ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › keerthi2kiran ರವರ ಬ್ಲಾಗ್

ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

July 22, 2008 - 7:50pm — keerthi2kiran

ಸಂಪದದಲ್ಲಿ ಒಮ್ಮೆ ಜಯಲಕ್ಷ್ಮಿಯವರು ಟ್ರೆಕಿಂಗ್ ಹೋಗೋದಕ್ಕೆ ಏನೇನು ಬೇಕಾಗತ್ತೆ ಅಂತ ಕೇಳಿದ್ದರು. ಇಲ್ಲಿ ಸುಮ್ನೆ ಟ್ರೆಕಿಂಗ್ ಹೋಗಕ್ಕೆ ಏನೇನು ಕಟ್ಕೋ ಬೇಕು ಅಂತ ನನ್ನ ಅನುಭವದಿಂದ ಬರೀತಿದೀನಿ. ಈ ಬರಹ ಪಶ್ಚಿಮ ಘಟ್ಟಗಳಲ್ಲಿ ಟ್ರೆಕಿಂಗ್ ಹೋಗಲು ಮಾತ್ರ. ಹಿಮಾಲಯಕ್ಕೆ ಇನ್ನೂ ಹೆಚ್ಚಿನ ಸಿದ್ಧತೆ ಬೇಕಾಗತ್ತೆ.
ಈ ಕೆಲವು ವಸ್ತುಗಳ್ನ ಎಲ್ರೂ ತೊಗೊಂಡ್ ಹೋಗ್ಬೇಕಾಗತ್ತೆ.
೧. ಸಾಮಾನೆಲ್ಲ ತುಂಬಲು ರಕ್ ಸ್ಯಾಕ್ (ಚೀಲ) - ನಾನು nature craft ನವರ ರಕ್ ಸ್ಯಾಕ್ ಬಳಸುತ್ತಿದೀನಿ. wild craft ಅನ್ನೋ ಕಂಪನಿ outletಗಳು ಬೆಂಗಳೂರಲ್ಲಿ ತುಂಬಾ ಕಡೆ ಇವೆ.
೨. ಮಲಗಲು sleeping bag ಅಥವಾ ಭಾರ ಕಡಿಮೆ ಇರೋ blanket/ರಜಾಯಿ. (ಸೆಕೆಗಾಲದಲ್ಲಿ ಸ್ಲೀಪಿಂಗ್ ಬ್ಯಾಗ್ ಬೇಕಾಗೋದಿಲ್ಲ.)
೩. ಟ್ರೆಕಿಂಗ್ ಶೂಗಳು - ಸಾಮಾನ್ಯವಾಗಿ ಯಾವುದೇ ಶೂನಲ್ಲೂ ಟ್ರೆಕಿಂಗ್ ಮಾಡಬಹುದು. ಆದರೆ ಮಳೆಗಾಲದಲ್ಲಿ ಸ್ವಲ್ಪ ಒಳ್ಳೆಯ ಹಿಡಿತ (grip) ಇರೋ ಶೂಗಳಾದರೆ ಒಳ್ಳೇದು. Woodlands, Adidas, Caterpillarನಲ್ಲಿ ಒಳ್ಳೇ ಟ್ರೆಕಿಂಗ್ ಶೂಗಳು ಸಿಗುತ್ವೆ. ತುಂಬಾ ಒಳ್ಳೆ Water proof ಶೂಗಳು ಬೇಕಾದ್ರೆ Gore Tex ಅನ್ನೋ material ಇಂದ ಮಾಡಿರೋ ಶೂಗಳನ್ನ ತೊಗೋಬಹುದು. Gore Tex ತುಂಬಾ light weight ಕೂಡ. ಆದರೆ ಬೆಲೆ ತುಂಬಾ ಹೆಚ್ಚು. (ಅಡಿಡಾಸ್ ಗೋರ್ ಟೆಕ್ಸ್ ಶೂ ೮೦೦೦ ರೂ. ಆಗತ್ತೆ). ಚೈನಾ ಶೂಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತಂತೆ (೧೫೦೦ಕ್ಕೆಲ್ಲಾ ಸಿಗತ್ತಂತೆ).
೪. ಟೆಂಟ್ ಒಳಗೆ ಹಾಸಲು Sleeping Mats (carry mats). ಒಂದು ಟೆಂಟ್ ಗೆ ೨-೩ carry-mats ಬೇಕಾಗತ್ತೆ.
೫. ನೀರು ತೊಗೊಂಡು ಹೋಗೋದು ತುಂಬಾ ಮುಖ್ಯ. ಕಡೇ ಪಕ್ಷ 3 ಲೀಟರ್ ಆದರೂ ನೀರು ಇರಬೇಕು. ನೀರಿನ ಬಾಟಲಿ ತೊಗೊಂಡು ಹೋಗೋದನ್ನ ಮರೀಬೇಡಿ.
೬. Torch - ಇದು ತುಂಬಾ ಮುಖ್ಯ. ಎಲ್ಲರ ಬಳೀಲೂ ಒಂದು Torch ಇರಲೇಬೇಕು. ಎಷ್ಟೊ ಸಲಿ ರಾತ್ರಿ ಟ್ರೆಕಿಂಗಿಗೆ ಅಥವಾ ಕ್ಯಾಂಪ್ ಸೈಟ್ ನಲ್ಲಿ ಬೇಕಾಗತ್ತೆ.
೬. ದುಡ್ಡು - ಇದು ಎಲ್ರಿಗೂ ಗೊತ್ತಿರತ್ತೆ. ಆದ್ರೂ ನನ್ನ IT ಸ್ನೇಹಿತರು ಕೆಲವರು ಎಲ್ಲಾದ್ರೂ ದುಡ್ಡು draw ಮಾಡಬಹುದು ಅಂತ Debit cards ತಂದಿದ್ರು. Smiling ಹಾಗಾಗಿ ಹಾಕಿದೀನಿ.
೬. ಇವೆಲ್ಲಾ ಬಿಟ್ರೆ ನಿಮ್ಮ ಬಟ್ಟೆಗಳು - ಆದಷ್ಟೂ ಕಡಿಮೆ ಇಟ್ಕೊಳಿ. Rain Coat (poncho), jacket with hood, cap, monkey cap, towel ಇತ್ಯಾದಿ. ಒದ್ದೆ ಬಟ್ಟೆ ಒಣಗಿದ ಬಟ್ಟೆ ಬೇರೆ ಮಾಡಲು ಪ್ಲಾಸ್ಟಿಕ್ ಕವರ್ ಗಳು ಬೇಕಾಗತ್ತೆ.
೭. Camera - ಒಳ್ಳೇ camera ತೊಗೊಂಡು ಹೋಗೋದನ್ನ ಮರೀಬೇಡಿ.
ಗುಂಪಿಗೆ ಬೇಕಾಗೋ ವಸ್ತುಗಳು
೧. ಟೆಂಟ್ ಗಳು - ೩-೪ ಜನ ಮಲಗೋ ಅಂತಹ ಟೆಂಟ್ ಗಳು ಎಲ್ಲಾ ಕಡೆ ಸಿಗತ್ವೆ. ಎಷ್ಟೊ ಜನ ಬಾಡಿಗೆಗೂ ಕೊಡ್ತಾರೆ.  Triangular ಅಥವಾ Dome Type ಟೆಂಟ್ ಗಳ್ನ ನಾವು ತೊಗೊಂಡು ಹೋಗ್ತೀವಿ. wild craft ನಲ್ಲಿ ೪-ಜನರ La Fuma ಕಂಪನಿ ಟೆಂಟ್ ೪೫೦೦ ರೂ. ಆಗತ್ತೆ. Coleman ಅನ್ನೋ ಕಂಪನಿ ಟೆಂಟ್ ಇನ್ನೂ ಕಡಿಮೆ ಅನ್ಸತ್ತೆ. ಗಾಳಿ ಕಡಿಮೆ ಇರೋ ಕಡೆ ಟೆಂಟ್ ಹಾಕಿ. camp fire ಹಾಕ್ತಾ ಇದ್ರೆ ಅದರಿಂದ ದೂರ ಇರ್ಲಿ.
೨. ರಾತ್ರಿ ಅಡುಗೆಗೆ ಒಂದು ಪಾತ್ರೆ ಬೇಕಾಗತ್ತೆ. ಹಿಡಿ ಇರೋ ಪಾತ್ರೆ ತೊಗೊಂಡು ಹೋಗಿ. ಊಟಕ್ಕೆ ನಾವು ಜೋಳದ ರೊಟ್ಟಿ ಅಥವಾ ಚಪಾತಿ ಇಲ್ಲಾಂದ್ರೆ Ready-to-eat ತೊಗೊಂಡು ಹೋಗ್ತೀವಿ. Maggi , ಬ್ರೆಡ್ ಬೆಳಿಗ್ಗೆ ತಿಂಡಿಗೆ ತೊಗೊಂಡು ಹೋಗಬಹುದು. ಬೆಟ್ಟದ ಮೇಲೆ ನೀರು ಸಿಗೋದು ಅಪರೂಪ. ಹಾಗಾಗಿ ಜಾಸ್ತಿ ನೀರು ಉಳಿಸಿಕೊಂಡಿರಿ.
೩. ಒಲೆ (Stowe) - ಕರ್ಪೂರ ಉಪಯೋಗಿಸೋ Stowe ಒಳ್ಳೇದು. ಇದಕ್ಕೆ ಉಪಯೋಗಿಸೋ ಕರ್ಪೂರ ಮಂಗಳಾರತಿ ಮಾಡೋ ಕರ್ಪೂರಕ್ಕಿಂತ ಗಟ್ಟಿ ಇರತ್ತೆ. ಸ್ವಲ್ಪ ಹೆಚ್ಚು ಹೊತ್ತು ಉರಿಯತ್ತೆ. Stowe ಮಡಸಿಕೊಳ್ಳೋ ತರ ಇರತ್ತೆ. ನಾವು ಸುಮಾರ್ ಸಲಿ camp fireನಲ್ಲೇ ಅಡುಗೆ ಮಾಡಿದ್ವಿ. ಆದ್ರೆ ಮಳೆ ಬರ್ತಿದ್ರೆ ಕಷ್ಟ ಆಗತ್ತೆ. camp fire ನಲ್ಲಿ ಅಡುಗೆ ಮಾಡೋದಾದ್ರೆ ಡೀಸೆಲ್ ತೊಗೊಂಡು ಹೋಗಬಹುದು. ಸೀಮೆ ಎಣ್ಣೆ ತರ ವಾಸನೆ ಹೊಡೆಯಲ್ಲ. ಪೆಟ್ರೋಲ್ ನಷ್ಟು inflammable ಅಲ್ಲ.  ಬೆಂಕಿ ಪೊಟ್ಟಣ, lighter ತೊಗೊಂಡು ಹೋಗೋದು ಮರೀಬೇಡಿ.
೪. ದಾರೀಲಿ ತಿನ್ನಲು ಬಿಸ್ಕೆಟ್ಟು, ಚಾಕಲೇಟು, ಖರ್ಜೂರ, ಹಣ್ಣುಗಳು ಇಟ್ಕೊಳಿ. ಬೆಟ್ಟ್ ಹತ್ತಲು ಶಕ್ತಿ ತುಂಬಾ ಮುಖ್ಯ. ಗ್ಲೂಕೋಸ್, ಎಲೆಕ್ಟ್ರಾಲ್ ಇಟ್ಕೋಬಹುದು.
೫. Tissue Paper, ದಿನಪತ್ರಿಕೆಗಳು - Camp Fire ಹಾಕಲು ದಿನಪತ್ರಿಕೆಗಳು ಬೇಕಾಗತ್ವೆ. ಬೆಳಗ್ಗಿನ ಕೆಲಸ ಮುಗಿಸಲು Tissue paper ಬೇಕಾಗತ್ತೆ.
೬. ಒಳ್ಳೇ ಚಾಕು ಬೇಕೇ ಬೇಕು.
೭. Medical Kit - Band aids, bandage cloth, Cotton, Dettol, Anti-Inflammatory Ointment/Spray, Crepe bandage, Paracetamol, Anti-Diarrhoeal, Personal medication.
೮. ಭೂಪಟ(map),  ID card, permission letter (ಇದ್ದರೆ), ಬ್ಲಾಗ್ ಗಳ print-outs.
೯. ಬೆಟ್ಟಗಳಲ್ಲಿ ನಕ್ಷತ್ರಗಳು ತುಂಬಾ ಚೆನ್ನಾಗಿ ಕಾಣುತ್ವೆ. ಖಗೋಳದಲ್ಲಿ ಆಸಕ್ತಿ ಇರೋರು star charts ತೊಗೊಂಡು ಹೋಗ್ಬೋದು.
೧೦. ಜಿಗಣೆ ಹತ್ಕೊಂಡ್ರೆ ಬಿಡಿಸಿಕೊಳ್ಳಲು ಉಪ್ಪು ತೊಗೊಂಡು ಹೋಗಿ.
ದಯವಿಟ್ಟು ಬೆಟ್ಟಗಳಲ್ಲಿ ಮದ್ಯಪಾನ ಧೂಮಪಾನ ಮಾಡ್ಬೇಡಿ. ಹಾಗೇ ನಿಮ್ಮ ಕಸವನ್ನು ನಿಮ್ಮ ಜೊತೆಗೇ ಹಿಂದೆ ತನ್ನಿ.
Leave nothing but footprints. Take nothing but memories (and of course photographs Smiling ). 

ಇನ್ನೂ ಏನಾದ್ರೂ ಬಿಟ್ಟಿದ್ರೆ ನೀವು comment ಬರೆದು ಸೇರಿಸಿ.
ಹ್ಯಾಪ್ಪಿ ಟ್ರೆಕಿಂಗ್...

  • trekking
  • ಪ್ರವಾಸ
~.~
  • keerthi2kiran ರವರ ಬ್ಲಾಗ್
  • Login or register to post comments
  • 219 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 23, 2008 - 5:33pm — Jayalaxmi.Patil

ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

Jayalaxmi.Patil's picture

ದೇವ್ರೇ!ಇಷ್ಟೆಲ್ಲ ಸಾಮಾನು ಹೊತ್ತು ಟ್ರೆಕ್ಕಿಂಗ್ ಮಾಡ್ತೀರಾ?!! ಇಡೀ ಒಂದು ಪುಟ್ಟ ಸಂಸಾರಕ್ಕಾಗುವಷ್ಟು ಸಾಮಾನುಗಳಿವೆ ಲಿಸ್ಟಿನಲ್ಲಿ!! ಗ್ರೇಟ್!! ಇಷ್ಟೊಂದು ವಿವರವಾಗಿ ಮಾಹಿತಿಕೊಟ್ಟಿದ್ದಕ್ಕಾಗಿ ನಿಮಗೆ ನನ್ನಿ ಕೀರ್ತಿ. ಜೀವನದಲ್ಲಿ ಒಂದು ಸಲವಾದರು ಟ್ರೆಕ್ಕಿಂಗ್ ಮಾಡಬೇಕು ಅನ್ನೊ ಆಸೆ ನನಗೆ. ನನ್ನ ಪುಟ್ಟ ಸ್ನೇಹಿತನೊಬ್ಬ ಮುಂದಿನ ಸಲ ನನ್ನ್ನನ್ನೂ ತನ್ನ ಗುಂಪಿನೊಂದಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆ ದಿನಕ್ಕಾಗಿ ಕಾಯುತ್ತಿರುವೆ. ಹೋಗಿಬಂದ ನಂತರ ಖಂಡಿತ ನಿಮಗೆ ತಿಳಿಸುತ್ತೇನೆ. ವಿವರಗಳಿಗಾಗಿ ಮತ್ತೊಮ್ಮೆ ಥ್ಯಾಂಕ್ಸ್.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 9:50am — spruhi

ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

spruhi's picture

ಇದ್ದನ್ನ ಹೊತ್ತಿಕೊಂಡು ಹೊಗಲ್ಲಿಕ್ಕೆ ಎಷ್ಟು ಮಂದಿನ ಕರೆದುಕೊಂದು ಹೋಗಬೇಕು. trekking ತುಂಬ ಸುಲಭ ಅಂದು ಕೊಂಡಿದೆ... . ಗಾಡಿಯಿಂದ luggage ಇಳಿಸಿ...ಬೆನ್ನ ಮೇಲೆ ಹೋರಿಸೊ ಅಷ್ಟೊತ್ತಿಗೆ ತ್ರಾಣ ಇರೊಲ್ಲ...ಇನ್ನ ಅದನ್ನ ಹೊತ್ತಿಕೊಂದು ಮೇಲೆ ಹೋದಂಗೆ

ಅದ್ರೆ ವಿವರಗಳು ತುಂಬ ಚೆನ್ನಾಗಿ ಕೊಟ್ಟಿದೀರ
ಸ್ಪ್ರಹಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:07am — keerthi2kiran

ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

keerthi2kiran's picture

ಛೇ... ನಾನು ಟ್ರೆಕಿಂಗ್ ಬಗ್ಗೆ ತುಂಬಾ ಕೆಟ್ಟ ಅಭಿಪ್ರಾಯ ಮೂಡಿಸಿದೀನಿ ಅನ್ಸತ್ತೆ. ಪ್ರತಿ ಸಲಿ ಹೋಗುವಾಗಲೂ ಇಷ್ಟೊಂದು ವಸ್ತುಗಳು ಬೇಕಾಗೋದಿಲ್ಲ. ನಿಮ್ಮ ಚೀಲ ಸುಮಾರು ೬-೮ ಕೇಜಿ ಇರತ್ತೆ ಅಷ್ಟೇ. ಮಳೆಗಾಲದಲ್ಲಾದ್ರೆ ನೀರು ಹೆಚ್ಚು ತೊಗೊಂಡು ಹೋಗೋದು ಬೇಕಾಗಿಲ್ಲ. ಮತ್ತೆ, ಚಳಿ ಜಾಸ್ತಿ ಇಲ್ದಿದ್ರೆ sleeping bag ಬೇಕಾಗೋದಿಲ್ಲ. ಇಲ್ಲಿ ಹೇಳಿರೋದು super set of everything ಅಷ್ಟೇ. ಟ್ರೆಕಿಂಗ್ ಮಾಡೋದು ತುಂಬಾ ಸುಲಭ.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 6:41pm — spruhi

ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

spruhi's picture

ಸ್ಕೂಲ್ ಬ್ಯಾಗ್ ಹೊತ್ತು ತುಂಬ ವರ್ಷಗಳೆ ಕಳೆದಿದೆ......ಅದರಿಂದ......ನಿಮ್ಮ ಲಿಸ್ಟ್ ನೊಡಿ ಸ್ವಲ್ಪ ಯೋಚನೆ ಮಾಡುವಂತಾಯಿತು......

ಆದ್ರೆ....ನಾನು ಟ್ರೆಕ್ ಮಾಡಲು ಹೋದಾಗ...ನಿಮ್ಮ ಬ್ಲಾಗಿನ ಪ್ರಿಂಟ್ ಅವ್ಟ್ ತೆಗೆದು ಕೊಂಡು ತಯಾರಗ್ತಿನಿ
ಸ್ಪ್ರಹಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೂವಿನ ಹುಡುಗಿ....
  • ಆದರ್ಶಗಳ ಕೊಲೆ!
  • ನಮ್ಮಲ್ಲಿ ಎಷ್ಟು ಜನ ಓಟು ಹಾಕ್ತೀವಿ??
  • ಸರಿಯಾಗಿ ಯಾಕೆ ಬರುತ್ತಿಲ್ಲಾ
  • ನನ್ನ ಗೆಳತಿ
Syndicate content

ಲೇಖಕರು

keerthi2kiran's picture

ಪೂರ್ಣ ಹೆಸರು
ಕೀರ್ತಿ ಕಿರಣ್ ಎಂ

ಪರಿಚಯ

ಬೆಂಗಳೂರಿನಲ್ಲಿರುವ ಅ(ಲ್ಪ)ಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಕೋಡಿಗನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಕರ್ನಾಟಕ ಮತ್ತು ಹಿಮಾಲಯದಲ್ಲಿ ಕೆಲವು ಟ್ರೆಕಿಂಗುಗಳನ್ನು ಮಾಡಿದ್ದೇನೆ. ಕಾದಂಬರಿಗಳನ್ನು ಓದುವುದು ಇನ್ನೊಂದು ಹವ್ಯಾಸ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 135 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator