ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಲೇಖಕರು

karthi's picture

ಪೂರ್ಣ ಹೆಸರು
ಕಾರ್ತಿಕ್ ಎನ್.ರಾವ್

ಪರಿಚಯ

ಎಲ್ಲರಿಗೂ ನನ್ನ ನಮಸ್ಕಾರಗಳು..
ನನ್ನ ಹೆಸರು ಕಾರ್ತಿಕ್. ನಾನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವನು.
ಪ್ರಸ್ತುತ ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.
ಬರೆಯುವ ಹವ್ಯಾಸ ನನ್ನನ್ನು ಸಂಪದಕ್ಕೆ ಕರೆತಂದಿದೆ.

 

 

ಸುಡು ಬಿಸಿಲಿನಲ್ಲಿ ಕಂಡ ಮುಖ
 ತಂಪಲ್ಲಿ ಮತ್ತೆ ಕಾಣುವ ತವಕ
ಕಂಡಿತೋ ಎಂಬಷ್ಟರಲ್ಲಿ ಮತ್ತೆ ವಿಮುಖ

ಹೀಗೆಯೇ ನಡೆವುದೇ ನೆಳಲು ಬಿಸಿಲಿನಾಟ
ಜೀವನದ ಸಿಹಿ ಕಹಿ ಪಾಠ
ಪ್ರತಿ ಬಾರಿಯೂ ಹೀಗೆಯೇ ಆಗುವುದೇಕೆ
ತವಕಿಸುವ ಮನವು ನನ್ನದೇ ಏಕೆ?

ಅನಿಸುವುದು, ಒಮ್ಮೊಮ್ಮೆ ಜೀವನ ಇಷ್ಟೇಯೇ
ತವಕಿಸುವ ಹಲುಬುವ ಬಗೆಯೇ
ಮತ್ತೊಮ್ಮೆ ನೆನೆಯುವೆ, ಜೀವನ ಹೀಗೆಯೇ
ನಡೆಯದು ನಾವೆಲ್ಲಾ ಬಯಸುವ ಹಾಗೆಯೇ

ಬಾಳ ಬಂಡಿ ನಡೆಯಲೇ ಬೇಕು
ಇಂದಾಗಿ ನಾಳೆಯು ಬರಲೇ ಬೇಕು
ಕಷ್ಟ ಬಂದರೆ ಇಂದು, ಕಾಯುತಿದೆ ಸುಖವು
ಸುಖದ ನಿರೀಕ್ಷೆಯಲಿ ಕಾಯಲೇಬೇಕು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಜೀವನ

santhosh_87's picture

'ನಡೆಯದು ನಾವೆಲ್ಲಾ ಬಯಸುವ ಹಾಗೆಯೇ'
ನಮಗೆ ನಾವು ಮಾಡುವ ಸಮಾಧಾನ ಅಷ್ಟೇ. ಮನಸ್ಸಿಗೆ ಶಾಂತಿ ಕೊಡುವುದು ನಿಜ, ಆದರೆ ನಾಳೆ ಏನಾಗುತ್ತೋ ಯಾರು ಬಲ್ಲರು

ಉ: ಜೀವನ

ksraghavendranavada's picture

+1

ಉ: ಜೀವನ

karthi's picture

ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.. :)

ಉ: ಜೀವನ

karthi's picture

ನಿಮ್ಮ ಮಾತು ನಿಜ ಸಂತೋಷ್
ಆದರೂ ಅದೊಂದು ಮಾತು ಮನಸಿಗೆ ಸಮಾಧಾನವನ್ನು ನೀಡುತ್ತದೆ.

ಉ: ಜೀವನ

gopinatha's picture

ಸಂತೋಷ ನಾವಿಲ್ಲದ ದಿನಗಳಲ್ಲಿಲ್ಲ
ನಾವಿರದ ಕಾರ್ಯಗಳಲ್ಲೂ ಇಲ್ಲ
ಅದಿರುವುದು ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ, ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

http://sampada.net/b...

ಉ: ಜೀವನ

karthi's picture

ನಿಮ್ಮ ಮಾತು ನಿಜಕ್ಕೂ ಸತ್ಯ ಸರ್...
ಸಂತೋಷವನ್ನು ನಾವು ಕಂಡುಕೊಳ್ಳಬೇಕು ಅಲ್ಲದೆ ನಾವಿರುವೆಡೆ ಸಂತೋಷ ಚಿಮ್ಮಿಸಬೇಕು.