ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › karthik ರವರ ಬ್ಲಾಗ್

ಚಾಗದ ಭೋಗದ....

December 14, 2005 - 4:55pm — karthik

ಇವತ್ತು ಯಾಕೊ school ನಲ್ಲಿ ಕಲಿತ (ಬಾಯಿಪಾಠ ಮಾಡಿದ?) ಪಂಪನ ಈ ಪದ್ಯ ತುಂಬ ನೆನಪಿಗೆ ಬರ್ತಾ ಇತ್ತು.
ಇದು ಮರೆತು ಹೊಗೊ ಅಷ್ಟರಲ್ಲಿ ಬರೆಯೋಣ ಅನ್ನುಸ್ತು ಅದಕ್ಕೆ ಈ ಪ್ರಯತ್ನ.

ಇದು ನನಗೆ ನೆನಪಿರುವ ಹಾಗೆ ಬರೆದದ್ದು. ಆದ್ದರಿಂದ ಮೂಲ ಪದ್ಯಕ್ಕೂ ಇದಕ್ಕೂ ತುಂಬ ವ್ಯತ್ಯಾಸಗಳಿರುತ್ತವೆ. ತಿಳಿದವರು ಸರಿಪಡಿಸ ಬೇಕಾಗಿ ವಿನಂತಿ.

(ok enough of disclaimers Smiling)

(ಪಂಪನ ಕ್ಷಮೆ ಕೋರುತ್ತಾ.......)

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಿಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರಂತವರಾಗಿ
ಪುಟ್ಟಲೇನಾಗಿಯೋಮೇನೋ ತೀರ್ದಪುದೇ ತೀರ್ದಪುದಮ್ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ
ಪುಟ್ಟುವುದು ನಂದನದೋಳ್ ಬನವಾಸಿ ದೇಶದೋಳ್

ತೆಂಕಣ ಗಾಳಿ ಸೋಂಕಿದೊಡಂ ಒಳ್ನುಡಿ ಕೇಳ್ದೊಡಮ್
ಇಂಪಾದ ಗೇಯಂ ಕಿವಿಗೊಟ್ಟಡಮ್ ಬಿರಿದ ಮಲ್ಲಿಗೆ ಕಂಡೊಡಮ್
ಆಗ ಕೆಂದಾಲಂಪಮ್ ಎಡೆಗೊಂಡಡಂ ಮಧುಮಹೋತ್ಸವಮಾದೊಡಮ್
ಏನನೆಂಬನಾರಂಕುಶವಿಟ್ಟೊಡಂ ನೆನೆವುದೆನ್ನ ಮನಮ್ ಬನವಾಸಿ ದೇಶಮಂ

  • ಕಾವ್ಯ ಮತ್ತು ಕವನ
~.~
  • karthik ರವರ ಬ್ಲಾಗ್
  • Login or register to post comments
  • 992 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 14, 2005 - 5:23pm — hpn

ಹಳೆಗನ್ನಡ

hpn's picture

ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಹಳೆಗನ್ನಡ ಓದಿದ ಜ್ಞಾಪಕವೇ ಇಲ್ಲ, ನನಗೆ (ಹಳೆಗನ್ನಡ ಇರಲೇ ಇಲ್ಲ ಅನ್ಸುತ್ತೆ ಥರ್ಡ್ ಲ್ಯಾಂಗ್ವೇಜ್ ಪುಸ್ತಕದಲ್ಲಿ). ಆದರೆ, ಸಣ್ಣವನಿದ್ದಾಗ "ಕನ್ನಡ ಸಂಸ್ಕೃತಿ ಪರೀಕ್ಷೆ"ಗೆ ನೃಪತುಂಗನ ಕಾವ್ಯವೊಂದನ್ನ ಕಷ್ಟಪಟ್ಟು ಗಟ್ಟು ಮಾಡಿದ್ದು ಮಾತ್ರ ಜ್ಞಾಪಕವಿದೆ. ಅದಾದ ಮೇಲೆ ಹೈಸ್ಕೂಲಿನಲ್ಲಿದ್ದಾಗ ಶಾಲೆಯ ಮೇಷ್ಟರರೊಬ್ಬರು ನಾನೂ ಸೇರಿದಂತೆ ನಮ್ಮ ಕ್ಲಾಸಿನ ಹಲವರನ್ನು ಒಂದೆಡೆ ಕಲೆಹಾಕಿ ಕನ್ನಡ ಸಾಹಿತ್ಯ ಪರಿಷತ್ತಿನ 'ಕಾವ' ಪರೀಕ್ಷೆ ತೆಗೆದುಕೊಳ್ಳುವಂತೆ ಮಾಡಿದ್ದರು. ಆಗ ಒಂದಷ್ಟು ಹಳೆಗನ್ನಡ *ಕಷ್ಟ ಪಟ್ಟು* ಓದಿದ್ದೆ. ಹೀಗಿರುವಾಗ ನೀವು ಶಾಲೆಯಲ್ಲಿ ಓದಿದ್ದನ್ನು ಇಲ್ಲಿ (ತಪ್ಪಿದೆಯೋ ಸರಿಯಿದೆಯೋ ಗೊತ್ತಿಲ್ಲ) ಇಷ್ಟು ದಿನಗಳಾದ ಮೇಲೆ ಬರೆಯುತ್ತಿರೋದು ನನ್ನ ಮಟ್ಟಿಗಂತೂ ವಿಸ್ಮಯವೇ ಸರಿ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 10:23pm — gvmt

