ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › keerthi2kiran ರವರ ಬ್ಲಾಗ್

ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

June 28, 2008 - 11:59pm — keerthi2kiran
ಸೆಪ್ಟೆಂಬರ್‌ನಲ್ಲಿ ವಸುಧಾರಾ ಜಲಪಾತ

ಓದುಗರೇ,
ನೀವು ಜೀವನದಲ್ಲಿ ಪಾಪ ಮಾಡಿದ್ದೀರಾ? ಹಾಗಾದರೆ ಈ ಜಲಪಾತದಿಂದ ಹುಷಾರಾಗಿರಿ. ಇದು ನಿಮ್ಮ ಬಣ್ಣ ಬಯಲು ಮಾಡುತ್ತದೆ. ಇದು ಬದರಿನಾಥದ ಬಳಿ ಇರುವ ವಸುಧಾರಾ ಜಲಪಾತ. ಬದರಿನಾಥದಿಂದ ಮುಂದೆ ಹೋದರೆ ಸಿಗುತ್ತದೆ ಮಾನಾ ಎಂಬ ಹಳ್ಳಿ. ಅಲ್ಲಿಂದ ೮ಕಿಮೀ ನಡೆದರೆ ಸಿಗುತ್ತದೆ ವಸುಧಾರಾ ಜಲಪಾತ. ಸುತ್ತಲಿನ ಕೊರೆಯುವ ಚಳಿಗೆ, ನಿಮಗೆ ತಣ್ಣೀರಿನ ಸ್ನಾನ ಮಾಡಬೇಕಿನಿಸಿದರೆ ನೀವು ಇದರ ಕೆಳಗೆ ನಿಲ್ಲಬಹುದು. ಆದರೆ ಈ ಜಲಪಾತ ತುಂಬಾ ಚೂಸಿ (choosy) ಅಂತೆ. ನೀವು ಜೀವನದಲ್ಲಿ ಏನಾದರೂ ಪಾಪ ಮಾಡಿದ್ದರೆ ಈ ಜಲಪಾತದ ನೀರು ನಿಮ್ಮ ತಲೆಯ ಮೇಲೆ ಬೀಳುವುದೇ ಇಲ್ಲವಂತೆ. ಸ್ನೇಹಿತರ ಜೊತೆ ಹೋಗಿದ್ದ ನಾವು ರಿಸ್ಕ್ ತೆಗೆದುಕೊಳ್ಳಲು ಇಷ್ಟ ಪಡದೇ ಹಾಗೇ ಬಂದೆವು Smiling (ಅಲ್ಲಾ... ಪುಣ್ಯಕಾರ್ಯ ಮಾಡೋದೂ ಅಲ್ದೇ ಈ ಚಳೀನಲ್ಲಿ ಸ್ನಾನ ಮಾಡೊದು ಇದುಯಾವ ಕರ್ಮ ಎಂದ ನನ್ನ ಸ್ನೇಹಿತ).
ಏನ್ ಸ್ವಾಮೀ, ಈ ಕಾಲದಲ್ಲೂ ಇವೆಲ್ಲಾ ನಂಬ್ತೀರಾ ಅಂತ ಕೇಳೋ ಮೊದಲು ಒಮ್ಮೆ ಕೆಳಗಿನ ಚಿತ್ರಗಳನ್ನು ನೋಡಿ. ಮೊದಲನೆಯ ಚಿತ್ರದಲ್ಲಿ ವಸುಧಾರೆಯ ಧಾರೆ ಉದ್ದುದ್ದಕ್ಕೆ ಕೆಳಕ್ಕೆ ಬೀಳುತ್ತಿದ್ದರೆ ಎರಡನೆಯದರಲ್ಲಿ ಅಡ್ಡಡ್ಡಕ್ಕೆ ಗಾಳಿಯಲ್ಲಿ ತೇಲಿಹೋಗುತ್ತಿದೆ. ಕೆಳಗೆ ಒಂದು ಹನಿ ಕೂಡ ಬೀಳುತ್ತಿಲ್ಲ. ಆಚಾರವಾದಿಗಳು, ವಿಚಾರವಾದಿಗಳು ಇದರ ಕಡೆ ಕಣ್ಣು ಹಾಯಿಸಿ ತಲೆ ಕೆರೆದುಕೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕೋರಿಕೆ.
<br />
ಯಾರೋ ನಿಮ್ಮಂತಹ ಪುಣ್ಯವಂತರು ಕೆಳಗೆ ನಿಂತಿರಬೇಕು

ಯಾರೋ ನಿಮ್ಮಂತಹ ಪುಣ್ಯವಂತರು ಕೆಳಗೆ ನಿಂತಿರಬೇಕು

ಅರೆರೆ...  ಯಾರಪ್ಪಾ ಕೆಳಗೆ ನಿಂತಿರೋದು... Gone with the wind!!!

ಅರೆರೆ... ಯಾರಪ್ಪಾ ಕೆಳಗೆ ನಿಂತಿರೋದು... Gone with the wind!!!

ವಿ.ಸೂ.: ಶೀರ್ಷಿಕೆ ಚಿತ್ರ ಜುಲೈನಲ್ಲಿ ತೆಗೆದದ್ದು ಕೃಪೆ: ಪಿಕಾಸಾ. ಕೊನೆಯ ಎರಡು ಚಿತ್ರಗಳು ನಾವು ಈ ಮೇನಲ್ಲಿ ಹೋಗಿದ್ದಾಗ ತೆಗೆದದ್ದು.

  • badrinath
  • himAlaya
  • trekking
  • vasudhaara
  • ಟ್ರೆಕಿಂಗ್
  • ನಂಬಿಕೆ
  • ಪ್ರವಾಸ
  • ಹಿಮಾಲಯ
~.~
  • keerthi2kiran ರವರ ಬ್ಲಾಗ್
  • Login or register to post comments
  • 278 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 29, 2008 - 12:21am — hpn

ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

hpn's picture

ರಾಜೇಶ ನಾಯ್ಕರು ಇವತ್ತು ಫಾರ್ವರ್ಡ್ ಮಾಡಿದ ಮೇಯ್ಲ್ ನಲ್ಲಿ ಏಂಜೆಲ್ ಫಾಲ್ಸ್ ಚಿತ್ರಗಳಿದ್ವು. ಅದೂ ಕೂಡ ಹೀಗೆಯೇ... ನೀರು ಕೆಳಗೆ ಬೀಳುವ ಮೊದಲೇ ಗಾಳಿಯಲ್ಲಿ ತೇಲಿಹೋಗಿಬಿಡುತ್ತದಂತೆ. ಒಟ್ಟಾರೆ ಎಫೆಕ್ಟು ಒಂದು ಥರಾ ಏಂಜೆಲ್ ಇದ್ದ ಹಾಗಿರುವುದರಿಂದ ಅದಕ್ಕೆ ಆ ಹೆಸರಿಟ್ಟರಂತೆ.

ವಸುಧಾರಾ ಬಗ್ಗೆ ಕೇಳಿರಲಿಲ್ಲ. ಒಟ್ಟಾರೆ ಖುಷಿಯಾಯ್ತು, ನಮ್ಮ ಭಾರತದಲ್ಲೂ ಒಬ್ಬಳು ಏಂಜೆಲ್ ಇದ್ದಾಳೆಂದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2008 - 12:55am — keerthi2kiran

ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

keerthi2kiran's picture

ಹಿಮಾಲಯದಲ್ಲಿ ಈ ರೀತಿಯ ಎಷ್ಟೋ ಜಲಪಾತಗಳಿವೆ. ಗಾಳಿ ಬಹಳ ಜೋರಾಗಿ ಬೀಸುವುದರಿಂದ ಸಣ್ಣ ಧಾರೆಗಳೆಲ್ಲ ಗಾಳಿಯಲ್ಲೆ ತೇಲಿಹೊಗುತ್ತವೆ. ಆದರೆ ಇದೊಂದು ಧಾರೆ ಮಾತ್ರ ಬಹಳ ಫೇಮಸ್. ಬಹುಶಃ ಬದರಿನಾಥದ ಬಳಿ ಇರುವ ಕಾರಣದಿಂದಲೇನೋ.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2008 - 1:13am — hpn

ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

hpn's picture

ಸಂಪದದವರೇ ಸ್ನೇಹಿತರೊಬ್ಬರು ಒಮ್ಮೆ ಸತೋಪಂಥ್ ಗೆ ಬನ್ನಿ ಬಹಳ ಚೆನ್ನಾಗಿದೆ ಎಂದಿದ್ದರು. ನಾನು ಪ್ಲಾನ್ ಹಾಕೋ ಅಷ್ಟರಲ್ಲಿ ಅವರು ದಕ್ಷಿಣಕ್ಕೆ ಬಂದು ನೆಲೆಸಿದರು.

ಬದರೀನಾಥ್ ಗೆ ಹೋಗಿರುವೆ. ಇವೆಲ್ಲ ಮಿಸ್ ಮಾಡಿಕೊಂಡ್ವು ಅಂತ ಈಗ ಅನ್ನಿಸುತ್ತಿದೆ. ಮತ್ತೊಂದ್ ಸಾರಿ ಪ್ಲಾನ್ ಹಾಕಬೇಕು - ಅಲ್ಲಿರೋ ಎಲ್ಲ ಜಲಪಾತಗಳನ್ನೂ ಡಾಕ್ಯುಮೆಂಟ್ ಮಾಡಿಕೊಂಡು ಬರೋಣವಂತೆ Smiling

ಫೋಟೋಗಳು ಕೆಲವು ತುಂಬಾ ಚೆನ್ನಾಗಿ ಬಂದಿವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2008 - 9:07am — lgnandan

ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

lgnandan's picture

ಪ್ರವಾಸಗಳು ಎಂದರೆ ನನಗೆ ಅಚ್ಚುಮೆಚ್ಚು. ನನಗೆ ಜೀವನದಲ್ಲಿ ಅವಕಾಶ ಸಿಕ್ಕರೆ ಹಿಮಾಲಯ ಪರ್ವತ ಶ್ರೇಣಿಗಳಲ್ಲ್ಲಿ ಇರುವ ಸ್ತಳಗಳಿಗೆ ಬೇಟಿಕೊಡಬೇಕೇಂಬ ಹಂಬಲ. ಈ ನಿಮ್ಮ ಪ್ರವಾಸ ಕಥನ ಸರಣಿ ನನಗೆ ಒಂದು ಮಾರ್ಗದರ್ಶಿಯಾಗಿದೆ.

ನಂದನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 29, 2008 - 9:34am — keerthi2kiran

ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

keerthi2kiran's picture

ಇದು ತುಂಬಾ ದೊಡ್ಡ ಮಾತು. ನನ್ನ ಚುಟುಕು ಬರಹಗಳು ಓದುಗರಲ್ಲಿ ಹಿಮಾಲಯದ ಬಗ್ಗೆ ಕುತೂಹಲ ಕೆರಳಿಸಿದರೆ ಅಷ್ಟೇ ಸಾಕು. Smiling ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 3:10pm — sreekrishna

ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್

sreekrishna's picture

Ee tarahada jaagagalige beti nidalu namagu iShTa. aadare ellarigu sadhyavillavalla. ninnida idannu nodida santhoshavantu aaitu.thumbane thanks.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾತೋಪಂಥ್ ಸರೋವರ
  • ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ
  • ನಾಯಿಯನ್ನು ಹಿಂಬಾಲಿಸಿದ ಕತೆ
  • ತಾಯಿ.
  • ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?
Syndicate content

ಲೇಖಕರು

keerthi2kiran's picture

ಪೂರ್ಣ ಹೆಸರು
ಕೀರ್ತಿ ಕಿರಣ್ ಎಂ

ಪರಿಚಯ

ಬೆಂಗಳೂರಿನಲ್ಲಿರುವ ಅ(ಲ್ಪ)ಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಕೋಡಿಗನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಕರ್ನಾಟಕ ಮತ್ತು ಹಿಮಾಲಯದಲ್ಲಿ ಕೆಲವು ಟ್ರೆಕಿಂಗುಗಳನ್ನು ಮಾಡಿದ್ದೇನೆ. ಕಾದಂಬರಿಗಳನ್ನು ಓದುವುದು ಇನ್ನೊಂದು ಹವ್ಯಾಸ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
  • Aravinda
    ಉ: ತಿಳಿ ಹಾಸ್ಯ ಮರೆತಿಲ್ಲ!
    August 30, 2008 - 8:34am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:39am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:36am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:14am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator