~
ಐ ಡೋಂಟ್ ಕೇರ್...
ನೀವು ಐ ಟಿ ಮ್ಯಾನೇಜರ್ಸೇ ಇಷ್ಟು.
ಬೆಳಿಗ್ಗೆ ಎಲ್ಲ ಆ ಡೆವೆಲಪರ್ ಏನ್ ಮಾಡ್ದ
ಈ ಡೆವೆಲಪರ್ ಏನ್ ಮಾಡ್ದ ಅಂತ ತಲೆ ತಿಂತ
ಇಡೀ ಟೀಮ್ ನ ಅಮೂಲ್ಯವಾದ ಬೆಳಿಗ್ಗೇನ ಹಾಳ್ ಮಾಡ್ತೀರ
ಒಳ್ಳೆ ಡೆವೆಲಪರ್ ನೋಡುದ್ರೆ ನಿಮಗೆಲ್ಲ ಹೊಟ್ಟೆ ಉರಿ ಜೆಲಸಿ!!
ಹುಡುಗ್ರು ಹುಡುಗೀರ ಜೊತೆ ಮಾತಾಡಿದ್ರೆ ಹೊಲಸು ಕಥೆ ಕಟ್ತೀರ
ಲೈನ್ ಹೊಡುದ್ರೆ ಬಹಿಷ್ಕಾರ ಹಾಕ್ತೀರ
ಇನ್ನು ನಿಮ್ಮ ಟೀಮ್ ಅಂದವಾಗಿ ಹೆಂಗೆ ಕೆಲ್ಸ ಮಾಡುತ್ತೆ ಮ್ಯಾನ್
ಹೆಂಗೆ ಕೆಲ್ಸ ಮಾಡುತ್ತೆ??
ಅವರವರಿಗೆ ಇಷ್ಟ ಆಗೋ ಪ್ರೊಜೆಕ್ಟಲ್ಲಿ ಅವ್ರು ಕೆಲ್ಸ ಮಾಡ್ಬೇಕು.
ಅವ್ರವ್ರಿಗೆ ಇಷ್ಟ ಆಗೋ ಹುಡುಗೀರ್ ಜೊತೆ ಅವ್ರು ಆರಾಮಾಗಿ ಮಾತಾಡ್ಕೊಂಡ್ ಇರ್ಬೇಕು
ಅವ್ರುನ್ ಯಾರೂ ಕೇಳ್ಬಾರ್ದು
ಅದುಕ್ಕೇ ತಾನೆ ಯುಎಸ್ ನವರು ಟೀಮ್ ವರ್ಕ್ ಅನ್ನೋದು??
ಟೀಮ್ ವರ್ಕ್ ಅಂದ ತಕ್ಷಣ ೫ ವರ್ಷಕ್ ಒಂದ್ ಸಾರಿ
೫೦ ರುಪಾಯಿ ಟೀಶರ್ಟ್ ಕೊಟ್ಟು ಟೀಮ್ ಔಟಿಂಗ್ ಕರ್ಕೊಂಡ್ ಹೋಗ್ತೀರ
ಈ ಕಂಪೆನೀಲಿ ಒಂದೇ ಒಂದು ಹುಡುಗ ಅವನಿಗೆ ಇಷ್ಟ ಆಗೋ ಟೀಮ್ ಮೆಂಬರ್ಸ್ ಜೊತೆ
ವರ್ಕ್ ಮಾಡಕ್ ಬಿಟ್ಟಿದೀರಾ ಮ್ಯಾನ್ ನೀವು... ಬಿಟ್ಟಿದೀರಾ...
ಈ ಕಂಪೆನೀಲಿ ತಲೆ ಇರೋರ್ನೆಲ್ಲ ಮೇಂಟೆನೆನ್ಸ್ ಪ್ರೋಜೆಕ್ಟ್ಸ್ ಗೆ ಹಾಕಿ
ಗ್ರೋತ್ ಅಪ್ಪರ್ಚುನಿಟೀಸ್ ನೆಲ್ಲ ಹುಡುಗೀರಿಗೆ ಕೊಟ್ಟು, ಹ್ಯೂಮನ್ ವ್ಯಾಲ್ಯೂಸ್ ನೆಲ್ಲ ಗೋಡೆಗೆ ನೇತುಹಾಕಿ
ಕಷ್ಟ ಪಟ್ಟು ಮೇಲೆ ಬರೋರ್ನೆಲ್ಲ ಡಾಕ್ಯುಮೆಂಟೇಷನ್ ನಲ್ಲಿ ಕಟ್ಟಿ ಹಾಕಿ
ಬುದ್ಧಿವಂತರ ತಲೆಗೆ ನೂರಾರು ಬಗ್ಸ್ ಗಳ್ನ ತಗಲ್ಹಾಕಿ
ಜಾಲಿಯಾಗಿರೋರ್ನೆಲ್ಲಾ ಮೇಂಟೆನೆನ್ಸ್ ವರ್ಕಲ್ಲಿ ಜಾಲ್ಸಿ
ಬೇರೆಯವರ ಕೆಲಸದ ಲಾಭ ತೊಗೊಳೋರನ್ನ ಲೀಡ್ ಮಾಡಿ,
ಮಜವಾಗಿ ಮಾತಾಡೋರ್ನ ಮ್ಯಾನೇಜರ್ಸ್ ಮಾಡಿ
ಇಡೀ ಕಂಪನಿಉದ್ಧಾರ ಆಗ್ತಿದೆ ಅನ್ನೋ ಉಡಾಳ್ ನನ್ ಮಕ್ಳಿಗೆ
ಈ ಬುದ್ಧಿವಂತನ ಪ್ರಾಕ್ಟಿಕಲ್ ಮಾತುಗಳು ಇಷ್ಟ ಆಗಲ್ಲ ಬಾಲು
ಬಟ್ ಐ ಡೋಂಟ್ ಕೇರ್... ಐ ವಿಲ್ ಕ್ವಿಟ್... ಐ ವಿಲ್ ಕ್ವಿಟ್...!!!

- keerthi2kiran ರವರ ಬ್ಲಾಗ್
- Login or register to post comments
- 435 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಾಫ್ಟ್ ವೇರ್ ರಕ್ತ ಕಣ್ಣೀರು
ಹಹಹ ನಿಜ, ನಮ್ಗೆ ಇಷ್ಟ ಇರೋ ಪ್ರೊಜೆಕ್ಟ್ ಸಿಕ್ಕೋದು ತುಂಬಾ ಕಷ್ಟ.. ರಿಸೋರ್ಸ್ ಗಳನ್ನ ಹೇಗೆ ಯೂಸ್ ಮಾಡ್ಕೊಬೇಕು ಅನ್ನೋದೇ ಗೊತ್ತಿಲ್ಲ ಇವ್ರಿಗೆಲ್ಲ.. ಸುಮ್ನೆ ಸಿಕ್ ಸಿಕ್ಕೋರನ್ನೆಲ್ಲ ಕೆಲ್ಸಕ್ಕೆ ಸೇರಿಸ್‌ಕೊಂಡು ಎಲ್ರನ್ನು ಬೆಂಚಲ್ಲಿ ಕೂರ್ಸಿ ಎಲ್ರದ್ದು ಕರಿಯರ್ ಹಾಳು ಮಾಡ್ತಾರೆ ಮ್ಯಾನ್...
ಉ: ಐ ಡೋಂಟ್ ಕೇರ್...
ಸೂಪರ್ ಡೈಲಾಗ್ ಗುರು.................!!
-ಯುವಪ್ರೇಮಿ
ಉ: ಐ ಡೋಂಟ್ ಕೇರ್...
ಸಕತ್ತಾಗಿದೆ.
ವೆರಿ ಬೈಟಿಂಗ್...
ಉ: ಐ ಡೋಂಟ್ ಕೇರ್...
ಅಯ್ಯೋ ಹೊಸ ಕಂಪನೀಲು ಇದೆ ಕಥೇನ ಕೀರ್ತಿ!!!
ಉ: ಐ ಡೋಂಟ್ ಕೇರ್...
ಎಲ್ಲರ ಮನೆ ದೋಸೇನೂ ತೂತೇ.
ಕೀರ್ತಿ ಕಿರಣ್ ಎಂ
ಉ: ಐ ಡೋಂಟ್ ಕೇರ್...
ಕೀರ್ತಿ.......ಸಖತ್ತಾಗಿದೆ!!!!!!

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಐ ಡೋಂಟ್ ಕೇರ್...
ಡೋ೦ಟ್ ವರ್ರಿ ಬೀ ಹ್ಯಾಪಿ:)