Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › karihaida ರವರ ಬ್ಲಾಗ್

ಕರಿಹೈದನ ಬಟ್ಟೆ

ನಾನ್ ಹಟ್ಟಿ ಬಿಟ್ ವಸಿ ಕಾಲ ಆಯ್ತಲ್ಲ ಅದ್ಕೇ ನನ್ ಭಾಸೆ ವಸಿ ಮೈಸೂರ್ ಸೀಮೆನವ್ರ್ ಥರಾ ಕೇಳ್ಸ್ತೈತೆ. ಸ್ವಲ್ಪ "ಅಡ್ಜಸ್ಟ್' ಮಾಡ್ಕೊಳಿ.

ಕವಲ್ ದಾರಿ

March 27, 2008 - 9:15pm — karihaida
ಹಳ್ಳಿಯಲ್ಲಿ ಬಸ್ಸು

ನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ.

ಹಂಗಂತ ಹಟ್ಟಿಗ್ ಹೋಗೋದು, ಬಿಡಕ್ ಆಯ್ತದ? ಯೋಳಿ! ಹಂಗೇ ಯೋಚ್ಸ್ಕೊಂಡ್ ಹೋದೆ ಹಟ್ಟಿ ಕಡೆ ಈ ಬಾರಿನು. ಈ ಸಾರಿ, ಎರಡ್ ವರ್ಷ ಆಮೇಲೆ ಹೋಯ್ತಿರೋದು ಹಟ್ಟಿಗೆ. ಎಂಗೆಂಗಾಗೈತೋ, ಎಂಗೆಂಗವ್ರೋ ವಸಿ ನೋಡಾಣ ಅಂತ ಹೊರಟೆ. ನಮ್ ಪಟ್ಟಣದಾಗೆ ಒಂದ್ ಬಸ್ ಹಿಡ್ಕಂಡ್ ಹೋದ್ರೆ ನಮ್ ಕಾಡಿನ್ತವ ಇರೋ ಒಂದ್ ಹಳ್ಳಿಗ್ ತಂದ್ ನಿಲ್ಸ್ತಾನೆ. ಅಲ್ಲಿಂದ ಬೋ ದೂರ ನಡ್ಕಂಡ್ ಹೋಗ್ಬೇಕು. ಅರ್ಧ ದಿನಾನೆ ಬೇಕು ನಡ್ಯಾಕ್ಕೆ. ಒಬ್ಬನೇ ಬೇರೆ. ಅಭ್ಯಾಸ ಬೇರೆ ತಪ್ಪಿ ಹೋಗದೆ. ಉಸ್ಸಪ್ಪ ಅನ್ಕೋಂಡ್ ಹೋಗ್ಬೇಕಲ್ಲಪ್ಪ ಅಂತ ಯೋಚ್ಸ್ಕೊಂಡು ಬಸ್ ಹತ್ದೆ. ಒಂದೆರಡ್ ಗಂಟೆ ಕಳೀತು. ಒಳ್ಳೆ ನಿದ್ದೆ ಮಾಡಿದ್ದೆ. ಕಂಡಕ್ಟ್ರಪ್ಪಾ ನನ್ ಮುಖ್ದಾಗೆ ಸೀಟಿ ಊದಿ ಎಬ್ರಸ್ದ. "ನಿನ್ ಹಳ್ಳಿ ಬಂದೈತೆ ಇಳ್ಕಳಣ್ಣೌ" ಅಂದ. ನಾನು ನನ್ ಗಂಟು, ಮೂಟೆನೆಲ್ಲಾ ಹಿಡ್ದು ಇಳ್ದೆ. ನಾನು ಇಳ್ದ್ ತಕ್ಷಣ ಬಸ್ನವ ಮುಂದಕ್ ಹೊಂಟ್ಬಿಟ್ಟ.

"ಮುಂದಕ್ಕೆ? ಇದು ಹೆಂಗೆ ಅಂತ? ಮುಂದಕ್ಕೆ ಬರೀ ಕಾಡ್ದಾರಿ ಅಲ್ವ? ಅಲ್ಲಿ ಬಸ್ ಎಂಗ್ ಬುಡ್ತಾನವ?" ಅಂತ ನಾನ್ ಬಾಯ್ಬಾಯ್ ಬಿಟ್ಕೊಂಡ್ ನೋಡ್ಬೇಕಾದ್ರೆ ನನ್ ಮೂತಿ ನೋಡಿ, ಅದೇ ಹಳ್ಳಿಯವ್ನಾದ ಅನುಮ್ಯ ಕೂಗ್ದ.
"ಏನ್ಲಾ ಹಂಗ್ ಬಾಯ್ ತೆಕ್ಕೋಂಡ್ ನೋಡ್ತಿದ್ದಿ? ಮೊದ್ಲು ಮುಚ್ಚು. ಸೊಳ್ಳೆ ಗಿಳ್ಳೆ ಹೋಗ್ಬುಟ್ಟಾತು!!" ಅಂದ. ನಾನು, "ಅಲ್ಲ, ಅನುಮ್ಯ! ಈ ಬಸ್ನವ ಕಾಡ್ನಾಗ್ ಯಾಕ್ಲಾ ಓಗ್ತಾವ್ನೆ? ಅವ್ನಿಗೆ ಏನ್ ತಲೆಗಿಲೆ ಕೆಟ್ಟೈತೋ ಏನು?" ಅಂದೆ. ಅದಕ್ಕವ "ಅಯ್ಯೋ ನಿನ್ನ! ಯಾಕೋ? ನಿಂಗೆ ಗೊತ್ತಿಲ್ಲ್ವ ಕಾಡೊಳಾಕ್ ರಸ್ತೆ ಮಾಡಿದ್ದು? ನಿಮ್ ಹಟ್ಟಿ ತನ್ಕಾನು ಓಯ್ತಾನಲ್ಲೋ ಬಸ್ಸು! ಇಲ್ಯಾಕ್ ಇಳ್ಕೊಂಡೆ?" ಅಂದ. "ಅಯ್ಯೋ! ಹೌದೇನೋ, ಆ ಕಂಡಕ್ಟ್ರಪ್ಪಾ ಯೋಳ್ಲೆ ಇಲ್ಲ ನಂಗೆ!! ಯಾವಾಗಿಂದಾನೋ ಈ ರಸ್ತೆ ಆಗಿರೋದು?" ಅಂತ ಕೇಳ್ದೆ. ಅವ, "ಅಯ್ತು ಓಂದ್ ವರ್ಸ. ಓದ್ ಸಾರಿ ಹಳ್ಳಿ ಜಾತ್ರೆ ಹೊತ್ಗೆ ಆಗ್ ಹೋಗಿತ್ತಲ್ಲೋ!!" ಅಂದ.

ಸರಿ, ಇನ್ನು ಅವ್ನ್ ಜೊತೆ ಮಾತಾಡ್ತಿದ್ರೆ ಇನ್ನೇನು ಆಶ್ಚರ್ಯ ತಪ್ಪೋಯ್ತದೋ ಅಂತ ನಡ್ಕೊಂಡ್ ಹೊರ್ಟೆ ಕಾಡೊಳಕ್ಕೆ, ನಮ್ ಹಟ್ಟಿಗೆ.

  • ನನ್ ಕಥೆ
  • ಹಟ್ಟಿ ಕಥೆ
Ornamental seperator
  • karihaida ರವರ ಬ್ಲಾಗ್
  • Login or register to post comments
  • 363 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 28, 2008 - 9:36am — agilenag

ಉ: ಕವಲ್ ದಾರಿ

agilenag's picture

ಬೋ ಸಂದಾಗದೆ, ಕವಲ್ ದಾರಿ ಕಥೆ. ಆದ್ರೆ, ಈ ಬಸ್ ಬಂದಿದ್ದು, ಲೈಟು ಬಂದಿದ್ದು, ಟಿವಿ ಬಂದಿದ್ದು, ಮನೇ ತಾವ್ಕೆ ನಲ್ಲಿ ನೀರು ಬಂದಿದ್ದು ನಮ್ ಅಳಿಗಳ ಮಾರೇನೇ ಬದ್ಲಾಯ್ಸ್ ಬುಟ್ಟೈತಲ್ವಾ. ಅಂಗೇನೇ ಅಲ್ಲೀ ಜನಗೋಳ್ ರೀತಿ, ನೀತಿ, ನಡವಳ್ಕೆನೂ ಬದ್ಲಾಯಿಸ್ಬುಟ್ಟೈತೆ !!! ಅವ್ರ ಬಾಯಲ್ಲಿ ಈಗ ರಾಜ್ಕಾರ್ಣಾ ಬಿಟ್ರೆ ಬ್ಯಾರೆ ಮಾತೈತಾ? ಐವತ್ ವರ್ಸಕ್ಕೇ ನೂರ್ ವರ್ಸೋದಾರಾಗೆ ಮುದ್ಯಾಗೋಗ್ತಾ ಇದಾರಲ್ಲಾ. ಉಳೋಕಾಗೋಲ್ಲ, ನೀರ್ ಒಡೆಯೋಕಾಗೋಲ್ಲ, ದನ ಕರು ಕುರಿ ಕೋಳಿ ಸಾಕೋಕಾಗಲ್ಲ ಅಂತಾ ಈ ಆಗೋಲ್ಗಳ ಪಟ್ಟಿ ಬೆಳೀತಿದ್ಯೆ ಹೊರ್ತು ಅವ್ರಿಂದ ಏನಾಯ್ತೀತೆ ಅಂತಾ ಏಚ್ನೇನೇ ಮಾಡ್ತಾ ಇಲ್ವಾಲ್ಲಾ?? ಎಲ್ಲಾಕೂ ಸರ್ಕಾರಾನೇ ಬೇಕು, ರಾಜ್ಕಾರ್ಣಿಗಳೇ ಬೇಕು. ಬ್ಯಾಂಕು ಮಾರ್ವಾಡಿಗಳ್ ಸಾಲಾನೇ ಬೇಕು ಅಂದ್ರೆ ಎಂಗೇ? ಯೋಳಿ ಮತ್ತೆ . . .

  • Login or register to post comments
  • link
  • Email this ಪ್ರತಿಕ್ರಿಯೆ
March 28, 2008 - 10:22am — mahesha

ಉ: ಕವಲ್ ದಾರಿ

mahesha's picture

ಕರಿಹಯಿದ!!

ಏನಣ್ಣ.. ಬೊಂಬಾಟ್...!!

ನಮ್ ಮನೆ ತಾವ ಕೂಡ ಇಂಗೇ ಇತ್ತು ಒಂದ್ ಕಾಲದಾಗೆ.. ನಮ್ ಮನೆ ಮಂಡ್ಯ ಟವನ್ನ ಊರಾಚೆ ಇತ್ತು.. ಆಗ ನಾವ್ ಇಸ್ಕೂಲಿಂದ ಮನೆಗೆ ನಡೆಕ್ಕೊಂಡು ವೋತಾ ಇದ್ರೆ.. ದಾರಿ ಉದ್ದುಕ್ಕೂ ಹುತ್ತಗಳೂ, ಮುಳ್ಪುದೆಗಳೂ ಇತ್ತಿತ್ತು...

"ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ ಕೇಳಿ ತಮ್ಮ ಪಾಡ್ಗೆ ತಾವು ಓಯ್ತಾರೆ. ಏನಾದ್ರು ತೊಗೊಂಡ್ ಹೋದ್ರೆ, ಒಂದ್ಸಾರಿ ಕಣ್ ಹಾಯ್ಸಿ ಅಲ್ಲೇ ಇಡ್ತಾರೆ. ಮನ್ಸಿಗ್ ಯಾಕೋ ಬೋ ಬೇಸರ ಆಗತ್ತೆ."

Sad

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 8:41pm — ವೈಭವ

ಉ: ಕವಲ್ ದಾರಿ

ವೈಭವ's picture

ಸಂದಾಕಯ್ತೆ ಕಣಣ್ಣ ಕರಿಹಯ್ದ ನಿಮ್ ಬರಹ,

ಅಂದಾಗೆ ಈ ಊರು ಯಾವುದು?

ನೀಮ್ ಯೋಳ್ದಂಗೆ ಈಗ ಅಳ್ಳೀಲಿ ಮೊದಲಿದ್ದ ಪಿರೂತಿ, ಅಕ್ಕರೆ ಇವು ಕಮ್ಮಿ ಆಗವೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 11:35pm — karihaida

ಉ: ಕವಲ್ ದಾರಿ

karihaida's picture

ಈ ಊರು ಯಾವ್ದ್ ಬೇಕಾದ್ರು ಆಗಿರ್ಬೋದು ಕಣಣ್ಣ! ಬೆಂಗ್ಳೂರ್/ಮೈಸೂರಿಂದ ಹಿಡಿದು ನಮ್ ಕಾಕನ್ ಕೋಟೆ ತಾಕ್ಕು ಆಯ್ತದೆ.
ನನ್ ಗೆಳೆಯರ್ ಕೆಲವ್ರು ಅಮೇರಿಕದಿಂದ ಬಂದಿದ್ರು. ಅವ್ರದ್ದೂ ಇದೇ ಕಥೆ. ಏನೂ ಮಾಡಕ್ಕಾಗಲ್ಲ ಕಣಣ್ಣ, ಎಲ್ಲಾ ಯೌವ್ವನ‌ !!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೈಟೊ ಕಾಫಿ !!! - ೧
  • ಮುಕ್ತಾಯ
  • ೨.೧.ಜಪಾನಿನಲ್ಲಿ ಮೊದಲದಿನ : ತಿಂಡಿ!
  • ಮುಯ್ಯಿಗೆ ಮುಯ್ಯಿ
  • ನಾಳೆ ನೀವೂ ಮಾಯ.............
Syndicate content

ಲೇಖಕರು

karihaida's picture

ಪೂರ್ಣ ಹೆಸರು
ಕರಿಹೈದ

ಪರಿಚಯ

ಹಿಂಗಾಸ್ ವಸಿ, ಹಂಗಾಸ್ ವಸಿ, ಇತ್ಲಾಗ್ ಎತ್ಲಾಗ್ ತಿರುಗ್ ತಿರುಗಿ ಮಣ್ಣು ಹುಯ್ಕೊಳೋ ಕೆಲ್ಸ ಮಾಡಿ, ಮಾಡ್ಸಿ ಕೊನೇಗ್ ಹೊತ್ತಾರೆ ಬಂದ್ ಆಗ್ ಹೋಗ್ ಗಳನ್ನೆಲ್ಲಾ ಇದರ್ನಾಗ್ ವದ್ರ್ ಬುಡಾನೆ ಅಂತ್ ಹೊಂಟಿವ್ನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:53pm
  • Shivakumar.Revadi
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:40pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:26pm
  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:31pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator