KSRTC ಬಸ್ ನಲ್ಲಿ ಕಂಡಿದ್ದು....
ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ.
ಇತ್ತೀಚಿಗೆ ಒಂದು ಬಸ್ ನಲ್ಲಿ ಕಂಡಿದ್ದು.
ಶಿವನೆಂದರೆ ನೆಲ ಜಲ
ಅರಿತು ನಡಿ ಬಲಾಬಲ
ಅಲ್ಲೆ ಇರುವುದು ಮನುಕುಲ.
ಇದು ಪರಿಸರ ಉಳಿಸಿಕೊಳ್ಳೊದರ ಬಗ್ಗೆ ಎನೋ ಸಂದೇಶ ಇರ ಬೇಕು ಅನ್ನಿಸುತ್ತೆ. ಆದರೆ ಎಷ್ಟು ತಲೆ ಕೆಡಿಸಿಕೊಂಡ್ರು ಸರಿಯಾಗಿ ಅರ್ಥವೇ ಆಗ್ತಾ ಇಲ್ಲ!

- karthik ರವರ ಬ್ಲಾಗ್
- Login or register to post comments
- 542 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: KSRTC ಬಸ್ ನಲ್ಲಿ ಕಂಡಿದ್ದು....
ಹ ಹ.... ಇದರ ಅರ್ಥ ಏನು ಅಂತ ನನಗು ಅರ್ಥ ಆಗ್ಲಿಲ್ಲ.
ಕೆ.ಎಸ್.ಆರ್.ಟಿ.ಸಿ ಕನ್ನಡ ಬ್ರಹ್ಮನಿಗೆ ಕೇಳ್ಬೇಕು.
ಜೈ ಕೆ.ಎಸ್.ಆರ್.ಟಿ.ಸಿ...