ಈಗಿನಂತೆ 4 ಸದಸ್ಯರು ಮತ್ತು 91 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಲಿನಕ್ಸಿನಲ್ಲಿ ಕನ್ನಡದ ಕೆಲಸ
hpn's picture
ಹರಿ ಪ್ರಸಾದ್ ನಾಡಿಗ್
15
Oct
2006
ಬ್ಲಾಗ್ ಬರಹ
ಧಾರವಾಡದ ಇಂಜಿನೀಯರಿಂಗ್ ಕಾಲೇಜಿನವರ 'ಸ್ಪಂದನ' ಎಂಬ ಹೊತ್ತಿಗೆಗೆ ಗುರು ಕುಲಕರ್ಣಿ ಎಂಬುವರು "ಲಿನಕ್ಸಿನಲ್ಲಿ ಕನ್ನಡದ ಕೆಲಸ" ಎಂಬ ಲೇಖನ ಬರೆದುಕೊಡಿ ಎಂದು ಕೇಳಿದ್ದರು....
ಪ್ರತಿಕ್ರಿಯೆಗಳು: 1
ಹಿಟ್ಸ್ : 1,177
ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....
rashmi_pai's picture
Rashmi Pai
30
Dec
2010
ಬ್ಲಾಗ್ ಬರಹ

ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ...

ಪ್ರತಿಕ್ರಿಯೆಗಳು: 8
ಹಿಟ್ಸ್ : 929
ಕೃಷಿ ಸಂಪದ: ೩ನೇ ಸಂಚಿಕೆ, ಡಿಸೆಂಬರ್ ೨೦೦೯
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
02
Dec
2009
ಪುಟ

ಬಿಟಿ ಬದನೆ ಇಡೀ ದೇಶದಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕೇಂದ್ರ ಸರಕಾರ ನೇಮಿಸಿದ ಜೆನೆಟಿಕ್ ಇಂಜಿನಿಯರಿಂಗ್ ಎಪ್ರೂವಲ್ ಕಮಿಟಿಯು (ಜೈವಿಕ ಇಂಜಿನಿಯರಿಂಗ್...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,486
ಮುಂಬೈನ ಮಳೆಗಾಲ
tvsrinivas41's picture
24
Jul
2005
ಬ್ಲಾಗ್ ಬರಹ

ಮುಂಬಯಿಯ ಮಳೆಗೆ ಅದರದ್ದೇ ಆದ ಛಾಪಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವುದು ಜೂನ್ ತಿಂಗಳ ಮೂರನೇ ವಾರದಲ್ಲಿ. ಈ ಮಳೆಗಾಲ ನವಂಬರ್ ತಿಂಗಳ ಮಧ್ಯ ಭಾಗದವರೆಗೂ...

ಪ್ರತಿಕ್ರಿಯೆಗಳು: 2
ಹಿಟ್ಸ್ : 2,261
ಡಾ ಎಚ್ ಎಸ್ ವೀಯವರ ಅಭ್ಯಾಸ ೧೪ ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ
gopinatha's picture
ಬೆಳ್ಳಾಲ ಗೋಪೀನಾಥ ರಾವ್
28
Aug
2011
ಲೇಖನ

ಡಾ ಎಚ್ ಎಸ್ ವೀಯವರ ಅಭ್ಯಾಸ ೧೪
೨೧.೦೮.೨೦೧೧ ರಂದು ಶ್ರೀಕಾಂತ್ ಉಡುಪರ ಮನೆಯಲ್ಲಿ
ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ...

ಪ್ರತಿಕ್ರಿಯೆಗಳು: 5
ಹಿಟ್ಸ್ : 229
ಬಿದಿರಕ್ಕಿ
prasannasp's picture
ಪ್ರಸನ್ನ.ಎಸ್.ಪಿ
07
May
2012
ಬ್ಲಾಗ್ ಬರಹ

ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ...

ಪ್ರತಿಕ್ರಿಯೆಗಳು: 11
ಹಿಟ್ಸ್ : 258
ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ
palachandra's picture
ಪಾಲಚಂದ್ರ
10
Aug
2010
ಬ್ಲಾಗ್ ಬರಹ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,126
ನೀತಿವಂತರು ದೇವರ ವಿವರಕ್ಕಾಗಿ ಕಾಯುವುದು ಮಿಸ್ ಕಾಲನ್ನು ನಿರೀಕ್ಷಿಸಿದಂತೆ:ಗಾದೆಗೊಂದು ಗುದ್ದು ಭಾಗ ೬
anilkumar's picture
ಎಚ್.ಎ. ಅನಿಲ್ ಕುಮಾರ್
22
May
2010
ಪುಟ

(೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ.

(೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 868
ಪಶ್ಚಾತ್ತಾಪ
tvsrinivas41's picture
02
Aug
2005
ಪುಟ

ತುಂಡ ಅಂತ ರವಿಯ ಮನೆಯಲ್ಲಿ ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅದಕ್ಕೊಂದು ಹಿನ್ನೆಲೆ ಇದೆ. ಅವನು ಯಾವಾಗಲೂ ಬೌಲಿಂಗ್ ಮಾಡ್ತಾ ಇರ್ತಿದ್ದ. ಅಂಗಡಿಗೆ ಹೋಗಿ ಏನಾದರೂ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,413
ವಿಮುಕ್ತಿ - ಚಿತ್ರ... ನಾ ಕಂಡಂತೆ
Shamala's picture
ಶ್ಯಾಮಲಾಜನಾರ್ದನನ್
06
May
2010
ಬ್ಲಾಗ್ ಬರಹ

ನವ್ಯ ಚಿತ್ರ ಕ್ರಿಯೇಷನ್ಸ್ ರವರ "ವಿಮುಕ್ತಿ" ಚಿತ್ರ ಉತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಗಳಿಸಿದೆ. ಚಿತ್ರ ಅಪ್ಪ - ಮಗಳ ನವಿರಾದ ಸಂಬಂಧದ ಮೇಲೆ...

ಪ್ರತಿಕ್ರಿಯೆಗಳು: 36
ಹಿಟ್ಸ್ : 974

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ರಂಗಾಯಣದಲ್ಲೊಂದು ಸಂಜೆ

ರಂಗಾಯಣದಲ್ಲೊಂದು ಸಂಜೆ

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ್ಬ ಸ್ನೇಹಿತ ಬಂದು ನಾನು ಬರ್ತೀನಿ, ಆದ್ರೆ ಈಗ್ಲೇ ಹೋಗ್ಬೇಕು ಕುಕ್ಕರಹಳಳಿ ಕೆರೆ ಸುತ್ತ ಒಂದು ವಾಕ್ ಮಾಡಿ ಹಾಗಿಂದಾನೇ ಬರ್ತೀನಿ ಅಂದ್ರು.

ಸರಿ, ನಾನೂ ವಾಕೋಣವೆಂದು ಹೊರಟೆ. ಒಂದರ್ಧ ಘಂಟೆಯಲ್ಲೆ ಇಬ್ಬರು ಕೆರೆ ಪ್ರದಕ್ಷಿಣೆ ಮುಗಿಸಿ, ರಂಗಾಯಣದ “ಭೂಮಿಗೀತ”ಕ್ಕೆ ಹೋದ್ವಿ. ಅಲ್ಲಿ ನಮ್ಮ ಮತ್ತೊಬ್ಬ ಸ್ನೇಹಿತ ಟಿಕೆಟ್ಗಳನ್ನು ತೊಗೊಂಡಿದ್ರು.

ಸೋಜಿಗ ಅಂದ್ರೆ ನಮಗ್ಯಾರಿಗೂ ಅಂದು ಯಾವ ನಾಟಕ ಅಂತಾನು ಗೊತ್ತಿರಲಿಲ್ಲ. ಹೊರಗೊಂದ್ ದೊಡ್ಡ ಬ್ಯಾನರ್ ಮೇಲೆ ರಂಗಾಯಣದ ಗ್ರೀಷ್ಮ ರಂಗೋತ್ಸವ ಅಂತ ಬರೆದದ್ದು ಮಾತ್ರ ಕಾಣಿಸ್ತು. ಟಿಕೆಟ್ ಕೊಂಡಾಗ ನಾಟಕದ ಬಗ್ಗೆ ಒಂದು ಪಾಂಪ್ಲೆಟ್ ಕೊಟ್ರು. ಅದ್ರಲ್ಲಿ ಓದ್ದಾಗ ಗೊತ್ತಾಗಿದ್ದು ಯಾರೋ ಸುಳ್ಯದ ಮಕ್ಕಳು ಮಾಡ್ತಿರೋ ನಾಟಕ - ಢಾಣಾ ಡಂಗುರ - ವೈದೇಹಿಯವರು ಬರ್ದಿರೋದು ಅಂತ.

ನಾವು - ನಾಟಕ ಮಕ್ಳು ಮಾಡ್ತಿರೋದು - ಹೇಗಿರತ್ತೋ ಏನೋ ಅಂತ ಅನ್ಕೊಂಡೆ ಒಳಗ್ ಹೋಗಿ ಕೂತ್ವಿ. ಹೀಗೆ ಯೋಚನೆ ಮಾಡಕ್ಕೆ ನಮ್ಮ ನಮ್ಮದೇ ಶಾಲಾ ಸಮಯದಲ್ಲಿ ಆಡುತ್ತಿದ್ದ ನಾಟಕಗಳ ಜ್ಞಾಪಕ :-) ಸರಿ ೬:೩೦ಕ್ಕೆ ಸರಿಯಾಗಿ ಶುರುವಾಗೇ ಹೋಯಿತು ಮಕ್ಳೆಲ್ಲಾ ಕುಣೀತಾ ಬಂದ್ರು, ಅವರ ಹಿಂದೆ ಒಂದ್ ಮಗು ಡಂಗುರ ಇಟ್ಕೊಂಡು ಬಂದು ಶುರುನೇ ಮಾಡ್ಬಿಡ್ತು “ಕೇLrಅಪ್ಪೋ ಕೇಳಿ…” ಅಂತ.

ಅದರ ನಂತರ ಹೇಗೆ ಸಮಯ ಹೋಯ್ತೋ ಗೊತ್ತೇ ಆಗ್ಲಿಲ್ಲ. ನಾವೆಲ್ಲ ನಕ್ಕೂ ನಕ್ಕೂ ಸುಸ್ತಾಗೋ ಹೊತ್ತಿಗೆ ನಾಟಕ ಮುಗಿದೇ ಹೋಯ್ತು. ನಾಟಕದುದ್ದಕ್ಕೂ  ಮಕ್ಕಳು ಪ್ರದರ್ಶಿಸಿದ ಕೌಶಲ್ಯ, ವರ್ಚಸ್ಸು ಮತ್ತವರ ಕೈಚಳಕ ನಿಜಕ್ಕೂ ಅಚ್ಚರಿ ಮೂಡಿಸಿತು. ಹಾಗೆನೆ ವೈದೇಹಿಯವರ ಕಥೆ ಬಹಳ ಮೆಚ್ಚುವಂತಹದ್ದು.

ಪ್ರೈಮೆರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಕೈಯ್ಯಲ್ಲಿ ಇಷ್ಟು ಚೆನ್ನಾಗಿ ನಾಟಕ ಮಾಡಿಸಿದ ಜೀವನರಾಂ ಸುಳ್ಯರವರಿಗೆ ನಾವೆಲ್ಲ ಧನ್ಯ. ನಾಟಕದ ಕೊನೆಯಲ್ಲಿ ಪಾತ್ರಮಾಡಿದ್ದ ಮಕ್ಕಳನ್ನು ಪರಿಚಯ ಮಾಡಿಸಿಕೊಟ್ಟ ಸುಳ್ಯ ಅವರು ಹೇಳಿದ್ದು “ಹವ್ಯಾಸಕ್ಕೆ ನಾಟಕ ಮಾಡಲು, ಕೆಟ್ಟು ಹೋಗುತ್ತಾರೆ ಅನ್ನುವ ಕಾರಣಕ್ಕಾಗಿ ಮಕ್ಕಳನ್ನು ಕಳುಹಿಸದ ಪೋಷಕರಿಗೆ ಈ ಮಕ್ಕಳು ಅಪವಾದ. ಇವರೆಲ್ಲಾ ಈ ನಾಟಕದ ಜೊತೆಯಲ್ಲೆ ಹತ್ತು ಹಲವಾರು ವಿದ್ಯೆಗಳನ್ನು ಕಲೆತ್ತಿದ್ದಾರೆ, ಶಾಲೆಯಲ್ಲೂ ಕೂಡ ತುಂಬಾ ಬುದ್ಧಿವಂತರಾಗಿದ್ದಾರೆ” ಅಂತ.

ನಿಜ. ನಾವು ನೋಡಿದ ಹಾಗೆ ಈ ನಾಟಕ ಮಾಡುತ್ತಾ, ಈ ಮಕ್ಕಳೆಲ್ಲ ಎಷ್ಟು ವೈವಿಧ್ಯ ಕಲೆಗಳನ್ನ್ನೂ, ಬದುಕಲು ಬೇಕಿರುವ ಧೈರ್ಯ ಸಾಹಸಗಳನ್ನೂ ಕಲೆತ್ತಿದ್ದಾರೆ ಅಂತ ತಿಳಿಯುತ್ತೆ. ಈ ನಾಟಕ ಮತ್ತೆಲ್ಲಾದರು ಪ್ರದರ್ಶನಕ್ಕೆ ಬಂದರೆ ದಯವಿಟ್ಟು ತಪ್ಪದೆ ಹೋಗಿ ಅವರನ್ನು ಪ್ರೋತ್ಸಾಹಿಸಿ.

ಈ ನಾಟಕದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ

No votes yet
955 ಹಿಟ್ಸ್