ಹಳಗನ್ನಡ ಕಷ್ಟವೇನೂ ಅಲ್ಲ

gvmt's picture

ಮಾತಿನ ವರಸೆ ಮೊದಮೊದಲು ಕಷ್ಟವೆನಿಸಬಹುದು, ಓದುತ್ತ ಓದುತ್ತ ಬಿಟ್ಟುಕೊಳ್ಳುತ್ತದೆ. ಈಗಿನ ಭಾಷೆಗೂ ಹಳಗನ್ನಡಕ್ಕೂ ಇರುವ ದೊಡ್ಡ ವ್ಯತ್ಯಾಸವೆಂದರೆ ಪ್ರತ್ಯಯಗಳು. "ಕನ್ನಡ ಕೈಪಿಡಿ"ಯ ಭಾಗವಾಗಿ ಆಚಾರ್ಯು ಬಿ.ಎಂ.ಶ್ರೀಯವರ ವ್ಯಾಕರಣ, ಪರಿಷತ್ತಿನ ನಿಘಂಟು ಇವೆರಡೂ ಜೊತೆಗಿದ್ದರೆ ಕೆಲಸ ಸಲೀಸಾಗುತ್ತೆ. ನಾನು ಕಲಿತದ್ದು ಹಾಗೆಯೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 5:38pm — Rohit

99% ಪರ್ಫೆಕ್ಟ್

Rohit's picture

ಆಲ್ಮೋಸ್ಟ್ ಪರ್ಫೆಕ್ಟ್ !!! ನನಗೆ ಕಂಡುಬಂದಹಾಗೆ, ಒಂದು ಕಡೆ ಸ್ವಲ್ಪ ಮಾರ್ಪಾಡು ಬೇಕು...

1. ತೀರ್ದಪುದಮ್ - ತೀರದೊಡಂ....

ಒಮ್ಮೆ ವೆರಿಫೈ ಮಾಡಿಕೊಂಡುಬಿಡಿ, www.kannudi.org ನಲ್ಲಿ ಪಂಪಭಾರತ ಪೂರ್ಣ ಕೃತಿಯಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 6:10pm — hpn

ಕನ್ನುಡಿ

hpn's picture

Rohit wrote:
www.kannudi.org ನಲ್ಲಿ ಪಂಪಭಾರತ ಪೂರ್ಣ ಕೃತಿಯಿದೆ.

ಹೌದು. ಒಮ್ಮೆ ಸಮಯವಾದಾಗ ಅಲ್ಲಿರುವುದನ್ನೆಲ್ಲ ಯುನಿಕೋಡಿಗೆ ಕನ್ವರ್ಟ್ ಮಾಡಿ ವಿಕಿಪೀಡಿಯದಲ್ಲೋ ಅಥವಾ ಸಂಪದದಲ್ಲೋ ಸೇರಿಸಬೇಕು.

ಆ ತಾಣದಲ್ಲಿ ಒಂದಷ್ಟು ತಪ್ಪು ತಪ್ಪು ಕನ್ನಡ ಸೇರಿಸಿದ್ದಾರೆ. ಉದಾ:
"ಭೂಗೋಲ" (ಭೂಗೋಳ ಅಲ್ವೇ?)
"ಉತ್ಕ್ರಷ್ಠ" (ಉತ್ಕೃಷ್ಟ ಅಲ್ವೆ?)

ಕನ್ನಡ ಸಾಹಿತ್ಯ ಪರಿಷತ್ತಿನ ತಾಣವೇ ಹೀಗಾಗಿ ಹೋದ್ರೆ ಬೇರೆ ತಾಣಗಳ ಗತಿಯೇನು?
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 6:31pm — Rohit

ಅನುಮತಿ ಪಡೆದು ಮಾಡಬಹುದು

Rohit's picture

ಹೌದು ಅವುಗಳನ್ನು ಯೂನಿಕೋಡಿಗೆ ಕನ್ವರ್ಟ್ ಮಾಡ್ಬೇಕು. ಆದ್ರೆ ಅದು ಅವರ ಅಧಿಕೃತ ತಾಣ. ಅನುಮತಿ ಪಡೆದು ಮುಂದುವರೆದರೆ ಒಳ್ಳೆಯದು.

ಇನ್ನು ಆ ಸೈಟು ಐಐಎಸ್ ಸಿ ನವರು ನೋಡ್ಕೋತಿರೋದಲ್ವ.... ಒಂದಷ್ಟು ಟ್ರೈನೀಸ್ಗೋ ಏನೋ ಈ ಕೆಲ್ಸ ಕೊಟ್ಟಿರ್ತಾರೆ...ಅಷ್ಟು ಪ್ರೊಫೆಷನಲ್ ಆಗಿ ನಡೆಸಲ್ಪಡುತ್ತಿರುವ ಸೈಟ್ ಅದು ಅಂತ ನನಗನಿಸೋಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 7:11pm — hpn

ಕಾಪಿರೈಟ್ ಇಲ್ಲ

hpn's picture

ಹಳೆಯ scriptures ಗಳಾಗಿರೋದ್ರಿಂದ ಅವಕ್ಕೆ ಕಾಪಿರೈಟ್ ಇರೋದಿಲ್ಲ. ನೀವು ಪ್ರಾಜೆಕ್ಟ್ ಗುಟನ್ ಬರ್ಗ್ ನೋಡಿಲ್ವೇ? ಟೈಪ್ ಮಾಡಿದ್ದಕ್ಕೆ ಕಾಪಿರೈಟ್ ಇಲ್ಲ... "intellectual property" ಆಗಿದ್ದಲ್ಲಿ ಮಾತ್ರ ಉಂಟು. Smiling

ಅಷ್ಟೇ ಅಲ್ಲ, ಇಡಿಯ ಸೈಟನ್ನ ಅವರು ಮಾಡಿರೋದು ಭಾರತ ಸರ್ಕಾರದ ಹಣದಲ್ಲಿ (ಆಕಾ ನೀವು ನೀಡಿದ ಟ್ಯಾಕ್ಸ್ ಹಣದಲ್ಲಿ). ideally ಸರಕಾರದ ಹಣ ಸಹಾಯ ಲಭ್ಯವಾದ ಕೆಲಸಗಳು ಪಬ್ಲಿಕ್ ಡೊಮೈನಿನಲ್ಲಿ ಇರಬೇಕು (ಅಮೇರಿಕದಲ್ಲಿ ಹೀಗೆಯೇ... ನಾಸಾ ಮುಂತಾದ ಅಮೇರಿಕ ಸರ್ಕಾರದ ತಾಣಗಳಿಂದ ಪಡೆದ ಚಿತ್ರಗಳು ಪುಕ್ಕಟೆಯಲ್ಲದೆ, ಪಬ್ಲಿಕ್ ಡೊಮೈನಿನಲ್ಲಿ ಕೂಡ ಇರುವುದು). ನಮ್ಮ ಭಾರತದಲ್ಲಿ ಮಾತ್ರ ಹೀಗೆ ಯಾಕೋ ಇಲ್ಲವೋ ಅಥವಾ ಯಾರಿಗೂ 'ಪಬ್ಲಿಕ್ ಡೊಮೈನ್' ಅಂದ್ರೇನು ಅಂತಾನೇ ತಿಳಿದಿಲ್ವೋ ತಿಳಿದವರು ಹೇಳ್ಬೇಕು.

Rohit wrote:
ಒಂದಷ್ಟು ಟ್ರೈನೀಸ್ಗೋ ಏನೋ ಈ ಕೆಲ್ಸ ಕೊಟ್ಟಿರ್ತಾರೆ...ಅಷ್ಟು ಪ್ರೊಫೆಷನಲ್ ಆಗಿ ನಡೆಸಲ್ಪಡುತ್ತಿರುವ ಸೈಟ್ ಅದು ಅಂತ ನನಗನಿಸೋಲ್ಲ.

Modular Infotech ಎನ್ನುವ ಕಂಪೆನಿಗೆ ಸಾಕಷ್ಟು ಹಣ ನೀಡಿ ತಯಾರಿಸಿರುವ ಸೈಟು ಅದು. (ಅವರಿಗೆ IISc ನೀಡಿದ ಹಣ ಮತ್ತು ಈ ಹಗರಣದ ಬಗ್ಗೆ ಈ-ಕವಿಯಲ್ಲೊಂದು spat ನಡೆದಿತ್ತು... ಹೆಚ್ಚಿನ ಮಾಹಿತಿ ಬೇಕಿದ್ರೆ ಅಲ್ಲಿ ಸರ್ಚ್ ಮಾಡಿ ನೋಡಿ)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2005 - 10:47pm — gvmt

ಕ್ಷಮೆ ಕೋರಬೇಕಿಲ್ಲ

gvmt's picture

ನೆನಪಿನಲಿಟ್ಟುಕೊಂಡು ಬರೆದದ್ದಕ್ಕೆ ಶಹಭಾಸ್‌ಗಿರಿ ಸಲ್ಲಬೇಕು. ನನ್ನ ಪರವಾಗಿ ನಿಮ್ಮ ಬೆನ್ನು ಮೂರುಬಾರಿ ನೀವೆ ತಟ್ಟಿಕೊಳ್ಳಿ.

ಆದರೂ

"ಗೊಟ್ಟಿಯಲಂಪಿನಿಂಪುಗಳ್" "ಪುಟ್ಟಲೇನಾಗಿಯುಮೇನೊ" "ಮಱಿದುಂಬಿಯಾಗಿ" "ವನವಾಸಿ ದೇಶದೊಳ್"

"ತೆಂಕಣ ಗಾಳಿ .." ಪದ್ಯದಲ್ಲಿ ಕೆಲವಾರು ದುಷ್ಟಪಾಠಗಳಿವೆ

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ಗೆಡೆ ಎಂದರೆ ಸ್ನೇಹ (ಕೆಳೆ, ಕೆಳೆತನ, ಗೆಳೆಯ); ಗೆಡೆಗೊಳ್ಳುವುದು ಸ್ನೇಹ ಬೆಳೆಸುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 10:58am — karthik

ಧನ್ಯವಾದಗಳು

karthik's picture

ಪದ್ಯ ಸರಿ ಪಡಿಸಿದ್ದಕ್ಕೆ ತುಂಬ ಧನ್ಯವಾದಗಳು.

ಸ್ಕೂಲ್ ನಲ್ಲಿ ಕಲಿತಿದ್ದ ಪದ್ಯಗಳಲ್ಲಿ ಇದೂಂದೆ ನೆನಪಿರೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 1:05pm — karthik

"ಱಿ" ಅಕ್ಷರ

karthik's picture

"ಱಿ" ಅಕ್ಷರ ಹೇಗೆ ಟೈಪಿಸಿದಿರಿ ಸಾರ್?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2005 - 1:20pm — hpn

"ಱಿ"

hpn's picture

'ಬರಹ ಡೈರೆಕ್ಟ್' ನಲ್ಲಿ ಇದನ್ನ ಟೈಪಿಸಬಹುದು (ಅದರ ಹೆಲ್ಪ್ ಮೆನುನಲ್ಲಿರುವ ಡಾಕ್ಯುಮೆಂಟ್ ಓದಿ). ಲಿನಕ್ಸಿನಲ್ಲಿ ಕೂಡ ಇದನ್ನು ಟೈಪಿಸುವ ಸೌಲಭ್ಯ ಉಂಟು. (SCIM ನಲ್ಲಿ ಱಿ - rhe ಕೀ ಕಾಂಬಿನೇಶನ್ ಅಡಿ ಲಭ್ಯ).

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 5:20pm — kannadakanda

ಉ: "ಱಿ" ಅಕ್ಷರ

kannadakanda's picture

rx=ಱ್, rxi=ಱಿ. ನಿಮ್ಮ ಗಣಕಯಂತ್ರದಲ್ಲಿ BarahaIME ಸ್ಥಾಪಿತವಾಗಿರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾಗದ ಭೋಗದಕ್ಕರದ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಪುಸ್ತಕ ನಿಧಿ-ಸಿ.ಪಿ.ಕೆ. ಯವರ ಕಾವ್ಯಗೌರವ
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನನ್ನ ಬ್ಲಾಗ್
Syndicate content

ಲೇಖಕರು

karthik's picture

ಪೂರ್ಣ ಹೆಸರು
ಕಾರ್ತಿಕ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator