. ಲಿಪ್ಸಿಗೆ ಹಚ್ಕೋ ಪುಟ್ಟಿ , ವೆದರ್ರು ಭಾಳ ಕೂಲಾಗೈತಿ ಇಂಥ ವಾಕ್ಯಗಳನ್ನು ಮೊನ್ನೆ ಮೊನ್ನೆ ಕೇಳಿದೆ.
(ಹೊಸಗನ್ನಡವನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಅಪ್ಪಟ ಕನ್ನಡ ಪದಗಳಿಗಾಗಿ ಹಳೆಗನ್ನಡದಲ್ಲಿ ಹುಡುಕುತ್ತಿದ್ದೇವೆ!)
ಅದಕ್ಕೇ ನನಗನ್ನಿಸುತ್ತದೆ . ಕನ್ನಡ ಸೋತು ಆಗಿದೆ.ಸೋಲನ್ನು ಡಿಕ್ಲೇರ್ ಮಾಡುವದಷ್ಟೇ ಬಾಕಿ ಏನೋ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಇದು ಸೋಲುವ ಯುದ್ಧವೇ ?- ಸೋತು ಆಗಿದೆಯೇ?
ಇವೆಲ್ಲಾ ಹುಚ್ಚುತನದ, ದೂರನೋಟಗಳಿಲ್ಲದ ಮಾತು, ಇಂದು ಸಕ್ಕದ ಒರೆಗಳನ್ನು ಮೈತುಂಬ ತುಂಬಿಕೊಂಡೂ ಕನ್ನಡ ಬದುಕಿದೆ, ಹಾಗೆಯೇ ಇಂಗಲೀಸನ್ನು ತುಂಬಿಕೊಂಡೂ ಬದುಕಲಿದೆ. ಒಂದು ನುಡಿ ಬದುಕುವದು ಅಲುಗದ ತನ್ನೊಲುಮಿಗರಿಂದ. ಎಲ್ಲವೂ ನಮ್ಮ ನೋಟದ ಮೇಲೆ ನಿಂತಿದೆ. ಅರ್ಧ ತುಂಬಿದ ಲೋಟವನ್ನು 'ಅಯ್ಯೋ ಇನ್ನೂ ಅರ್ಧ ಹಾಗೇ ಇದೆಯಲ್ಲಾ !' ಅಂತಲೂ ನೋಡಬಹುದು. 'ಸದ್ಯ, ಅರ್ಧ ತುಂಬಿದೆಯಲ್ಲಾ' ಅಂತಲೂ ನೋಡಬಹುದು. ಕನ್ನಡದಲ್ಲಿ ಇಂಗಲೀಸನ್ನು ಅತಿಯಾಗಿ ಬಳಸುವದು ಕನ್ನಡದ ಸೋಲಲ್ಲ, ಕನ್ನಡಿಗರ ಸೋಲು.
Re: ಇದು ಯುದ್ದವೇ ಅಲ್ಲ
"Survival of fittest" ಬಗ್ಗೆ ಯೋಚಿಸ್ತಾ ಇರೊವಾಗ, ಪ್ರಪಂಚದಲ್ಲಿ ಯಾವುದು ತುಂಬಾ ಶಕ್ತಿಶಾಲಿ ಅಂತ ಹೇಳೊಕ್ಕೇ ಆಗೊಲ್ಲ ಅನ್ಸುತ್ತೆ. ಎಲ್ಲವೂ ಕಾಲದ ಮೇಲೆ ಅವಲಂಬಿಸುತ್ತೆ. ಇದೊಂದೇ ನಿರ್ದಿಷ್ಟವಾಗಿ Survive ಆಗುತ್ತೆ ಅಂತ ಹೇಳೊಕ್ಕೆ ಆಗೊದೇ ಇಲ್ಲ. ೬೫ ಮಿಲಿಯನ್ ವರ್ಷಗಳ ಹಿಂದೆ ಭೂಮಿಮೇಲೆ ಡೈನೊಸರ್ ಗಳದ್ದೇ ರಾಜ್ಯ, ಆದ್ರೆ IceAge ಆದ್ಮೇಲೆ, ಅವೆಲ್ಲಾ ಒಂದೂ ಇಲ್ದೆ ಮಾಯವಾಗಿ , mammals ಗಳದ್ದೇ ರಾಜ್ಯ ಆಯ್ತು. ಹಿಂದೂ ಧರ್ಮನೂ ಅಷ್ಟೆ, ಉಳಿಯೋಕ್ಕೆ chanceಏ ಇಲ್ಲ ಅನ್ನೋ ಸ್ತಿತಿಗೆ ಬಂದಿತ್ತು ೧೭-೧೮ನೇ ಶತಮಾನದಲ್ಲಿ. ಅದೇಗೋ ಏನೇನೋ ಪರಿವರ್ತನೆ ಆಗಿ, ಇವತ್ತು ಎಲ್ಲ ಕಡೆ ಬೆಳಿತಾ ಇದೆ. Adaptability ತುಂಬಾ ಮುಖ್ಯ. ಅದಿದ್ರೆ ಯಾವುದೇ ವಿಷಯ ನಶಿಸೊಕ್ಕೆ ಸಾದ್ಯ ಇಲ್ಲ..
sampada.net ಕೂಡ ಇಂದಿನ ಅಂತರ್ಜಾಲದ ಯುಗಕ್ಕೆ ಕನ್ನಡವನ್ನ Adapt ಮಾಡುವ ಪ್ರಯತ್ನ. ನಾವು ಪರಿವರ್ತನೆಗಳನ್ನ ಗೆಳೆಯ ಅಂತ ಭಾವಿಸಿ ಅವನಿಗೆ Adapt ಆಗ್ತಾ ಇದ್ದಿವಿ. ಪರಿವರ್ತನೆ ಶತ್ರು ಅಲ್ಲ, ಆದ್ರಿಂದ ಇದು ಯುದ್ದವೇ ಅಲ್ಲ
ಸೋಲುವ ಯುದ್ದವಂತೂ ಖಂಡಿತಾ ಅಲ್ಲ
ಈ ಪ್ರಯತ್ನ ಎಲ್ಲ ವಿದದಲ್ಲೂ , ಎಲ್ಲ ಕ್ಷೇತ್ರದಲ್ಲೂ ಮುಂದುವರಿಲಿ..ನಶಿಸುವ ಪ್ರಷ್ಣೆಯೇ ಇಲ್ಲ
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.